ರಾಜ್ಯದಲ್ಲಿ ನೂತನವಾಗಿ ಕಾಂಗ್ರೆಸ್ ಸರ್ಕಾರ(Congress Government) ಸ್ಥಾಪನೆಯಾದ ಮೇಲೆ ಕಂದಾಯ ಇಲಾಖೆಗೆ (Revenue department) ಸಂಬಂಧಪಟ್ಟ ಹಾಗೆ ಸಾಕಷ್ಟು ಬದಲಾವಣೆಗಳು ನಡೆದಿವೆ. ಈಗ ಅದೇ ಹಾದಿಯಲ್ಲಿ ಮುಂದುವರೆದು ರೈತರಿಗೆ ಅನುಕೂಲವಾಗುವಂತಹ ಮತ್ತೊಂದು ಹೆಜ್ಜೆಯನ್ನು ಸರ್ಕಾರದ ಆದೇಶದಂತೆ ಕಂದಾಯ ಇಲಾಖೆ ಕೈಗೊಂಡಿದೆ.
ರೈತರು ಅರ್ಜಿ ಸಲ್ಲಿಸದೇ ಇದ್ದರೂ ಕೂಡ ರೈತರ ಜಮೀನು ಸರ್ವೆ ಮಾಡಿ ಪೋಡಿ ಮಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ (Krishne Bairegowda) ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಕೂಡ ಅನೇಕ ರೈತರು ತಮ್ಮ ಜಮೀನನ್ನು ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದರು ಜಮೀನ ದಾಖಲೆಗಳು ಮಾತ್ರ ತಾತ ಮುತ್ತಾತನ ಹೆಸರಿನಲ್ಲಿಯೇ ಇದೆ.
ಅದನ್ನು ಸರಿಪಡಿಸಿಕೊಳ್ಳುವ ಗೋಜಿಗೆ ದಾಖಲೆಗಳ ಕೊರತೆಯಿಂದಾಗಿ ಅಥವಾ ಹಣಕಾಸಿನ ಸಮಸ್ಯೆಯಿಂದಾಗಿ ಅಥವಾ ಇನ್ನಿತರ ಕಾರಣಗಳಿಂದ ರೈತರು ಹೋಗಿರುವುದಿಲ್ಲ. ಈಗ ಅದಕ್ಕೆ ಪರಿಹಾರ ಮಾರ್ಗವಾಗಿ ಕಂದಾಯ ಇಲಾಖೆಯಿಂದ ದರಾಖಸ್ತು ಪೋಡಿ ಅಭಿಯಾನ ಕೈಗೊಳ್ಳಲಾಗಿದೆ.
ಇದರ ಮೂಲಕ ರೈತರು ಅರ್ಜಿ ಸಲ್ಲಿಸಿದರೂ ಕೂಡ ಅವರ ಜಮೀನನ್ನು ಸಂಪೂರ್ಣವಾಗಿ ಸರ್ವೆ ಮಾಡಿ ಅಣ್ಣ-ತಮ್ಮ ಮತ್ತು ಮಕ್ಕಳ ಹೆಸರುಗಳಿಗೆ ಹಿರಿಯರ ಆದೇಶದಂತೆ ಹಂಚಿಕೆ ಮಾಡಿ, ಪೋಡಿ ಮಾಡಿಕೊಡಲು ಹಾಗು ಅಣ್ಣ-ತಮ್ಮಂದಿರು ಇದ್ದರೆ ಅವರ ಹೆಸರುಗಳಿಗೆ ವಿಭಾಗ ಮಾಡಿಕೊಡಲು ಸರ್ಕಾರದಿಂದಲೇ ಕ್ರಮ ತೆಗೆದುಕೊಳ್ಳಲಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಆಸ್ತಿಗಳ ವಿಲೇವಾರಿಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿ, ನ್ಯಾಯಾಲಯಗಳಲ್ಲೂ ಕೂಡ ಇದಕ್ಕೆ ಸಂಬಂಧಪಟ್ಟ ಪ್ರಕರಣಗಳೇ ಹೆಚ್ಚಾಗುತ್ತಿವೆ. ಇದರಲ್ಲಿ ಆಸ್ತಿ ಸರಿಯಾಗಿ ವಿಲೆವಾರಿಯಾಗದಿರುವ ಸಮಸ್ಯೆ ಜೊತೆಗೆ ಅಕ್ಕಪಕ್ಕದ ರೈತರ ಜೊತೆ ಒತ್ತುವರಿಗಾಗಿ ಸಂಬಂಧ ಪಟ್ಟ ಕೇಸ್ ಗಳು ಹೆಚ್ಚಾಗಿವೆ ಎನ್ನುವುದು ತಿಳಿದು ಬಂದಿದೆ.
ಅದಕ್ಕಾಗಿ ರೈತರು ಅರ್ಜಿ ಸಲ್ಲಿಸದೇ ಇದ್ದರೂ ಕೂಡ ಕಂದಾಯ ಇಲಾಖೆಯಿಂದಲೇ ಸರ್ವೆ ಮಾಡಿ, ಪೋಡಿ ಮಾಡಿಕೊಡಲು ಹೊಸ ಆಂದೋಲನವನ್ನು ಆರಂಭಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದರು ಕೂಡ ಶೀಘ್ರವಾಗಿ ಸರ್ವೆ ಕಾರ್ಯ ನಡೆಯುವುದು ಅನುಮಾನವಾಗಿ ಇರುವಂತಹ ಸಂದರ್ಭದಲ್ಲಿ ಕಂದಾಯ ಇಲಾಖೆ ದರಖಾಸ್ತು ಪೋಡಿ ಅಭಿಯಾನ ಕೈಗೊಂಡು ಅರ್ಜಿ ಸಲ್ಲಿಸಿದರೂ ಕಂದಾಯ ಇಲಾಖೆಯಿಂದ ರೈತರ ಜಮೀನಿನಲ್ಲಿ ಸರ್ವೆ ನಡೆಸಿ ಪೋಡಿ ಮಾಡಿಕೊಡಲು ತೀರ್ಮಾನಿಸಲಾಗಿದೆ.
ದರಖಾಸ್ತು ಪೋಡಿ ಮಾಡಿಕೊಡಲು ಭೂ ಮಂಜೂರಿದಾರರು ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಅನೇಕ ಕಚೇರಿಗಳಿಗೆ ಅಲೆದಾಡಬೇಕು, ಆದರೀಗ ಈ ಆಂದೋಲನದ ಮೂಲಕ ಅರ್ಜಿ ಸಲ್ಲಿಸಿದಿರುವ ರೈತನಿಗೂ ಜಮೀನಿನಲ್ಲಿ ಸರ್ವೆ ನಡೆಸಿ ಕಂದಾಯ ಇಲಾಖೆ ಪೋಡಿ ಮಾಡಿಕೊಡಲಾಗುತ್ತದೆ. ಆದರೆ ಈ ಸೌಲಭ್ಯವು ಸರ್ಕಾರಿ ಭೂಮಿ ಮಂಜೂರಾತಿಯನ್ನು ದಸ್ತವೇಜು ಕಮಿಟಿ ಮೂಲಕ ಪಡೆದ ರೈತರಿಗೆ ಮಾತ್ರ ಸಿಗುತ್ತಿದೆ.
ಸರ್ಕಾರಿ ಭೂಮಿ ಮಂಜೂರಾತಿ ಪಡೆದುಕೊಂಡವರ ಪೋಡಿ ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲು ಕಂದಾಯ ಇಲಾಖೆಯಿಂದ ಈ ಪೋಡಿ ಆಂದೋಲನವನ್ನು ಕೈಗೊಳ್ಳಲಾಗಿದ್ದು ಮೊದಲ ಹಂತದಲ್ಲಿ ರಾಜ್ಯದಲ್ಲಿ ರಾಮನಗರ ಜಿಲ್ಲೆಯಿಂದ ಪ್ರಾಯೋಗಿಕ ಸರ್ವೆ ಆರಂಭಿಸಲಾಗಿದೆ. ನಂತರ ಈ ಕಾರ್ಯಕ್ರಮ ಯಶಸ್ವಿಯಾದರೆ ಇದೇ ಮಾದರಿಯಲ್ಲಿ ರಾಜ್ಯದಾದ್ಯಂತ ಎಲ್ಲಾ ತಾಲ್ಲೂಕುಗಳಿಗೂ ವಿಸ್ತರಿಸಲಾಗುತ್ತದೆ.
ರೋವರ್ ಟ್ಯಾಬ್ ಆರ್ಥೋರೆಕ್ಟಿಫೈಡ್ ರಾಡಾರ್ ಮುಂತಾದ ತಂತ್ರಜ್ಞಾನಗಳನ್ನು ಕೂಡ ಈ ಕಾರ್ಯಕ್ಕಾಗಿ ಬಳಸಿಕೊಂಡು ಇಮೇಜ್ ಆಧಾರಿತ ಸರ್ವೆ ಮೂಲಕ ಬಾಕಿ ಇರುವ ಪೋಡಿ ಪ್ರಕರಣಗಳ ಸರ್ವೆ ನಡೆಸಲಾಗುತ್ತದೆ. ಎಲ್ಲಾ ಅರ್ಹರಿಗೂ ಮಂಜೂರಾದ ಭೂಮಿಯ ಮಾಹಿತಿ ಸಿಗಲಿದೆ ಸರ್ವೆ ನಂಬರ್, ವಿಸ್ತೀರ್ಣ, ಒತ್ತುವರಿ ಇದರಿಂದ ಗೊತ್ತಾಗಲಿದೆ.
ರೋವರ್ ಟ್ಯಾಬ್ ಆರ್ಥೋರೆಕ್ಟಿಫೈಡ್ ರಾಡಾರ್ ನಿಂದ ಪಾರದರ್ಶಕತೆ ಇರಲಿದೆ ಎನ್ನುವುದು ರೈತನು ನಂಬಿರುವ ನಂಬಿಕೆಯಾಗಿದೆ ಇದರಿಂದ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಒಟ್ಟಾರೆಯಾಗಿ ಈ ಯೋಜನೆಯು ರೈತರ ಪಾಲಿಗೆ ಸಾಕಷ್ಟು ಅನುಕೂಲತೆ ಮಾಡಿಕೊಡುತ್ತಿರುವುದಂತೂ ಸುಳ್ಳಲ್ಲ. ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆ ಕಚೇರಿಗಳಿಗೆ ಭೇಟಿ ಕೊಡಿ.