ನಿಮ್ಮ ಗ್ಯಾಸ್ ಗೆ ಇ-ಕೆವೈಸಿ ಆಗಿದೆಯೇ.? ಇಲ್ಲವಾದಲ್ಲಿ ಉಚಿತವಾಗಿ ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಿ.!

 

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು (Central Government) ಪ್ರತಿ ಗ್ಯಾಸ್ ಬುಕಿಂಗ್ ಮೇಲೆ ಎಲ್ಲರಿಗೂ ಸಬ್ಸಿಡಿ (Gas Subsidy) ಘೋಷಿಸಿದೆ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PMUY) ಗ್ರಾಹಕರು ಇನ್ನು ಹೆಚ್ಚಿನ ಸಬ್ಸಿಡಿ ಪಡೆಯುತ್ತಿದ್ದಾರೆ. ನೀವು ಯಾವುದೇ ಕಂಪನಿಯ ಗ್ಯಾಸ್ ಕನೆಕ್ಷನ್ ಹೊಂದಿದ್ದರು ಇ-ಕೆವೈಸಿ ಮಾಡಿಸಿದರೆ ಮಾತ್ರ dbt ಮೂಲಕ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆ ಆಗಲು ಸಾಧ್ಯ.

ಇಂಡಿಯನ್ ಗ್ರಾಹಕರು ಹೇಗೆ ಸುಲಭವಾಗಿ ಮೊಬೈಲ್ ನಲ್ಲಿ e-KYC ಮಾಡಿಕೊಳ್ಳಬಹುದು ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಒಂದು ವೇಳೆ ತಿಳಿಯದಿದ್ದರೆ ನೀವು ನಿಮ್ಮ ಏಜೆನ್ಸಿಗೆ ಭೇಟಿ ಕೊಡುವ ಮೂಲಕವೂ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು.

* ಪ್ಲೇ ಸ್ಟೋರ್ ಗೆ ಹೋಗಿ ಇಂಡಿಯನ್ ಆಯಿಲ್ ಎಂದು ಸರ್ಚ್ ಕೊಡಿ Indian Oil ONE ಎನ್ನುವ ಆಪ್ ಕಾಣುತ್ತದೆ ಡೌನ್ಲೋಡ್ ಮಾಡಿಕೊಳ್ಳಿ.
* ನಂತರ ಆಪ್ ಓಪನ್ ಮಾಡಿ ಕೆಲವೊಂದು ಪರ್ಮಿಷನ್ ಗಳನ್ನು ಕೇಳುತ್ತದೆ allow ಮಾಡಿ
* ಎಡ ಭಾಗದಲ್ಲಿ ಮೂರು ಚಿಕ್ಕ ಗೆರೆಗಳು ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ Login/Sign up ಈ ಕಾಲದಲ್ಲಿ ನೀವು ರಿಜಿಸ್ಟರ್ ಆಗಿ ID ಮತ್ತು Password ಹೊಂದಿದ್ದರೆ Login ಮೇಲೆ ಕ್ಲಿಕ್ ಮಾಡಿ ID & Password ಹಾಕಿ Login ಆಗಿ.

* ಇಲ್ಲವಾದಲ್ಲಿ Registration ಎನ್ನುವುದರ ಮೇಲೆ ಕ್ಲಿಕ್ ಮಾಡಿ Mobile No., E-mail ID, First Name, Last Name i agree ಚೆಕ್ ಬಾಕ್ಸ್ ಮೇಲೆ ರೈಟ್ ಮಾರ್ಕ್ ಕ್ಲಿಕ್ ಮಾಡಿ Register ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಆಗ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ, OTP ಹಾಕಿ ಕೊಟ್ಟಿರುವ ಸೂಚನೆಯ ಪ್ರಕಾರವಾಗಿ ಒಂದು Password ಜನರೇಟ್ ಮಾಡಿಕೊಳ್ಳಿ. ನಂತರ ಈಗ ಮೊದಲಿನಂತೆ ಲಾಗಿನ್ ಪೇಜ್ ಗೆ ಬಂದು Mobile no & Password ಹಾಕಿ ಲಾಗಿನ್ ಆಗಿ ಇಂಡಿಯನ್ ಆಯಿಲ್ ಮುಖಪುಟ ಓಪನ್ ಆಗುತ್ತದೆ.

* ಮುಖಪುಟದ ಎಡ ಭಾಗದಲ್ಲಿ ಮೂರು ಅಡ್ಡ ಗೆರೆಗಳು ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದರೆ. My Profile ಎನ್ನುವ ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ.
* ಇದರಲ್ಲಿ ಯಾರ ಹೆಸರಿಗೆ ಗ್ಯಾಸ್ ಕನೆಕ್ಷನ್ ಇದೆ, ಅವರ ಕೊನೆಯ ನಾಲ್ಕು ಮೊಬೈಲ್ ಸಂಖ್ಯೆ, LPG ID, ಸಬ್ಸಿಡಿ ಸೌಲಭ್ಯ ನಿಮಗೆ ಇದೆಯೇ ಇತ್ಯಾದಿ ಎಲ್ಲಾ ವಿವರ ಕೂಡ ಸ್ಕ್ರೀನ್ ಮೇಲೆ ಕಾಣುತ್ತದೆ. ನೀವು ಸಬ್ಸಿಡಿಗೆ ಅರ್ಹರಾಗಿದ್ದರೆ ಆ ಆಪ್ಷನ್ ಮುಂದೆ YES ಎಂದು ಕಾಣುತ್ತದೆ.

* ಪೇಜ್ ಸ್ಕ್ರೋಲ್ ಮಾಡಿ E-KYC Status ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ಹಸಿರು ಬಣ್ಣದಲ್ಲಿ ರೈಟ್ ಮಾರ್ಕ್ ಇದ್ದರೆ ಈಗಾಗಲೇ ಇ-ಕೆವೈಸಿ ಆಗಿದೆ ಎಂದರ್ಥ. ಆಗಿಲ್ಲ ಎಂದರೆ ಕೆಳಗೆ ನೀಡಲಾಗಿರುವ Re-KYC ಎನ್ನುವ ಆಪ್ಷನ್ ಕ್ಲಿಕ್ ಮಾಡಿ
* ಆಧಾರ್ ಅಥೇಂಟಿಕೇಶನ್ ಮಾಡಿ e-KYC ಮಾಡಬೇಕಾಗುತ್ತದೆ ಅದರ ಕುರಿತು ವಿವರ ಬರುತ್ತದೆ. ಅದನ್ನು ಓದಿಕೊಂಡು ಪಕ್ಕದಲ್ಲಿ ನೀಡಲಾಗಿರುವ ಚೆಕ್ ಬಾಕ್ಸ್ ನಲ್ಲಿ ರೈಟ್ ಕ್ಲಿಕ್ ಮಾಡಿದರೆ, ಕೆಳಗೆ Face Scan ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಬೇಕು.

* ಆದರೆ ನಿಮ್ಮ ಫೋನ್ ನಿಂದ face Scan ಮಾಡಲು ಸಾಧ್ಯವಾಗುವುದಿಲ್ಲ ಆಗ ಮತ್ತೊಮ್ಮೆ ಪ್ಲೇ ಸ್ಟೋರ್ ಗೆ ಹೋಗಿ face Authentication ಎಂದು ಸರ್ಚ್ ಕೊಡಿ, Aadhar faceRd(Early Access) install ಮಾಡಿ
* ಈಗ ನೀವು fave scan ಮೇಲೆ ಕ್ಲಿಕ್ ಮಾಡಿದರೆ ಫೇಸ್ ಅಥೆಂಟಿಕೇಷನ್ ಆಗುತ್ತದೆ face detect ನಿಮ್ಮ ಮೊಬೈಲ್ ನ ಫ್ರೆಂಟ್ ಕ್ಯಾಮೆರಾ ಮೂಲಕವೇ ಆಗುತ್ತದೆ.

* ನಂತರ ನಿಮ್ಮ ಆಧಾರ್ ಅಥೆಂಟಿಕೇಷನ್ ಪೂರ್ತಿ ಮಾಡಿ ಸಬ್ಮಿಟ್ ಕೊಟ್ಟರೆ e-KYC ಪ್ರಕ್ರಿಯೆ ಮುಗಿಯುತ್ತದೆ ಮತ್ತು ನೀವು ಅದನ್ನು ಹಿಂದೆ ಹೋಗಿ ಇ-ಕೆವೈಸಿ ಸ್ಟೇಟಸ್ ಆಪ್ಷನ್ ನಲ್ಲಿ ಕೂಡ ಚೆಕ್ ಮಾಡುವ ಮೂಲಕ ಧೃಡೀಕರಿಸಿಕೊಳ್ಳಬಹುದು.

https://youtu.be/xGvmOaim1DQ?si=OkO0J30esJ7E05tI

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now