ಸೈಟ್ ಹಾಗೂ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ.! ಇ-ಪೇಮೆಂಟ್ ಮೂಲಕ ಸ್ವಂತ ಜಾಗ ನಿಮ್ಮದಾಗಿಸಿಕೊಳ್ಳಿ.!

ಪ್ರತಿಯೊಬ್ಬರಿಗೂ ಕೂಡ ತಾವು ಸೈಟ್ ಖರೀದಿ ಮಾಡಬೇಕು ತಮ್ಮದೇ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಇತ್ಯಾದಿ ಇತ್ಯಾದಿ ಆಸೆಗಳು ಇರುತ್ತವೆ. ಆದರೆ ಎಲ್ಲರಿಗೂ ಕೂಡ ಇದು ಸಾಧ್ಯವಾಗುವುದಿಲ್ಲ. ಕೆಲವರು ಯಾವುದೋ ಮಧ್ಯವರ್ತಿಗೆ ಹಣ ಕೊಟ್ಟು ಹಣ ಕಳೆದುಕೊಂಡಿರುತ್ತಾರೆ ಅಥವಾ ಹಣ ಕಟ್ಟಿ ರಿಜಿಸ್ಟರ್ ಆಗುವ ಕೊನೆ ಕ್ಷಣದಲ್ಲಿ ಮೋ’ಸ ಮಾಡಿರುವುದು ಗೊತ್ತಾಗುತ್ತದೆ.

WhatsApp Group Join Now
Telegram Group Join Now

ಕೆಲವೊಮ್ಮೆ ಸೈಟ್ ಖರೀದಿಸಲು ಬೇಕಾದ ಪೂರ್ತಿ ಮೊತ್ತದ ಹಣ ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಸೈಟ್ ಕೊಳ್ಳುವ ಕನಸು ನನಸಾಗಿಲ್ಲ ಎಂದರೆ ಸರ್ಕಾರದ ವತಿಯಿಂದ ಈಗ ನಿಮ್ಮ ಕನಸಿಗೆ ನೀರೆರೆಯಲಾಗುತ್ತಿದೆ. ಯಾವುದೇ ಮೋ’ಸದ ವಹಿವಾಟು ಇಲ್ಲದೆ ಸರಿಯಾದ ರೀತಿಯಲ್ಲಿ ನಿವೇಶನ ಖರೀದಿಸಲು ಕರ್ನಾಟಕ ಗೃಹ ಮಂಡಳಿ (Karnataka housing board) ಹಂಚಿಕೆ ಮಾಡುತ್ತಿರುವ ಸೈಟ್ ಖರೀದಿಸಿ(Site Purchase). ಸರ್ಕಾರ ಈಗ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನ ಮಾಡಿದೆ.

ಕರ್ನಾಟಕ ಗೃಹ ಮಂಡಳಿಯು ರಾಜ್ಯದ ಎರಡು ಭಾಗಗಳಲ್ಲಿ ಸೈಟ್ ಆಲ್ಟ್ಮೆಂಟ್ ಮಾಡಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕದಾದವಾಡಗಿ ಸ್ಥಳದಲ್ಲಿ ಸೈಟ್ ಮಾರಾಟಕ್ಕಿದೆ. ಇಲ್ಲಿ ಪ್ರತಿ ಚದರ ಅಡಿ ಗೆ 500ರೂ. ಗಳನ್ನು ನಿಗದಿಪಡಿಸಲಾಗಿದೆ ಜೊತೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅನಂತನಹಳ್ಳಿ, ಮೆಳ್ಳೆಕಟ್ಟೆಯಲ್ಲಿಯೂ ಕೂಡ ಕರ್ನಾಟಕ ಗೃಹ ಮಂಡಳಿ ನಿವೇಶನಗಳನ್ನು ಅಭಿವೃದ್ಧಿಪಡಿಸಿದೆ.

ಇಲ್ಲಿ ಪ್ರತಿ ಚದರ ಅಡಿಗೆ 650 ರೂ.ಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ ಬಳ್ಳಾರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿಯೂ ಕೂಡ ನಿವೇಶನಗಳು ಲಭ್ಯವಿವೆ. ಈ ಸೈಟ್ಗಳನ್ನು ಖರೀದಿಸಲು ಸರ್ಕಾರ ವಿಧಿಸಿರುವ ಮಾನದಂಡಗಳನ್ನು ಪೂರೈಸುವಂತಹ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಬಹುದು ತಪ್ಪದೆ ಈ ಸದಾವಕಾಶವನ್ನು ಉಪಯೋಗಿಸಿಕೊಂಡು ನಿಮ್ಮ ಸ್ವಂತ ನಿವೇಶನದ ಕನಸನ್ನು ನಿಜ ಮಾಡಿಕೊಳ್ಳಿ.

ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸುತ್ತಿರುವ ನಿವೇಶನ ಹಂಚಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಉಳಿದಿರುವ ನಿವೇಶನ ಅಥವಾ ಸೈಟ್ ಖರೀದಿ ಮಾಡಲು ಆನ್ಲೈನ್ (online apply) ಮೂಲಕ ಅರ್ಜಿ ಕರೆಯಲಾಗಿದೆ. ನೀವು ಇ- ಪೇಮೆಂಟ್ (E payment) ಮಾಡುವುದರ ಮೂಲಕ ಸೈಟ್ ನಿಮ್ಮದಾಗಿಸಿಕೊಳ್ಳಲು ನೋಂದಾಯಿಸಿಕೊಳ್ಳಬೇಕು.

ನಿವೇಶನ ಖರೀದಿಗೆ (House Purchase) ಮೊದಲು ಠೇವಣಿ ಹಣವನ್ನು ಕೊಡಬೇಕು.ನಿವೇಶನ ಖರೀದಿ ಮಾಡುವುದಿದ್ದರೆ ನೀವು ನೋಂದಣಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಜೊತೆಗೆ ಆರಂಭಿಕ ಠೇವಣಿ ಮೊತ್ತವನ್ನು ಕೂಡ ಕೊಡಬೇಕು. ಅದರ ವಿವರ ಹೀಗಿದೆ.
EWS (ಕಡಿಮೆ ಆದಾಯ ಹೊಂದಿರುವವರು)-25,300 ರೂ.
LIG-50,500ರೂ.
MIG- (ಮಧ್ಯಮ ಆದಾಯ) 76,000 ರೂ.
HIG-1 & 2 – 1,01,500 ರೂ

‌ ಅರ್ಜಿ ಸಲ್ಲಿಸಲು ವಿಧಿಸಿರುವ ಷರತ್ತುಗಳು:-

* ನಿವೇಶನ ಖರೀದಿ ಮಾಡುವವರು ನಿಗದಿತ ಪೂರ್ವ ಠೇವಣಿ (deposit) ಹಣ ಪಾವತಿ ಮಾಡದೆ ಇದ್ದರೆ ಅಂತಹವರಿಗೆ ನಿವೇಶನ ನೀಡಲಾಗುವುದಿಲ್ಲ.
* ಒಮ್ಮೆ ನೋಂದಾಯಿಸಿಕೊಂಡು ಠೇವಣಿ ಹಣ ಕಟ್ಟಿ ಖರೀದಿಸಿದ ನಂತರ ಮತ್ತೆ ನಿವೇಶನ ಬೇಡ ಎಂದು ಹೇಳುವಂತಿಲ್ಲ, ಈ ರೀತಿ ಮಾಡುವವರ 25% ನಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

* ಮತ್ತೊಂದು ಮುಖ್ಯವಾದ ಕಂಡಿಶನ್ ಏನೆಂದರೆ ಅರ್ಜಿದಾರರು 10 ವರ್ಷಗಳಿಗಿಂತ ಹಿಂದೆ ಅಥವಾ ಹತ್ತು ವರ್ಷಗಳಲ್ಲಿ ಯಾವುದೇ ರೀತಿಯ ಸರ್ಕಾರಿ ನಿವೇಶನ ಖರೀದಿ ಮಾಡಿಲ್ಲ ಎನ್ನುವ ನೋಟರಿ ದೃಢೀಕರಣ (affidavit)ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹೆಚ್ಚಿನ ವಿವರಕ್ಕಾಗಿ ಹಾಗೂ ಅರ್ಜಿ ಸಲ್ಲಿಸಲು ಸಂಪರ್ಕಿಸಿ:-
https://www.khb.karnataka.gov.in.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now