ತಂದೆ ತಾಯಿಯ ಆಸ್ತಿಯಲ್ಲಿ ಮಕ್ಕಳಿಗೆ ಯಾವ ರೀತಿ ಹಕ್ಕು ಇರುತ್ತದೆ ಎನ್ನುವುದನ್ನು ಭಾರತದ ಕಾನೂನು ವಿವರಿಸಿದೆ. ಹಿಂದೂ ಉತ್ತರಾಧಿಕತ್ವದ ಕಾಯಿದೆ ಪ್ರಕಾರ ಒಬ್ಬ ತಂದೆಯ ಆಸ್ತಿಯಲ್ಲಿ ಮಕ್ಕಳು ಹುಟ್ಟಿದಾಗಿನಿಂದಲೇ ಅಧಿಕಾರ ಹೊಂದಿರುತ್ತಾರೆ. ಆದರೆ ಅದು ತಂದೆಗೆ ಪಿತ್ರಾರ್ಜಿತವಾಗಿ ಬಂದಿದ್ದ ವಂಶ ಪಾರಂಪರ್ಯವಾದ ಆಸ್ತಿ ಆಗಿದ್ದರೆ ಮಾತ್ರ
ಒಂದು ವೇಳೆ ತಂದೆಯು ಸ್ವಯಾರ್ಜಿತವಾಗಿ ಯಾವುದಾದರೂ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅವರ ನಂತರ ಅವರ ಆಸ್ತಿ ಯಾರಿಗೆ ಹೋಗಬೇಕು ಎಂದು ಅವರೇ ನಿರ್ಧಾರ ಮಾಡಬಹುದು, ಇದರಲ್ಲಿ ಅವರ ತೀರ್ಮಾನವೇ ಅಂತಿಮವಾಗಿರುತ್ತದೆ ಅವರು ಬದುಕಿರುವಾಗಲೇ ಅದನ್ನು ಬೇರೆಯವರಿಗೆ ಕೊಡಬಹುದು ಅಥವಾ ಅವರ ಮ’ರ’ಣದ ಯಾರಿಗೆ ಹೋಗಬೇಕು ಎಂದು ವೀಲ್ ಮಾಡಿಸಿ ಇಟ್ಟಿರಬಹುದು.
ಒಬ್ಬ ತಂದೆಯು ತಾನು ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದ ಆಸ್ತಿಯನ್ನು ಆತನ ಹೆಂಡತಿಗೆ ವೀಲ್ ಮಾಡಿ ಹೋಗಿದ್ದರ, ಆಗ ಆತನ ಮಕ್ಕಳಿಗೆ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ. ಆ ಸಂಪೂರ್ಣ ಆಸ್ತಿಗೆ ವ್ಯಕ್ತಿಯ ನಂತರ ಆತನ ಹೆಂಡತಿಯೇ ವಾರಸುದಾರಳಾಗಿರುತ್ತಾಳೆ. ಆದರೆ ಮಕ್ಕಳು ತಾಯಿಯ ಒಪ್ಪಿಗೆ ಪಡೆದು ಮಾತ್ರ ಆ ವೀಲ್ ನಲ್ಲಿ ಬದಲಾವಣೆ ಮಾಡೀಸಬಹುದು, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ.
ಈ ರೀತಿ ಆಸ್ತಿ ಹಂಚಿಕೆ ವಿಚಾರವಾಗಿ ಕಾನೂನಿನಲ್ಲಿ ಅನೇಕ ನಿಯಮಗಳಿವೆ. ಈಗ ತಾಯಿ ವೀಲ್ ಮಾಡಿದ ಪತ್ರವನ್ನು ಬದಲಾಯಿಸಲು ಅನುಮತಿ ಕೊಟ್ಟಿಲ್ಲ ಎಂದರೆ ಮಕ್ಕಳಿಗೆ ಆ ಅವಕಾಶವೇ ಬರುವುದಿಲ್ಲ ಆ ಸಮಯದಲ್ಲಿ ಮಕ್ಕಳಿಗೆ ಆಸ್ತಿಯ ಹಕ್ಕು ತಾಯಿಯ ಮ’ರ”ಣದ ನಂತರ ಮಾತ್ರ ಇರುತ್ತದ. ಆ ತಾಯಿಯ ಮಡಿದ ನಂತರ ಆಕೆಯ ಎಲ್ಲಾ ಮಕ್ಕಳಿಗೂ ಆಸ್ತಿ ಮೇಲೆ ಸಮಾನ ಹಕ್ಕು ಬರುತ್ತದೆ.
ಒಂದು ವೇಳೆ ಅದು ತಂದೆಯ ಸ್ವಯಾರ್ಜಿತ ಆಸ್ತಿ ಆಗಿದ್ದರೂ ಕೂಡ ತಂದೆಯು ಅದನ್ನು ಯಾರ ಹೆಸರಿಗೂ ಮಾಡಿಕೊಡದೆ ಅಥವಾ ಅದನ್ನು ಮಾರಾಟ ಕೂಡ ಮಾಡದೆ ತಮ್ಮ ನಂತರ ಆಸ್ತಿ ಹಕ್ಕು ಯಾರಿಗೆ ಹೋಗಬೇಕು ಅದರ ವಾರಸುದಾರರು ಯಾರಾಗಬೇಕು ಎನ್ನುವುದನ್ನು ವೀಲ್ ಕೂಡ ಮಾಡದೆ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ತಾಯಿ ಹಾಗೂ ಮಕ್ಕಳು ಸಮಾನವಾದ ಅಧಿಕಾರವನ್ನು ಹೊಂದಿರುತ್ತಾರೆ.
ಇನ್ನು ಅವಿವಾಹಿತ ವ್ಯಕ್ತಿ ಒಬ್ಬನ ಆಸ್ತಿ ಹಕ್ಕಿನ ಕುರಿತು ಹೇಳುವುದಾದರೆ ಅವಿವಾಹಿತ ವ್ಯಕ್ತಿ ಕೂಡ ತಾನು ಸಂಪಾದನೆ ಮಾಡಿದ ಸ್ವಯಾರ್ಜಿತ ಆಸ್ತಿಗೆ ಅಥವಾ ತಮ್ಮ ನಂತರ ಯಾರು ವಾರಸುದಾರರು ಆಗಬೇಕು ಎನ್ನುವುದನ್ನು ವೀಲ್ ಬರೆಸಿ ಇಡಬಹುದು ಅಥವಾ ತಾವು ಜೀವಂತ ಇದ್ದಾಗಲೇ ಅದನ್ನು ಯಾರಿಗೆ ಬೇಕಾದರೂ ಕೊಡಬಹುದು ಇದನ್ನು ಕೇಳುವ ಹಕ್ಕು ಅವರ ಯಾವ ವಾರಸುದರರಿಗೂ ಇರುವುದಿಲ್ಲ.
ಒಂದು ವೇಳೆ ಅವಿವಾಹಿತ ವ್ಯಕ್ತಿಯು ಈ ರೀತಿ ಯಾವುದೇ ವೀಲ್ ಮಾಡದೆ ತೀ’ರಿ’ಕೊಂ’ಡ ಸಂದರ್ಭದಲ್ಲಿ ಆತನಿಗೆ ಸೇರುವ ಸ್ವಯಾರ್ಜಿತ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಎಲ್ಲದರಲ್ಲೂ ಆತನ ಸಹೋದರ, ಸಹೋದರಿಯರಿಗೆ ಮತ್ತು ತಾಯಿಗೆ ಅಧಿಕಾರ ಇರುತ್ತದ. ಈ ರೀತಿ ಭಾರತದ ಕಾನೂನು ಆಸ್ತಿ ಹಕ್ಕಿನ ಕುರಿತು ತಿಳಿಸುತ್ತದೆ ಈ ವಿಚಾರದ ಬಗ್ಗೆ ಯಾವುದೇ ರೀತಿ ಗೊಂದಲ ಇದ್ದರೂ ಕೂಡ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಪ್ರಶ್ನೆಗಳನ್ನು ಕೇಳಿ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.