ಈಗ ಎಲ್ಲಾ ಕ್ಷೇತ್ರವು ಕೂಡ ಡಿಜಿಟಲೀಕರಣಗೊಂಡಿದೆ (Digitalization), ಹಾಗಾಗಿ ಸಾರಿಗೆ ಸಂಸ್ಥೆ ಕೂಡ ಈ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಹೆಜ್ಜೆ ತೆಗೆದುಕೊಂಡಿದ್ದು. ಇನ್ನು ಮುಂದೆ ಚಿಪ್ ಹಾಗೂ QR Code ಹೊಂದಿರುವ ಡ್ರೈವಿಂಗ್ ಲೈಸನ್ಸ್ (Driving Licence) ಮತ್ತು ರಿಜಿಸ್ಟ್ರೇಷನ್ ಕಾರ್ಡ್ ಗಳನ್ನು (RC) ನೀಡಲು ಮುಂದಾಗಿದೆ.
ಸರ್ಕಾರದ ಈ ಕಾರಣದ ಹಿಂದೆ ಹಲವು ಸದುದ್ದೇಶಗಳಿದ್ದು ಈ ರೀತಿ DL ಹಾಗೂ RC ನಲ್ಲಿ ಬದಲಾವಣೆ ತರುವುದರಿಂದ ಅನೇಕ ಉಪಯೋಗಗಳಿವೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ಇಂತಹದೊಂದು ನಿರ್ಧಾರಕ್ಕೆ ಬರಲಾಗಿದೆ. ಹೊಸ ಡಿಜಿಟಲ್ ಸ್ಮಾರ್ಟ್ ಕಾರ್ಡ್ ಪೂರೈಕೆದಾರರ ಆಯ್ಕೆಗೆ ಸಂಬಂಧಿಸಿದ ಹಾಗೆ ಟೆಂಡರ್ ಪ್ರಕ್ರಿಯೆಯನ್ನು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು.
ಹೊಸ ವರ್ಷದ ಆರಂಭದಲ್ಲಿಯೇ ಹೊಸ ಮಾದರಿಯ ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಷನ್ ಕಾರ್ಡ್ ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯು ಆರಂಭವಾಗಲಿದೆ ಫೆಬ್ರವರಿಯಲ್ಲಿ ಹೊಸ ಡಿಜಿಟಲ್ ಕಾರ್ಡ್ಗಳ ವಿತರಣೆ ಸಾಧ್ಯವಿದೆ ಎಂದು ಸಾರಿಗೆ ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದರ ಕುರಿತ ಇನ್ನಷ್ಟು ಮಾಹಿತಿ ಹೀಗಿದೆ ನೋಡಿ.
ಈಗ ನೀಡುತ್ತಿರುವ ಸಾಂಪ್ರದಾಯಿಕ ಮಾದರಿಯ DL ಹಾಗೂ RC ಕಾರ್ಡ್ ಗಳಿಗಿಂತ ಸ್ಮಾರ್ಟ್ ಕಾರ್ಡ್ ನಲ್ಲಿ ಇನ್ನು ಹೆಚ್ಚಿನ ಇಂಫಾರ್ಮೇಷನ್ ಗಳು ಇರಲಿದೆ ಎನ್ನುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ. ಈ ಹೊಸ ಮಾದರಿಯ ಕಾರ್ಡ್ ಗಳ ಮೂಲಕ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ವ್ಯಕ್ತಿಯ ಹಾಗೂ ವಾಹನ ಮಾಲೀಕರ ಕುರಿತು ನಿಖರವಾದ ಮಾಹಿತಿಯು ಸಿಗುತ್ತದೆ.
ಅನುಮಾನಾಸ್ಪದ ಗಾಡಿಗಳನ್ನು ತಪಾಸಣೆ ಮಾಡುವ ವೇಳೆ ಪೊಲೀಸ್ ಗೆ ಇದು ಹೆಚ್ಚು ಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ. ಹಾಗಾಗಿ ಬೆಂಗಳೂರು ಸಾರಿಗೆ ಇಲಾಖೆ ಮೊಟ್ಟ ಮೊದಲಿಗೆ ಈ ರೀತಿ ಹೊಸ ನಿಯಮಗಳನ್ನು ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೇಷನ್ ಕಾರ್ಡ್ಗಳಲ್ಲಿ ಸೇರಿಸಲು ಪ್ರಯತ್ನ ನಡೆಸುತ್ತಿದೆ.
ಹಾಗಾದ್ರೆ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್ ಗಳು ಹೇಗಿರುತ್ತವೆ ಎನ್ನುವ ಕುತೂಹಲ ಕೂಡ ಮೂಡುತ್ತದೆ ಅದಕ್ಕೆ ಉತ್ತರ ಇಲ್ಲಿದೆ. ಹೊಸ ಡಿಜಿಟಲ್ DL ಅಥವಾ RC ಕಾರ್ಡ್ಗಳು ಆಧಾರ್ ಆಧಾರಿತವಾಗಿರುವುದರಿಂದ ಆಧಾರ್ ನಲ್ಲಿರುವಂತೆ ಎಲ್ಲಾ ವೈಯುಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ ಕಾರ್ಡ್ಗಳು ರಿಜಿಸ್ಟ್ರೇಷನ್ ನಂಬರ್, ರಿಜಿಸ್ಟ್ರೇಷನ್ ದಿನಾಂಕ, ಇಂಜಿನ್ ನಂಬರ್, ಮಾಲೀಕನ ಮಾಹಿತಿ, ಮತ್ತು ವಿಳಾಸವನ್ನು ಹೊಂದಿರುತ್ತವೆ.
ಇವುಗಳಲ್ಲಿ ಹೆಚ್ಚಿನ ವಿವರಗಳನ್ನು ಪ್ರಿಂಟ್ ಸಹ ಮಾಡಲಾಗಿರುತ್ತದೆ. TC ಕಾರ್ಡ್ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ಮಾಡೆಲ್, ವಾಹನದ ಮಾದರಿ ಮೊದಲಾದ ಅಗತ್ಯ ಮೂಲ ವಿವರಗಳು ಇರುತ್ತವೆ ಮತ್ತು ಇದರ ಜೊತೆಗೆ ಕಾರ್ಡ್ಗಳ ಹಿಂಭಾಗದಲ್ಲಿ QR Code ಮತ್ತು ವಾಹನದ ತುರ್ತು ಸಂಪರ್ಕ ಸಂಖ್ಯೆಗಳು ಸಹ ಇರುತ್ತವೆ.
ಈ ಕಾರ್ಡ್ ಗೆ ಚಿಪ್ ಅನ್ನು ಅಳವಡಿಸಲಾಗಿರುತ್ತದೆ, ಈ ಚಿಪ್ ಮೂಲಕ DL & RC ಕಾರ್ಡ್ಗಳು ಡಿಜಿಟಲ್ ಫಾರ್ಮ್ನಲ್ಲಿ ಮಾಹಿತಿಯನ್ನು ಸೇವ್ ಮಾಡಲು ಅನುಕೂಲವಾಗುತ್ತದೆ. ಈ ಕಾರ್ಡ್ಗಳನ್ನು ಬಳಸುವುದರ ಹಿಂದಿನ ಪ್ರಕ್ರಿಯೆಗಳು ಬೇರೆ ರಾಜ್ಯಗಳಲ್ಲಿ ಅಥವಾ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಟೆಂಡರ್ ಗಳ ಆಧಾರವಾಗಿ ವ್ಯತ್ಯಾಸವಾಗಬಹುದು ಆದರೆ ಅದಕ್ಕೆ ಅನುಸಾರವಾಗಿ ವಿಭಿನ್ನವಾಗಿ ಸುಲಭವಾಗುವಂತೆ ಇದನ್ನು ಇಲಾಖೆ ಸಿದ್ಧಗೊಳಿಸುತ್ತಿದೆ ಎಂದು ತಿಳಿದು ಬಂದಿದೆ.