ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಮುಖ್ಯಮಂತ್ರಿಗಳಿಂದ ಸಿಹಿ ಸುದ್ದಿ, ವೃದ್ದಾಪ್ಯ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ ಸಿ.ಎಂ ಸಿದ್ದರಾಮಯ್ಯ.!

 

WhatsApp Group Join Now
Telegram Group Join Now

ವಿಶ್ವ ಹಿರಿಯ ನಾಗರಿಕರ ದಿನದ (Senior Citizens day) ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2023 ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿದ್ದರಾಮಯ್ಯ (CM Siddaramaiah) ಅವರು ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೂ ಸಿಹಿ ಸುದ್ದಿ ನೀಡಿದ್ದಾರೆ.

ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಚಿವೆ ಕೂಡ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಕಾರ್ಯಕ್ರಮದ ವೇದಿಕೆಯಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯೊಂದನ್ನು ಮಾಡಿಕೊಂಡರು. ನೀವು ಸಹ ಹಿರಿಯ ನಾಗರಿಕರು ಸರ್, ನನ್ನ ಬಳಿ ಅನೇಕರು ಬರುತ್ತಾರೆ ನೀವು ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಎಂದು ಗೃಹಲಕ್ಷ್ಮಿ ಯೋಜನೆಯಲ್ಲಿ 2,000 ಸಹಾಯಧನ ನೀಡುತ್ತಿದ್ದೀರಾ, ನಾವು ವಯಸ್ಸಾದವರು ನಮಗೆ 1200 ಪೆನ್ಷನ್ ಬರುತ್ತಿದೆ.

ಈ ಜಿಲ್ಲೆಯವರಿಗೆ ಇಂದು ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆ, ಮೊದಲ ಕಂತಿನ ಹಣ ಪಡೆಯದಿದ್ದವರು ಈ ಸಮಸ್ಯೆ ಸರಿ ಪಡಿಸಿಕೊಂಡರೆ ಒಟ್ಟಿಗೆ 4000 ಹಣ ಬರುತ್ತೆ

ಈ ಹಣದಲ್ಲಿ ಜೀವನ ನಿರ್ವಹಣೆ ಮಾಡುವುದಕ್ಕೆ ಆಗುತ್ತದೆಯಾ? ದಯವಿಟ್ಟು ನಮಗೂ ಪೆನ್ಷನ್ ಹೆಚ್ಚಿಸಿ (Old age pension) ಎಂದು ಕೇಳುತ್ತಾರೆ. ಹಾಗಾಗಿ ಎಲ್ಲಾ ಹಿರಿಯ ವಯಸ್ಕರ ಪರವಾಗಿ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಪೆನ್ಷನ್ ಹೆಚ್ಚಿಗೆ ಮಾಡಿ ಎಂದು ಕೋರಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಭಾಷಣ ಇದ್ದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮಾನ್ಯ ಮುಖ್ಯಮಂತ್ರಿಗಳು ನಿಮ್ಮ ಮನವಿಯನ್ನು ನಾನು ಸ್ವೀಕರಿಸುತ್ತೇನೆ.

ಈ ಬಗ್ಗೆ ನಾನು ಚಿಂತನೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳುತ್ತೇನೆ. ಮುಂದಿನ ಫೆಬ್ರವರಿಯಲ್ಲಿ ಬಜೆಟ್ ಘೋಷಣೆ ಆಗುತ್ತದೆ ಆ ಸಂದರ್ಭದಲ್ಲಿ ಖಂಡಿತವಾಗಿಯೂ ಕೂಡ ಹಿರಿಯ ನಾಗರಿಕರಿಗೆ ಪೆನ್ಷನ್ ಹೆಚ್ಚಿಸುತ್ತೇನೆ ಆದರೆ ಎಷ್ಟು ಹಣ ನೀಡಲಾಗುತ್ತದೆ ಎಂದು ಈಗಲೇ ನಿಖರವಾಗಿ ತಿಳಿಸಲು ಆಗುವುದಿಲ್ಲ ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಆದರೆ ಈಗಿರುವ ಹಣಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಮುಂದಿನ ವರ್ಷದಿಂದ ಹಿರಿಯ ನಾಗರಿಕರಿಗೆ ಪೆನ್ಷನ್ ಸಿಗುತ್ತದೆ ಎನ್ನುವ ಗ್ಯಾರಂಟಿ ಭರವಸೆಯನ್ನು ನಾನು ಕೊಡುತ್ತಿದ್ದೇನೆ ಎಂದು ಆಶ್ವಾಸನೆ ಇಟ್ಟರು.

ರಾಜ್ಯದ ಈ 7 ಜಿಲ್ಲೆಯವರಿಗೆ ಮನೆ ಕಟ್ಟಲು ಸರ್ಕಾರದ ವತಿಯಿಂದ ಉಚಿತ ಸೈಟ್ ವಿತರಣೆ.!

ಇದರಿಂದ ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೂ ಹಿರಿಯ ನಾಗರಿಕರ ದಿನದಂದು ಉಡುಗೊರೆ ಸಿಕ್ಕ ರೀತಿ ಆಗಿದೆ, ಮತ್ತು ಮುಂದಿನ ಬಾರಿ ಬಜೆಟ್ ಘೋಷಣೆ ಆಗುವವರೆಗೂ ಕೂಡ ವೃದ್ದರಲ್ಲಿ ಈ ಕುತೂಹಲ ಹೀಗೆ ಉಳಿಯುತ್ತದೆ. ಸರ್ಕಾರದ ವತಿಯಿಂದ ಪ್ರತಿ ವರ್ಷವೂ ಕೂಡ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತದೆ.

ಆ ದಿನದ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಸರ್ಕಾರದ ವತಿಯಿಂದ ಪ್ರಶಸ್ತಿ ವಿತರಿಸಲಾಗುತ್ತದೆ. ಈ ವರ್ಷವೂ ಕೂಡ ಇದೇ ಪದ್ಧತಿ ಮುಂದುವರೆಯಿತು. ಎಲ್ಲಾ ಹಿರಿಯ ನಾಗರಿಕರಿಗೂ ಶುಭಾಶಯಗಳು ತಿಳಿಸಿ ಕಾರ್ಯಕ್ರಮ ನಡೆಸಿಕೊಟ್ಟ ಸಿ.ಎಂ ಈ ಬಾರಿ ಪೆನ್ಷನ್ ಹೆಚ್ಚಳ ಮಾಡುವುದರ ಜೊತೆಗೆ ವೃದ್ಧಾಶ್ರಮಗಳನ್ನ ಹೆಚ್ಚು ಅಭಿವೃದ್ಧಿ ಮಾಡುವ ಜೊತೆಗೆ ನಮ್ಮ ಸರ್ಕಾರ ಎಲ್ಲ ಅನಾಥ ಹಿರಿಯ ನಾಗರಿಕರ ರಕ್ಷಣೆ ಮಾಡಲಿದೆ ಎನ್ನುವ ವಚನ ಕೂಡ ನೀಡಿದರು.

ಗಂಡನ ಹಣ, ಆಸ್ತಿ ಸಂಪತ್ತು ಏಳಿಗೆ ಆಗಬೇಕು ಎಂದರೆ ಹೆಣ್ಣು ಮಕ್ಕಳು ತಪ್ಪದೇ ಅಡುಗೆ ಮನೆಯಲ್ಲಿ ಈ ಎರಡು ಕೆಲಸವನ್ನು ಮಾಡಿ.!

ಹಾಗೆಯೇ ಎಲ್ಲಾ ಮಕ್ಕಳಿಗೂ ಕೂಡ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿ ಮಾತು ಹೇಳಿದರು. ತಮ್ಮ ಮನವಿಗೆ ಸ್ಪಂದಿಸಿ ವೇದಿಕೆಯಲ್ಲಿಯೇ ಮುಖ್ಯಮಂತ್ರಿಗಳು ಕೈಗೊಂಡ ಈ ನಿರ್ಧಾರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನಪೂರ್ವವಾಗಿ ಧನ್ಯವಾದಗಳು ತಿಳಿಸಿ, ಮುಖ್ಯಮಂತ್ರಿಗಳಿಗೆ ಆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದ ಫೋಟೋಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now