ಮನ್ಸೂನ್ ರಾಗ ಸಿನಿಮಾದಲ್ಲಿ ಡಾಲಿ ಧನಂಜಯ್, ರಚಿತಾ ರಾಮ್, ಸುಹಾಸಿನಿ, ಶೋಭರಾಜ್, ಯಶಾ ಶಿವಕುಮಾರ್, ಅಚ್ಚುತ್ ಕುಮಾರ್ ಈ ಎಲ್ಲಾ ನಟರು ನಟನೆಯನ್ನು ಮಾಡಿದ್ದಾರೆ. ಈ ಒಂದು ಸಿನಿಮಾದ ಟ್ರೈಲರ್ ಇದೀಗಾಗಲೇ ರಿಲೀಸ್ ಆಗಿದೆ ಈ ಒಂದು ಟ್ರೈಲರ್ ರಿಲೀಸ್ ಆದ ನಂತರ ಪ್ರೇಕ್ಷಕರಿಂದ ಅದ್ಭುತವಾದಂತಹ ಪ್ರತಿಕ್ರಿಯೆ ಸಹ ಬಂದಿದೆ. ಈ ಸಿನಿಮಾದ 80% ರಷ್ಟು ಶೂಟಿಂಗ್ ಮಳೆಯಲ್ಲಿ ಮಾಡಲಾಗಿದೆ ಇದು ಒಂದು ಭಾವನಾತ್ಮಕವಾದ ಮ್ಯೂಸಿಕಲ್ ಸಿನಿಮಾ ಆಗಿದ್ದು ಜನರಿಗೆ ತುಂಬಾ ಇಷ್ಟವಾಗುವಂತಹ ಸಿನಿಮಾ ಆಗಿದೆ. ಕುಟುಂಬ ಸಮೇತರಾಗಿ ಈ ಒಂದು ಸಿನಿಮಾವನ್ನು ನಾವು ವೀಕ್ಷಣೆ ಮಾಡಬಹುದು ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರಿಗೆ ಈ ಒಂದು ಪಾತ್ರವೂ ಚಾಲೆಂಜಿಂಗ್ ಆಗಿ ಇತ್ತು ಎಂದು ಸ್ವತಃ ಅವರೇ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಡಾಲಿ ಧನಂಜ್ ಅವರು ಜೊತೆಯಲ್ಲಿ ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ನಟನೆಯನ್ನು ಮಾಡುತ್ತಿದ್ದಾರೆ. ಈ ಒಂದು ಸಿನಿಮಾದ ಪ್ರತಿಯೊಂದು ಪಾತ್ರಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಈ ಸಿನಿಮಾದಲ್ಲಿ ಮುಜುಗರ ಆಗುವಂತಹ ಯಾವುದೇ ದೃಶ್ಯಗಳು ಇಲ್ಲ ಡಾಲಿ ಧನಂಜಯ್ ಮುತ್ತು ರಚಿತಾ ರಾಮ್ ರವರ ಮನ್ಸೂನ್ ರಾಗ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬಿಸಿಯಾಗಿದ್ದಾರೆ. ಚಿತ್ರ ಆಗಸ್ಟ್ 19 ರಂದು ರಿಲೀಸ್ ಆಗುತ್ತದೆ ಈ ಸಿನಿಮಾದ ಪ್ರಮೋಷನ್ ಸಾಂಗ್ ನ ಮೇಕಿಂಗ್ ಅನ್ನು ಚಿತ್ರ ತಂಡ ಇದೀಗ ಹಂಚಿಕೊಂಡಿದೆ ಇದರಲ್ಲಿ ರಚಿತಾ ರಾಮ್ ಅವರ ಕೆನ್ನೆ ಹಿಡಿದಿದ್ದಾರೆ ಸದ್ಯ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ಡಾಲಿ ಧನಂಜಯ್ ಅವರ ಮಾನ್ಸೂನ್ ರಾಗ ಸಿನಿಮಾ ಭಾರಿ ಮಳೆಯ ಜಡಿಯಲ್ಲೂ ಸಿನಿ ರಸಿಕರ ಅಂಗಳದಲ್ಲಿ ಸದ್ದು ಮಾಡುತ್ತಿದೆ ಹೊಸದೊಂದು ಕಥೆಯ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಧನಂಜಯ್ ಅವರು ನಟಿಸುತ್ತಿರುವುದು ನಮ್ಮ ಸ್ಯಾಂಡಲ್ವುಡ್ ನಲ್ಲಿ ಮೋಡಿ ಮಾಡೋ ಮುನ್ಸೂಚನೆ ಬಹಳಷ್ಟು ಕಾಣುತ್ತಿದೆ. ಚಿತ್ರ ತಂಡದವರು ಚಿತ್ರದ ಪ್ರಮೋಷನ್ ಸಾಂಗ್ ಶೂಟ್ ಮಾಡಿದೆ ಈ ಸಾಂಗ್ ನಲ್ಲಿ ಡಾಲಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸಿಂಪಲ್ ಸ್ಟೆಪ್ ಮೂಲಕ ಕಾಂಗೊಳಿಸಿದ್ದಾರೆ ಮಾನ್ಸೂನ್ ರಾಗ ಡಾಲಿ ಧನಂಜಯ್ ಅವರ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸುವ ಎಲ್ಲಾ ರೀತಿಯ ಮುನ್ಸೂಚನೆಗಳು ಎದ್ದು ಕಾಣಿಸುತ್ತಿದೆ.
ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಎಲ್ಲಾ ಅಭಿಮಾನಿಗಳನ್ನು ತಲುಪಿರುವ ಮಾನ್ಸೂನ್ ರಾಗ ಇನ್ನೇನು ಕೆಲವೇ ದಿನಗಳಲ್ಲಿ ಪರದೆ ಮೇಲೆ ನೋಡಬಹುದಾಗಿದೆ. ಈಗಾಗಲೇ ಭರ್ಜರಿಯಾದಂತಹ ಪ್ರಚಾರವನ್ನು ಚಿತ್ರತಂಡ ಯಶಸ್ವಿಯಾಗಿ ಮಾಡಿದ್ದು ಇದರ ಜೊತೆಗೆ ಈಗ ಪ್ರಮೋಷನ್ ಗಾಗಿ ರಾಗ ಸುಧಾ ಹಾಡನ್ನೇ ಮತ್ತೆ ಸ್ಪೆಷಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ ಈ ಒಂದು ಸಾಂಗ್ ನಲ್ಲಿ ಡಾಲಿ ಧನಂಜಯ್ ಅವರು ರಚಿತಾ ರಾಮ್ ಅವರ ಕೆನ್ನೆಯನ್ನು ಹಿಡಿದುಕೊಂಡು ರೋಮ್ಯಾನ್ಸ್ ಮಾಡುತ್ತಿರುವಂತಹ ವಿಡಿಯೋ ಈಗ ಎಲ್ಲಾ ಕಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನೇ ಕಾಮೆಂಟ್ಸ್ ಮೂಲಕ ತಿಳಿಸಿ.