ಕೆಲವೊಮ್ಮೆ ನಾವು ಇಷ್ಟಪಟ್ಟು ಯಾವುದಾದರೂ ಗಿಡವನ್ನು ತಂದು ಬೆಳೆಸಿದರೂ ಕೂಡ ಅದು ಬೆಳೆಯುವುದೇ ಇಲ್ಲ. ಆದರೆ ಒಮ್ಮೊಮ್ಮೆ ಆಶ್ಚರ್ಯ ಎನ್ನುವಂತೆ ಯಾವುದೋ ಒಂದು ಸಸ್ಯ ನಮ್ಮ ಮನೆ ಗೋಡೆ ಮೇಲೆ ಅಥವಾ ಕಾಂಪೌಂಡ್ ಮೇಲೆ ಗೇಟ್ ಬಳಿ ಚಿಗುರಿ ಸುಂದರವಾದ ಹೂವನ್ನು ಅರಳಿಸುತ್ತದೆ.
ಇದು ಬಹಳ ಆಶ್ಚರ್ಯ ತರುತ್ತದೆ ಯಾರು ನೆಡದಿದ್ದರೂ ಈ ಗಿಡ ಹೇಗೆ ಬಂತು ಎಂದು ಅದೇ ರೀತಿ ಅಶ್ವತ್ಥರಳೀ ಮರವೂ ಕೂಡ. ಈ ಮರವು ಸಹ ನಾವು ಬೆಳೆಸದಿದ್ದರೂ ನಮ್ಮ ಮನೆಯ ಗೋಡೆ ಮೇಲೆ ಮನೆ ಬಳಿ ಬೆಳೆಯುತ್ತಿರುತ್ತದೆ. ಅಶ್ವತ್ಥರಳೀ ಮರವು ಹಿಂದುಗಳ ಪಾಲಿಗೆ ಬಹಳ ಪವಿತ್ರವಾದ ವೃಕ್ಷವಾಗಿದೆ, ಪುರಾಣ ಕಾಲದಿಂದಲೂ ಇದರ ಮಹತ್ವವನ್ನು ಸಾರಲಾಗಿದೆ.
ಅಶ್ವತ್ಥರಳೀಮರದ ಪ್ರದಕ್ಷಿಣೆ ಹಾಕುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ, ಕಷ್ಟಗಳು ಪರಿಹಾರ ಆಗುತ್ತದೆ ಎಂದು ಆ ವ್ರತವನ್ನು ಪಾಲಿಸಲಾಗುತ್ತದೆ. ಆದರೆ ಇಷ್ಟೆಲ್ಲಾ ಪ್ರಾಮುಖ್ಯತೆ ಇರುವ ದೈವಾಂಶ ಸಂಭೂತ ಅಶ್ವತ್ಥರಳೀ ಮರವು ಇದ್ದಕ್ಕಿದ್ದ ಹಾಗೆ ಮನೆ ಗೋಡೆಗಳ ಮೇಲೆ ಕಾಂಪೌಂಡ್ ಗೋಡೆಗಳ ಮೇಲೆ ಬೆಳೆಯಲು ಶುರು ಆದರೆ ಅದು ಅಶುಭ ಎಂದು ಆಮಂಗಳಕರ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಯಾಕೆಂದರೆ ಇದು ಬಹಳ ಪವಿತ್ರವಾದ ಗಿಡವಾಗಿದೆ. ಇದು ಬೆಳೆಯುವ ಜಾಗದಲ್ಲಿ ವಾತಾವರಣ ಶುದ್ಧಿಯಾಗಿರಬೇಕು, ಗೊತ್ತೋ ಗೋತ್ತಿಲ್ಲದೆಯೋ ನಿಮ್ಮ ಮನೆಯಲ್ಲಿ ಆಗುವ ತಪ್ಪುಗಳಿಂದ ಆಪಚಾರವಾದರೆ ನಿಮಗೆ ಪಿತೃದೋಷ ಉಂಟಾಗುತ್ತದೆ. ಹಾಗಾಗಿ ಅಶ್ವತ್ಥರಳೀಮರ ಮನೆ ಬಳಿ ಬೆಳೆಯುತ್ತಿದ್ದರೆ ಎಚ್ಚರಿಕೆ ವಹಿಸಬೇಕು.
ಅಶ್ವತ್ಥರಳೀ ಮರ ಬೆಳೆಯಲು ಹಲವು ಕಾರಣ ಇರುತ್ತದೆ
ಇದು ಬಹಳ ದೊಡ್ಡದಾದ ಮರ ಆಗಿರುವುದಂತ ಬೇರು ಬಹಳ ದೂರದವರೆಗೆ ಹರಡಿರುತ್ತದೆ ಅದರ ಮೂಲಕ ಬೆಳೆದಿರಬಹುದು ಅಥವಾ ಈ ಮರದ ಹಣ್ಣನ್ನು ಯಾವುದಾದರೂ ಪಕ್ಷಿ ತಿಂದು ಅದರ ಬೀಜವನ್ನು ಉದುರಿಸಿದರೆ ಆ ಕಾರಣದಿಂದಲೂ ಕೂಡ ಬಂದಿರಬಹುದು.
ಇದು ಯಾವ ರೀತಿ ಬಂದಿದ್ದರೂ ಕೂಡ ಗೋಡೆಗಳ ಮೇಲೆ ಬೆಳೆದು ಬೆಳೆಯುತ್ತಾ ಹೋದಂತೆ ಬಿರುಕಾಗುತ್ತದೆ. ಅದೇ ರೀತಿ ಕುಟುಂಬದ ಸದಸ್ಯರ ನಡುವೆ ಒಗ್ಗಟ್ಟು ಹೊಡೆಯುತ್ತದೆ. ಹಣಕಾಸಿನ ಸಮಸ್ಯೆ ಬರುತ್ತದೆ, ಮಾನಸಿಕ ನೆಮ್ಮದಿ ಕೆಡುತ್ತದೆ ಮತ್ತು ಗೃಹದೋಷಗಳು ಉಂಟಾಗಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋದರು ಅದು ಯಶಸ್ವಿಯಾಗುವುದಿಲ್ಲ ಅಥವಾ ನೀವು ತಪ್ಪಾದ ನಿರ್ಧಾರಗಳನ್ನು ತೆಗೆದುಕೊಂಡು ಸಮಸ್ಯೆಗೆ ಸಿಲುಕುತ್ತೀರಿ.
ಆದ್ದರಿಂದ ಈ ಮರವನ್ನು ಮನೆಯ ಬಳಿ ಬೆಳೆಯಲು ಬಿಡಬಾರದು ಹಾಗೆಂದ ಮಾತ್ರಕ್ಕೆ ಇದನ್ನು ಕಿತ್ತು ಬಿಸಾಕುವುದು ಕೂಡ ಬಹಳ ದೊಡ್ಡ ತಪ್ಪು. ಅದನ್ನು ಶಾಸ್ತ್ರೋಕ್ತವಾಗಿ ತೆಗೆದು ಬೇರೆ ಕಡೆ ಬೆಳೆಸಬೇಕು. ಇದನ್ನು ಹೇಗೆ ಮಾಡಬೇಕು ಎಂದರೆ ನೀವು ಅದನ್ನು ತೆಗೆಯಬೇಕು ಎಂದು ಅಂದುಕೊಂಡ ದಿನಕ್ಕಿಂತ 48 ದಿನಗಳ ಹಿಂದೆಯಿಂದಲೇ ಈ ತಯಾರಿ ಶುರು ಆಗಿರಬೇಕು.
ಪ್ರತಿನಿತ್ಯವೂ ಕೂಡ ತಪ್ಪದೆ ಈ ಗಿಡವನ್ನು ಪೂಜಿಸಿ ಪ್ರಾರ್ಥಿಸಿ ಹಾಲನ್ನು ಅರ್ಪಿಸಬೇಕು, 48 ದಿನ ಆದ ಬಳಿಕ ಯಾರಾದರೂ ಅರ್ಚಕರ ಸಹಾಯದಿಂದ ಆ ಗಿಡವನ್ನು ತೆಗೆಸಿ ಅದನ್ನು ಮತ್ತೆ ಬೇರೆ ಯಾವುದಾದರೂ ಶುದ್ಧವಾದ ಜಾಗದಲ್ಲಿ ನಡೆಸಬೇಕು ಮತ್ತು ಅದನ್ನು ನೀವು ಪೂಜಿಸಬೇಕು. ಆಗ ಆ ಗಿಡವು ಬೆಳೆಯುತ್ತಾ ಹೋದಂತೆ ನಿಮ್ಮ ಮನೆಯ ಪರಿಸ್ಥಿತಿಯು ಕೂಡ ಸುಧಾರಿಸಿ ಮನೆ ಏಳಿಗೆ ಆಗುತ್ತದೆ. ಒಂದು ವೇಳೆ ಅರ್ಚಕರು ಸಿಗದೇ ಇದ್ದರೆ ಅವಿವಾಹಿತ ಕನ್ಯೆಯಿಂದ ಕೂಡ ಈ ಕಾರ್ಯ ಮಾಡಿಸಬಹುದು.