ಪೊಲೀಸ್ ಇಲಾಖೆ ಈ ಹೆಸರು ಕೇಳಿದ ತಕ್ಷಣ ಯುವಜನತೆಗೆ ಮೈ ರೌಮಾಂಚನವಾಗುತ್ತದೆ. ಈ ಇಲಾಖೆಯಲ್ಲಿ ಗುರುತಿಸಿಕೊಂಡು ಪ್ರಸ್ತುತವಾಗಿ ನಡೆಯುತ್ತಿರುವ ಕಾನೂನೂ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಹೆಸರು ಮಾಡುತ್ತಾ ಸಮಾಜದ ಸುವ್ಯವಸ್ಥೆ ಕಾಪಾಡಬೇಕು ಎನ್ನುವುದು ಅದೆಷ್ಟೋ ಸಾಧಕರ ಕನಸು ಹೀಗಾಗಿ ಆರಕ್ಷಕರಕರಾಗಲು ಪೊಲೀಸ್ ಇಲಾಖೆ ಸೇರುವ ಕನಸು ಹೊತ್ತು ಹಗಲಿರಳು ಇದಕ್ಕಾಗಿ ಶ್ರಮಿಸಿ ತಯಾರಾಗಿರುತ್ತಿರುತ್ತಾರೆ.
ಆದರೆ ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅವ್ಯವಹಾರಗಳ ಬಗ್ಗೆ ಬೇಸರ ಉಂಟಾಗಿ ಕಳೆದ ಬಾರಿ ಆದ PSI ಹಗರಣ ಮುಂತಾದವುಗಳಿಂದ ನಂಬಿಕೆ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಎಂದು ಕೂಡ ಆಕಾಂಕ್ಷೆಗಳ ಪರವಾಗಿ ಇದ್ದು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ಸಿಹಿ ಸುದ್ದಿ ನೀಡಿದೆ.
ಈಗ ಸರ್ಕಾರದ ವತಿಯಿಂದ ಗೃಹ ಸಚಿವರಾದ ಜಿ ಪರಮೇಶ್ವರ್ ರವರು (Minister G.Parameshwar) ಪೊಲೀಸ್ ಇಲಾಖೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಿಕೊಳ್ಳಲು ನಿರ್ಧರಿಸಿರುವ ನೇಮಕಾತಿ ಕುರಿತು ಸಿಹಿ ಸುದ್ಧಿ ಕೊಟ್ಟಿದ್ದಾರೆ. ಈ ಬಾರಿ 17,000 ಹೆಚ್ಚು ಹುದ್ದೆಗಳ ನೇಮಕಾತಿ (Police Department recruitment) ನಿರೀಕ್ಷೆ ಇತ್ತು ಇದಕ್ಕೆ ಮಾನ್ಯ ಗೃಹ ಸಚಿವರಾದ ಜಿ ಪರಮೇಶ್ವರ್ ಅವರ ಲಿಖಿತ ರೂಪದ ಉತ್ತರವನ್ನು ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದಾರೆ.
ರಾಜ್ಯ ಗೃಹ ಸಚಿವ ಡಾ ಜಿ. ಪರಮೇಶ್ವರ್ ರವರು ಡಿಸೆಂಬರ್ 5ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚರ್ಚೆ ವಿಷಯ ಪ್ರಸ್ತಾಪಿಸಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಒಟ್ಟು 4,547 ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದು ಅದರಲ್ಲಿ PSI ನೇಮಕಾತಿ ರೀತಿಯಲ್ಲಿಯೇ ಶೀಘ್ರದಲ್ಲಿ 3000 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮತ್ತು ಮುಂದಿನ 6 ತಿಂಗಳ ಒಳಗೆ 1547 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪೂರ್ತಿ ಗೊಳಿಸಲಾಗುವುದು ಹೀಗೆ ಒಟ್ಟು 4547 ಹುದ್ದೆಗಳನ್ನು ಪೊಲೀಸ್ ಇಲಾಖೆಗೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. PSI ನೇಮಕಾತಿ ಪರೀಕ್ಷೆ ಹಗರಣ ಬಗೆಗೂ ಮಾತನಾಡಿ ಇತ್ತೀಚೆಗೆ ಮಹತ್ವದ ತೀರ್ಪು ಹೊರಬಿದ್ದಿದೆ.
ಅದರ ಪ್ರಕಾರ ಆ 545 PSI ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗಾಗಿ ಮುಗಿಸಿ ಭರ್ತಿ ಮಾಡಲಾಗುವುದು. ನಂತರದಲ್ಲಿ 402 PSI ಪೋಸ್ಟ್‌ಗಳಿಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಮೊದಲ ಹಂತದಲ್ಲಿ 3000 ಪೊಲೀಸ್ ಕಾನ್ಸ್‌ಟೇಬಲ್ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳಲಿದೆ.
ನೇಮಕ ಮಾಡಿಕೊಳ್ಳುವ ಕಾನ್ಸ್‌ಟೇಬಲ್‌ಗಳಿಗೆ ತರಬೇತಿ ನೀಡುವ ಅಗತ್ಯ ಇದ್ದು, ಒಂದೇ ಸಮಯದಲ್ಲಿ 15 ಸಾವಿರ ಅಭ್ಯರ್ಥಿಗಳನ್ನು ಭರ್ತಿ ಮಾಡುವುದು ಕಷ್ಟ ಎಂದ ಸಚಿವರು ಮುಂದಿನ ವರ್ಷಗಳಲ್ಲಿ ಖಾಲಿ ಉಳಿಯುವ 15,000 ಹುದ್ದೆಗಳಿಗೂ ನೇಮಕಾತಿಯನ್ನು ಹಂತ ಹಂತವಾಗಿ ಮಾಡಲಾಗುವುದು ಎನ್ನುವ ವಿಷಯ ತಿಳಿಸಿದ್ದಾರೆ.
ನಿವೃತ್ತಿ, ನಿ’ಧ’ನದಿಂದ ಖಾಲಿ ಆಗಿರುವ ಹುದ್ದೆ ಭರ್ತಿಗೆ ಕಾನೂನು ತಿದ್ದುಪಡಿಗೆ ಚಿಂತನೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಉಳಿಕೆ ವೃಂದದ ನೇಮಕಾತಿ ಬಗ್ಗೆಯೂ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದರಿಂದ ಆಕಾಂಕ್ಷಿಗಳು ತಮ್ಮ ಅಧ್ಯಯನದ ಚುರುಕು ಹೆಚ್ಚಿಸಿಕೊಳ್ಳಲು ಎನ್ನುವುದಷ್ಟೇ ನಮ್ಮ ಅಂಕಣದ ಆಶಯ ಹಾಗಾಗಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.