ಮೊದಲೆಲ್ಲಾ ಮಂಡಿ ನೋವನ್ನು ವಯೋ ಸಹಜ ಖಾಯಿಲೆ ಎಂದು ಹೇಳಲಾಗುತ್ತಿತ್ತು. ವಯಸ್ಸಾಗುತ್ತಿತ್ತಂತೆ ದೇಹ ದುರ್ಬಲವಾಗುತ್ತದೆ ಶಕ್ತಿ ಹೀನವಾಗುವುದರಿಂದ ಈ ರೀತಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗಿನ ಕಾಲಮಾನದಲ್ಲಿ 30ರ ಆಸು ಪಾಸಿನವರಲ್ಲೂ ಕೂಡ ಇದು ಬಾಧಿಸುತ್ತಿದೆ.
ಹಾಗಾದರೆ ಈ ರೀತಿ ಮಂಡಿ ನೋವು ಉಂಟಾಗಲು ಕಾರಣ ಏನಿರಬಹುದು ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಯುವಜನತೆಗೆ ಈ ರೀತಿ ಮಂಡಿ ನೋವಿನಿಂದ ಬಳಲುತ್ತಿರುವುದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಖ್ಯಾತ ವೈದ್ಯರೊಬ್ಬರು ನೀಡಿರುವ ಕಾರಣಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ. ಕ್ಯಾಲ್ಸಿಯಂ ಕೊರತೆಯಿಂದ ದೇಹದಲ್ಲಿ ಈ ರೀತಿ ಮೂಳೆ ಹಾಗೂ ಮಂಡಿ ನೋವು ಬರುತ್ತದೆ. ಕ್ಯಾಲ್ಸಿಯಂ ದೇಹಕ್ಕೆ ಹೇಗೆ ಸಿಗುತ್ತದೆ ಎಂದರೆ ನಾವು ಕುಡಿಯುವ ನೀರಿನಲ್ಲಿ ಕ್ಯಾಲ್ಸಿಯಂ ಹಾಗೂ ಇನ್ನಿತರ ಕೆಲವು ಲವಣಗಳು ಮತ್ತು ನಾವು ಸೇವಿಸುವ ಆಹಾರದಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಇರುತ್ತವೆ.
ಆದದೆ ಇತ್ತೀಚಿನ ದಿನಗಳಲ್ಲಿ ಪ್ಯೂರಿಫೈ ವಾಟರ್ ಗಳನ್ನು ಮಾರಾಟ ಮಾಡುತ್ತಾ ಇರುವುದರಿಂದ ಎಲ್ಲರೂ ಆ ನೀರು ಶುದ್ಧವಾಗಿದೆ ಎಂದು ಕುಡಿಯುತ್ತಾರೆ, ಆದರೆ ಅದು ಶುದ್ಧವಾದ ನೀರು ಎನ್ನುವುದಕ್ಕಿಂತ ಅಸಿಡಿಕ್ ವಾಟರ್ ಎನ್ನಬಹುದು ಅದರಲ್ಲಿ ಎಲ್ಲಾ ರೀತಿಯ ಲವಣಗಳನ್ನು ಕೂಡ ತೆಗೆದಿರಲಾಗುತ್ತದೆ.
ದೇಹಕ್ಕೆ ನೀರು ಕಿಡ್ನಿ ಫಿಲ್ಟರ್ ಮಾಡುವುದಕ್ಕೆ ಇನ್ನಿತರ ಕಾರಣಗಳಿಗೆ ಬೇಕು. ಅದು ವರ್ಕ್ ಆಗಬೇಕು ಎಂದರೆ ಅದರೊಂದಿಗೆ ಲವಣಾಂಶಗಳು ಇರಬೇಕು. ಆಗ ಅದು ದೇಹದಲ್ಲಿರುವ ಲವಣಾಂಶಗಳನ್ನೇ ಹೀರಿಕೊಳ್ಳಲು ಶುರುಮಾಡುತ್ತದೆ. ಆಹಾರ ಪದಾರ್ಥಗಳಿಂದ ಈಗಾಗಲೇ ಸೇರಿರುವ ಕ್ಯಾಲ್ಸಿಯಂ ಹಾಗೂ ಇನ್ನಿತರ ಲವಣಾಂಶಗಳನ್ನು ಹೀರಿಕೊಳ್ಳುವುದರಿಂದ ದೇಹಕ್ಕೆ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ ಇದರಿಂದ ಮಂಡಿ ನೋವು ಬರುತ್ತದೆ.
ವಿಟಮಿನ್ ಡಿ ಕ್ಯಾಲ್ಸಿಯಂ ಪ್ರಮಾಣವನ್ನು ನಿಯಂತ್ರಿಸುವುದಕ್ಕೆ ದೇಹಕ್ಕೆ ಅವಶ್ಯಕ ಆದರೆ ಇತ್ತೀಚಿನ ದಿನಗಳಲ್ಲಿ ಯಾರು ಬಿಸಿಲಿಗೆ ಹೋಗದ ಕಾರಣ ಇದು ಸಹ ಒಂದು ಕಾರಣವಾಗಿದೆ. ಈ ವಿಚಾರವಾಗಿ ಮತ್ತೊಂದು ಮುಖ್ಯವಾದ ಅಂಶವೇನೆಂದರೆ ಕೆಲವರು ದೇಹದ ಯಾವುದಾದರೂ ಒಂದು ಅಂಗಕ್ಕೆ ಹಾನಿಯಾದಾಗ ಅದನ್ನು ಸರಿಪಡಿಸಿಕೊಳ್ಳುವುದರ ಬದಲು ಅದು ಅಗತ್ಯವಿಲ್ಲದ ಅಂಗ ಎಂದು ಅದನ್ನು ತೆಗಿಸುತ್ತದೆ.
ಉದಾಹರಣೆಗೆ ಪಿತ್ತಕೋಶ ಹಾಳಾದಾಗ ಅದನ್ನು ಚಿಕಿತ್ಸೆಗೆ ಒಳಗಾಗುವುದರ ಬದಲು ಆಪರೇಷನ್ ಮಾಡಿಸಿಕೊಂಡು ಅದು ಬೇಡದೆ ಇರುವ ಅಂಗ ಎಂದು ತೆಗಿಸುತ್ತಾರೆ. ಹಾಗೆಯೇ ಅಪೆಂಡಿಕ್ಸ್, ಗರ್ಭಕೋಶ ಇವುಗಳಿಗೆ ಸ್ವಲ್ಪ ಸಮಸ್ಯೆ ಆಗಲು ತೆಗೆಸುತ್ತಾರೆ. ನಮ್ಮ ದೇಹದಲ್ಲಿ ಕಾಲಿನ ಕಿರುಬೆರಳು, ಕಿವಿಯ ಕೆಳ ತುದಿ ಇವುಗಳಿಂದ ನಮಗೆ ಹೆಚ್ಚಿಗೆ ಪ್ರಯೋಜನಕ್ಕೆ ಇಲ್ಲ ಹಾಗೆಂದು ಇವುಗಳನ್ನು ತೆಗೆಸುವುದು ಎಷ್ಟು ಸರಿ, ದೇಹದಲ್ಲಿ ಈಗಾಗಲೇ ಏನೆಲ್ಲ ರಚನೆಯಾಗಿದೆ ಅದಕ್ಕೆಲ್ಲ ಒಂದು ಕಾರಣ ಇದ್ದೆ ಇರುತ್ತದೆ.
ಚಿಕಿತ್ಸೆಗೆ ಒಳಪಡುವುದರಿಂದ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಒಂದೇ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಸಮಸ್ಯೆ ಇರುವ ಭಾಗವನ್ನೇ ತೆಗೆಸಿ ಬಿಡುವುದರಿಂದ ಅದು ಇಡೀ ದೇಹದ ಮೆಟಬಾಲಿಸಂ ಮೇಲೆ ಪ್ರಭಾವ ಬೀರುತ್ತದೆ ಇಂತಹ ತಪ್ಪುಗಳಿಂದ ಮಾಡುವುದರಿಂದ ಕೂಡ ಮಂಡಿ ನೋವಿನಂತಹ ಸಮಸ್ಯೆ ಉಂಟಾಗುತ್ತದೆ.
ಇನ್ನೊಂದು ಕಾರಣವೇನೆಂದರೆ ಯಾವಾಗಲೂ ಅತಿ ಹೆಚ್ಚು ಯೋಚನೆಯಲ್ಲಿ ಇರುವವರು, ಕೊರಗುತ್ತಾ ಇರುವವರು, ನೆಗೆಟಿವ್ ಮೈಂಡ್ ಸೆಟ್ ನಲ್ಲಿ ಇರುವವರೂ ಇವರಿಗೂ ಈ ಕಾಯಿಲೆಗಳು ಸರ್ವೇಸಾಮಾನ್ಯ. ಹಾಗಾಗಿ ದೇಹದ ಆರೋಗ್ಯ ಉತ್ತಮವಾಗಿರಬೇಕು ಎಂದು ಬಯಸುವವರು ಯಾವಾಗಲೂ ಖುಷಿಯಾಗಿರಬೇಕು.