ಚೆಕ್ ಬೌನ್ಸ್ ಕೇಸ್ ನಲ್ಲಿ ಹಣ ಕಟ್ಟಲು ಆಗದಿದ್ದರೆ ಏನು ಮಾಡಬಹುದು.! ಬ್ಯಾಂಕ್ ಸಾಲ ಮನ್ನಾ ರೀತಿ ಕೋರ್ಟ್ ಸಾಲ ಮನ್ನ ಮಾಡುತ್ತ.?

 

WhatsApp Group Join Now
Telegram Group Join Now

ಚೆಕ್ ಬೌನ್ಸ್ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಕೇಳಿ ಬರುತ್ತಿರುವ ಪ್ರಕರಣಗಳಾಗಿವೆ, ಅದೇನೆಂದರೆ ವೈಯಕ್ತಿಕವಾಗಿ ಅಥವಾ ವ್ಯಾಪಾರ ವಹಿವಾಟು ಮಾಡುವಾಗ ಒಬ್ಬ ವ್ಯಕ್ತಿಯಿಂದ ನೀವು ಪಡೆದುಕೊಂಡ ಸರಕು ಅಥವಾ ಸೇವೆಗೆ ನಗದು ಹಣದ ಬದಲು ಚೆಕ್ ನೀಡಿರುತ್ತೀರಿ. ನಿಮ್ಮ ಖಾತೆಯಲ್ಲಿ ಹಣ ಇದೆ ಎನ್ನುವ ನಂಬಿಕೆ ಮೇಲೆ ಅವರು ನಿಮ್ಮಿಂದ ಚೆಕ್ ತೆಗೆದುಕೊಂಡು ಹೋಗಿ ಅದನ್ನು ಅವರ ಬ್ಯಾಂಕ್ ಅಕೌಂಟಿಗೆ ಹಾಕಲು ಹೋಗುತ್ತಾರೆ.

ಆ ಸಮಯದಲ್ಲಿ ನಿಮ್ಮ ಖಾತೆಯಲ್ಲಿ ಹಣ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಕೆಲವೊಮ್ಮೆ ಗೊತ್ತಿಲ್ಲದೆ ನಿಮ್ಮ ಕಡೆಯಿಂದ ತಪ್ಪಾಗಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಅಕೌಂಟ್ ಕ್ಲೋಸ್ ಮಾಡಿ ಹಣ ಅವರಿಗೆ ತಲುಪದಂತೆ ಮಾಡಿರಬಹುದು ಅಥವಾ ಇನ್ನೇನೆ ಆಗಿರಬಹುದು ಇಂತಹ ಸಮಯದಲ್ಲಿ ಮತ್ತೆ ಬಂದು ಅವರು ನಿಮ್ಮನ್ನು ಹಣ ಕೇಳಿದಾಗ ನೀವು ಒಪ್ಪಿಕೊಂಡು ಸರಿಯಾಗಿ ರೆಸ್ಪಾನ್ಸ್ ಮಾಡದೇ ಇದ್ದರೆ ಖಂಡಿತವಾಗಿಯೂ ಲಾಯರ್ ಮೂಲಕ ನೋಟಿಸ್ ಕಳುಹಿಸುತ್ತಾರೆ.

ನೀವು ಆ ನೋಟಿಸ್ ಒಳಗೆ ನೀಡಿರುವ ಸಮಯದೊಳಗೆ ಸರಿಯಾದ ಪ್ರತಿಕ್ರಿಯೆ ನೀಡದಿದ್ದಾಗ ಕೋರ್ಟ್ ಗೆ ಹೋಗಿ ಕೇಸ್ ದಾವೆ ಹೂಡುತ್ತಾರೆ. ಕೋರ್ಟ್ ನಲ್ಲಿ ಕೇಸ್ ದಾಖಲಾದ ಮೇಲೆ ಖಂಡಿತವಾಗಲು ಇಬ್ಬರು ಕೋರ್ಟ್ ಗೆ ಅಲೆದಾಡಬೇಕು.

ನೀವು ನಿಮಗೆ ಬರುವ ತೀರ್ಪಿನ ಮೇಲೆ ಅಪಿಲ್ ಹೋಗಬಹುದು ಅದರಲ್ಲೂ ಆರಂಭಿಕ ಹಂತದಲ್ಲಿ ನೀವು ಕೇಸ್ ಹೇಗೆ ನಡೆಸಿಕೊಂಡು ಹೋಗುತ್ತೀರಾ ಎನ್ನುವುದರ ಮೇಲೆ ಜಡ್ಜ್ಮೆಂಟ್ ನಿಮ್ಮ ಪರವಾಗಿ ಬರುತ್ತದೆಯೋ ಅಥವಾ ನಿಮಗೆ ಶಿಕ್ಷೆ ಆಗುತ್ತದೆಯೋ ಎನ್ನುವುದು ಡಿಸೈಡ್ ಆಗುತ್ತಾ ಹೋಗುತ್ತದೆ.

ಒಂದು ವೇಳೆ ನೀವು ಖಂಡಿತವಾಗಿಯೂ ತಪ್ಪಿತಸ್ಥರಾಗಿದ್ದರೆ ನೀವು ಹಣ ಕಟ್ಟುವದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಕೋರ್ಟ್ ಒಂದು ಬಾರಿ ರಿಪೋರ್ಟ್ ಮಾಡಿದರೆ ಅದನ್ನು ಪ್ರಾಸೆಕ್ಯೂಟ್ ಮಾಡುತ್ತದೆ. ಆದರೆ ನಿಮಗೆ ಕೊಟ್ಟಿರುವ ಶಿಕ್ಷೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡಲು ಪ್ರಯತ್ನಿಸಬಯಹುದು ಅಷ್ಟೇ.

ನೀವು ಅಪಿಲ್ ಹಾಕಿದರೂ ಕೂಡ ಕೇಸ್ ಎರಡರಿಂದ ಮೂರು ವರ್ಷ ಎಳೆಯುತ್ತದೆ ಜೊತೆಗೆ ನಿಮ್ಮ ಆಪೋಸಿಟ್ ಪಾರ್ಟಿ ಕೇಸ್ ನಡೆಸುತ್ತಾರೆ ಎಂಬುದು ಕೂಡ ನಿಮ್ಮ ಸೋಲು ಗೆಲುವನ್ನು ನಿರ್ಧಾರ ಮಾಡುತ್ತದೆ. ಚೆಕ್ ಬೌನ್ಸ್ ಪ್ರಕರಣದಡಿ ನಿಜವಾಗಿಯೂ ಮೋಸ ಮಾಡಿದ್ದಾರೆ ಎನ್ನುವುದು ಸಾಬೀದಾದರೆ ಹಣ ಕಟ್ಟಲು ಸ್ವಲ್ಪ ಕಾಲಾವಕಾಶ ಮಾಡಿಕೊಡುತ್ತಾರೆ ಹೊರತು ಒಂದು ಬಾರಿ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಕನ್ವೆನ್ಷನ್ ಆರ್ಡರ್ ಬಂತು ಎಂದರೆ ಯಾವುದೇ ಕಾರಣಕ್ಕೂ ಅದನ್ನು ರದ್ದು ಮಾಡುವುದಿಲ್ಲ.

ಶಿಕ್ಷೆ ನಿಧಾನಕ್ಕೆ ಆಗಬಹುದು ಆದರೆ ತಪ್ಪುವುದಿಲ್ಲ. ನೀವು ಸ್ವತಃ ಜಡ್ಜ್ ಬಳಿ ಹೋಗಿ ಇಂತಹ ದಿನ ಹಣ  ಕಟ್ಟುತ್ತೇನೆ ಎಂದು ಅವರಿಗೆ ರಿಕ್ವೆಸ್ಟ್ ಮಾಡಿಕೊಂಡು ಸಮಯವಕಾಶವನ್ನು ಕೇಳಿಕೊಳ್ಳಬಹುದು. ಇಂತಹ ಕೇಸ್ ಗಳಲ್ಲಿ ಕೆಲವೊಮ್ಮೆ ನಿಮ್ಮ ಪ್ರಾಪರ್ಟಿ ಅಟ್ಯಾಚ್ಮೆಂಟ್ ಕೂಡ ಇರುತ್ತದೆ ಅಥವಾ ಆಗಲೂ ನಿಮ್ಮ ಹೆಸರಿನಲ್ಲಿ ಜಮೀನು ಇರದೇ ನೀವು ಸುಳ್ಳು ದಾಖಲೆ ಕೊಟ್ಟಿರುವುದು ಕಂಡು ಬಂದರೆ ಶಿಕ್ಷೆ ಆಗುತ್ತದೆ.

ಅಥವಾ ನೀವೇ ನಿಮ್ಮ ಹತ್ತಿರ ಏನು ಇಲ್ಲ ನೀವೊಬ್ಬ ನಿರ್ಗತಿಕ ಎಂದು ಕೋರ್ಟು ನಲ್ಲಿ ಸಾಬೀತು ಮಾಡಿಕೊಳ್ಳಬೇಕಾಗುತ್ತದೆ. ನೀವು ಹೀಗೆ ಮಾಡುವುದರಿಂದ ಸ್ವಲ್ಪ ದಿನಗಳ ಕಾಲ ಹಣ ಹಿಂತಿರುಗಿಸಲು ಹೆಚ್ಚಿನ ಸಮಯ ಸಿಗಬಹುದು ಹೊರತು ಯಾವುದೇ ಕಾರಣಕ್ಕೂ ಹಣ ಕಟ್ಟುವುದರಿಂದ ತಪ್ಪಿಸಲು ಆಗುವುದಿಲ್ಲ.

ಈ ರೀತಿ ಕೋರ್ಟ್ ಗೆ ಕೇಸ್‌ ಗಳಿಗೆ ಅಲೆಯುವಾಗ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ನಮ್ಮ ಕೆಲಸ ಕಾರ್ಯಗಳು ಕೂಡ ಕೆಡುತ್ತವೆ ಮತ್ತು ಕೋರ್ಟ್ ನಲ್ಲಿ ಡಿಪೋಸಿಟ್ ಕೂಡ ಕಟ್ಟಬೇಕು. ಇವುಗಳ ಬದಲು ನಿಮ್ಮ ಮೇಲೆ ಕೇಸ್ ಹಾಕಿದವರ ಜೊತೆ ಮಾತುಕತೆ ಮೂಲಕ ಸಮಯಾವಕಾಶವನ್ನು ಕೇಳಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದು ಬಹಳ ಒಳ್ಳೆಯ ಆಪ್ಷನ್ ಎನ್ನುವುದು ಅನೇಕರ ಅಭಿಪ್ರಾಯ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now