1 ಲಕ್ಷ ಬಡ್ಡಿ ಸಿಗಬೇಕು ಅಂದ್ರೆ ನೀವು ಎಷ್ಟು ಹೂಡಿಕೆ ಮಾಡಬೇಕು ಗೊತ್ತಾ.? ಇಲ್ಲಿದೆ ನೋಡಿ‌ ನಿಮ್ಮ ಹಣವನ್ನು ದುಪ್ಪಟ್ಟು ಮಾಡುವ ವಿಧಾನ

 

WhatsApp Group Join Now
Telegram Group Join Now

ನೀವು ಈಗ ದುಡಿಯುವ ವಯಸ್ಸಲ್ಲಿ ಇದ್ದೀರಾ ಎಂದರೆ ನಿಮ್ಮ ದುಡಿಮೆಯ ಕನಿಷ್ಠ 30% ಆದರೂ ಉಳಿತಾಯ (Saving) ಮಾಡಲೇಬೇಕು ಎಂದು ಹೇಳುತ್ತಾರೆ ಆರ್ಥಿಕ ತಜ್ಞರು. ನಮಗೆ ಬರುವ ಸಂಬಳ ಅಥವಾ ಇನ್ಯಾವುದೇ ಆದಾಯದಿಂದ ನಮ್ಮ ತಿಂಗಳ ಎಲ್ಲಾ ಖರ್ಚನ್ನು ಕಳೆದು ಸ್ವಲ್ಪವಾದರೂ ಹಣವನ್ನು ಉಳಿಸುತ್ತಾ ಬಂದರೆ ಅದು ಭವಿಷ್ಯದಲ್ಲಿ ನಿಮ್ಮ ಯಾವುದಾದರೂ ಕನಸಿಗೆ ಅಥವಾ ಅನಿವಾರ್ಯ ಸಂದರ್ಭಗಳಲ್ಲೂ ಅನುಕೂಲಕ್ಕೆ ಬರುತ್ತದೆ.

ಈ ರೀತಿ ನಾವು ಉಳಿಸುವ ಹಣವು ಉಳಿತಾಯವಾಗಿ ಇಡುವ ಬದಲು ಹೂಡಿಕೆ ಮಾಡಿದರೆ ಅದರ ಮೇಲೂ ಕೂಡ ನಾವು ಲಾಭ ಪಡೆಯಬಹುದು. ಆ ಹಣವನ್ನು ಮನೆಯಲ್ಲಿ ಉಳಿಸುತ್ತೇವೆ ಎಂದರೆ ಅಸಾಧ್ಯ ಹಾಗಾಗಿ ಹಣಕ್ಕೆ ಭದ್ರತೆ ಹಾಗೂ ಲಾಭ ಕೊಡುವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಈ ರೀತಿ ಹೂಡಿಕೆ ಮಾಡುವವರು ಮ್ಯೂಚುವಲ್ ಫಂಡ್ಸ್, ಸ್ಟಾಕ್ ಮಾರ್ಕೆಟ್ ಅಥವಾ ಬ್ಯಾಂಕ್ ಗಳ ಯೋಜನೆಗಳನ್ನು ಆರಿಸುತ್ತಾರೆ.

ಗೋಡೆ ಅಥವಾ ಮನೆ ಮೇಲೆ ಈ ಗಿಡ ಬೆಳೆದಿದೆಯಾ.? ಗಿಡ ಕಿತ್ತು ಹಾಕುವ ಮುನ್ನ ಈ ವಿಷಯ ತಪ್ಪದೆ ತಿಳ್ಕೋಳಿ.!

ಇವುಗಳಲ್ಲಿ ಮ್ಯೂಚುವಲ್ ಫಂಡ್ ಹಾಗೂ ಸ್ಟಾಕ್ ಮಾರ್ಕೆಟ್ ನಲ್ಲಿ ನಾವು ಹೂಡಿಕೆ ಮಾಡಿದ ಹಣಕ್ಕೆ ನಿಶ್ಚಿತ ಲಾಭದ ಖಾತರಿ ಅಥವಾ ಭದ್ರತೆ ಇರದ ಕಾರಣ ಬ್ಯಾಂಕ್ ಗಳೇ ಉತ್ತಮ ಆಪ್ಷನ್. ಅದರಲ್ಲೂ ರಾಷ್ಟ್ರೀಕೃತ ಬ್ಯಾಂಕ್ ಗಳಾದರೆ 5 ಲಕ್ಷದವರೆಗೆ RBIನ DICGC ಇನ್ಸೂರೆನ್ಸ್ ಕವರೇಜ್ ಸಿಗುತ್ತದೆ.

ಹಾಗಾದರೆ ಪ್ರತಿ ತಿಂಗಳು ಯಾವ ರೀತಿ ಹಣವನ್ನು ಹೂಡಿಕೆ ಮಾಡಬಹುದು ಎಂದರೆ ರಿಕ್ಯೂರಿಂಗ್ ಡೆಪಾಸಿಟ್ ಅಕೌಂಟ್ (Recurring deposit) ಓಪನ್ ಮಾಡುವ ಮೂಲಕ ಪ್ರತಿ ತಿಂಗಳು ನಾವು ಅದರಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ನೋಡಿ.

ತಿಂಗಳಿಗೆ 1,000 ಕಟ್ಟಿದ್ರೆ 1 ಕೋಟಿ ಗ್ಯಾರಂಟಿ, ನೀವಿನ್ನೂ ಟರ್ಮ್ ಇನ್ಶುರೆನ್ಸ್ ಮಾಡಿಸಿಲ್ವಾ.? ಇವತ್ತೇ ಮಾಡಿಸಿ, ನಿಮ್ಮ ಕುಟುಂಬ ಸೇಫ್ ಆಗಿರುತ್ತೆ.!

● ಈ RD ಯೋಜನೆಯಲ್ಲಿ 100 ರೂ. ಇಂದ ಹೂಡಿಕೆ ಮಾಡಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ.
● ಮೆಚ್ಯುರಿಟಿ ಅವಧಿ ಆರು ತಿಂಗಳು. 1, 2, 5 ಮತ್ತು 10 ವರ್ಷ ಇರುತ್ತದೆ. ನಿಮ್ಮ ಅನುಕೂಲತೆಯ ಸಮಯ ಆರಿಸಿಕೊಂಡು ನೀವು ಯೋಜನೆ ಆರಂಭಿಸುವ ವೇಳೆ ಚೂಸ್ ಮಾಡಿದ ಮೊತ್ತದಷ್ಟು ಪ್ರತಿ ತಿಂಗಳು ಹೂಡಿಕೆ ಮಾಡಬೇಕು.

● ಒಂದು ವೇಳೆ ನೀವು 5 ವರ್ಷ ಆರಿಸಿದ್ದೀರಿ ಎಂದರೆ, 5 ವರ್ಷ ಮುಗಿದ ಬಳಿಕ ನೀವು ಹೂಡಿಕೆ ಮಾಡಿದ ಹಣದ ಜೊತೆಗೆ ಆ ಬ್ಯಾಂಕ್ ಎಷ್ಟು ಬಡ್ಡಿದರ ನಿಗದಿ ಮಾಡಿತ್ತು ಅಷ್ಟು ಲಾಭದ ಜೊತೆ ಒಟ್ಟು ಹಣ ನಿಮಗೆ ಬರುತ್ತದೆ.
● ನೀವೇನಾದರೂ ಸೀನಿಯರ್ಸ್ ಸಿಟಿಜನ್ ಹೆಸರಿನಲ್ಲಿ ಈ ಯೋಜನೆಯಡಿ ಹೂಡಿಕೆ ಮಾಡಿದರೆ ಸಾಮಾನ್ಯ ದರಕ್ಕಿಂತ ಹೆಚ್ಚು ಬಡ್ಡಿದರ ಅನ್ವಯವಾಗುತ್ತದೆ.

ಮೊಡವೆ, ಕಪ್ಪು ಕಲೆ ಇದ್ದರೆ ಎರಡು ದಿನ ಇದನ್ನು ಹಚ್ಚಿ ಸಾಕು, ಫುಲ್ ಗ್ಲೋ ಬರುತ್ತದೆ, ಕಪ್ಪು ಕಲೆ ನಿವಾರಣೆ ಆಗುತ್ತೆ.! ವೈದ್ಯರ ಸಲಹೆ ಒಮ್ಮೆ ಟ್ರೈ ಮಾಡಿ ನೋಡಿ 100% ಫಲಿತಾಂಶ.!

● ಆದರೆ ಈ ಯೋಜನೆಯಡಿ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ರೀತಿಯ ತೆರಿಗೆ ವಿನಾಯಿತಿ ಇರುವುದಿಲ್ಲ. ನೀವು 40,000 ಕ್ಕಿಂತ ಹೆಚ್ಚು ಬಡ್ಡಿದರ ಪಡೆದದ್ದಾಗದಲ್ಲಿ ನಿಮಗೆ ಟ್ಯಾಕ್ಸ್ ಅನ್ವಯವಾಗುತ್ತದೆ.
● ನೀವು ಪ್ರತಿ ತಿಂಗಳು ಬ್ಯಾಂಕಿಗೆ ಹೋಗಿ ಪಾವತಿ ಮಾಡಬಹುದು ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಅಥವಾ ಅಕೌಂಟ್ ನಿಂದ ಆಟೋಮೆಟಿಕ್ ಡಿಡಕ್ಷನ್ ಆಗಿ ಹಣ ಡೆಪಾಸಿಟ್ ಆಗುವ ಆಯ್ಕೆಯನ್ನು ಚೂಸ್ ಮಾಡಬಹುದು.

● ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ
● ಭಾರತದಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲೂ ಕೂಡ RD ಯೋಜನೆಯಿದೆ. ನೀವು ಚೂಸ್ ಮಾಡುವ ಅವಧಿಗೆ ಬಡ್ಡಿದರ ನಿಗದಿ ಆಗುತ್ತದೆ 6.2% – 7.25% ವರೆಗೂ ಈ ಯೋಜನೆಗೆ ಬ್ಯಾಂಕ್ ಗಳಲ್ಲಿ ಬಡ್ಡಿ ದರ ಸಿಗುತ್ತದೆ.
● ಅಂಚೆ ಕಚೇರಿಯಲ್ಲಿ ಕೂಡ ಈ ಯೋಜನೆಯನ್ನು ಖರೀದಿಸಬಹುದು ಆದರೆ ಕಡ್ಡಾಯವಾಗಿ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. 6.50% ಬಡ್ಡಿ ಅನ್ವಯ ಆಗುತ್ತದೆ, ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕೃತವಾಗುತ್ತಿರುತ್ತದೆ.

ಗೃಹಲಕ್ಷ್ಮಿ ಯೋಜನೆ 2000 ಸಹಾಯಧನ ಪಡೆಯಲಿರುವ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಎರಡನೇ ಕಂತಿನ ಹಣ.!

● ನೀವೇನಾದರೂ 1 ಲಕ್ಷ ಬಡ್ಡಿದರ ಸಿಗಬೇಕು ಎಂದರೆ 5 ವರ್ಷಗಳವರೆಗೆ ಪ್ರತಿ ತಿಂಗಳು ಕೂಡ 10,000 ಹೂಡಿಕೆ ಮಾಡಬೇಕಾಗುತ್ತದೆ. ಆಗ ನೀವು ಹೂಡಿಕೆ ಮಾಡಿದ ಮೊತ್ತ 6 ಲಕ್ಷವಾಗಿರುತ್ತದೆ, ನಿಮಗೆ 7% ಬಡ್ಡಿ ಅನ್ವಯವಾಗಿದ್ದರೆ 1,19,325ರೂ. ಬಡ್ಡಿ ಸಿಗುತ್ತದೆ ಒಟ್ಟಾರೆಯಾಗಿ ನಿಮಗೆ ಐದು ವರ್ಷ ಮುಗಿದ ಬಳಿಕ 7,19,325ರೂ. ಸಿಗುತ್ತದೆ.
● ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿನ ಬ್ಯಾಂಕ್ ಅಥವಾ ಅಂಚೆಕಛೇರಿ ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now