Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕರ್ನಾಟಕ ರಾಜ್ಯದ ಜನತೆಗೆ ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಆಗಿದೆ ಎಂದರೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳು (Annabhagya and Gruhalakshmi Schemes are Rationcard based Schemes) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ.
ರೇಷನ್ ಕಾರ್ಡ್ ನಲ್ಲಿ ಹೆಸರಿನ ವ್ಯತ್ಯಾಸ ಇದ್ದವರು, ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದವರು, ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಆಗದೆ ಇದ್ದವರು ಈ ಯೋಜನೆಗಳ ಫಲಾನುಭವಿಗಳು ಆಗಲು ಆಗುತ್ತಿಲ್ಲ. ಹಾಗೆ ಕೇಂದ್ರ ಸರ್ಕಾರದಿಂದ ಕೂಡ ರೇಷನ್ ಕಾರ್ಡ್ ಹೊಂದಿರುವವರಿಗೆ ಹಲವಾರು ಯೋಜನೆಗಳ ಮೂಲಕ ಅನುದಾನಗಳು ಸಿಗುತ್ತಿವೆ.
ಹಾಗಾಗಿ ರೇಷನ್ ಕಾರ್ಡ್ ಸದ್ಯಕ್ಕೆ ಒಂದು ಅತ್ಯಗತ್ಯ ದಾಖಲೆ ಎಂದರೆ ತಪ್ಪಾಗಲಾರದು ರೇಷನ್ ಕಾರ್ಡ್ ನ್ನು ಗುರುತಿನ ಚೀಟಿಯಾಗಿ ಕೂಡ ಬಳಸಬಹುದು, ರೇಷನ್ ಕಾರ್ಡ್ ನಲ್ಲಿ ಸುಲಭವಾಗಿ ಬಡತನ ರೇಖೆಗಿಂತ ಮೇಲಿರುವವರು ಹಾಗೂ ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಬಹುದು.
ಹಲವು ಬಾರಿ ಸರ್ಕಾರವು ತನ್ನ ಯೋಜನೆಗಳಿಗೆ ಪಡೆತನ ರೇಖೆಗಿಂತ ಕೆಳಗಿರುವವರನ್ನು ಆರಿಸುವುದರಿಂದ ಅದನ್ನು ಸುಲಭವಾಗಿ ಪತ್ತೆಹಚ್ಚಲು ಅರ್ಜಿ ಸಲ್ಲಿಸುವಾಗ BPL ರೇಷನ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಕೊಡಬೇಕಾಗುತ್ತದೆ. ಇದರೊಂದಿಗೆ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಶೈಕ್ಷಣಿಕ ಖರ್ಚು ವೆಚ್ಚಗಳಲ್ಲಿ ಹಾಗೂ ವೈದ್ಯಕೀಯ ಶುಲ್ಕದಲ್ಲಿ ಕೂಡ ರಿಯಾಯಿತಿ ನೀಡಲಾಗುತ್ತಿದೆ.
ಈಗ ದೇಶದ ಎಲ್ಲಾ APL & BPL ಪಡಿತರ ಚೀಟಿದಾರರಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಒಂದು ಹೊಸ ನಿಯಮವನ್ನು ತಂದಿದೆ, ಒಂದು ವೇಳೆ ನೀವು ಇದನ್ನು ಪಾಲಿಸದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಳ್ಳಬಹುದು.
ರೇಷನ್ ಕಾರ್ಡ್ ನ ಹಲವು ಅಕ್ರಮವು ಬೆಳಕಿಗೆ ಬಂದಿದೆ. ಉಳ್ಳವರು ಕೂಡ ತಪ್ಪು ಮಾಹಿತಿ ನೀಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ BPL ರೇಷನ್ ಕಾರ್ಡ್ ಪಡೆದು ನಿಜವಾದ ಫಲಾನುಭವಿಗಳಿಗೆ ಯೋಜನೆಗಳು ತಲುಪದ ರೀತಿ ಆಗುತ್ತಿದೆ, ಇದರ ಜೊತೆಗೆ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಹೊಂದಿರುವುದು, ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಹೆಸರು ಹೊಂದಿರುವುದು ಇವುಗಳು ಕಂಡು ಬಂದಿದೆ.
ಇವುಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಮತ್ತು ರೇಷನ್ ಕಾರ್ಡನ್ನು ಇನ್ನಷ್ಟು ಅಧಿಕೃತಗೊಳಿಸುವ ಕಾರಣದಿಂದಾಗಿ ಸರ್ಕಾರ ಎಲ್ಲಾ ರೇಷನ್ ಕಾರ್ಡ್ ದಾರರಿಗೆ ಡಿಸೆಂಬರ್ 30ರ ಒಳಗೆ ತಪ್ಪದೆ ಇ-ಕೆವೈಸಿ(e-KYC) ಮಾಡಿಸುವಂತೆ ಆದೇಶಿಸಿದೆ. ಈ ಆದೇಶದ ಅನ್ವಯ ರೇಷನ್ ಕಾರ್ಡ್ ಇದ್ದವರು ಇನ್ನು ಮುಂದೆ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗುವ ಯಾವುದೇ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಕರ್ನಾಟಕದ ಗ್ಯಾರಂಟಿ ಯೋಜನೆಗಳ ಸಹಾಯಧನಗಳು ಕೂಡ ಸ್ಥಗಿತವಾಗುತ್ತವೆ. ಹಾಗಾಗಿ ತಪ್ಪದೆ ಈ ಪ್ರಕ್ರಿಯೆಯನ್ನು ಸರ್ಕಾರ ನೀಡಿರುವ ಗಡುವಿನ ಒಳಗಡೆ ಪೂರ್ತಿಗೊಳಿಸಿ ನಿಮ್ಮ ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಥವಾ ಬಾಪೂಜಿ ಸೇವಾಕೇಂದ್ರಗಳಲ್ಲಿ ಸೇವಾ ಸಿಂಧು ಕೇಂದ್ರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ಬಹಳ ಉಪಯುಕ್ತವಾದ ಮಾಹಿತಿ ಇದಾಗಿತ್ತು ತಪ್ಪದೆ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹಂಚಿಕೊಂಡು ಎಲ್ಲರಿಗೂ ಈ ಮಾಹಿತಿ ತಲುಪುವಂತೆ ಮಾಡಿ.