ಕೃಷಿ ಚಟುವಟಿಕೆ ಜೊತೆಗೆ ರೈತನಿಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ ಮುಂತಾದ ಕಸುಬುಗಳು ಕೂಡ ಆದಾಯ ತಂದು ಕೊಡುವ ಮೂಲಗಳು. ಅದಲ್ಲದೆ ದೇಶದಲ್ಲಿ ಆಹಾರ ಉತ್ಪತ್ತಿ ಮಾಡುವ ಇನ್ನೊಂದು ಮೂಲ ಎಂದರೆ ಕೂಡ ತಪ್ಪಾಗಲಾರದು. ಇದೇ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಶುಸಂಗೋಪನೆಗೆ (Dairy farming) ಸಾಕಷ್ಟು ನೆರವು ನೀಡುತ್ತಾ ಬಂದಿವೆ.
ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಸಬ್ಸಿಡಿ ರೂಪದ ಸಾಲ ನೀಡುವುದು ಇನ್ನೂ ಮುಂತಾದ ಯೋಜನೆಗಳನ್ನು ರೂಪಿಸಿ ಹೈನುಗಾರಿಕೆಯಲ್ಲಿ ಪಾಲ್ಗೊಳ್ಳುವವರಿಗೆ ನೆರವನ್ನು ನೀಡಿದೆ. ಈ ಪೈಕಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu Kisan Credit card) ಕೂಡ ಒಂದು.
ಸಾಮಾನ್ಯವಾಗಿ ಎಲ್ಲರೂ ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಕೇಳಿರುತ್ತಾರೆ. ರೈತರಿಗೆ ಕೃಷಿ ಚಟುವಟಿಕೆಗಾಗಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಒಂದು ದಾಖಲೆಯಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು. 2019-20ನೇ ಸಾಲಿನಿಂದ ಪಶುಸಂಗೋಪನಿಗೂ ಕೂಡ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
2019-20ನೇ ಆರ್ಥಿಕ ವರ್ಷದಿಂದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ದೇಶದಾದ್ಯಂತ ಲಭ್ಯವಿದೆ. ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲೂ ಕೂಡ ಈ ಯೋಜನೆ ಅಸ್ತಿತ್ವದಲ್ಲಿದೆ. ಇವುಗಳ ಪ್ರಯೋಜನಗಳನ್ನು ಇದನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಬೇಕಾಗುವ ದಾಖಲೆಗಳು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನಗಳು:-
● ರೈತರು ಹಾಗೂ ಜಾನುವಾರುಗಳ ಮಾಲೀಕರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.
● ಇದರ ಮೂಲಕ ಹಸು ಎಮ್ಮೆ ಮುಂತಾದ ಜಾನುವಾರುಗಳ ಖರೀದಿಗೆ ಯಾವುದೇ ದಾಖಲೆ ಇಲ್ಲದಿದ್ದರೂ 2-3 ಲಕ್ಷದವರೆಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುತ್ತದೆ.
● ಈ ಯೋಜನೆಯಡಿ ಎಮ್ಮೆ ಖರೀದಿಗೆ 60,249 ರೂ. ಮತ್ತು ಹಸು ಖರೀದಿಗೆ 40,783ರೂ. ಸಾಲ ಸೌಲಭ್ಯ ಸಿಗುತ್ತದೆ.
● ಸಾಮಾನ್ಯ ಸಾಲಕ್ಕೆ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್ ಗಳು 7%ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಿದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರು 4% ಬಡ್ಡಿದರದಲ್ಲಿ ಸಾಲ ಪಡೆಯಬಹುದು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ವಿಧಾನ:–
● ಪಶುಸಂಗಪನೆಯಲ್ಲಿ ತೊಡಗಿರುವವರು ಹತ್ತಿರದ ಬ್ಯಾಂಕ್ ಗೆ ಹೋಗಿ ಮೊದಲಿಗೆ ಇದರ ಬಗ್ಗೆ ಮಾಹಿತಿ ಪಡೆಯಬೇಕು.
● ಬಳಿಕ ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ಒದಗಿಸಿದರೆ ಬ್ಯಾಂಕ್ ಸಿಬ್ಬಂದಿಗಳು ನಿಮ್ಮ ಅರ್ಜಿಯ ಪರಿಶೀಲನೆ ನಡೆಸಿ ನೀವು ಅರ್ಹರಿದ್ದರೆ ಅನುಮೋದಿಸಿ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತವೆ
● ಭಾರತದಲ್ಲಿ ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ, SBI ಬ್ಯಾಂಕ್ ಇನ್ನು ಮುಂತಾದ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಕೂಡ ಈ ಯೋಜನೆಗೆ ಒಳಪಟ್ಟಿವೆ. ಇವುಗಳಲ್ಲಿ ಅರ್ಜಿ ಸಲ್ಲಿಸಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಅಗತ್ಯವಿದ್ದಾಗ ಅದರಿಂದ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ರೈತನಾಗಿದ್ದರೆ ಭೂ ದಾಖಲೆಗಳು
● ಪ್ರಾಣಿಗಳ ಆರೋಗ್ಯ ಪ್ರಮಾಣ ಪತ್ರ
● ಅರ್ಜಿದಾರನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ಮತದಾರರ ಗುರುತಿನ ಚೀಟಿ
● ಬ್ಯಾಂಕ್ ಪಾಸ್ ಬುಕ್ ವಿವರ
● ಮೊಬೈಲ್ ಸಂಖ್ಯೆ.