ಸರ್ಕಾರದ ಯಾವುದೇ ಕೆಲಸವನ್ನು ಗುತ್ತಿಗೆ ಪಡೆದು ಕೆಲಸ ಮಾಡಲು ಈ ಸಿವಿಲ್ ಕಾಂಟ್ರಾಕ್ಟ್ ಲೈಸೆನ್ಸ್ ಬೇಕಾಗುತ್ತದೆ. ಉದಾಹರಣೆಗೆ ಪಂಚಾಯಿತಿಯಿಂದ ಗುತ್ತಿಗೆ ಪಡೆದು ಅಂದರೆ ರೋಡ್ ಕೆಲಸ, ಬಸ್ ಸ್ಟಾಪ್ ಕೆಲಸ, ಕೆರೆ,ಬಾವಿ ಈ ರೀತಿ ಸರ್ಕಾರದ ಕೆಲಸಗಳು ಗುತ್ತಿಗೆ ಪಡೆದು ಟೆಂಡರ್ ಪಡೆದು ಕೆಲಸ ಮಾಡುವುದಕ್ಕೆ ಸಿವಿಲ್ ಕಾಂಟ್ರಾಕ್ಟರ್ ಲೈಸೆನ್ಸ್ ಬೇಕಾಗುತ್ತದೆ. ಇದರಲ್ಲಿ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. Class-4 Class-3 Class-2 Class-1 ಎಂದು ವಿಂಗಡಿಸಲಾಗಿದೆ.
Class-4 ಮತ್ತು Class-3 ನಲ್ಲಿ ಯಾರು ಸರ್ಕಾರದ ಕೆಲಸ ಗುತ್ತಿಗೆ ಪಡೆದು ಮಾಡುತ್ತಾರೆ ಅವರು 20 ರಿಂದ 25 ಲಕ್ಷದ ಒಳಗೆ ಯಾರು ಕೆಲಸ ಮಾಡುತ್ತಾರೆ ಅವರು Class-4 ಮತ್ತು Class-3 ಲೈಸೆನ್ಸ್ ಪಡೆದುಕೊಂಡರೆ ಸಾಕು ಇವರು 25 ಲಕ್ಷಕ್ಕಿಂತ ಕೆಳಗೆ ಕೆಲಸ ಮಾಡಬೇಕು. ಅವರು 25 ಲಕ್ಷಕ್ಕಿಂತ ಹೆಚ್ಚಿನದಾಗಿ ಕೆಲಸ ಮಾಡಲು ರೈಟ್ಸ್ ಇರುವುದಿಲ್ಲ. Class-2 ಮತ್ತು Class-1 ಲೈಸೆನ್ಸ್ ಎಂದರೆ 25 ಲಕ್ಷಕ್ಕಿಂತ ಜಾಸ್ತಿ ಯಾರು ಸರ್ಕಾರದ ಕೆಲಸ ಗುತ್ತಿಗೆ ಪಡೆದು ಮಾಡುತ್ತಾರೋ ಅವರ ಹತ್ತಿರ Class-2 ಮತ್ತು Class-1 ಲೈಸೆನ್ಸ್ ಇರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅರ್ಹತೆಗಳು ಯಾವುದೇ ಒಂದು ವ್ಯಕ್ತಿ ಕೂಡ ಈ ಒಂದು ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದು ಒಂದು ಸಂಸ್ಥೆ ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು. ಯಾರು ಈ ಲೈಸೆನ್ಸ್ ಗೆ ಅರ್ಜಿಯನ್ನು ಸಲ್ಲಿಸುತ್ತಾರೋ ಅವರು ಆರ್ಥಿಕವಾಗಿ ಸದೃಢವಾಗಿರಬೇಕು. ಯಾರೆಲ್ಲ ಈ ಒಂದು ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದರೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವಂತಹ ಇಂಜಿನಿಯರ್ ಈ ಕಾಂಟ್ರಾಕ್ಟ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವಂತಿಲ್ಲ.
ಯಾರು ಸರ್ಕಾರದ ಇಂಜಿನಿಯರಿಂಗ್ ಇಲಾಖೆಯಲ್ಲಿ ಮೇಲಧಿಕಾರಿಯಾಗಿ ಕೆಲಸ ಮಾಡುತ್ತಿರುತ್ತಾರೋ ಅಂತಹವರು ಅರ್ಜಿಯನ್ನು ಹಾಕುವಂತಿಲ್ಲ. ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳನ್ನು ನೋಡುವುದಾದರೆ ಅಪ್ಲಿಕೇಶನ್ ಫಾರಂ, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಅಥವಾ ಪಾನ್ ಕಾರ್ಡ್ ಅಥವಾ ರೇಷನ್ ಕಾರ್ಡ್ ವಿತ್ ಅಡ್ರೆಸ್ ಬೇಕಾಗುತ್ತದೆ. ವಾಸ ಸ್ಥಳದ ಪ್ರೂಫ್ ಬೇಕಾಗುತ್ತದೆ ಅಂದರೆ ಡ್ರೈವಿಂಗ್ ಲೈಸೆನ್ಸ್ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ಬೇಕಾಗುತ್ತದೆ.
ಅಪ್ ಟು ಡೇಟ್ GST/VAT ಕ್ಲಿಯರ್ ಅಂಡ್ ಸರ್ಟಿಫಿಕೇಟ್ ಬೇಕಾಗುತ್ತದೆ. ಲೇಬರ್ ಲೈಸೆನ್ಸ್ ಬೇಕಾಗುತ್ತದೆ ನಂತರ ನಿಮ್ಮ ಬ್ಯಾಂಕ್ ನಲ್ಲಿ ಸಾಲ್ವೆನ್ಸಿ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬೇಕಾಗುತ್ತದೆ ಎರಡು ಪಾಸ್ಪೋರ್ಟ್ ಸೈಜ್ ಫೋಟೋಗಳು ಪೊಲೀಸ್ ವೇರಿಫಿಕೇಶನ್ ರಿಪೋರ್ಟ್ ಬೇಕಾಗುತ್ತದೆ. ನೀವು ಎಸ್ಸಿ ಎಸ್ಟಿ ಅಥವಾ ಹಿಂದುಳಿದ ವರ್ಗವಾಗಿದ್ದರೆ ಕ್ಯಾಸ್ಟ್ ಸರ್ಟಿಫಿಕೇಟ್ ಬೇಕಾಗುತ್ತದೆ. ಹಾಗೆ ನೀವು ಅರ್ಜಿ ಹಾಕಲು ಗೌರ್ನಮೆಂಟ್ ಅಥವಾ ಅರೆ ಗೌರ್ಮೆಂಟ್ ನಲ್ಲಿ ಐದು ವರ್ಷ ಕೆಲಸ ಮಾಡಿರುವ ಒಂದು ಎಕ್ಸ್ಪೀರಿಯನ್ಸ್ ಲೆಟರ್ ಬೇಕಾಗುತ್ತದೆ.
ಒಂದು ವೇಳೆ ನೀವು ಸಂಸ್ಥೆಯ ಮೂಲಕ ಈ ಕಾಂಟ್ರಾಕ್ಟ್ ಲೈಸೆನ್ಸ್ ಗೆ ಅರ್ಜಿ ಹಾಕುವುದಾದರೆ ಆ ಸಂಸ್ಥೆಯ ದಾಖಲಾದ ವರ್ಷದ ಒಂದು ಸರ್ಟಿಫಿಕೇಟ್ ಬೇಕಾಗುತ್ತದೆ. ಹಾಗೆ ಕಂಪನಿಯ ಹೆಸರಿನಲ್ಲಿ ಇರುವಂತಹ ಆಧಾರ್ ಕಾರ್ಡ್ ಬೇಕಾಗುತ್ತದೆ. ಈ ಎಲ್ಲವನ್ನು ಸಹ ನೀವು ಆಲೋಚಿಸಿ ಕಾಂಟ್ರಾಕ್ಟರ್ ಲೈಸೆನ್ಸ್ ಗೆ ಅರ್ಜಿ ಹಾಕಲು ಸೂಕ್ತವಾಗಿರುತ್ತದೆ.