ವಿಧಿಯ ಆಟ ಯಾವಾಗ ಹೇಗೆ ಇರುತ್ತದೆ ಎಂದು ಹೇಳಲು ಅಸಾಧ್ಯ ಹಾಗಾಗಿ ನಾವು ಯಾವಾಗಲೂ ಎತ್ತರದಲ್ಲಿ ಹೋಗುವಾಗ ತುಂಬಾ ಮೇಲಕ್ಕೆ ಇರದೆ ಸಹಜವಾಗಿ ಇರುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಯಾಕೆಂದರೆ ಬದುಕು ಯಾವಾಗ ಮೇಲಿಂದ ಕೆಳಗೆ ಎಸೆಯುತ್ತದೆ ಎಂದು ಊಹಿಸುವುದು ಅಸಾಧ್ಯ. ಈ ರೀತಿ ಏನಾದರೂ ಕೆಳಗೆ ಬಿದ್ದಾಗ ತುಂಬಾ ಮೇಲೆ ಇದ್ದವರಿಗೆ ಬಹಳ ಏಟಾಗುತ್ತದೆ ಹಾಗಾಗಿ ಈ ಹೇಳಿಕೆಯ ಅರ್ಥದಂತೆ ಗೆದ್ದಾಗಲು ಬಿದ್ದಾಗಲೂ ಒಂದೇ ರೀತಿಯ ಮನಸ್ಥಿತಿ ಇದ್ದರೆ ಬದುಕಿನಲ್ಲಿ ಯಾವಾಗಲೂ ಖುಷಿಯಾಗಿರಬಹುದು ಆದರೆ ಜನಸಾಮಾನ್ಯರಿಗೆ ಇದು ಸ್ವಲ್ಪ ಕಷ್ಟವಾಗಬಹುದು ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಮ್ಯಾನ್ ಸ್ಪಿರಿಟ್ ಎನ್ನುವುದು ಆಟ ಆಡುವಾಗಲೇ ಅಭ್ಯಾಸ ಆಗಿರುವುದರಿಂದ ಅವರಿಗೆ ಪಂದ್ಯ ಗೆದ್ದರೂ ಸೋತರೂ ಕೂಡ ಆಟ ಆಡಿದ ಸಂಭ್ರಮ ಮನದಲ್ಲಿ ಇರುತ್ತದೆ ಹಾಗಾಗಿ ಬದುಕನ್ನು ಅವರು ಅದೇ ರೀತಿ ಸ್ವೀಕರಿಸುತ್ತಾರೆ.
ಈಗಾಗಲೇ ಹಲವಾರು ಸೆಲೆಬ್ರಿಟಿಗಳು, ಜನ ಚೆನ್ನಾಗಿ ಗುರುತಿಸಿ ಮೆಚ್ಚಿ ಕೊಂಡಾಡುತ್ತಿದ್ದವರು ಅಷ್ಟೇ ಬೇಗ ಕುಖ್ಯಾತಿ ಹೊಂದಿ ಮತ್ತು ಮರೆಯಾಗಿ ಹೋಗಿದ್ದನ್ನು ನಾವೆಲ್ಲರೂ ಕಂಡಿದ್ದೇವೆ. ಕೆಲವೊಂದು ಸನ್ನಿವೇಶಗಳಲ್ಲಿ ಅವರದ್ದೇ ತಪ್ಪಿದ್ದರು ಕೂಡ ಕೆಲವೊಮ್ಮೆ ವಿಧಿ ಅವರನ್ನು ಆ ಪರಿಸ್ಥಿತಿಗೆ ತಳ್ಳಿರುತ್ತದೆ. ಆದರೆ ಎಂತಹದೇ ಪರಿಸ್ಥಿತಿ ಇದ್ದರೂ ಬದುಕಲ್ಲಿ ಸೋಲೊಪ್ಪಿಕೊಳ್ಳದೆ ಎಲ್ಲವನ್ನು ಫೇಸ್ ಮಾಡುವ ಮನಸ್ಸು ಎಲ್ಲಾ ಸೆಲೆಬ್ರಿಟಿಗಳಿಗೂ ಕೂಡ ಇರುವುದಿಲ್ಲ . ಅದರಲ್ಲೂ ಈ ಕಾಲದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರುವ ಅಷ್ಟೊಂದು ಆತ್ಮವಿಶ್ವಾಸದ ಕೊರತೆ ಮತ್ತು ಮನೋ ದೌರ್ಬಲ್ಯತೆ ಎಲ್ಲರಲ್ಲೂ ತುಂಬಿರುವಾಗ ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ಬದುಕನ್ನು ಬಂದ ಹಾಗೆ ಸ್ವೀಕರಿಸುವ ಎಂತಹದ ಸನ್ನಿವೇಶ ಎದುರಾದರೂ ಯಾವುದೇ ಕಷ್ಟ ಬಂದರೂ ಮೆಟ್ಟಿ ನಿಲ್ಲುವ ಗಟ್ಟಿತನ ಇರುತ್ತದೆ.
ಈ ಸಾಲಿನಲ್ಲಿ ಇಡೀ ವಿಶ್ವವೇ ಮೆಚ್ಚಿಕೊಂಡಾಡಿದ ಮೂರು ಕ್ರಿಕೆಟ್ ಆಟಗಾರರು ಕೂಡ ಸೇರಿದ್ದಾರೆ. ಒಂದು ಕಾಲದಲ್ಲಿ ಈ ಮೂವರು ಕೂಡ ಪ್ರಪಂಚದ ಎಲ್ಲಾ ಕ್ರಿಕೆಟ್ ನೋಡುಗರ ಮನಸ್ಸನ್ನು ಗೆದ್ದಿದ್ದವರು ಹಾಗೂ ತಾವಾಡಿದ ಎಲ್ಲಾ ಪಂದ್ಯದಲ್ಲೂ ಕೂಡ ಉತ್ತಮ ಪ್ರದರ್ಶನಗಳನ್ನು ಕೊಟ್ಟು ಎಲ್ಲರ ಮನಸ್ಸನ್ನು ಗೆದ್ದಿದ್ದವರು. ಈ ರೀತಿ ಇಡೀ ವಿಶ್ವದಲ್ಲಿ ಗುರುತಿಸಿಕೊಳ್ಳುವಷ್ಟು ಖ್ಯಾತಿ ಹೊಂದಿದ್ದ ಕ್ರಿಕೆಟ್ ಆಟಗಾರರು ಈಗ ಬದುಕಿನ ಬಂಡಿ ಸಾಗಿಸುವ ಸಲುವಾಗಿ ಬಸ್ ಡ್ರೈವರ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆಂದ ಮಾತ್ರಕ್ಕೆ ಡ್ರೈವರ್ ಗಳಾಗಿ ಕೆಲಸ ಮಾಡುವುದು ಕೀಳು ಎಂದಲ್ಲ ಆದರೆ ಎಲ್ಲರೂ ಕೂಡ ಗುರುತಿಸುತ್ತಾರೆ. ಸೆಲೆಬ್ರಿಟಿಗಳು ಯಾವಾಗಲೂ ಉತ್ತಮವಾದ ಲೈಫ್ ಸ್ಟೈಲ್ ಹೊಂದಿರುತ್ತಾರೆ ಎನ್ನುವುದು ಎಲ್ಲರ ಅಂದಾಜು ಆದರೆ ಎಲ್ಲರ ಬದುಕು ಕೂಡ ಒಂದೇ ಸಮ ಇರುವುದಿಲ್ಲ ಎನ್ನುವುದಕ್ಕೆ ಹಿಡಿದ ಕೈಗನ್ನಡಿ ರೀತಿ ಈ ಆಟಗಾರರ ಬದುಕು ಆಗಿದೆ.
ಆದರೆ ಅವರಲ್ಲಿ ಇನ್ನೂ ಕೂಡ ಆಟ ಆಡುವ ಕಿಚ್ಚು ಮಾತ್ರ ಕಡಿಮೆ ಆಗಿಲ್ಲ ಎಂದೇ ಹೇಳಬಹುದು. ಇವರಲ್ಲಿ ಮೊದಲನೆಯದಾಗಿ ರಂಡೀವ್ ಅವರನ್ನು ಗುರುತಿಸಬಹುದು. 33 ವರ್ಷದ ರಂಡೀವ್ ಅವರು ಶ್ರೀಲಂಕದ ಪರವಾಗಿ 12 ಟೆಸ್ಟ್ ಗಳು 31 ಏಕದಿನ ಪಂದ್ಯಗಳು ಹಾಗೂ 7 ಟಿ ಟ್ವೆಂಟಿ ಮ್ಯಾಚ್ ಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 43 ವಿಕೆಟ್ಗಳನ್ನು ಒಂಡೇ ಆಟದಲ್ಲಿ 36 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅಲ್ಲದೆ ಭಾರತದ ಐಪಿಎಲ್ ಆಟಗಳಲ್ಲಿ ಕೂಡ ಭಾಗಿಯಾಗಿರುವ ಇವರು ಸಿಎಸ್ಕೆ ತಂಡದ ಪರವಾಗಿ ಯಲೋ ಆರ್ಮಿ ಆಟಗಾರನಾಗಿ ಒಟ್ಟು ಎಂಟು ಪಂದ್ಯಗಳಲ್ಲಿ ಆರು ವಿಕೆಟ್ ಕಿತ್ತಿದ್ದಾರೆ. ಈಗಲೂ ಕೂಡ ಆಸಿಸ್ ದಡೆನಾಂಗ್ ಕ್ಲಬ್ ಪರ ಆಟ ಆಡುತ್ತಿದ್ದಾರೆ ಇವರು. 2020-21ರ ಸಾಲಿನಲ್ಲಿ ಭಾರತ ಆಸಿಸ್ ನಡುವೆ ನಡೆದ ಬಾರ್ಡರ್ ಗವಾರ್ಸ್ಕರ್ ಸರಣಿ ಪಂದ್ಯದ ವೇಳೆ ಕಾಂಗ್ರೋಗಳಿಗೆ ರಂಡೀವ್ ನೆಟ್ ಬೌಲರ್ ಕೂಡ ಆಗಿದ್ದರು.
ಆದರೆ ಈಗ ಇವರು ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ಖಂಡಿತ ಆಶ್ಚರ್ಯ ಆಗಬಹುದು ಯಾಕೆಂದರೆ ಈಗ ಇವರು ಹೊಟ್ಟೆಪಾಡಿಗಾಗಿ ಆಸ್ಟ್ರೇಲಿಯಾ ದೇಶದ ಮೇಲ್ಬ್ರೋನ್ ಸಿಟಿಯ ಟ್ರಾನ್ಸ್ ದೇವ್ ಎನ್ನುವ ಪಬ್ಲಿಕ್ ಟ್ರಾನ್ಸ್ಪೋರ್ಟ್ ಅಲ್ಲಿ ಬಸ್ ಚಾಲಕರಾಗಿದ್ದಾರೆ. ಇವರಿಗೆ ಜೊತೆಯಾಗಿ ಜಿಂಬಾಂಬೆಯ ಮಾಜಿ ಕ್ರಿಕೆಟರ್ ಆದ ವಾಡಿಂಗ್ಹನ್ ಮಾವ್ಹೆಂಗಾ ಅವರು ಸಾತ್ ನೀಡಿದ್ದಾರೆ. ಸಿ ಎಸ್ ಕೆ ಸ್ಟಾರ್ ಪ್ಲೇಯರ್ ಕೂಡ ಆಗಿದ್ದ ಇವರು 2011ರ ವಲ್ಡ್ ಕಪ್ ಪಂದ್ಯದ ವೇಳೆ ಭಾರತದ ವಿರುದ್ಧ ಆಟ ಆಡಿದ್ದರು. ವಾಡಿಂಗ್ಹನ್ ಮಾವ್ಹೆಂಗಾ ಅವರು ಕ್ರಿಕೆಟ್ ಅಲ್ಲಿ ಆಲ್ ರೌಂಡರ್ ಎಂದು ಗುರುತಿಸಿಕೊಂಡವರು. ಈಗ ಮಾಜಿ ಆಟಗಾರರಾಗಿರುವ ಇವರು ಭಾರತದ ವಿರುದ್ಧ 2005ರ ಟೆಸ್ಟ್ ಸೀರೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆ ಆಟದಲ್ಲಿ ಅವರು ಗಳಿಸಿದ್ದು 12 ರನ್ಗಳೇ ಆದರೂ ಭಾರತದ ತಂಡದ ಕ್ಯಾಪ್ಟನ್ ಆಗಿದ್ದ ಗಂಗೂಲಿ ಅವರ ವಿಕೆಟ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಇವರು ಕೂಡ ಈಗ ಹೊಟ್ಟೆಪಾರಿಗಾಗಿ ಆಸ್ಟ್ರೇಲಿಯಾದ ಟ್ರಾನ್ಸ್ಪೋರ್ಟ್ ಒಂದರಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ತುಂಬಾ ವಿಷಾದನೀಯ ವಿಷಯವಾಗಿದೆ. ಇವರ ಜೊತೆಗೆ ಮತ್ತೊಬ್ಬ ಮಹಾನ್ ಆಟಗಾರ 42 ವರ್ಷದ ಲಂಕಾದ ಸ್ವಾಭಿಮಾನಿ ಆಟಗಾರ ಆಲ್ ರೌಂಡರ್ ಜಯಸಿಂಘೇ ಚಿಂತಕ ಅವರು ಇದೇ ಪರಿಸ್ಥಿತಿಯಲ್ಲಿ ಇದ್ದಾರೆ. ಇದುವರೆಗೆ 5 ಟಿ 20 ಪಂದ್ಯಗಳಲ್ಲಿ ಆಡಿರುವ ಇವರು 2009ರಲ್ಲಿ ನಡೆದ ನಾಗಪುರದ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯಾಷನಲ್ ಕ್ರಿಕೆಟ್ ಜರ್ನಿ ಆರಂಭಿಸಿ ನಂತರ 2010ರಲ್ಲಿ ಟಿ ಟ್ವೆಂಟಿ ವರ್ಲ್ಡ್ ಕಪ್ ಮ್ಯಾಚ್ ಅಲ್ಲಿ ಕೂಡ ಮಿಂಚಿದ್ದರು. ಈಗಲೂ ಕೂಡ ಕ್ರಿಕೆಟ್ ಬಗ್ಗೆ ಆಸಕ್ತಿ ಉಳಿಸಿಕೊಂಡಿರುವ ಈ ಮೂವರು ಆಸ್ಟ್ರೇಲಿಯಾದ ಬೆಸ್ಟ್ ಲೀಡ್ ಅಲ್ಲಿ ಆಡಲಿದ್ದಾರೆ ಎನ್ನುವ ಮಾತುಗಳಿವೆ ಅದಕ್ಕಾಗಿ ದಿನವೂ ಕೂಡ ಪ್ರಾಕ್ಟೀಸ್ ನಡೆಸುತ್ತಿದ್ದಾರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.