
ವಿದ್ಯುತ್ ಎಂಬುವುದು ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದಂತಹ ಒಂದು ವಿದ್ಯಮಾನ ಅಂತ ಹೇಳಬಹುದು ಕರೆಂಟ್ ಇಲ್ಲದೆ ಇಲ್ಲದೆ ಮನೆಯಲ್ಲಿ ಭಾಗಶಃ 50 ಭಾಗ ಕೆಲಸ ನಡೆಯುವುದೇ ಇಲ್ಲ. ಅದರಲ್ಲಿಯೂ ಕೂಡ ಬೇಸಿಗೆಕಾಲ ಬಂತು ಅಂದರೆ ಫ್ಯಾನ್ ಮತ್ತು ಫ್ರಿಡ್ಜ್ ಹಾಗೂ ಇನ್ನಿತರ ಈ ಸಾಮಗ್ರಿಗಳಿಗೆ ವಿದ್ಯುತ್ ಅವಶ್ಯಕವಾಗಿ ಬೇಕೇ ಬೇಕು. ಆದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತಹ ಕರೆಂಟ್ ಬಿಲ್ ನೋಡಿದರೆ ವಿದ್ಯುತ್ ಉಪಯೋಗಿಸುವುದು ಅಥವಾ ಬೇಡ ಎಂಬುವ ಚಿಂತೆ ನಿಮ್ಮಲ್ಲೂ ಕಾಡಬಹುದು.
ಹಾಗಾಗಿ ಇಂದು ಸುಲಭ ರೀತಿಯಲ್ಲಿ ಫ್ರಿಡ್ಜ್ ಬಳಕೆ ಮಾಡಿದರು ಕೂಡ ಕರೆಂಟ್ ಬಿಲ್ ಕಡಿಮೆ ಬರುವ ರೀತಿ ಹೇಗೆ ಮಾಡಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ ನೋಡಿ. ಸಾಮಾನ್ಯವಾಗಿ ಇತ್ತೀಚಿನ ದಿನದಲ್ಲಿ ಎಲ್ಲರ ಮನೆಯಲ್ಲಿಯೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಕೆಲವೊಂದು ಟಿಪ್ಸ್ ಗಳನ್ನು ಬಳಸುವುದರಿಂದ ಕರೆಂಟ್ ಬಿಲ್ ಜಾಸ್ತಿ ಬರದಂತೆ ನೋಡಿಕೊಳ್ಳಬಹುದು.
ಹಾಗೂ ಕೆಲವೊಬ್ಬರು ಮಾಡುವ ತಪ್ಪುಗಳು ಯಾವುವು ಹಾಗೂ ಈ ರೀತಿ ತಪ್ಪು ಮಾಡುವುದರಿಂದ ಅವರಿಗೆ ಕರೆಂಟ್ ಬಿಲ್ ಜಾಸ್ತಿ ಬರುತ್ತಿರುತ್ತದೆ. ಆದ್ದರಿಂದ ಕೆಲವೊಬ್ಬರು ಮಾಡುವಂತಹ ತಪ್ಪುಗಳು ಯಾವುವು, ಹಾಗೆ ಫ್ರಿಡ್ಜ್ ಅನ್ನು ಹೇಗೆ ಬಳಸಿದರೆ ಕರೆಂಟ್ ಬಿಲ್ ಕಡಿಮೆ ಬರುತ್ತದೆ, ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಸೊಪ್ಪು, ತರಕಾರಿ, ಹಣ್ಣು ಹೀಗೆ ಹಲವಾರು ಪದಾರ್ಥಗಳನ್ನು ಇಡಲು ಉಪಯುಕ್ತವಾಗಿರುತ್ತದೆ.
ಆದರೆ ಪ್ರತಿಯೊಬ್ಬರೂ ಕೂಡ ಗಮನಿಸಬೇಕಾದಂತಹ ಹಾಗೂ ತಿಳಿದುಕೊಳ್ಳಬೇಕಾದಂತ ಮುಖ್ಯ ಅಂಶ ಏನು ಎಂದರೆ ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕು ಎಂದರೆ ಫ್ರಿಡ್ಜ್ ಒಳಗಡೆ ಯಾವುದೇ ರೀತಿಯಾದಂತಹ ಬೇಯಿಸಿದ ಆಹಾರವನ್ನು ಇಡಬಾರದು. ಬದಲಿಗೆ ಸೊಪ್ಪು ತರಕಾರಿ ಕಾಳುಗಳು ಈ ರೀತಿಯ ಪದಾರ್ಥಗಳನ್ನು ಇಡುವುದು ಉತ್ತಮ, ಆದರೆ ಬೇಯಿಸಿದ ಆಹಾರವನ್ನು ಫ್ರಿಡ್ಜ್ ಒಳಗಡೆ ಇಟ್ಟರೆ ಅದು ವಿಷವಾಗಿ ಬದಲಾಗುತ್ತದೆ ಎಂದು ಹೇಳುತ್ತಾರೆ.
ಆದ್ದರಿಂದ ಈ ವಿಷಯದ ಬಗ್ಗೆ ಸ್ವಲ್ಪ ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಪದಾರ್ಥಗಳನ್ನು ಇಡುವುದು ಉತ್ತಮ ಹಾಗೂ ಯಾವ ವಿಧಾನವನ್ನು ಅನುಸರಿಸಬೇಕು ಯಾವ ರೀತಿ ಫ್ರಿಡ್ಜ್ ಉಪಯೋಗಿಸುವುದರಿಂದ ಕರೆಂಟ್ ಬಿಲ್ ಕಡಿಮೆ ಬರುತ್ತದೆ ಹೀಗೆ ಈ ವಿಷಯವಾಗಿ ಕೆಲವು ಮಾಹಿತಿಗಳನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಫ್ರಿಡ್ಜ್ ಡೋರ್ ಅನ್ನು ತೆಗೆದ ತಕ್ಷಣ ಬೇಗನೆ ಮುಚ್ಚಬೇಕು ಬದಲಿಗೆ ಜಾಸ್ತಿ ಸಮಯದವರೆಗೆ ತೆಗೆಯುವುದರಿಂದ ಫ್ರಿಡ್ಜ್ ಮೊದಲಿನ ಸ್ಥಿತಿಗೆ ಬರೋದಕ್ಕೆ ಹೆಚ್ಚು ಕರೆಂಟ್ ತೆಗೆದುಕೊಳ್ಳುತ್ತದೆ ಆದ್ದರಿಂದ ಫ್ರಿಡ್ಜ್ ಡೋರು ತೆಗೆದು ತಕ್ಷಣ ಬೇಗ ಪದಾರ್ಥಗಳನ್ನು ಎತ್ತುಕೊಂಡು ಬೇಗ ಹಾಕುವುದು ಉತ್ತಮ. ಜೊತೆಗೆ ಫ್ರಿಜ್ ಡೋರ್ ನಲ್ಲಿರುವಂತಹ ರಬ್ಬರ್ ಅನ್ನು ಅವಾಗವಾಗ ಗಮನಿಸುವುದು ಉತ್ತಮ. ಅದೇನಾದರೂ ಹರಿದಿದ್ದರೆ ಲೂಸ್ ಇದ್ದರೆ ಕರೆಂಟ್ ಬಿಲ್ ಜಾಸ್ತಿ ಬರುತ್ತದೆ.
ಫ್ರಿಡ್ಜ್ ಅನ್ನು ಯಾವತ್ತೂ ಕೂಡ ಗೋಡೆಗೆ ತಾಕುವಂತೆ ಸುತ್ತಮುತ್ತ ವಸ್ತುಗಳನ್ನು ಇಡಬೇಡಿ ಬದಲಿಗೆ ಫ್ರಿಜ್ ಉಷ್ಣಾಂಶವನ್ನು ಹೊರಹಾಕುತ್ತಿರುತ್ತದೆ ಅದು ಸುಲಭವಾಗಿ ಹೊರಗಡೆ ಹೋಗಬೇಕು, ಬದಲಿಗೆ ನೀವು ಅಕ್ಕಪಕ್ಕ ಹೆಚ್ಚು ವಸ್ತುಗಳನ್ನು ಇಡುವುದರಿಂದ ಉಷ್ಣಾಂಶ ಹೋಗುವುದಕ್ಕೆ ಕಷ್ಟವಾಗುತ್ತದೆ ಇದರಿಂದ ಕರೆಂಟ್ ಬಿಲ್ ಜಾಸ್ತಿ ಕೂಡ ಬರಬಹುದು. ಆದ್ದರಿಂದ ಈ ಮೇಲೆ ಹೇಳಿದ ಎಲ್ಲ ಟಿಪ್ಸ್ ನೀವು ಅನುಸರಿಸಿದರೆ ಕರೆಂಟ್ ಬಿಲ್ ಕಡಿಮೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.