ಈ ಹಿಂದಿನ ವರ್ಷಗಳಲ್ಲಿ ಈ ಸಮಯಕ್ಕಾಗಲೇ ಮುಂಗಾರು ಮಳೆ ಬಿದ್ದು ಕೃಷಿ ಚಟುವಟಿಕೆಗಳು ಶುರು ಆಗುತ್ತಿತ್ತು. ಆದರೆ ಈ ಬಾರಿ ಯಾಕೋ ಮುಂಗಾರಿನ ಆಗಮನ ನಿಧಾನವಾಗಿ ಆಗಿದೆ. ಆದರೂ ಬಿದ್ದ ಮಳೆಗೆ ಭೂಮಿಯು ಕೂಡ ಹದವಾಗಿ ನಿಧಾನವಾಗಿ ರೈತರು ಈಗ ಭೂಮಿಯನ್ನು ಕೃಷಿ ಚಟುವಟಿಕೆ ಸಿದ್ದ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ.
ರಾಜ್ಯದ ಎಲ್ಲಾ ಕಡೆಯೂ ಕೂಡ ಮುಂಗಾರಿನ ಕೃಷಿ ಚಟುವಟಿಕೆ ಆರಂಭ ಆಗಿದ್ದು ಮಳೆಯಾಶ್ರಿತ ಪ್ರದೇಶದ ರೈತನ ಮೊಗದಲ್ಲಿ ಸಂತಸ ಮನೆ ಮಾಡಿದೆ. ಬೇಸಿಗೆಯ ಬೇಗೆಯಿಂದ ಹೈರಾಣಾಗಿ ವಿಶ್ರಾಂತಿಯಲ್ಲಿದ್ದ ರೈತನೀಗ ದಿನ ಬೆಳಗೆದ್ದು ಜಮೀನಿಗೆ ಹೋಗುವ ಆತುರದಲ್ಲಿದ್ದಾನೆ. ಕೆಲವೆಡೆ ಈಗಾಗಲೇ ಭೂಮಿ ಉಳುವ ಕೆಲಸ ಕೂಡ ಪೂರ್ಣ ಆಗಿದ್ದು ಬಿತ್ತನೆ ಮಾಡಲು ಬಿತ್ತನೆ ಬೀಜಗಳ ಸಂಗ್ರಹದ ಕೆಲಸ ಜೋರಾಗಿದೆ.
ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಯೋಜನೆಯಡಿ ಹಲವು ವರ್ಷಗಳಿಂದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡುವ ಕೆಲಸ ನಡೆಯುತ್ತಿದೆ. ರೈತನಿಗೆ ಗುಣಮಟ್ಟದ ಬಿತ್ತನೆ ಬೀಜ ಸಮಯಕ್ಕೆ ಸರಿಯಾಗಿ ಸಿಗಬೇಕು ಎನ್ನುವ ಕಾರಣಕ್ಕಾಗಿ ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ಇಲಾಖೆ ಈ ಜವಾಬ್ದಾರಿ ತೆಗೆದುಕೊಂಡಿದೆ.
ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಕೂಡ ಆ ಭಾಗದ ಜನರಿಗೆ ಬೇಕಾದ ಮತ್ತು ರೈತರು ಬೇಡಿಕೆ ಸಲ್ಲಿಸುವ ಸ್ಥಳೀಯ ಬೀಜಗಳನ್ನು ವಿತರಣೆ ಮಾಡುವ ಕೆಲಸ ನಡೆಯುತ್ತಿದೆ, ಅದಕ್ಕಾಗಿ ಅರ್ಹ ರೈತರಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗುತ್ತದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜಕ್ಕಾಗಿ ಅರ್ಜಿ ಸಲ್ಲಿಸಿದ ರೈತರಿಗೆ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜಗಳ ವಿತರಣೆ ಕಾರ್ಯಕ್ರಮವು ಕೂಡ ನಡೆದಿದೆ.
ಅಂತೆಯೇ ಈಗ 2023-24ನೇ ಸಾಲಿನ ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಮಿಷನ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲೂಕಿನ ರೈತರಿಗೆ, ಆ ಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನವಣೆ, ಸಜ್ಜೆ, ಶೇಂಗಾ ಈ ಬೆಳೆಗಳಿಗೆ ಸಂಬಂಧಪಟ್ಟ ಕಿಟ್ ನೀಡಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ.
ಹಾಗಾಗಿ ಆ ಭಾಗದ ರೈತರುಗಳಿಗೆ ಸದರಿ ತಾಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಇದರ ಸಲುವಾಗಿ ಅರ್ಜಿ ಸಲ್ಲಿಸಲು ಕೃಷಿ ಇಲಾಖೆ ಸೂಚಿಸಿದೆ. ಇದರ ಸಂಬಂಧವಾಗಿ ಈಗಾಗಲೇ ಅರ್ಜಿ ಸಲ್ಲಿಸುವ ದಿನಾಂಕ ಆರಂಭವಾಗಿದ್ದು ಜೂನ್ 26ರಿಂದಲೇ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಈ ಸಮಯವನ್ನು ಜುಲೈ 4 ನೇ ತಾರೀಖಿನವರೆಗೆ ಕೂಡ ವಿಸ್ತರಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ರೈತರು ಈ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದು ಇಲಾಖೆಯ ಇಚ್ಛೆಯಾಗಿದೆ. ಒಟ್ಟು ಮೊಳಕಾಲ್ಮೂರು ತಾಲೂಕಿನ 1520 ರೈತರಿಗೆ ಕಿಟ್ ಪಡೆಯುವ ಅವಕಾಶವಿದೆ, ಆದ್ದರಿಂದ ಹೆಚ್ಚಿಗೆ ಅರ್ಜಿ ಸಲ್ಲಿಸಿದರೆ. ಜುಲೈ 6 ರಂದು ಹೋಬಳಿವಾರು ರೈತ ಸಂಪರ್ಕ ಕೇಂದ್ರದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನುವ ವಿಷಯವನ್ನು ಮೊಳಕಾಲ್ಮೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ವಿ.ಸಿ ಉಮೇಶ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆ ಭಾಗದ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಕೊಟ್ಟು ಸಿಬ್ಬಂದಿಗಳಿಂದ ವಿವರವಾದ ಮಾಹಿತಿ ಪಡೆಯಲು ಸೂಚಿಸಿದ್ದಾರೆ. ರೈತರಿಗೆ ಉಪಯುಕ್ತವಾಗಿರುವ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಹೆಚ್ಚಿನ ರೈತರಿಗೆ ಈ ಮಾಹಿತಿ ತಲುಪುವಂತೆ ಮಾಡಿ.