ರೈತರಿಗಿರುವ ಸಾವಿರಾರು ಸವಾಲುಗಳ ನಡುವೆ ತಮ್ಮ ಜಮೀನಿನ ರಕ್ಷಣೆ ಕೂಡ ಒಂದು. ಯಾಕೆಂದರೆ ಜಮೀನಿನಲ್ಲಿ ಬೆಳೆ ಬರುವ ಸಮಯದಲ್ಲಿ ಪ್ರಾಣಿಗಳ ಮತ್ತು ಫಸಲು ಹಸನಾದ ಮೇಲೆ ಹಿತಶತ್ರುಗಳ ಕಳ್ಳಕಾಕರ ಭಯ ಇದ್ದೇ ಇರುತ್ತದೆ ಆದರೆ ದಿನದ 24 ಗಂಟೆಯೂ ರೈತನು ಜಮೀನಿನ ಬಳಿಯೇ ಇರಲಾಗುವುದಿಲ್ಲ.
ಕೆಲವು ರೈತರ ಮನೆ ಜಮೀನಿಗೆ ಬಹಳ ದೂರದಲ್ಲಿ ಇರುತ್ತದೆ ಮತ್ತು ಭೂಮಿಯು ಚದುರಿ ಹೋಗಿರುವುದರಿಂದ ಎಲ್ಲಾ ಕಡೆಯಲ್ಲೂ ಏಕಕಾಲದಲ್ಲಿ ನಿಗಾ ವಹಿಸಲು ಆಗುವುದಿಲ್ಲ ಇಂತಹ ಸಮಸ್ಯೆಗಳಲ್ಲಿ ಇರುವ ರೈತರಿಗೆ ಈಗ ಒಂದು ಸಿಹಿ ಸುದ್ದಿಯನ್ನು ತಿಳಿಸುತ್ತಿದ್ದೇನೆ. ನೂತನ ಮಾದರಿಯ ಸೋಲಾರ್ ಸಿಸಿ ಕ್ಯಾಮೆರಾ ಮಾರ್ಕೆಟ್ ನಲ್ಲಿ ಇದ್ದು, ಇದು ರೈತನ ಜಮೀನನ್ನು ಹದ್ದಿನ ಕಣ್ಣಿನಂತೆ ಕಾವಲು ಕಾಯುತ್ತದೆ.
ಇದರ ವೈಶಿಷ್ಟ್ಯದ ಬಗ್ಗೆ ಮಾಹಿತಿ ಹೀಗಿದೆ ನೋಡಿ ಈ ಸೋಲಾರ್ CC ಕ್ಯಾಮೆರಾ, 3 ಮಾಡೆಲ್ ನಲ್ಲಿ ಬರುತ್ತದೆ. ಯಾವುದೇ ಮಾಡೆಲ್ ಆದರೂ ಹತ್ತು ಜನ ಸೆಕ್ಯೂರಿಟಿ ಮಾಡುವ ಕೆಲಸವನ್ನು ಇದೊಂದೇ ಕ್ಯಾಮೆರಾ ಮಾಡುತ್ತದೆ ಎನ್ನಬಹುದು. ವಿಜಯನಗರ ಜಿಲ್ಲೆಯ ಕೃಷಿ ವಿಜ್ಞಾನಿಯೊಬ್ಬರು ಮನುಷ್ಯರಿಂದ ಬೆಲೆಬಾಳುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಲಿ ಎಂದು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಸುದ್ದಿ ಓದಿ:- ಗಾರ್ಮೆಂಟ್ಸ್ ಕೆಲಸ ಬಿಟ್ಟು ಸ್ವಂತ ದುಡಿಮೆ ಆರಂಭಿಸಿ IT BT ಗಿಂತ ಹೆಚ್ಚು ದುಡಿಯುತ್ತಿರುವ ಯುವತಿ.!
ಇದಕ್ಕೆ ಕರೆಂಟ್ ಅವಶ್ಯಕತೆಯೇ ಇಲ್ಲ, ರೈತರಿಗೆ ವಿದ್ಯುತ್ ಸಮಸ್ಯೆ ಇರುವುದರಿಂದ ಹೀಗಾಗಬಾರದು ಎಂದು ಸೋಲಾರ್ ನಿಂದ ವರ್ಕ್ ಆಗುವಂತೆ ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ ರೈತರಿಗೂ ಕಂಪ್ಯೂಟರ್ ಬಳಸಲು ಬರದ ಕಾರಣ ಅದರ ಅವಶ್ಯಕತೆ ಬರದಂತೆ 4G ಆಧಾರಿತ ತಂತ್ರಜ್ಞಾನದ ಅಭಿವೃದ್ಧಿ ಪಡಿಸಲಾಗಿದೆ. NVR, DVR ಮೇಂಟೇನ್ ಮಾಡಲು ಆಗದ ಕಾರಣ ವೈಫೈ ಇಲ್.
ಜಮೀನಿನಲ್ಲಿ ವೈರ್ ಗಳನ್ನು ತೆಗೆದುಕೊಂಡು ಹೋಗಲಾಗುವುದಿಲ್ಲ, ಇಲಿಗಳ ಕಡಿತಕ್ಕೆ ಒಳಗಾಗುತ್ತದೆ ಮತ್ತು ಗಾಳಿಗೆ ಬಿದ್ದು ಹಾಳಾಗುತ್ತದೆ ಎಂಬ ಕಾರಣದಿಂದ ವಯರ್ಲೆಸ್ ಸಿಸ್ಟಮ್ ಆಟೋ ರೋಟೆಟ್ ಆಗುವಂತೆ ತಯಾರಿಸಲಾಗಿದೆ ಹ್ಯೂಮನ್ ಟ್ರ್ಯಾಕಿಂಗ್ ಮತ್ತು ಮೋಷನ್ ಸೆನ್ಸರ್ ಆಗಿರುತ್ತವೆ.
ಮೊದಲೇ ತಿಳಿಸಿದ ಮೂರು ಮಾಡೆಲ್ ಗಳಲ್ಲಿ ಮೊದಲನೇ ಮಾಡೆಲ್ ಬಗ್ಗೆ ಹೇಳುವುದಾದರೆ PTZ ಕ್ಯಾಮೆರಾ, ಹೈವೆಗಳಲ್ಲಿ ಗಾಡಿಗಳನ್ನು ಟ್ರ್ಯಾಕ್ ಮಾಡಲು ಇದೇ ಕ್ಯಾಮರಾ ಬಳಸುತ್ತಾರೆ, ಬಹಳ ದೊಡ್ಡದಾದ ಕ್ಯಾಮೆರಾ ಆಟೋ ಜೂಮಿಂಗ್ ಇರುತ್ತದೆ.
ಈ ಸುದ್ದಿ ಓದಿ:-ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.!
ಈ ಕ್ಯಾಮೆರಾ ಗೆ ಸಿಮ್ ಕಾರ್ಡ್ ಹಾಕಿ ಮೊಬೈಲ್ ಗೆ ಕನೆಕ್ಟ್ ಮಾಡಿದರೆ ಯಾವುದಾದರೂ ಪ್ರಾಣಿ, ಓಡಾಡಿದರೆ ಅದನ್ನು ಝೂಮ್ ಮಾಡಿ ಫೋಟೇಜ್ ಗಳನ್ನು ಮೊಬೈಲ್ ಗೆ ಕಳುಹಿಸುತ್ತದೆ. ರೆಕಾರ್ಡಿಂಗ್ ಗಾಗಿ ಕ್ಯಾಮೆರಾಗೂ ಒಂದು ಮೆಮೊರಿ ಕಾರ್ಡ್ ಹಾಕಲಾಗಿರುತ್ತದೆ.
ಯಾವುದೇ ಅನಿಮಲ್ ಡಿಟೆಕ್ಟ್ ಆದರೂ 20 ಸೆಕೆಂಡ್ 30 ಸೆಕೆಂಡ್ ಗೊಮ್ಮೆ ಫೂಟೇಜ್ ಕಳುಹಿಸುತ್ತದೆ 80W ಪ್ಯಾನೆಲ್, 24AH ಲಿಥಿಯಂ ಪ್ಯಾರಾಫಾಸ್ಪೇಟ್ ಬ್ಯಾಟರಿ ಇರುತ್ತದೆ. ದೊಡ್ಡ ರೈತರು, ಶ್ರೀಗಂಧ, ರಕ್ತ ಚಂದನ ಬೆಳೆಯುವರು, ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟುವ ಕಡೆಗಳಲ್ಲಿ ಈ ಕ್ಯಾಮರಾ ಬಳಸುತ್ತಾರೆ. ಲೇಸರ್ ಲೈಟ್ ಎಫೆಕ್ಟ್ ಇರುತ್ತದೆ. ಹಗಲು ಮತ್ತು ರಾತ್ರಿ ಎರಡರ ಕಲರ್ ಫೂಟೇಜ್ ನೋಡಬಹುದು.
ಒಂದು ಅಪ್ಲಿಕೇಶನ್ ಮೂಲಕ ನಿಮಗೆ ಕ್ಯಾಮೆರಾ ಇಂದ ನೋಟಿಫಿಕೇಶನ್ ಬರುತ್ತದೆ ನೀವು ಅದಕ್ಕೆ ಸ್ಪಂದಿಸಿ ಲೈವ್ ಆಗಿ ಜಮೀನಿನಲ್ಲಿ ಏನಾಗುತ್ತಿದೆ ಎಂದು ಕೂಡ ನೋಡಬಹುದು ಹಾಗೆಯೇ ವಾಯ್ಸ್ ನೋಟ್ ಮೂಲಕ ಯಾರಾದರೂ ಬಂದಿದ್ದವರಿಗೆ ಎಚ್ಚರಿಕೆಯನ್ನು ಕೂಡ ಕೊಡಬಹುದು ದಾರಿತಪ್ಪಿ ಬಂದಿದ್ದವರಿಗೆ ಸಲಹೆಗಳನ್ನು ಕೊಡಬಹುದು.
ಈ ಸುದ್ದಿ ಓದಿ:-ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೆ ನೋಡಿ.!
ಪ್ರಾಣಿಗಳಾದರೆ ಶಬ್ದ ಮಾಡಿ ಓಡಿಸಬಹುದು ಇನ್ನೂ ಉಳಿದ ಎರಡು ಮಾಡೆಲ್ ಗಳಲ್ಲಿ ವ್ಯತ್ಯಾಸ ಏನೆಂದರೆ ಇದು ಆಟೋ ಜೂಮ್ ಇರುತ್ತದೆ ಅವುಗಳು ಮ್ಯಾನುವಲ್ ಜೂಮಿಂಗ್ ಇರುತ್ತವೆ ಅಷ್ಟೇ ವ್ಯತ್ಯಾಸ.
ಹೆಚ್ಚಿನ ವಿವರಕ್ಕಾಗಿ ಈ ವೀಡಿಯೋ ಪೂರ್ತಿ ನೋಡಿ ಮತ್ತು ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.
6363737439