ರಾಜ್ಯದ ಯುವ ಜನತೆಗೆ ಮತ್ತೊಂದು ಉದ್ಯೋಗವಕಾಶ ಸಿಗುತ್ತಿದೆ. ನಿರುದ್ಯೋಗಿಗಳು, ಕೆಲಸ ಬದಲಾಯಿಸಲು ಆಲೋಚಿಸುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕೋಲಾರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಹುದ್ದೆಗಳ ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿವರ ಹೀಗಿದೆ ನೋಡಿ. ತಪ್ಪದೇ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.
ನೇಮಕಾತಿ ಇಲಾಖೆ:- ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 08 ಹುದ್ದೆಗಳು.
ಈ ಸುದ್ದಿ ಓದಿ:- ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!
ಹುದ್ದೆಗಳ ವಿವರ:-
* ಶುಶ್ರೂಷಕಿಯರು ( N.P – N.C.D) – 1
* ಶುಶ್ರೂಷಕಿಯರು (N.P.H.C.E) – 1
* ಶುಶ್ರೂಷಕಿಯರು (N.P.P.C) – 2
* ಜಿಲ್ಲಾ ಕಾರ್ಯಕ್ರಮ ಸಂಯೋಜಕರು – 1
* ಬ್ಲಾಕ್ ಸೋಂಕುಶಾಸ್ತ್ರಜ್ಞರು (ಎಪಿಡೆಮಿಯಾಲಜಿಸ್ಟ್) – 3
ಉದ್ಯೋಗ ಸ್ಥಳ:-
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೋಲಾರ ಜಿಲ್ಲೆಯಲ್ಲಿಯೇ ಕಾರ್ಯ ನಿರ್ವಹಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ:-
1. ಶುಶ್ರೂಷಕಿಯರು
* ಮಾನ್ಯತೆ ಪಡೆದ ಯಾವುದೇ ನರ್ಸಿಂಗ್ ಶಾಲೆಯಲ್ಲಿ GNM ನರ್ಸಿಂಗ್ ಉತ್ತೀರ್ಣರಾಗಿರಬೇಕು
* KNC ನೋಂದಣಿ ಹೊಂದಿರಬೇಕು
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು
* ಸಾರ್ವಜನಿಕ ಆರೋಗ್ಯ ಅಥವಾ ಸರ್ಕಾರದಲ್ಲಿ 02 ವರ್ಷ ಸೇವೆ ಸಲ್ಲಿಸಿರುವ ಅನುಭವ ಹೊಂದಿರಬೇಕು.
2. ಜಿಲ್ಲಾ ಕಾರ್ಯಕ್ರಮ ಸಂಯೋಜಕರು
* MBBS ವಿದ್ಯಾರ್ಹತೆ ಹೊಂದಿರಬೇಕು
(MBBS ಜೊತೆಗೆ ಡಿಪ್ಲೊಮಾ ಅಥವಾ M.ph ಅಥವಾ CHA ಪಡೆದವರಿಗೆ ಆದ್ಯತೆ),
* ಆರೋಗ್ಯ ಸೇವೆಗಳು ಅಥವಾ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಕನಿಷ್ಠ 1 ವರ್ಷದ ಕೆಲಸದ ಅನುಭವ ಹೊಂದಿರಬೇಕು
3. ಬ್ಲಾಕ್ ಸೋಂಕುಶಾಸ್ತ್ರಜ್ಞರು (ಎಪಿಡೆಮಿಯಾಲಜಿಸ್ಟ್)
* ಮೆಡಿಕಲ್ ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.
ವಯೋಮಿತಿ:-
* ಕನಿಷ್ಠ ವಯೋಮಿತಿ 18 ವರ್ಷಗಳು
ಗರಿಷ್ಠ ವಯೋಮಿತಿ
* ಶುಶ್ರೂಷಕಿಯರು ಹುದ್ದೆಗಳಿಗೆ ಗರಿಷ್ಠ 40 ವರ್ಷ
* ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹುದ್ದೆಗಳಿಗೆ ಗರಿಷ್ಠ 35 ವರ್ಷ
* ಬ್ಲಾಕ್ ಸೋಂಕುಶಾಸ್ತ್ರಜ್ಞರು (ಎಪಿಡೆಮಿಯಾಲಜಿಸ್ಟ್) ಹುದ್ದೆಗಳಿಗೆ ಗರಿಷ್ಠ 40 ವರ್ಷ
ಅರ್ಜಿ ಸಲ್ಲಿಸುವ ವಿಧಾನ:-
1. ಸಂದರ್ಶನದ ಮೂಲಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು, ಹಾಗಾಗಿ ನಿಗದಿಪಡಿಸಿದ ದಿನಾಂಕದಂದು ಸ್ಥಳದಲ್ಲಿ ಹಾಜರಿರಬೇಕು
2. ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಓದಿ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೇರ ಸಂದರ್ಶನಕ್ಕೆ ಹಾಜರಾಗಬೇಕು.
3. ಬೇಕಾಗುವ ದಾಖಲೆಗಳು:-
* ಎರಡು ಭಾವಚಿತ್ರಗಳು
* ವಿದ್ಯಾರ್ಹತೆ ಮತ್ತು ವಯೋಮಿತಿಗೆ ಸಂಬಂಧಿಸಿದ 1 ಸೆಟ್ ಜೆರಾಕ್ಸ್ ಪ್ರತಿಗಳು
* ಆಧಾರ್ ಕಾರ್ಡ್
4. ಸಂದರ್ಶನಕ್ಕೆ ಹಾಜರಿರಬೇಕಾದ ವಿಳಾಸ:-
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೆ.ಎನ್.ಟಿ.ಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ,
ಎನ್.ಹೆಚ್.ಎಂ ಸಭಾಂಗಣ,
ಕೋಲಾರ.
5. ದಿನಾಂಕ – ಮಾರ್ಚ್ 12, 2024 ರಂದು ಬೆಳಿಗ್ಗೆ 10.00 ಗಂಟೆಯಿಂದ.
ಆಯ್ಕೆ ವಿಧಾನ:-
* ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ವೆಬ್ ಸೈಟ್ ವಿಳಾಸ – https://kolar.nic.in/en/noticecategory/ recruitment