ಬೆಂಗಳೂರು – ಶಬರಿಮಲೆಗೆ ಪ್ರತಿನಿತ್ಯ KSRTC ವೋಲ್ವೊ ಬಸ್‌ ಸೇವೆ ಆರಂಭ.! ಟಿಕೆಟ್‌ ದರ ಎಷ್ಟು, ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಶಬರಿಮಲೆ ದಕ್ಷಿಣ ಭಾರತದ ಜನರ ಒಂದು ಭಾವನಾತ್ಮಕ ಸಂಗತಿ ಎಂದೇ ಹೇಳಬಹುದು. ಆಧುನಿಕ ಯುಗದ ಅಬ್ಬರದ ನಡುವೆಯೂ ಕೂಡ ಬಹಳ ಪರಿಶುದ್ಧತೆಯಿಂದ ಗಂಡು ಮಕ್ಕಳು ಈ ವ್ರತವನ್ನು ಪಾಲಿಸಿ ಕಾರ್ತಿಕ ಮಾಸದಿಂದ ಸಂಕ್ರಮಣದವರೆಗೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ದೇಶದಲ್ಲಿ ಯಾವುದೇ ಜಾತಿ ಭೇದ ಇಲ್ಲದೆ ಬಹುತೇಕ ಎಲ್ಲಾ ಗಂಡು ಮಕ್ಕಳು ಕೂಡ ತಮ್ಮ ತಮ್ಮಲ್ಲಿಯೇ ಸಂಘ ಕಟ್ಟಿಕೊಂಡು ಮಾಲೆ ಹಾಕಿ ತಮ್ಮ ಶಕ್ತಿಯನುಸಾರ 5 ರಿಂದ 21 ದಿನಗಳವರೆಗೆ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡಿ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕಾಗಿ ಪ್ರಯಾಣ ಹೊರಡುತ್ತಾರೆ.

ಕರ್ನಾಟಕದಿಂದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅನೇಕ ಮಾರ್ಗಗಳ ಮೂಲಕ ಹೋಗುತ್ತಾರೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಅವರೇ ಸ್ವಂತ ವಾಹನದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಈಗ ಬೆಂಗಳೂರಿನಿಂದ ಅಥವಾ ಬೆಂಗಳೂರಿಗೆ ಬಂದು ಶಬರಿಮಲೆಗೆ ಹೊರಡುವ ಭಕ್ತಾದಿಗಳಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಂದು ಅನುಕೂಲತೆಯನ್ನು ಮಾಡಿಕೊಟ್ಟಿದೆ.

ಅದೇನೆಂದರೆ ಪ್ರತಿನಿತ್ಯ ಬೆಂಗಳೂರಿನ ನಿಂದ ಶಬರಿಮಲೆಗೆ ಹಾಗೂ ಶಬರಿಮಲೆಯಿಂದ ಬೆಂಗಳೂರಿಗೆ KSRTC ವೋಲ್ವೋ ಬಸ್ ವ್ಯವಸ್ಥೆ ಮಾಡಿಕೊಡಲಾಗಿದೆ. ಅವಶ್ಯಕತೆ ಇರುವವರು ಈ ಸೌಲಭ್ಯ ಬಳಸಿಕೊಳ್ಳಬಹುದು ಈ ಬಸ್ ವೇಳಾಪಟ್ಟಿ, ಟಿಕೆಟ್ ದರ, ಟಿಕೆಟ್ ಪಡೆದುಕೊಳ್ಳುವುದು ಹೇಗೆ ಇತ್ಯಾದಿ ವಿವರಗಳ ಬಗ್ಗೆ ವಿವರಣೆ ಹೀಗಿದೆ ನೋಡಿ.

ಸಮಯ ಹಾಗೂ ಸ್ಥಳ:-

* ಡಿಸೆಂಬರ್‌ 1 ರಿಂದ ಈ ಬಸ್‌ ಸೇವೆ ಆರಂಭವಾಗಲಿದ.
* ಪ್ರತಿದಿನ ಬೆಂಗಳೂರು – ನೀಲಕ್ಕಲ್ ಪಂಪಾ, ಶಬರಿಮಲೈ ಹಾದಿಯಾಗಿ ಸಂಚಾರ ನಡೆಸಲಿದೆ.
* ಬೆಂಗಳೂರಿನ ಶಾಂತಿನಗರ ಬಸ್‌ ನಿಲ್ದಾಣದಿಂದ ಬಸ್ ಹೊರಡಲಿದೆ.
* ಪ್ರತಿದಿನ ಮಧ್ಯಾಹ್ನ 1:50 ಕ್ಕೆ ಹೊರಡಲಿರುವ ವೋಲ್ವೋ ಬಸ್ ಮರುದಿನ ಬೆಳಿಗ್ಗೆ 6:45 ಕ್ಕೆ ಪಂಪಾ ತಲುಪಲಿದೆ.
* ಮತ್ತೊಂದು ಬಸ್ ಪ್ರತಿದಿನ ಸಂಜೆ 6:00 ಕ್ಕೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರನ್ನು ತಲುಪಲಿದೆ.

ಟಿಕೆಟ್ ದರ:-

* ವಯಸ್ಕ ಪ್ರಯಾಣಿಕರಿಗೆ ಬೆಂಗಳೂರಿಂದ ಶಬರಿಮಲೆಗೆ 1600 ರೂ. ಮತ್ತು KSRTC ವೋಲ್ವೋ ಐಶಾರಾಮಿ ಬಸ್‌ ಆಗಿರುವುದರಿಂದ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ.
* ಮಕ್ಕಳು ಕೂಡಾ ಪೂರ್ಣ ಪ್ರಯಾಣದಲ್ಲಿ ಸೀಟ್‌ ಬೇಕು ಎಂದಾದರೆ ಪೂರ್ತಿ ದರ ಪಾವತಿ ಮಾಡಬೇಕು.

ಟಿಕೆಟ್ ಪಡೆಯುವುದು ಹೇಗೆ.?

* KSRTC ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನಲ್ಲಿ ಟಿಕೆಟ್ ಬುಕ್ ಮಾಡಬಹುದು.
* ಆಫ್ ಲೈನ್ ನಲ್ಲಿ ರಾಜ್ಯದಾದ್ಯಂತ ಪ್ರಮುಖ ಬಸ್ ಡಿಪೋಗಳಲ್ಲಿ ಕಾರ್ಯನಿರ್ವಹಿಸುವ KDRTC ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು.

ಈ ಬಾರಿ ಪ್ರಯಾಣ ಕೈಗೊಳ್ಳುತ್ತಿರುವ ಭಕ್ತಾದಿಗಳ ಗಮನಕ್ಕೆ ಮತ್ತೊಂದು ಪ್ರಮುಖವಾದ ವಿಷಯ ಇದೆ. ಅದೇನೆಂದರೆ, ಶಬರಿಮಲೆ ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಕೋನದಿಂದ ತುರ್ತು ವೈದ್ಯಕೀಯ ನೆರವು ನೀಡಲು ರಾರ‍ಯಪಿಡ್‌ ಆ್ಯಕ್ಷನ್‌ ವೈದ್ಯಕೀಯ ಘಟಕ ನಿಯೋಜಿಸಲಾಗಿದೆ.

ಇದುವರೆಗೂ ಇದ್ದ ಆರೋಗ್ಯ ಇಲಾಖೆಯ ಸೇವೆ ಮತ್ತು ಕನಿವ್‌-108 ಆಂಬ್ಯುಲೆನ್ಸ್‌ ಸೇವೆಗಳ ಜತೆ ಈ ತುರ್ತು ವೈದ್ಯಕೀಯ ಘಟಕ ಹೆಚ್ಚುವರಿಯಾಗಿ ಕಾರ‍್ಯ ನಿರ್ವಹಿಸಲಿದೆ. ಶಬರಿ ಮಲೆಯ ವಿವಿಧ ಪ್ರದೇಶಗಳಲ್ಲಿ ಆಧುನಿಕ ಸೌಕರ್ಯವಿರುವ ಆಸ್ಪತ್ರೆಗಳ ಜತೆ, ಪಂಪಾದಿಂದ ಸನ್ನಿಧಾನಂ ಮತ್ತು ಕಾನನ ಪಥದವರೆಗೆ ಒಟ್ಟು 19 ಕಡೆಗಳಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಆಕ್ಸಿಜನ್‌ ಪಾರ್ಲರ್‌ ಗಳನ್ನು ಸ್ಥಾಪಿಸಲಾಗಿದೆ.

ಪಂಪಾ ಸರಕಾರಿ ಆಸ್ಪತ್ರೆಯಲ್ಲಿ ಕನಿವ್‌-108 ಆಂಬ್ಯುಲೆನ್ಸ್‌ ಯೋಜನೆಯಡಿ ರಾರ‍ಯಪಿಡ್‌ ಆಕ್ಷನ್‌ ವೈದ್ಯಕೀಯ ಘಟಕ ಕಾರ‍್ಯನಿರ್ವಹಿಸುತ್ತಿದೆ. ಯಾತ್ರಿಕರಿಗೆ ಎ’ಮ’ರ್ಜೆ’ನ್ಸಿ ಗಳಾದಾಗ ವೈದ್ಯಕೀಯ ಸೇವೆಗಾಗಿ ಸಹಾಯವಾಣಿ 108 ಸಂಪರ್ಕಿಸಿದರೆ ಈ ವಾಹನಗಳ ನೆರವು ಸಿಗಲಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now