ನೀವೇನಾದರೂ ಬಿಸಿನೆಸ್ ಆರಂಭಿಸಬೇಕು ಎಂದು ಆಲೋಚಿಸಿದ್ದರೆ ಇಂದು ನಾವು ಈ ಲೇಖನದಲ್ಲಿ ಹೇಳುತ್ತಿರುವ ವಿಷಯ ನಿಮಗೆ ಅನುಕೂಲವಾಗಬಹುದು. ಬಿಸಿನೆಸ್ ಮಾಡುವಾಗ ಇನ್ವೆಸ್ಟ್ಮೆಂಟ್ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಇದು ಈ ಅಂಕಣದಲ್ಲಿ ನಾವು ಒನ್ ಟೈಮ್ ಇನ್ವೆಸ್ಟ್ ಮಾಡಿ ಲೈಫ್ ಲಾಂಗ್ ಲಾಭ ಪಡೆಯಬಹುದಾದ ಒಂದು ಐಡಿಯಾ ಬಗ್ಗೆ ತಿಳಿಸುತ್ತಿದ್ದೇವೆ.
ಈಗ ಯಾವುದೇ ಸಣ್ಣಪುಟ್ಟ ಫಂಕ್ಷನ್ ಆದರೂ ಕೂಡ ಟೆಂಟ್ ಹೌಸ್ ಹಾಕಿಸುತ್ತಾರೆ. ಹುಟ್ಟು ಹಬ್ಬ, ಸೀಮಂತ, ಎಂಗೇಜ್ಮೆಂಟ್, ಮದುವೆ, ಸಮಾವೇಶಗಳು ಶಾಲಾ ಕಾಲೇಜು ಕಚೇರಿ ಕಾರ್ಯಕ್ರಮಗಳು, ತರಬೇತಿಗಳು ಗಣೇಶ ಹಬ್ಬ ಈ ರೀತಿ ಜನ ಸೇರುವ ಕಡೆಗಳಲ್ಲಿ ಶಾಮಿಯಾನದ ಅವಶ್ಯಕತೆ ಇದ್ದೇ ಇರುತ್ತದೆ. ನೀವು ಈ ಬಿಸಿನೆಸ್ ಮಾಡಿದರೆ ಕಡಿಮೆ ಎಂದರೆ ದಿನಕ್ಕೆ ಖರ್ಚು ಕಳೆದು ರೂ.30,000 ದಿಂದ 1 ಲಕ್ಷದವರೆಗೆ ಹಣ ಉಳಿಸಬಹುದು.
ಈ ಮೇಲೆ ತಿಳಿಸಿದಂತೆ ಇತ್ಯಾದಿ ಕಾರ್ಯಕ್ರಮಗಳಿಗೆ ಖಂಡಿತವಾಗಿಯೂ ಶಾಮಿಯಾನ, ಜಮ್ಖಾನ, ಚೇರ್, ಗೆಸ್ಟ್ ಚೇರ್, ಅಡುಗೆ ಪಾತ್ರೆಗಳು, ಫ್ಯಾನ್ ಗಳು, ಟೇಬಲ್ ಗಳು, ಡೆಕೋರೇಷನ್ ಕಂಬಗಳು, ಸ್ಕ್ರೀನ್ ಗಳು ಇತ್ಯಾದಿಗಳ ಅವಶ್ಯಕತೆ ಇದ್ದೇ ಇರುತ್ತದೆ ನೀವು ಇದನ್ನು ಬಾಡಿಗೆ ಕೊಡುವ ಬಿಸಿನೆಸ್ ಮಾಡಿದರೆ ಒಂದು ಬಾರಿ ಇನ್ವೆಸ್ಟ್ ಮಾಡಿ ಇದನ್ನು ಕೊಂಡುಕೊಂಡು ಬಾಡಿಗೆಗೆ ಕೊಟ್ಟು ಹಣ ಸಂಪಾದಿಸಬಹುದು.
ಈ ಸುದ್ದಿ ಓದಿ:- ಈ ಚಿಕ್ಕ ಮಿಷಿನ್ ಇದ್ದರೆ ಸಾಕು, ಪ್ರತಿದಿನ ದುಡ್ಡೆದುಡ್ಡು. ತಿಂಗಳಿಗೆ ರೂ.60,000 ಸಂಪಾದನೆ ಮಷೀನ್ ನ ಬೆಲೆ ರೂ.20,000 ಮಾತ್ರ ಸಿಂಪಲ್ ಬಿಜಿನೆಸ್ ಐಡಿಯಾ..!
ಇದನ್ನು ಹೇಗೆ ಆರಂಭಿಸಬೇಕು ಎಂದರೆ ಮೊದಲಿಗೆ ನೀವು ಒಂದು ಗೋಡನ್ ತೆಗೆದುಕೊಳ್ಳಬೇಕು ಯಾಕೆಂದರೆ ನೀವು ಈ ಎಲ್ಲಾ ಸಾಮಗ್ರಿಗಳನ್ನು ಗೋಡೌನ್ ನಲ್ಲಿ ನೀಟಾಗಿ ಜೋಡಿಸಿಕೊಳ್ಳಬೇಕು ಆಗ ಅವು ಹಾಳಾಗುವುದಿಲ್ಲ ಮತ್ತು ಮೆಂಟೇನೆನ್ಸ್ ನೀಟಾಗಿ ಮಾಡಬಹುದು. ನಿಮ್ಮ ಬಳಿ ಹೆಚ್ಚಾಗಿ ಹಣ ಇದ್ದರೆ ಈ ಎಲ್ಲಾ ಶಾಮಿಯಾನದ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು ಇಲ್ಲವಾದಲ್ಲಿ ಸೆಕೆಂಡ್ ಹ್ಯಾಂಡಲ್ ಖರೀದಿಸಿದರೂ ನಡೆಯುತ್ತದೆ.
ಆದರೆ ಈ ರೀತಿ ಖರೀದಿಸುವಾಗ ಅದರ ಗುಣಮಟ್ಟ ಮತ್ತು ಯಾವ ರೂಪದಲ್ಲಿ ಇದೆ ಇದೆಲ್ಲವನ್ನು ಪರೀಕ್ಷೆ ಮಾಡಿ ನೋಡಿ ಖರೀದಿಸಿ ಜೊತೆಗೆ ನಿಮಗೆ ಇಬ್ಬರು ಕೆಲಸಗಾರರ ಅವಶ್ಯಕತೆಯಂತೂ ಇದ್ದೇ ಇರುತ್ತದೆ ಹಾಗಾಗಿ ಶ್ರದ್ಧೆಯಿಂದ ಕೆಲಸ ಮಾಡುವ ನಂಬಿಕಸ್ಥ ಇಬ್ಬರು ವ್ಯಕ್ತಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಿ. ನೀವು ಆರ್ಡರ್ ತೆಗೆದುಕೊಳ್ಳುವ ಸ್ಥಳಕ್ಕೆ ಈ ಸಾಮಗ್ರಿಗಳನ್ನು ತಲುಪಿಸಲು ಒಂದು ವಾಹನದ ಅವಶ್ಯಕತೆ ಇರುತ್ತದೆ.
ಮೊದಲಿಗೆ ಬಾಡಿಗೆಗೆ ತೆಗೆದುಕೊಂಡು ನಂತರ ಬೇಕಾದರೆ ಸ್ವಂತದ್ದೆ ಕೊಂಡುಕೊಂಡರೆ ಇನ್ನೂ ಉತ್ತಮ. ಇಷ್ಟಿದ್ದರೆ ಸಾಕು ನೀವು ಆರಾಮಾಗಿ ಈ ಬಿಸಿನೆಸ್ ಆರಂಭಿಸಬಹುದು. ಒಂದು ದಿನಕ್ಕೆ ಹಳ್ಳಿಗಳಲ್ಲಿ ಆದರೆ ಕಡಿಮೆ ಎಂದರೂ ರೂ.50,000 ದವರೆಗೆ ಬಿಸಿನೆಸ್ ಆಗುತ್ತದೆ ಅದೇ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ 1 ಲಕ್ಷದಿಂದಲೇ ಬಾಡಿಗೆ ಆರಂಭ ಆಗುತ್ತದೆ.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಾ ಯೋಜನೆಯಲ್ಲಿ ಕೇವಲ 500 ಹೂಡಿಕೆ ಮಾಡಿ ಸಾಕು ನಲ್ಲಿ 47 ಲಕ್ಷ ಸಿಗುತ್ತೆ.!
ನೀವು ಯಾವ ರೀತಿ ಪ್ರಾಡಕ್ಟ್ ಗಳನ್ನು ಇಟ್ಟಿದ್ದೀರಾ ಅದು ಎಷ್ಟು ಯೂನಿಕ್ ಆಗಿದೆ ನಿಮ್ಮ ಪ್ರೆಸೆಂಟೇಷನ್ ಹಾಗೂ ಸರ್ವಿಸ್ ಹೇಗಿದೆ, ಇತ್ಯಾದಿ ಮೇಲೆ ಮಾರ್ಕೆಟಿಂಗ್ ನಿರ್ಧಾರ ಆಗುತ್ತದೆ. ನಿಮ್ಮ ಸ್ನೇಹಿತರು ಸಂಬಂಧಿಕರು ಇವರಿಗೆಲ್ಲ ವಿಷಯ ತಿಳಿಸಬೇಕು ನೀವು ಇರುವ ಸ್ಥಳದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಆದರೆ ನಿಮ್ಮ ಪ್ರಾಡಕ್ಟ್ ಗಳನ್ನು ಕೊಟ್ಟು ಎಲ್ಲರಿಗೂ ಪರಿಚಯಿಸಬೇಕು.
ಲೋಕಲ್ ಚಾನೆಲ್ ಗಳಲ್ಲಿ ಆಡ್ ಕೊಡಬೇಕು, ಪಾಂಪ್ಲೆಟ್ ಮಾಡಿ ಹಂಚಬೇಕು, ವಿಸಿಟಿಂಗ್ ಕಾರ್ಡ್ ಗಳನ್ನು ಕೊಟ್ಟು ಪರಿಚಯ ಮಾಡಿಕೊಳ್ಳಬೇಕು, ಸಾಮಾನ್ಯವಾಗಿ ಮದುವೆ ಮನೆಗೆ ಅಥವಾ ಫಂಕ್ಷನ್ ಗೆ ಅವಶ್ಯಕತೆ ಇರುವ ಅಡುಗೆಯವರು, ಸ್ಟುಡಿಯೋ ಇಂತಹವರ ಕಾಂಟಾಕ್ಟ್ ಕೂಡ ಪಡೆದುಕೊಂಡು ರೆಫರ್ ಮಾಡಿಸಬಹುದು. ಹೀಗೆ ಆರಂಭಿಸಿ ಯಶಸ್ವಿ ಬಿಸಿನೆಸ್ ಮ್ಯಾನ್ ಆಗಬಹುದು ಈ ಐಡಿಯಾ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.