ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಯ (Gruhalakshmi Scheme) ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000 ಸಹಾಯಧನ ಪಡೆಯಬಹುದು. ಅಂತೆಯೇ ಇವರಿಗೆ ಅನ್ನಭಾಗ್ಯ ಯೋಜನೆಯ (Annabhagya Scheme) ಮೂಲಕ ಕುಟುಂಬದ ಇತರ ಸದಸ್ಯರ ಐದು ಕೆಜಿ ಅಕ್ಕಿ ಹಣ ಕೂಡ dbt ಮೂಲಕ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಆಗುತ್ತಿದೆ.
ಈಗಾಗಲೇ ಕರ್ನಾಟಕದ ಕೋಟ್ಯಂತರ ಮಹಿಳೆಯರು ಈ ಯೋಜನೆಗಳ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಇನ್ನು ಮುಂದೆ ಈ ಯೋಜನೆಗಳ ಹಣವನ್ನು ಪಡೆಯಲು ರೇಷನ್ ಕಾರ್ಡ್ e-KYC ಕಡ್ಡಾಯ ಎನ್ನುವ ಮಾತು ಕೇಳಿ ಬರುತ್ತಿದೆ ಹಾಗಾಗಿ ಪ್ರತಿಯೊಬ್ಬರು ರೇಷನ್ ಕಾರ್ಡ್ e-KYCಮಾಡಿಸಿಕೊಳ್ಳಿ.
ಇದರ ಪ್ರಕಾರವಾಗಿ ಇಂದು ಈ ಅಂಕಣದಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸುವುದು ಹೇಗೆ? ಹಾಗೆಯೇ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಗೆ ಈಗಾಗಲೇ ಇ-ಕೆವೈಸಿ ಆಗಿದಯೇ ಇಲ್ಲವೇ ಎನ್ನುವುದನ್ನು ಹೇಗೆ ತಿಳಿದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
https://ahara.kar.nic.in/Home/EServices ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ
* ಎಡಭಾಗದ ಮೆನು ಬಾರ್ ನಲ್ಲಿ e-Status ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ, dbt Status ಏನಾದರೂ ಮೇಲೆ ಕ್ಲಿಕ್ ಮಾಡಿ ಆಗ ಜಿಲ್ಲಾ ಅವರು ಲಿಂಕ್ ಗಳು ಕಾಣುತ್ತವೆ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
* ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಎಡಭಾಗದಲ್ಲಿರುವ ಆಪ್ಷನ್ಗಳಲ್ಲಿ ಪಡಿತರ ವಿವರ (Status of Rationcard) ಅನ್ನುವ ಆಪ್ಷನ್ ಕ್ಲಿಕ್ ಮಾಡಿ
* ಮತ್ತೊಂದು ಪೇಜ್ ಕಾಣುತ್ತದೆ ಅದರಲ್ಲಿ ಎರಡು ಆಪ್ಷನ್ ಗಳು ಇರುತ್ತವೆ With OTP and Without OTP
* ಮೊದಲಿಗೆ Without OTP ಸೆಲೆಕ್ಟ್ ಮಾಡಿ Ration card No. ಕೇಳಿರುತ್ತದೆ ಎಂಟ್ರಿ ಮಾಡಿ Go ಕ್ಲಿಕ್ ಮಾಡಿ.
* Ration Card Status ಇಂಟರ್ ಫೇಸ್ ಓಪನ್ ಆಗುತ್ತದೆ ಅದರಲ್ಲಿ ಎಡ ಭಾಗದಲ್ಲಿ ನಿಮ್ಮ ರೇಷನ್ ಕಾರ್ಡ್ ವಿವರ ಇರುತ್ತದೆ ಮತ್ತು ಬಲಭಾಗದಲ್ಲಿ ನೀವು ಪ್ರತಿ ತಿಂಗಳು ಪಡೆಯುವ ಪಡಿತರದ ವಿವರ ಇರುತ್ತದೆ. ಹಾಗೆ ಮಧ್ಯದಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ (Member Count) ಎಷ್ಟು ಜನರ e-KYC ಆಗಿದೆ ( e-KYC Done), ಎಷ್ಟು ಜನರದ್ದು ಬಾಕಿ ಇದೆ(e-KYC Remaining) ಅನ್ನುವ ಮಾಹಿತಿ ಇರುತ್ತದೆ.
ಉದಾಹರಣೆಗೆ ಇದರಲ್ಲಿ ನಾಲ್ಕು ಜನ ಸದಸ್ಯರ ಸಂಖ್ಯೆ ತೋರಿಸಿ ನಾಲ್ಕು ಜನರ ಇ-ಕೆವೈಸಿ ಆಗಿದೆ ಎಂದು ತೋರಿಸಿದರೆ ಸಮಸ್ಯೆ ಇಲ್ಲ ಆದರೆ e-KYC Remaining ನಲ್ಲಿ 1 or 2 ಸಂಖ್ಯೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇಬ್ಬರು ಸದಸ್ಯರ ಇ-ಕೆವೈಸಿ ಮಾಡಿಸುವುದು ಬಾಕಿ ಇದೆ ಎಂದು ಅರ್ಥ.
* ಆಗ ನೀವು ಯಾವ ಸದಸ್ಯರ e-KYC ಬಾಕಿ ಇದೆ ಎಂದು indiviual ಆಗಿ ಚೆಕ್ ಮಾಡಬೇಕು
* ನೀವು ಮತ್ತೆ Menu ವಿಗೆ ಬಂದು e-Ration card ಆಪ್ಷನ್ ನಲ್ಲಿ Linking UID ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಜಿಲ್ಲಾವಾರು ಲಿಂಕ್ ಇರುತ್ತದೆ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ
* ಮತ್ತೊಂದು ಪುಟ ಓಪನ್ ಆಗುತ್ತದೆ ಅದರಲ್ಲಿ UID linking for RC Members ಎನ್ನುವುದನ್ನು ಕ್ಲಿಕ್ ಮಾಡಿ
* Aadhar Number or Vurtual ID ಎರಡು ಆಪ್ಷನ್ ಇರುತ್ತದೆ Aadhar Number ಆಪ್ಷನ್ ಕ್ಲಿಕ್ ಮಾಡಿ
* ನಿಮ್ಮ ಆಧಾರ್ ಸಂಖ್ಯೆ ಹಾಕಿ GO ಕ್ಲಿಕ್ ಮಾಡಿ, ಆ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ಎಂಟ್ರಿ ಮಾಡಿ GO ಕ್ಲಿಕ್ ಮಾಡಿ, Ration Card Number ಎಂಟ್ರಿ ಮಾಡಿ Go ಕ್ಲಿಕ್ ಮಾಡಿ
* Status of Ration Card interface ಓಪನ್ ಆಗುತ್ತದೆ. ಮೊದಲನೆಯ ರೀತಿಯಲ್ಲಿಯೇ ಎಡಭಾಗದಲ್ಲಿ ರೇಷನ್ ಕಾರ್ಡ್ ವಿವರ, ಬಲಭಾಗದಲ್ಲಿ ಪಡಿತರ ತೆಗೆದುಕೊಂಡಿರುವ ವಿವರ ಮತ್ತು ಮಧ್ಯದಲ್ಲಿ Member details ಇರುತ್ತದೆ. Member name, Adhar Last 4 digit and e-KYC ಆಗಿದ್ದರೆ YES ಎಂದು ಬರುತ್ತದೆ.
ಆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ವಿವರವು ಈ ರೀತಿ ಬರುತ್ತದೆ. ಯಾವ ಸದಸ್ಯನ ಇ-ಕೆವೈಸಿ ಆಗಿಲ್ಲ NO ಎಂದು ಇರುತ್ತದೆ. ಅದರಲ್ಲಿ ಕುಟುಂಬದ ಮುಖ್ಯಸ್ಥೆ ಖಾತೆಗೆ ಹಣ ಬರುವುದರಿಂದ ಅವರ ಇ-ಕೆವೈಸಿ ಆಗದೆಯೇ ಎನ್ನುವುದನ್ನು ಮುಖ್ಯವಾಗಿ ಗಮನಿಸಿ. ಆಗಿಲ್ಲ ಎಂದರೆ ತಪ್ಪದೇ ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ(Fareprice shop) ಹೋಗಿ ಇ-ಕೆವೈಸಿ ಮಾಡಿಸಿ.