ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಗ್ಯಾಸ್ ಸಿಲೆಂಡರ್ ಇದೆ ಮೊದಲೆಲ್ಲಾ ಸೌದೆ ಒಲೆ ಬಳಕೆ ಮಾಡುತ್ತಿದ್ದರು ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ್ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲಿಂಡರ್ ಇರಬೇಕು ಎಂಬ ಕಾರಣದಿಂದಾಗಿ ಉಜ್ವಲ ಯೋಜನೆ ಅಡಿ ಹಲವಾರು ಕುಟುಂಬಗಳಿಗೆ ಉಚಿತ ಗ್ಯಾಸ್ ಅನ್ನು ನೀಡಿದೆ.
ಇನ್ನು ಕೆಲವು ಕುಟುಂಬ ವರ್ಗದವರು ಉಜ್ವಲ್ ಯೋಜನೆಗೂ ಮುಂಚೆಯೇ ಗ್ಯಾಸ್ ಕಲೆಕ್ಷನ್ ಅನ್ನು ಪಡೆದುಕೊಂಡಿದ್ದರು. ಇದೀಗ ಕೇಂದ್ರ ಸರ್ಕಾರದಿಂದ ಯಾರು ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿದ್ದಾರೋ ಅವರಿಗೆ ಉಚಿತ ಸಬ್ಸಿಡಿಯನ್ನು ನೀಡುತ್ತಿದ್ದಾರೆ ಅಂದರೆ ಮೊದಲೆಲ್ಲಾ ಗ್ಯಾಸ್ ಬೆಲೆ 1200 ಇಂದ 1400 ರೂಪಾಯಿವರೆಗೆ ಗಡಿದಾಟಿತ್ತು.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ.!
ಮಧ್ಯಮ ವರ್ಗದ ಜನರಿಗೆ ಮತ್ತು ಬಡವರ್ಗದ ಜನರಿಗೆ ಗ್ಯಾಸ್ ಸಿಲೆಂಡರ್ ಬೆಲೆ ಹೊರೆಯಂತಾಗುತ್ತಿತ್ತು. ಈ ಕಾರಣದಿಂದಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿಯನ್ನು ಘೋಷಣೆ ಮಾಡಿದರು. ಅಂದರೆ ಸಾವಿರದ ಇನ್ನೂರು ರೂಪಾಯಿ ಇದ್ದಂತಹ ಗ್ಯಾಸ್ ಸಿಲೆಂಡರ್ ಬೆಲೆ ಕೇವಲ 900 ರೂಪಾಯಿಗೆ ಕೈಗೆಟುವಂತೆ ಮಾಡಿದ್ದಾರೆ.
300 ಸಬ್ಸಿಡಿ ಸರ್ಕಾರದಿಂದಲೇ ಗ್ರಾಹಕರ ಖಾತೆಗೆ ವರ್ಗಾವಣೆ ಆಗುವಂತಹ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಇದೀಗ ಸಬ್ಸಿಡಿ ಹಣ ಸಾಕಷ್ಟು ಗ್ರಾಹಕರಿಗೆ ತಲುಪಿದೆ. ಇನ್ನು ಕೆಲವು ಗ್ರಾಹಕರಿಗೆ ಸಬ್ಸಿಡಿ ಹಣ ತಲುಪಿಲ್ಲ ಹಾಗಾಗಿ ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡುವಂತಹ ವಿಧಾನವನ್ನು ಇಂದು ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.
ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಇನ್ಮುಂದೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರಲ್ಲ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
ಗ್ಯಾಸ್ ಸಬ್ಸಿಡಿ ಹಣ ಪಡೆಯುವುದಕ್ಕಿಂತ ಮುಂಚೆ ನೀವು ಯಾವ ಕಂಪನಿಯ ಗ್ಯಾಸ್ ಗ್ರಾಹಕರು ಎಂಬುದನ್ನು ಖಚಿತಪಡಿಸಿಕೊಳ್ಳಿ ಇಂಡಿಯನ್ ಗ್ಯಾಸ್, ಎಚ್ಪಿ ಗ್ಯಾಸ್, ಭಾರತ್ ಗ್ಯಾಸ್ ಎಂಬ ಮೂರು ಕಂಪನಿಗಳಿವೆ. ನೀವು ಯಾವ ಕಂಪನಿಯ ಗ್ಯಾಸ್ ಅನ್ನು ಬಳಕೆ ಮಾಡುತ್ತಿದ್ದೀರಾ ಎಂಬುವುದನ್ನು ಮೊದಲು ಗುರುತಿಸಬೇಕು.
ನೀವೇನಾದರೂ ಎಚ್‌ಪಿ ಗ್ಯಾಸ್ ಕನೆಕ್ಷನ್ ಹೊಂದಿದ್ದರೆ https://myhpgas.in ಎಂಬ ಈ ಒಂದು ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಒಂದು ವೇಳೆ ನೀವು ಭಾರತ್ ಗ್ಯಾಸ್ ಗ್ರಾಹಕರಾಗಿದ್ದರೆ https://ebharatgas.com ಎಂಬ ಈ ಒಂದು ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ನೋಂದಣಿಯಾದ ಆಸ್ತಿ ಎಷ್ಟು ದಿನದ ಒಳಗೆ ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತೆ.? ಸೈಟ್, ಮನೆ, ಜಮೀನು ಖರೀದಿ ಮಾಡುವವರು ತಪ್ಪದೆ ತಿಳಿದುಕೊಳ್ಳಿ.!
ಕ್ಲಿಕ್ ಮಾಡಿದ ನಂತರ ನಿಮಗೆ ಮತ್ತೊಂದು ಟ್ಯಾಬ್ ಓಪನ್ ಆಗುತ್ತದೆ ಇಲ್ಲಿ ನೀವು ಸೈನ್ ಇನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಆಲ್ರೆಡಿ ಈ ವೆಬ್ಸೈಟ್ನಲ್ಲಿ ರಿಜಿಸ್ಟರ್ ಆಗಿದ್ದರೆ ಯೂಸರ್ ಎಂಬುದರ ಮೇಲೆ ಕ್ಲಿಕ್ ಮಾಡಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ ಸೈನ್ ಇನ್ ಮೇಲೆ ಕ್ಲಿಕ್. ನಂತರ ರಿಜಿಸ್ಟರ್ ಐ.ಡಿ ಅಥವಾ ಮೊಬೈಲ್ ನಂಬರ್ ಅನ್ನು ನೀವು ನಮೂದಿಸಬೇಕಾಗುತ್ತದೆ. ತದನಂತರ ಕೆಳಗೆ ಕಾಣುವಂತಹ ಕ್ಯಾಪ್ಚಾವನ್ನು ಕೂಡ ನೀವು ಸೇಮ್ ಟೈಪ್ ಮಾಡಬೇಕಾಗುತ್ತದೆ.
ನಂತರ ಓಕೆ ಕೊಟ್ಟ ಮೇಲೆ ನಿಮ್ಮ ಮೊಬೈಲ್ ನಂಬರ್ ಗೆ ಪಾಸ್ವರ್ಡ್ ಬರುತ್ತದೆ ಆ ಪಾಸ್ವರ್ಡ್ ಅನ್ನು ನೀವು ಮತ್ತೊಮ್ಮೆ ವೆಬ್ ಪೇಜ್ ನಲ್ಲಿ ನಮೂದಿಸಬೇಕಾಗುತ್ತದೆ. ಓಕೆ ಕೊಟ್ಟ ನಂತರ ನಿಮ್ಮ ಡೀಟೇಲ್ಸ್ ಕಂಪ್ಲೀಟ್ ಆಗಿ ಇಲ್ಲಿ ಬರುತ್ತದೆ ಅಂದರೆ ನೀವು ಯಾವ ಗ್ಯಾಸ್ ನ ಗ್ರಾಹಕರು ಹಾಗೂ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ಹಾಗೂ ಗ್ಯಾಸ್ ನಂಬರ್ ಎಲ್ಲವೂ ಕೂಡ ಸಂಪೂರ್ಣವಾಗಿ ಇಲ್ಲಿ ನೋಡಬಹುದಾಗಿರುತ್ತದೆ.
ಈ ಸುದ್ದಿ ಓದಿ:- ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸಾಕು 44,995 ಬಡ್ಡಿ ಸಿಗುತ್ತೆ.! ಪೋಸ್ಟ್ ಆಫೀಸ್ ನಾ ವಿಶೇಷ ಯೋಜನೆ ಇದು.!
ನಂತರ ಸಬ್ಸಿಡಿ ಹಣ ಬಂದಿದೆಯೋ ಇಲ್ಲವೋ ನೋಡಲು ಟ್ರ್ಯಾಕ್ ರಿಫೀಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಈ ರೀತಿ ಕ್ಲಿಕ್ ಮಾಡಿದಾಗ ನಿಮಗೆ ಎಷ್ಟು ತಿಂಗಳ ಸಬ್ಸಿಡಿ ಹಣ ಬಂದಿದೆ ಯಾವ ತಿಂಗಳಲ್ಲಿ ಬಂದಿದೆ ಎಷ್ಟು ಬಾರಿ ಸಬ್ಸಿಡಿ ಹಣವನ್ನು ನೀವು ಪಡೆದಿದ್ದೀರ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ನಿಮಗೆ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ನಿಮಗೆ ಸರಳವಾಗಿ ಅರ್ಥ ಆಗುತ್ತದೆ.!