ರೈತರಿಗೆ ಉಚಿತ ಮೇವಿನ ಬಿತ್ತನೆ ಬೀಜ ಕಿಟ್ ವಿತರಣೆ.!

 

WhatsApp Group Join Now
Telegram Group Join Now

ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿಯೇ ಇದೆ. ಕಳೆದ ಒಂದು ವರ್ಷದ ಭೀಕರ ಬರಗಾಲದ ಬೇಗೆಯಿಂದ ಬೆಂದ ಜನಕ್ಕೆ ವರುಣನ ಸಿಂಚನ ಹೊಸ ಚೈತನ್ಯ ತಂದಿದ್ದು, ಧರೆ ಕೂಡ ನಸುನಗುತ್ತ ಮತ್ತೆ ಹಸಿರಿನಿಂದ ಗರಿಗೆದರುತ್ತಿದೆ. ಇತ್ತ ರೈತನು ಮತ್ತದೇ ನಂಬಿಕೆ, ಉತ್ಸಾಹದಿಂದ ಕೃಷಿ ಚಟುವಟಿಕೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದಾನೆ ಇದರ ನಡುವೆ ಸರಕಾರದಿಂದ ರೈತರಿಗೆ ಬರ ಪರಿಹಾರದ ಹಣ ಹಾಗೂ ಇನ್ನಿತರ ಯೋಜನೆಗಳ ಅನುಕೂಲತೆಯನ್ನು ತಲುಪಿಸಲಾಗುತ್ತಿದೆ.

ಇದರೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೂ ಕೂಡ ಸರ್ಕಾರದ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಉಚಿತವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಮೇವಿನ ಬಿತ್ತನೆ ಬೀಜದ ಕಿಟ್ ವಿತರಣೆ ಮಾಡಲಾಗುತ್ತಿದೆ. ಇದನ್ನು ಯಾವ ರೈತರು ಪಡೆಯಬಹುದು? ಇದಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು? ಮತ್ತು ಇರುವ ಕಂಡಿಶನ್ ಗಳೇನು? ಎನ್ನುವ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಈ ಸುದ್ದಿ ಓದಿ:- SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

ಕಳೆದ ವರ್ಷದ ಬರಗಾದ ಪರಿಣಾಮದಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಈ ವರ್ಷ ಉಚಿತವಾಗಿ ಮೇವಿನ ಬಿತ್ತನೆ ಬೀಜದ ಕಿಟ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕೇಂದ್ರ ಸರ್ಕಾರದ NLM(Natinal Livestock Mission) ಯೋಜನೆಯಡಿ ಈ ಹಸಿರು ಮೇವಿನ ಬಿತ್ತನೆ ಬೀಜದ ಮಿನಿ ಕಿಟ್ ವಿತರಣೆಯಾಗಿದೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಮಳೆ ಆಶ್ರಿತ ಭೂಮಿ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಈ ಕಿಟ್ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ಹಸು-ಎಮ್ಮೆಗಳ ಆರೋಗ್ಯ ಸುಧಾರಣೆ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ, ಹೆಚ್ಚಿನ ಹಾಲಿನ ಇಳುವರಿ ಮೂಲಕ ಹೈನುಗಾರಿಕೆಯಲ್ಲಿ ರೈತರು ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗಲಿ ಎಂದು ಈ ಹಸಿರು ಮೇವಿನ ಕಿಟ್ ವಿತರಣೆ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟಬೇಕು ಅನ್ನುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್ ನಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಸಾಲ.!

N.D.D.B ಹಾಗೂ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘದ ಮಹಾಮಂಡಳಿ ವತಿಯಿಂದ ರೈತರು ಹಾಲು ಉತ್ಪಾದಕರ ಸಂಘಗಳಿಗೆ ನೀಡುವ ಹಾಲಿನ ಪ್ರಮಾಣದ ಆಧಾರದ ಮೇಲೆ ಬಿತ್ತನೆ ಬೀಜದ ಕಿಟ್ ಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (SHIMUL) ವತಿಯಿಂದ ವಿವಿಧ ಮೇವಿನ ತಳಿಗಳ 3-5 KG ತೂಕದ ಕಿರು ಪೊಟ್ಟಣಗಳನ್ನು ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಿದ್ದೇವೆ.

ಸುಮಾರು 120 ಕೋಟಿ ವೆಚ್ಚದಲ್ಲಿ ಕಿಟ್ ಗಳು ವಿತರಣೆಯಾಗಲಿದೆ ಎನ್ನುವ ವಿಚಾರವನ್ನು ಸ್ವತಃ ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್ ಜಿ ಶೇಖರ್ ಅವರು ಮಾಧ್ಯಮ ಪ್ರಕಟಣೆಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿ:- PUC ಪಾಸಾದವರಿಗೆ 1 ಲಕ್ಷ ವಿದ್ಯಾರ್ಥಿ ವೇತನ, ಆಸಕ್ತರು ಅರ್ಜಿ ಸಲ್ಲಿಸಿ.!

ಶಿಮುಲ್ ಹೊರತುಪಡಿಸಿ ಇತರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತಗಳಲ್ಲೂ ಈ ಯೋಜನೆಯಡಿ ಉಚಿತ ಮೇವಿನ ಬಿತ್ತನೆ ಬೀಜಗಳ ಹಿಟ್ ವಿತರಣೆ ಕಾರ್ಯಕ್ರಮ ಜಾರಿಯಲ್ಲಿ ಇದೆ ಡೈರಿಗಳಿಗೆ ಹಾಲನ್ನು ಕೊಡುವ ರೈತರು ತಮ್ಮ ಹಾಲು ಉತ್ಪಾದಕರ ಸಂಘಗಳಲ್ಲಿ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎನ್ನುವ ಮಾಹಿತಿಯನ್ನು ಕೂಡ ನೀಡಿದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಎಲ್ಲ ರೈತರಿಗೂ ಈ ಯೋಜನೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹೆಚ್ಚಿನ ಜನರೊಡನೆ ಈ ಮಾಹಿತಿಯನ್ನು ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now