ಪರ್ಸನಲ್ ಐಡೆಂಟಿಫಿಕೇಶನ್ ಎನ್ನುವ ವಿಚಾರದಲ್ಲಿ DNA ಟೆಸ್ಟ್ ಹೆಚ್ಚು ಚರ್ಚೆಯಲ್ಲಿ ಇರುತ್ತದೆ. ಈ DNA ಟೆಸ್ಟ್ ಮಾಡುವುದರಿಂದ ನಿಖರವಾಗಿ ಆ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಬಹುದು, ಅ’ಪ’ರಾ’ಧ’ಗಳನ್ನು ಪತ್ತೆ ಹಚ್ಚುವಾಗ ಮತ್ತು ಕೌಟುಂಬಿಕ ಕ’ಲ’ಹ’ಗಳ ಸಮಯದಲ್ಲಿ ಕೂಡ ಅನೇಕ ಬಾರಿ DNA ಪರೀಕ್ಷೆ ಎನ್ನುವ ವಿಚಾರವನ್ನು ನಾವು ಕೇಳಿರುತ್ತೇವೆ.
ಹಾಗಾದರೆ ನಿಜಕ್ಕೂ DNA ಟೆಸ್ಟ್ ಎಂದರೇನು? ಇದಿಷ್ಟೇ ಅಲ್ಲದೆ ಎಲ್ಲೆಲ್ಲಿ DNA ಟೆಸ್ಟ್ ಮಾಡಿಸುವ ಅವಶ್ಯಕತೆ ಇರುತ್ತದೆ ಮತ್ತು DNA ಟೆಸ್ಟ್ ಹೇಗೆ ಮಾಡುತ್ತಾರೆ? DNA ಟೆಸ್ಟ್ ನಲ್ಲಿ ನಿಖರವಾಗಿ ವ್ಯಕ್ತಿಯೋರ್ವನ ಮಾಹಿತಿಯನ್ನು ಬಿಚ್ಚಿಡುವ ಸೈನ್ಸ್ ಏನು ಎನ್ನುವ ವಿಚಾರದ ಬಗ್ಗೆ ನಿವೃತ್ತ ಫೋರೆನ್ಸಿಕ್ ತಜ್ಞ ವಿ.ಜಿ ನಾಯಕ್ ಅವರು ಸಂದರ್ಶನ ಒಂದರಲ್ಲಿ ತಮ್ಮ ವೃತ್ತಿ ಜೀವನದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.
ಅವರು ಹೇಳಿರುವ ಪ್ರಕಾರವಾಗಿ ಅನೇಕ ಸಂಗತಿಗಳಲ್ಲಿ DNA ಟೆಸ್ಟ್ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ಹಿಟ್ ಅಂಡ್ ರನ್ ಕೇಸ್ ನಲ್ಲಿ ಸಿಲುಕಿರುತ್ತಾನೆ ಎಂದುಕೊಳ್ಳೋಣ ಆ ವ್ಯಕ್ತಿಯು ಕಾರಿನಲ್ಲಿ ನಾನು ಇರಲೇ ಇಲ್ಲ ನನ್ನ ಡ್ರೈವರ್ ಇದ್ದ ಎಂದು ಹೇಳಿದಾಗ ಏರ್ ಬ್ಯಾಗ್ ಓಪನ್ ಆದಾಗ ಆಗಿರುವ ಬ್ಲಸ್ಟ್ ನಿಂದ ಕೂಡ ಕಾರ್ ನಲ್ಲಿ ಯಾರು ಇದ್ದರು ಎನ್ನುವುದನ್ನು ಕಂಡುಹಿಡಿಯಬಹುದು.
ಇದು ಮಾತ್ರವಲ್ಲದೆ IPL ಸಮಯದಲ್ಲೊಮ್ಮೆ 5 ಬಾಂಬ್ ಸ್ಪೋಟದ ಬಗ್ಗೆ ಕರೆ ಬಂದಿರುತ್ತದೆ. ಇದರಲ್ಲಿ ಎರಡು ಸ್ಪೋಟವಾದರೆ ಮೂರು ಸ್ಫೋಟವಾಗಿರುವುದಿಲ್ಲ ಆ ಮೂರನ್ನು ತೆಗೆದು ನೋಡಿದಾಗ ಒಂದರಲ್ಲಿ ಎರಡು ಕೂದಲುಗಳು ಇರುತ್ತವೆ. ಆ ಕೂದಲನ್ನ ಮಾಹಿತಿಯನ್ನು ಸಂಗ್ರಹಿಸಿ ಫೈಲ್ ಮಾಡಿ ಇಟ್ಟ ಐದಾರು ವರ್ಷಗಳಾದ ಮೇಲೆ ಅದಕ್ಕೆ ಮ್ಯಾಚ್ ಆಗುವ ಅಪರಾಧಿ ಮತ್ತೊಂದು ಅಪರಾಧದಲ್ಲಿ ಸಿಲುಕೊಳ್ಳುತ್ತಾನೆ. ಆಗ ಪ್ರಕರಣಕ್ಕೆ ತಿರುವು ಸಿಗುತ್ತದೆ.
ವರ್ಡ್ ಟ್ರೇಡ್ ಸೆಂಟರ್ ಅಥವಾ ರೈಲು ದುರಂತ ಇತ್ಯಾದಿಗಳಲ್ಲಿ ಕಂಪ್ಲೀಟ್ ಆಗಿ ವ್ಯಕ್ತಿ ಕುರುಹು ಸಿಗದಂತೆ ವ್ಯಕ್ತಿ ಸುಟ್ಟು ಹೋದಾಗ DNA ಟೆಸ್ಟ್ ಮಾಡಿ ಮೂಲಕ ಆತನ ಕುಟುಂಬಸ್ಥರಿಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ ಆ ವ್ಯಕ್ತಿಯ DNA ಸಿಗದಿದ್ದರೆ ತಂದೆ ಅಥವಾ ತಾಯಿಯ DNA ಸಿಕ್ಕಿದರೆ ಅದರಿಂದ ಮಕ್ಕಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಅಥವಾ ಮಕ್ಕಳ DNA ಇಂದ ಪೋಷಕರನ್ನು ಪತ್ತೆ ಹಚ್ಚಬಹುದು.
ಬಹಳ ಇಂಟರೆಸ್ಟಿಂಗ್ ವಿಚಾರ ಏನೆಂದರೆ ನೂರಕ್ಕೆ ನೂರರಷ್ಟು ನಿಖರವಾಗಿ DNA ಟೆಸ್ಟ್ ನಲ್ಲಿ ಕಂಡುಹಿಡಿಯಬಹುದು. ಆದರೆ ಐಡೆಂಟಿಕಲ್ ಟ್ವಿನ್ಸ್ ಗಳಲ್ಲಿ ಮಾತ್ರ ಇದು ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭಗಳು ಇದ್ದರೆ ಅವರ ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ. ಯಾಕೆಂದರೆ ಟ್ವಿನ್ಸ್ ಗಳ DNA ಒಂದೇ ರೀತಿ ಇರುತ್ತದೆ ಆದರೆ ಅವರ ಫಿಂಗರ್ಪ್ರಿಂಟ್ ಬೇರೆ ಬೇರೆ ಆಗಿರುತ್ತದೆ.
DNA ಎನ್ನುವುದರಲ್ಲಿ ಮಿಲಿಯನ್ ಗಟ್ಟಲೇ ವೇರಿಯೇಶನ್ ಇರುತ್ತದೆ. ಹೇಗೆಂದರೆ ಈಗ 0 ಸೊನ್ನೆಯಿಂದ 9ರ ತನಕ ಇರುವ 9 ಡಿಜಿಟ್ ನಿಂದ ಎಷ್ಟೆಲ್ಲಾ ಮೊಬೈಲ್ ಸಂಖ್ಯೆಗಳನ್ನು ಸೃಷ್ಟಿಸುತ್ತೇವೆ. ಆದರೆ ಒಬ್ಬರ ಬಳಿ ಇರುವ ನಂಬರ್ ಮತ್ತೊಬ್ಬರ ಬಳಿ ಇರುವುದಿಲ್ಲ. ಅದೇ ರೀತಿ ಬಿಲಿಯನ್ ಗಟ್ಟಲೆ ವೇರಿಯೇಶನ್ ಇದ್ದರು ಮಾನವರೆಲ್ಲರ DNA 99.99% ಒಂದೇ ರೀತಿ ಇರುತ್ತದೆ. ಇನ್ನು 0.1% ನಲ್ಲಿ ಮಾತ್ರ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸಗಳು ಸಿಗುವುದು ವಿಜ್ಞಾನದ ವಿಸ್ಮಯ. ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.