ಕೂದಲಿನ ಎಲ್ಲ ಸಮಸ್ಯೆಗಳಿಗಿಂತಲೂ ಡ್ಯಾಂಡ್ರಫ್ ಸಮಸ್ಯೆ ಎನ್ನುವುದು ತುಸು ಹೆಚ್ಚು ಕಾಡುತ್ತದೆ ಎನ್ನಬಹುದು. ಡ್ಯಾಂಡ್ರಫ್ ಕೂದಲಲ್ಲಿ ಹೆಚ್ಚಾದಾಗ ವಿಪರೀತ ತುರಿಕೆ ಕೂಡ ಇರುತ್ತದೆ. ಇದರಿಂದ ಇರಿಟೇಶನ್ ಕೂಡ ಆಗುತ್ತದೆ ಅಲ್ಲದೆ ಎಲ್ಲಿ ಯಾವಾಗ ಆದರೂ ಇದು ಉದರುತ್ತಲೆ ಇರುವುದರಿಂದ ಶಾಲಾ ಕಾಲೇಜುಗೆ ಹೋಗುವವರು ಆಫೀಸ್ ಸಭೆ ಸಮಾರಂಭದಲ್ಲಿ ಭಾಗಿ ಆಗುವವರು ಬಹಳ ಮುಜುಗರ ಅನುಭವಿಸುತ್ತಾರೆ. ಬಿಳಿ ಬಿಳಿಯಾದ ಹೊಟ್ಟು ಭುಜದ ಮೇಲೆ ಬೆನ್ನಿನ ಭಾಗದಲ್ಲಿ ಮುಖದ ಮೇಲೆ ಉದುರುತ್ತಲೇ ಇರುತ್ತದೆ ಹಾಗೂ ಮುಖದ ಮೇಲೆಲ್ಲಾ ಅದು ಹಾಗೆ ಕಾಣುತ್ತಲೇ ಇರುತ್ತದೆ. ಇದರಿಂದಾಗಿ ಎದುರಿನವರ ಗಮನವೆಲ್ಲ ಡ್ಯಾಂಡ್ರಫ್ ಮೇಲೆ ಹೋಗುವುದರಿಂದ ತುಂಬಾ ಇರಿಸು ಮುರಿಸು ಆಗುತ್ತದೆ. ಹೀಗಾಗಿ ಡ್ಯಾಂಡ್ರಫ್ ಎನ್ನುವುದು ಆರೋಗ್ಯಕರ ಕೂದಲಿನ ಲಕ್ಷಣ ಅಲ್ಲ ನಮ್ಮ ಕೂದಲನ್ನು ಡ್ಯಾಂಡ್ರಫ್ ಮುಕ್ತವಾಗಿ ನೋಡಿಕೊಳ್ಳಬೇಕಾದದ್ದು ಸೌಂದರ್ಯ ಬಯಸುವವರ ಎಲ್ಲರ ಗುಟ್ಟು.
ಆದರೂ ಕೆಲವೊಮ್ಮೆ ಹಲವು ಕಾರಣಗಳಿಂದ ನಮ್ಮ ಕೂದಲಲ್ಲಿ ಡ್ಯಾಂಡ್ರಫ್ ಆಗುತ್ತದೆ. ಈ ರೀತಿ ಡ್ಯಾಂಡ್ರಫ್ ಆಗಲು ಪ್ರಮುಖವಾಗಿ ಕಾರಣವಾಗುವ ಅಂಶ ಎಂದರೆ ಫಂಗಸ್ ಮತ್ತು ಬ್ಯಾಕ್ಟರಿಯಾಗಳು. ಫಂಗಸ್ ಹಾಗೂ ಬ್ಯಾಕ್ಟಿರಿಯಾಗಳ ಹಾವಳಿಯಿಂದ ಕೂದಲಿನಲ್ಲಿ ಡ್ಯಾಂಡ್ರಫ್ ಉಂಟಾಗುತ್ತದೆ ಅಲ್ಲದೆ ಮನೆಯಲ್ಲಿ ಈಗಾಗಲೇ ಯಾರಾದರೂ ಡ್ಯಾಂಡ್ರಫ್ ಸಮಸ್ಯೆ ಇರುವವರು ಇದ್ದರೆ ಅವರ ಬಾಚಣಿಕೆ ಬಳಸಿ ನೀವು ತಲೆ ಬಾಚಿಕೊಳ್ಳುವುದು ಮತ್ತು ನಿಮ್ಮ ಟವಲ್ ಅನ್ನು ನೀವು ಅವರೊಂದಿಗೆ ಶೇರ್ ಮಾಡಿಕೊಳ್ಳುವುದರಿಂದ ಕೂಡ ಡ್ಯಾಂಡ್ರಫ್ ನಿಮಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಆರೋಗ್ಯಕರ ಕೂದಲು ಬಯಸುವವರು ಪ್ರತಿಯೊಬ್ಬರೂ ಕೂಡ ಇಂಡಿವಿಜುಯಲ್ ಆಗಿ ಬೇರೆ ಮತ್ತು ಬೇರೆ ಬಾಚಣಿಕೆಯನ್ನು ಮತ್ತು ಟವೆಲ್ ಉಪಯೋಗಿಸಬೇಕು. ಇಲ್ಲದೆ ವಾರಕ್ಕೆರಡು ಬಾರಿ ನಿಮ್ಮ ಬಾಚಣಿಕೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಮತ್ತು ಟವಲ್ ಅನ್ನು ಕೂಡ ಎರಡು ದಿನಕ್ಕೊಮ್ಮೆ ಬದಲಾಯಿಸುತ್ತಿರಬೇಕು.
ಅಲ್ಲದೆ ವಾರದಲ್ಲಿ ಕನಿಷ್ಠ ಎರಡು ಬಾರಿ ಅಥವಾ ಗರಿಷ್ಠ 3 ಬಾರಿ ತಲೆಕೂದಲನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಹಾಗೂ ದಿನಕ್ಕೆ ಎರಡು ಬಾರಿ ಕೂದಲನ್ನು ಚೆನ್ನಾಗಿ ಬಾಚಬೇಕು ಇದರಿಂದ ನಮ್ಮ ತಲೆಯಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಕೂದಲಿನ ಬುಡದವರೆಗೂ ಇದು ತಲುಪುತ್ತದೆ ಹಾಗೂ ಆರೋಗ್ಯಕರ ಕೂದಲು ನಮ್ಮದಾಗುತ್ತದೆ. ಅಲ್ಲದೆ ಅತಿಯಾದ ಧೂಳು ಹಾಗೂ ಕಲ್ಮಶ ಇರುವ ಕಡೆ ನಾವು ಕೆಲಸ ಮಾಡುತ್ತಿದ್ದರೆ ಅಥವಾ ಓಡಾಡುತ್ತಿದ್ದರೆ ಹೆಚ್ಚು ಹೊತ್ತು ಅಲ್ಲೇ ಇರಬೇಕಾದ ಸಂದರ್ಭ ಬಂದರೆ ಕೂದಲನ್ನು ಕಟ್ಟಿಕೊಂಡು ಕ್ಯಾಪ್ ಬಳಸುವುದು ಒಳ್ಳೆಯದು ಈ ರೀತಿ ಕೂದಲು ಯಾವಾಗಲೂ ಧೂಳಿಗೆ ಒಡ್ಡಿಕೊಂಡರು ಸಹ ಕೂದಲಿನ ಆರೋಗ್ಯಕ್ಕೆ ಹಾನಿಯಾಗಿ ಡ್ಯಾಂಡ್ರಫ್ ಬರುವ ಸಾಧ್ಯತೆಗಳಿರುತ್ತದೆ. ಮತ್ತು ತೇವದ ತಲೆಯಲ್ಲಿ ತಲೆ ಬಾಚುವುದು ಅಥವಾ ಅವಸರದ ಸಮಯಗಳಲ್ಲಿ ಮೇಲೆ ಮಾತ್ರ ಬಾಚಿ ಸಂಪೂರ್ಣವಾಗಿ ಕೂದಲನ್ನು ಬಾಚದೇ ಇರುವುದು ಇದು ಕೂಡ ಡ್ಯಾಂಡ್ರಫ್ ಕಾರಣವಾಗುತ್ತದೆ.
ಜೊತೆಗೆ ನಾವು ಸರಿಯಾದ ಸಮಕ್ಕೆ ಊಟ ಮಾಡದೆ ಇರುವುದು ನಿದ್ದೆ ಮಾಡದೇ ಇರುವುದು ಯಾವಾಗಲೂ ಮೊಬೈಲ್ ನೋಡುತ್ತಿರುವುದು ಅಥವಾ ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಈ ರೀತಿ ಮಾಡುವುದರಿಂದ ದೇಹದಲ್ಲಿ ಉಷ್ಣ ಹೆಚ್ಚಾಗುತ್ತದೆ ಈ ರೀತಿ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಅದು ಕೂದಲಿನ ಮೇಲೆ ಕೂಡ ಪರಿಣಾಮ ಬೀರಿ ಉಷ್ಣ ಹೆಚ್ಚಾದಂತೆಲ್ಲ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಡ್ಯಾಂಡ್ರಫ್ ಕೂಡ ಒಂದಾಗಿರುತ್ತದೆ. ಇದರೊಂದಿಗೆ ಕೂದಲಿಗೆ ಎಣ್ಣೆ ಹಾಕಲು ನಾವು ಬಳಸುವ ಎಣ್ಣೆಗಳು ಕೂಡ ಕಳಪೆ ಗುಣಮಟ್ಟದ್ದು ಆಗಿದ್ದರೆ ಈ ಸಮಸ್ಯೆ ಎದುರಿಸ ಬೇಕಾಗುತ್ತದೆ. ನಾವು ಚೆನ್ನಾಗಿ ಕೂದಲಿಗೆ ಎಣ್ಣೆಯಿಂದ ಆರೈಕೆ ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆ ಸಂಪೂರ್ಣವಾಗಿ ಗುಣ ಮಾಡಿಕೊಳ್ಳಬಹುದು. ಆದರೆ ಈಗಿನವರು ಕೂದಲಲ್ಲಿ ಎಣ್ಣೆ ಉಳಿಸಿಕೊಳ್ಳದೆ ಇರುವುದು ಕೂಡ ಡ್ಯಾಂಡ್ರಫ್ ಆಗಲು ಕಾರಣವಾಗಿದೆ.
ಜೊತೆಗೆ ನಾವು ಸ್ನಾನ ಮಾಡುವಾಗ ಬಳಸುವ ಶಾಂಪುಗಳು ಕೂಡ ತುಂಬಾ ಕೆಮಿಕಲ್ ಯುಕ್ತವಾಗಿದ್ದರೆ ಅಥವಾ ಕಳಪೆ ಗುಣಮಟ್ಟದ್ದಾಗಿದ್ದರೆ ಅದು ಕೂಡ ಕೂದಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಬೇಬಿ ಶಾಂಪೂಗಳ ಬಳಕೆ ಮಾಡುವುದು ಉತ್ತಮ ಅದರಲ್ಲಿ ಯಾವಾಗಲೂ ಕೆಮಿಕಲ್ ಅಂಶ ಕಡಿಮೆ ಇರುತ್ತದೆ. ಇದರಿಂದ ಕೂದಲಿನ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ ಅಕಸ್ಮಾತ್ ಈಗಾಗಲೇ ನೀವು ಡ್ಯಾಂಡ್ರಫ್ ಇಂದ ಬಳಲುತ್ತಿದ್ದರೆ ಈಗ ನಾವು ಹೇಳುವ ಮನೆಮದ್ದುಗಳನ್ನು ಪ್ರಯೋಗಿಸಿ ನೋಡಿ ತುಂಬಾ ಪರಿಣಾಮಕಾರಿಯಾಗಿ ಅತಿ ಕಡಿಮೆ ಸಮಯದಲ್ಲಿ ಸಂಪೂರ್ಣವಾಗಿ ನಿಮ್ಮ ಡ್ಯಾಂಡ್ರಫ್ ಸಮಸ್ಯೆ ನೂರಕ್ಕೆ ನೂರಷ್ಟು ಕ್ಲಿಯರ್ ಆಗುತ್ತದೆ. ತಲೆ ಹೊಟ್ಟಿನ ಸಮಸ್ಯೆ ಇರುವವರು ಮೊಸರನ್ನು ಕೂದಲಿಗೆ ಅಪ್ಲೈ ಮಾಡಿ 45 ನಿಮಿಷಗಳ ಕಾಲ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಈ ರೀತಿ ಮೊಸರನ್ನು ಅಪ್ಲೈ ಮಾಡುವಾಗ ಅದಕ್ಕೆ ಸ್ವಲ್ಪ ಬೇವಿನ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ಅದರ ಜೊತೆ ಅಪ್ಲೈ ಮಾಡಿದರೆ ಫಂಗೈ ಮತ್ತು ಬ್ಯಾಕ್ಟೀರಿಯಾ ಇನ್ಫೆಕ್ಷನ್ ಕಡಿಮೆ ಆಗಿ ತುರಿಕೆ ಕೂಡ ಕಡಿಮೆ ಆಗುತ್ತದೆ.
ಬೇವಿನ ಸೊಪ್ಪನ್ನು ಮಾತ್ರ ಕೂಡ ಅಪ್ಲೈ ಮಾಡಬಹುದು ಆಗಲು ಸಹ 45 ನಿಮಿಷಗಳ ಕಾಲ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತಲೆ ಕೂದಲನ್ನು ತೊಳೆದುಕೊಳ್ಳಬೇಕು. ಕೊಬ್ಬರಿ ಎಣ್ಣೆಯ ಜೊತೆ ಆರು ಹನಿ ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಂಡು 45 ನಿಮಿಷಗಳ ಕಾಲ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂಡ ಹೊಟ್ಟು ನಿವಾರಣೆಯಾಗುತ್ತದೆ. ಇದರೊಂದಿಗೆ ತುಳಸಿ ಎಲೆಯನ್ನು ಪೇಸ್ಟ್ ಮಾಡಿ ಹಾಕಬಹುದು, ಅಥವಾ ತುಳಸಿ ಪುಡಿ ಅನ್ನು ಕೂಡ ನೀರಿನಲ್ಲಿ ಬೆರೆಸಿ ಪ್ಯಾಕ್ ಮಾಡಬಹುದು. ಮುಲ್ತಾನ್ ಮುಟ್ಟಿ ಪುಡಿ ಕೂಡ ಪ್ಯಾಕ್ ಮಾಡಿ 45 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂಡ ನಿವಾರಣೆ ಆಗುತ್ತದೆ. ಅಥವಾ ಮೆಂತೆ ಅನ್ನು ನೆನೆಸಿ ಪೇಸ್ಟ್ ಮಾಡಿಕೊಂಡು ನೆನೆಸಿದ ನೀರನ್ನು ಇದರ ಜೊತೆ ಬೆರೆಸಿ ಅಪ್ಲೈ ಮಾಡಿ 45 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಬೇಕು. ಇದರಲ್ಲಿ ಯಾವುದಾದರೂ ಮನೆ ಮದ್ದನ್ನು ವಾರದಲ್ಲಿ ಮೂರು ದಿನ ಮಾಡಬೇಕು.