ಉಪೇಂದ್ರ & ಶಿವಣ್ಣ ಸಿನಿಮಾದ ಶೂಟಿಂಗ್ ಸಮಯದಲ್ಲಿ ನನಗೆ ಊಟ ಹಾಕದೆ ಅವಮಾನ ಮಾಡಿ ಆಚೆ ಕಳಿಸಿದ್ರು ಎಂದು ಕಣ್ಣೀರು ಹಾಕಿದ ಹಾಸ್ಯನಟ ಅರಸು.

ಪರದೆಯ ಮೇಲೆ ಚಂದದ ಬಟ್ಟೆಯನ್ನು ತೊಟ್ಟು ಸ್ಟೈಲಿಶ್ ಆಗಿ ಕಾಣುವ ಕಲಾವಿದರ ಬದುಕು, ಅಷ್ಟೇ ಬಣ್ಣದಿಂದ ಕೂಡಿರುವುದಿಲ್ಲ ಕೆಲವರು ಸಾಗಿ ಬಂದಂತಹ ದಾರಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ ಹಂತ ಹಂತವಾಗಿ ಮೇಲೆ ಬಂದಿರುವ ಹಲವು ಕಲಾವಿದರನ್ನು ನೋಡಿದರೆ ಅವರ ಹಿಂದೆ ಅವರು ಪಟ್ಟಿರುವ ಪರಿಶ್ರಮ ಕಷ್ಟ ಎಲ್ಲವೂ ಖಂಡಿತವಾಗಿಯೂ ಕಣ್ಣಲ್ಲಿ ನೀರು ತರಿಸುತ್ತದೆ. ಚಿತ್ರರಂಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಯಶಸ್ಸು ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ, ಎಷ್ಟೋ ಜನ ಕಲಾವಿದರು, ಚಿತ್ರರಂಗದಲ್ಲಿ ಬಹಳ ವರ್ಷದಿಂದ ಇದ್ದರೂ ಸಹ ಅವರ ಸ್ಥಿತಿ ಮಾತ್ರ ಒಂದೇ ರೀತಿ ಇರುತ್ತದೆ ಏಕೆಂದರೆ ಕಲಾವಿದರಾಗಿ ಬಂದ ಎಲ್ಲರೂ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಲು ಸಾಧ್ಯವಿಲ್ಲ ಎಲ್ಲರೂ ನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ. ಪೋಷಕ ಹಾಗೂ ಹಾಸ್ಯ ನಟರಾಗಿ ಕಾಣಿಸಿಕೊಳ್ಳುವ ಸಾಕಷ್ಟು ಕಲಾವಿದರು ತಮ್ಮ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಂಡಿದ್ದಾರೆ ಸಿನಿಮಾ ಗಳಲ್ಲಿ ನಾಯಕ ನಾಯಕಿ ಪಾತ್ರಕ್ಕೆ ಎಷ್ಟು ಮಹತ್ವ ಇರುತ್ತದೆಯೋ ಹಾಸ್ಯಗಾರ ಹಾಗೂ ಇತರ ಪೋಷಕ ಪಾತ್ರಗಳಿಗೂ ಅಷ್ಟೇ ಮಹತ್ವ ಇರುತ್ತದೆ.

WhatsApp Group Join Now
Telegram Group Join Now

ಒಂದು ಅರ್ಥದಲ್ಲಿ ಹೇಳುವುದಾದರೆ ನಾಯಕ ನಟನಾಗಿ ನಟಿಸುವುದಕ್ಕಿಂತ ಹಾಸ್ಯ ನಟನಾಗಿ ನಟಿಸುವುದು ಇನ್ನೂ ಕಷ್ಟ ಏಕೆಂದರೆ ಹಾಸ್ಯ ನಟ ತನ್ನ ಉಡುಪಿನಿಂದಲೂ ತನ್ನ ಮುಖದಿಂದಲೂ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಆತ ತನ್ನಲ್ಲಿರುವ ಹಾಸ್ಯ ಪ್ರಜ್ಞೆಯಿಂದ ಮಾತ್ರ ಜನರನ್ನು ಗೆಲ್ಲಲು ಸಾಧ್ಯವಾಗುತ್ತದೆ. ಹಾಸ್ಯ ಪ್ರವೃತ್ತಿ ಎಲ್ಲರಲ್ಲೂ ಇರಲು ಸಾಧ್ಯವಿಲ್ಲ, ಹಾಸ್ಯ ಪ್ರವೃತ್ತಿ ಇರುವವರು ಇಂದು ಸಿನಿಮಾದಲ್ಲಿ ಎಲ್ಲಾ ರೀತಿಯ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಜಗ್ಗೇಶ್, ಕೋಮಲ್, ಚರಣ್, ಚಿಕ್ಕಣ್ಣ, ಸಾಧುಕೋಕಿಲ ಮೊದಲಾದವರನ್ನು ನೋಡಿದರೆ ಹಾಸ್ಯ ಕಲಾವಿದರು ಎಷ್ಟು ಜನರಿಗೆ ಹತ್ತಿರವಾಗಿದ್ದಾರೆ ಎಂಬುದು ಅರಿವಾಗುತ್ತದೆ ಆದರೆ ಇವರಂತೆಯೇ ಪರದೆಯ ಮೇಲೆ ಜನರನ್ನು ರಂಜಿಸುತ್ತಾ ಬಂದಿರುವ ಹಲವಾರು ಇತರ ಕಲಾವಿದರು ಇದ್ದಾರೆ ಅಂತಹವರಲ್ಲಿ ಹಾಸ್ಯ ಕಲಾವಿದ ಅರಸು ಕೂಡ ಒಬ್ಬರು.

ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ನಟ ಅರಸು ಅವರು ದುರಾದೃಷ್ಟವಶಾತ್ ಇವರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ಕೆಲವು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅರಸು ಕೆಲಸ ಮಾಡುತ್ತಿದ್ದಾರೆ ಆದರೆ ಪಾತ್ರ ಎಂತಹದ್ದೇ ಆಗಲಿ ಎಷ್ಟು ಸಣ್ಣ ಪಾತ್ರವಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡು ಅಚ್ಚುಕಟ್ಟಾಗಿ ಅಭಿನಯಿಸುವ ಚಾಕ ಚುಕ್ಯತೆ ಅರಸು ಅವರಿಗೆ ಇದೆ. ಇನ್ನೂ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲಾ ಕಲಾವಿದರನ್ನು ಒಂದೇ ಸಮನಾಗಿ ನೋಡುತ್ತಾರೆ ಎನ್ನುವುದು ತಪ್ಪು. ಕೆಲವು ಕಡೆ ಸ್ಟಾರ್ ನಟರು ಹಾಸ್ಯ ಕಲಾವಿದರು ವಿಲ್ಲನ್ ಗಳು ಹೀಗೆ ಇವರ ನಡುವೆ ತಾರತಮ್ಯ ಇರುತ್ತದೆ. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವಂತಹ ಕೆಲವು ಕಲಾವಿದರನ್ನು ನೋಡುವಂತಹ ರೀತಿಯ ಬೇರೆಯಾಗಿರುತ್ತದೆ. ಸಿನಿಮಾ ಜೀವನದಲ್ಲಿ ತಮಗೆ ಆಗಿರುವಂತಹ ಕಹಿ ಘಟನೆಯನ್ನು ಅರಸು ಅವರು ಎಲ್ಲರೊಂದಿಗು ಸಹ ಹಂಚಿಕೊಂಡಿದ್ದಾರೆ.

ನಟ ಶಿವಣ್ಣ ಹಾಗೂ ಉಪೇಂದ್ರ ಅವರ ಅಭಿನಯದ ಲವಕುಶ ಸಿನಿಮಾದ ಚಿತ್ರೀಕರಣದ ಸಂದರ್ಭ ದಲ್ಲಿ ಫೈಟಿಂಗ್ ಸೀನ್ ಒಂದು ನಡೆಯುತ್ತಾ ಇದ್ದು ಇದಕ್ಕೆ ಕೇವಲ ಜೂನಿಯರ್ ಆರ್ಟಿಸ್ಟ್ ಗಳು ಬಂದರೆ ಸಾಕು ಎಂದು ಕರೆಯಲಾಗಿತ್ತು ಆ ಸಂದರ್ಭದಲ್ಲಿ ನಾನು ಹಾಗೂ ಇತರ ಕಲಾವಿದರು ಅಲ್ಲಿ ಉಪಸ್ಥಿತರಿದ್ದೆವು. ಆದರೆ ನಾನು ಕರೆಯದೆ ಚಿತ್ರೀಕರಣದ ಸ್ಥಳಕ್ಕೆ ಬಂದಿದ್ದೇನೆ ಎಂಬಂತ ಕಾರಣದಿಂದಾಗಿ ನನಗೆ ಊಟವನ್ನು ಕೊಡಲಿಲ್ಲ, ಒಬ್ಬ ಕಲಾವಿದ ಎಂದು ಸಹ ನೋಡದೆ ನನ್ನನ್ನು ಆಚೆ ಕಳುಹಿಸಿ ಬಿಟ್ಟರು. ನಂತರ ನಾನು ಅಲ್ಲಿಂದ ಆಚೆ ಬಂದು ಹೊರಗಡೆ ಊಟ ಮಾಡಿದೆ ಎಂದು ತಮ್ಮ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ಶಿವಣ್ಣ ಹಾಗೂ ಉಪೇಂದ್ರ ಅವರ ಗಮನಕ್ಕೆ ಬಾರದೆ ಇದ್ದರೂ ಚಿತ್ರತಂಡ ಇದನ್ನು ಕಡೆಗಣಿಸಿರುವುದು ತಪ್ಪು ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now