ಹೆಣ್ಣು ಮಕ್ಕಳು ಮನೆಯನ್ನು ಬೆಳಗುವ ಮಹಾಲಕ್ಷ್ಮಿ ಇದ್ದಂತೆ. ಆಕೆ ನಡೆದುಕೊಳ್ಳುವ ನಡೆ-ನುಡಿ ಆಚಾರ ವಿಚಾರದ ಮೇಲೆ ಆ ಮನೆಯ ಅದೃಷ್ಟ ನಿರ್ಧಾರವಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಹೀಗೆ ಇರಬೇಕು ಎನ್ನುವ ಪದ್ಧತಿ ಇದೆ.
ಆದರೆ ಇತ್ತೀಚಿಗೆ ಸ್ಪರ್ಧಾತ್ಮಕ ಬದುಕಿನಲ್ಲಿ ಅನಿವಾರ್ಯವಾಗಿ ಅವರು ಕೂಡ ಪುರುಷನಿಗೆ ಸಮವಾಗಿ ದುಡಿಯದೇ ಬೇಕಾದ ಅನಿವಾರ್ಯತೆ ಇರುವುದರಿಂದ ಆಕೆ ಮನೆ ನಿಭಾಯಿಸುವುದರ ಜೊತೆಗೆ ಪ್ರತಿ ವಿಷಯದಲ್ಲೂ ಗಮನ ಕೊಡಲು ಆಗುತ್ತಿಲ್ಲ ಇದರಿಂದ ತೀರ ತಾತ್ಸಾರ ಮಾಡಿದಾಗ ಕೆಲ ಸಂಕಷ್ಟಗಳು ಮನೆಗೆ ಎದುರಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಸಮಯಕ್ಕೆ ಹಾಗೂ ಶಕ್ತಿಗೆ ಅನುಸಾರವಾಗಿ ಮನೆ ಒಳಿತಿಗಾಗಿ ಮಾಡಲೇಬೇಕಾದ ಕೆಲವು ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ಲವೇ.? ಈ ಸಣ್ಣ ಕೆಲಸ ಮಾಡಿ ಎರಡು ಕಂತಿನ 4000ರೂ. ಒಟ್ಟಿಗೆ ಬರುತ್ತದೆ.!
ಇದನ್ನು ಪಾಲಿಸುವುದಕ್ಕೂ ಮುನ್ನ ಆಕೆಯ ಮನಸ್ಸು ಶುದ್ದವಾಗಿರಬೇಕು, ಸದಾ ಸಕಾರಾತ್ಮಕವಾಗಿ ಯೋಚಿಸಬೇಕು, ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ನಿಸ್ವಾರ್ಥದಿಂದ ಹಾರೈಸಬೇಕು, ಈ ರೀತಿ ಮನಸ್ಥಿತಿಯನ್ನು ಆಕೆ ಮೊದಲಿಗೆ ಬೆಳೆಸಿಕೊಳ್ಳಬೇಕು ಇದೆ ಮೊದಲಿಗೆ ಗೃಹಿಣಿಗೆ ಇರಬೇಕಾದ ಲಕ್ಷಣ ನಂತರ ಅಡುಗೆ ಮನೆಗೆ ಸಂಬಂಧಪಟ್ಟ ಹಾಗೆ ಈಗ ನಾವು ಹೇಳುವ ವಿಷಯಗಳನ್ನು ಆಕೆ ಪಾಲಿಸಲೇಬೇಕು.
ಅದೇನೆಂದರೆ, ಒಂದು ಮನೆಯ ಅಡುಗೆ ಮನೆ ಆ ಕುಟುಂಬದ ಶಕ್ತಿ ಮನುಷ್ಯ ಆರೋಗ್ಯದಿಂದ ಇರಲು ಆತನಿಗೆ ದುಡಿಯಲು ಸಾಮರ್ಥ್ಯ ಬರಲು ಎಲ್ಲದಕ್ಕೂ ಕೂಡ ಅಡುಗೆಮನೆ ಕಾರಣ ಆಗಿರುತ್ತದೆ. ಆರೋಗ್ಯದಿಂದ ಭಾಗ್ಯ ಹಾಗಾಗಿ ಅಡುಗೆ ಮನೆಗೆ ಇಷ್ಟೊಂದು ಪ್ರಾಮುಖ್ಯತೆ ನೀಡಲಾಗಿದೆ.
ಗೃಹಿಣಿ ಬೆಳಿಗ್ಗೆ ಎದ್ದ ಕೂಡಲೇ ಶುದ್ಧವಾಗಿ, ನಂತರ ಅಡುಗೆ ಮನೆಗೆ ಹೋಗಬೇಕು ಅಡುಗೆ ಮನೆಯಲ್ಲಿ ಅಡುಗೆ ಆರಂಭಿಸುವ ಮುನ್ನ ಸ್ಟವ್ ಅನ್ನು ಕ್ಲೀನ್ ಮಾಡಿ ಕೈಮುಗಿದು ಎರಡು ಹನಿ ಹಾಲನ್ನು ಉರಿಯುವ ಫ್ಲೇಮ್ ಮೇಲೆ ಹಾಕಿ ನಂತರ ಅಡುಗೆ ಕಾರ್ಯ ಆರಂಭಿಸಬೇಕು. ಯಾಕೆಂದರೆ ಪ್ರತಿದಿನ ಅರಾಶಿಣ ಕುಂಕುಮ ಹೂವು ಇಟ್ಟು, ದೀಪ ಬೆಳಗಿಸಿ ಪ್ರಾರ್ಥಿಸಲು ಸಮಯ ಇಲ್ಲವಾದ ಕಾರಣ ಕನಿಷ್ಠ ಈ ಒಂದು ಕಾರ್ಯವನ್ನಾದರೂ ಮಾಡಲೇಬೇಕು.
ಅನುಕೂಲ ಇದ್ದವರು ಬೇಕಾದರೆ ಪ್ರತಿದಿನವೂ ಕೂಡ ಪೂಜೆ ಮಾಡಿ ನಂತರ ಅಡುಗೆ ಆರಂಭಿಸಬಹುದು. ಜೊತೆಗೆ ಹೆಣ್ಣು ಮಕ್ಕಳು ಎಷ್ಟೇ ಬ್ಯುಸಿ ಇದ್ದರೂ ಕನಿಷ್ಠ ಪಕ್ಷ ಒಂದು ಹೊತ್ತು ಅಡುಗೆಯನ್ನಾದರೂ ಮನೆಯಲ್ಲಿ ಅಡುಗೆ ಮಾಡಲೇಬೇಕು. ಆಗ ಮಾತ್ರ ಆ ಮನೆಗೆ ಅನ್ನಪೂರ್ಣೇಶ್ವರಿ ಹಾರೈಸುತ್ತಾಳೆ ಮನೆಗೆ ಅಷ್ಟೈಶ್ವರ್ಯಗಳು ಬರುತ್ತವೆ.
ಹೊಸದಾಗಿ APL / BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಈ ದಿನಾಂಕದಿಂದ ಅರ್ಜಿ ಆಹ್ವಾನ.!
ಹಾಗಾಗಿ ಭಯ ಭಕ್ತಿಯಿಂದ ಪ್ರೀತಿಯಿಂದ ಅಡುಗೆ ಮಾಡಬೇಕು ಮತ್ತು ಅದಕ್ಕೆ ಗೌರವ ಕೊಡಬೇಕು. ಒಳ್ಳೆಯ ಮನಸ್ಸಿನಿಂದ ಅಡುಗೆ ಮಾಡಿ, ತಾಯಿ ಅನ್ನಪೂರ್ಣೇಶ್ವರಿಯ ಬಳಿ ಸದಾ ಹರಸುವಂತೆ ಪ್ರಾರ್ಥಿಸಬೇಕು. ಜೊತೆಗೆ ಮನೆಯಲ್ಲಿ ಯಾವಾಗಲೂ ಈಶಾನ್ಯ ಮೂಲೆಯಲ್ಲಿ ಒಂದು ತುಂಬಿದ ಕೊಡದಲ್ಲಿ ನೀರು ಇಟ್ಟಿರಬೇಕು, ಮರುದಿನ ಅದನ್ನು ಗಿಡಗಳಿಗೆ ಹಾಕಬೇಕು, ಆಗ ಎಲ್ಲ ವಾಸ್ತುದೋಷಗಳು ನಿವಾರಣೆ ಆಗುತ್ತದೆ.
ಪ್ರತಿಯೊಂದರ ಬೆಲೆಯೂ ಕೂಡ ಹೆಣ್ಣು ಮಕ್ಕಳಿಗೆ ಗೊತ್ತಿರಬೇಕು. ಯಾವುದನ್ನು ಅನಾವಶ್ಯಕವಾಗಿ ವೇಸ್ಟ್ ಮಾಡಬಾರದು. ಅದರಲ್ಲೂ ನೀರಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಅತಿ ಹೆಚ್ಚಾಗಿ ನೀರನ್ನು ಬಳಸುವವರು ಅತಿ ಹೆಚ್ಚಾಗಿ ಹಣವನ್ನು ವ್ಯಯ ಮಾಡುತ್ತಾರೆ. ಹಾಗಾಗಿ ಎಷ್ಟೇ ದುಡಿದರೂ ಆ ಮನೆಯಲ್ಲಿ ಹಣ ಉಳಿಯುವುದಿಲ್ಲ.
ಗಂಡ ಹೆಂಡತಿಗೆ ಪ್ರತಿ ತಿಂಗಳು 10,000 ಪಿಂಚಣಿ ಕೇಂದ್ರ ಸರ್ಕಾರದ ಹೊಸ ಯೋಜನೆ ಇದು.!
ಇದನ್ನು ಮನೆಯಲ್ಲಿರುವ ಮಕ್ಕಳಿಗೂ ಹೇಳಿಕೊಡಬೇಕು. ಜೊತೆಗೆ ನಾವು ಸುಸ್ಥಿತಿಯಲ್ಲಿದ್ದಾಗ ಅಸಹಾಯಕರಿಗೆ ಆರೋಗ್ಯದ ವಿಚಾರದಲ್ಲಿ ಅಥವಾ ಆಹಾರದ ವಿಚಾರದಲ್ಲಿ ಅಥವಾ ವಿದ್ಯಾಭ್ಯಾಸದ ವಿಚಾರದಲ್ಲಿ ಕೈಯಿಂದ ಆದಷ್ಟು ಸಹಾಯ ಮಾಡಬೇಕು. ಆಗ ಆ ಮನೆಗೆ ದೈವಾನುಗ್ರಹವಾಗುತ್ತದೆ.