ಡಿಸೆಂಬರ್ ತಿಂಗಳಿನಲ್ಲಿ ರದ್ದಾಗಿರುವ BPL ರೇಷನ್ ಕಾರ್ಡ್ ಗಳ ಪಟ್ಟಿ ಹೀಗಿದೆ, ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಾಗಿದೆ ಎಂದು ತಪ್ಪದೆ ಚೆಕ್ ಮಾಡಿಕೊಳ್ಳಿ, ಇಲ್ಲವಾದಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಸರ್ಕಾರದದಿಂದ ಅನೇಕ ಯೋಜನೆಗಳ ಪ್ರಯೋಜನ ಸಿಗುತ್ತಿದೆ, ಸದ್ಯಕ್ಕೆ ಅದನ್ನು ರೇಷನ್ ಕಾರ್ಡ್ (Ration card) ಮೂಲಕ ಅಳೆಯಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ (Gruhalakshmi & Annabhagya) ಹಣ ಪಡೆಯಲು ರೇಷನ್ ಕಾರ್ಡ್ ಬೇಕೇ ಬೇಕು.
ಈ ಯೋಜನೆಗಳು ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿದ್ದು, ಇದರಿಂದ ಎಲ್ಲರಿಗೂ ರೇಷನ್ ಕಾರ್ಡ್ ಮಹತ್ವ ಅರಿವಾಗಿದೆ ಎಂದೇ ಹೇಳಬಹುದು. ಇನ್ನೂ ಒಂದು ಕಡೆ ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಿಗುವ ಉಚಿತ ಪಡಿತರ ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳನ್ನು ಪಡೆಯಲು ಉಳ್ಳವರು ಕೂಡ ಸರ್ಕಾರಕ್ಕೆ ನಿಜಾಂಶ ಮರೆಮಾಚಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ BPL & AAY ರೇಷನ್ ಕಾರ್ಡ್ ಪಡೆದಿದ್ದಾರೆ ಎನ್ನುವ ಮಾಹಿತಿ ಆಹಾರ ಇಲಾಖೆಗೂ ಕೂಡ ತಿಳಿದಿದೆ.
ಇದಕ್ಕಾಗಿ ಚುರುಕಿನ ಕಾರ್ಯಚರಣೆ ಕೈಗೊಂಡು ಅನರ್ಹರಲ್ಲದ ರೇಷನ್ ಕಾರ್ಡ್ ಗಳನ್ನು ರದ್ದು (Ration card Cancel / Suspend) ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಆ ಪ್ರಕಾರವಾಗಿ ಕಳೆದ ವರ್ಷ ಕೂಡ ಸುಮಾರು 4 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಗಳನ್ನು ರದ್ದು ಮಾಡಲಾಗಿದ್ದು ಮತ್ತು ಅಂತೆಯೇ 2023ರ ವರ್ಷದ ಆರಂಭದಿಂದಲೂ ಕೂಡ ಪ್ರತಿ ತಿಂಗಳು ಆಹಾರ ಇಲಾಖೆ ಕಡೆಯಿಂದ ಪರಿಶೀಲನೆ ನಡೆಸಿ ಅನರ್ಹರ ರೇಷನ್ ಕಾರ್ಡ್ ಗಳು ರದ್ದು ಮಾಡಲಾಗುತ್ತಿವೆ.
ಒಂದು ವೇಳೆ ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿಲ್ಲ ಎಂದರೆ ಆ ತಿಂಗಳ ಗೃಹಲಕ್ಷ್ಮಿ ಹಣವು ನಿಮಗೆ ಬರುವುದಿಲ್ಲ ಅದಕ್ಕೆ ಕಾರಣ ಕೂಡ ತಿಳಿಸಲಾಗಿರುತ್ತದೆ. ಆದರೆ ಯಾವ ರೀತಿ ಇದನ್ನು ಚೆಕ್ ಮಾಡಿ ತಿಳಿದುಕೊಳ್ಳಬೇಕು ಎನ್ನುವ ಮಾಹಿತಿ ಪ್ರತಿಯೊಬ್ಬ ನಾಗರಿಕನಿಗೂ ಕೂಡ ತಿಳಿದಿರಬೇಕು. ಹಾಗಾಗಿ ಈ ಕಂಕಣದಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಈ ತಿಂಗಳಲ್ಲಿ ಏನಾಗಿದೆ ಎಂದು ಸುಲಭವಾಗಿ ಚೆಕ್ ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ, ಇದನ್ನು ತಿಳಿದುಕೊಂಡು ಇದರಲ್ಲಿ ತಿದ್ದುಪಡಿಗಳಿದ್ದರೆ ತಕ್ಷಣವೇ ಸರಿ ಪಡಿಸಿಕೊಳ್ಳಿ.
ಎರಡು ವಿಧಾನಗಳ ಮೂಲಕ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಬಹುದು:-
1. ಮೊದಲನೇ ವಿಧಾನದಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
* https://ahara.kar.nic.in/Home/EServices ಇದು ಆಹಾರ ಇಲಾಖೆಯ ವೆಬ್ಸೈಟ್ ಲಿಂಕ್ ಆಗಿದೆ ಕ್ಲಿಕ್ ಮಾಡಿ
* ಮುಖಪುಟದಲ್ಲಿ ಮೂರು ಗೆರೆಗಳು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
* ಈ ಪಡಿತರ ಚೀಟಿ ಎಂಬ ಆಯ್ಕೆಯಲ್ಲಿ ರದ್ದು ಮಾಡಲಾದ/ತಡೆಹಿಡಿಯಲಾದ ಪಡಿತರ ಚೀಟಿಯ ಪಟ್ಟಿ ಎಂಬ , ಅದರ ಮೇಲೆ ಕ್ಲಿಕ್ ಮಾಡಿ.
* ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ ನಂತರ ನೀವು ರದ್ದಾದ ಪಡಿತರ ಚೀಟಿಯ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.
2. ಎರಡನೇ ವಿಧಾನ ಸರ್ಕಾರದ ಮಾಹಿತಿ ಕಣಜ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ
* ಗೂಗಲ್ ನಲ್ಲಿ ಮಾಹಿತಿ ಕಣಜ ಎಂದು ಟೈಪ್ ಮಾಡಿ, ಕರ್ನಾಟಕ ಸರ್ಕಾರದ ಮಾಹಿತಿ ಕಣಜ ವೆಬ್ಸೈಟ್ ಲಿಂಕ್ ಕಾಣುತ್ತದೆ ಕ್ಲಿಕ್ ಮಾಡಿ.
* My Ration card details ಎಂಬ ಪುಟ ಕಾಣುತ್ತದೆ.
* ಅದರಲ್ಲಿ ನಿಮ್ಮ ಜಿಲ್ಲೆ ಮತ್ತು ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ ನಂಬರ್ ಅನ್ನು ನಮೂದಿಸಿ submit ಕ್ಲಿಕ್ ಮಾಡಿ.
* ಬಳಿಕ my Ration shop details ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಪೂರ್ತಿ ಡೀಟೇಲ್ಸ್ ಇರುತ್ತದೆ. ಪಡಿತರ ಚೀಟಿ ಸಂಖ್ಯೆ. ಎಷ್ಟು ಸದಸ್ಯರಿದ್ದಾರೆ, ಕುಟುಂಬದ ಮುಖ್ಯಸ್ಥರು ಯಾರು, ಯಾವ ವಿಧದ ಕಾರ್ಡ್, ಕಾರ್ಡ್ ಸ್ಥಿತಿ ವಿವರ ಇರುತ್ತದೆ. ಇದರಲ್ಲಿ card status ಆಪ್ಷನ್ ನಲ್ಲಿ active ಎಂದು ತೋರಿಸಿದರೆ ನಮ್ಮ Ration card ಚಾಲ್ತಿ ಯಲ್ಲಿದೆ ಎಂದು ಅರ್ಥ.