ವಾಟ್ಸಪ್ ಈಗ ಕೇವಲ ಸಂದೇಶ ಹಾಗೂ ಕರೆ ಮತ್ತು ವಿಡಿಯೋ ಕಾಲಿಂಗ್ ಗೆ ಮಾತ್ರವಲ್ಲದೆ ಇನ್ನು ಅನೇಕ ಫೀಚರ್ಸ್ ಗಳಿಂದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚಿನ ಜನರು ಉಪಯೋಗಿಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವ ವಾಟ್ಸಾಪ್ ಮೂಲಕ ಈಗ ಹಣಕಾಸಿನ ವಹಿವಾಟುಗಳನ್ನು ಕೂಡ ಬ್ಯಾಂಕ್ ಗಳ ನೆರವಿನೊಂದಿಗೆ ಮುಂದುವರೆಸಬಹುದು.
ಕಳೆದ ತಿಂಗಳಷ್ಟೇ ಮೆಟಾ (Meta) ಮಾಲೀಕತ್ವದ ವಾಟ್ಸಪ್ಪ್ ಅಪ್ಲಿಕೇಶನ್ (Whatsapp) ಈ ಒಂದು ಅನುಕೂಲತೆ ಮಾಡಿಕೊಟ್ಟಿದೆ. ಇದರ ಜೊತೆಗೆ ವೈಯಕ್ತಿಕ ವಿಷಯವಾಗಿ ಕೂಡ ಅನೇಕ ಅನುಕೂಲತೆಗಳನ್ನು ಹೊಂದಿರುವ ಇದು ವಾಣಿಜ್ಯ ವಹಿವಾಟುಗಳಿಗೂ ಕೂಡ ವೇದಿಕೆಯಾಗಿ ಬದಲಾಗುತ್ತಿದ್ದು, ಇನ್ನು ಮುಂದೆ ವಾಟ್ಸಾಪ್ ಮೂಲಕ ಹಣಕಾಸಿನ ವಹಿವಾಟು ಮಾತ್ರ ಬರುವುದೇ ಕೆಲ ಸೇವೆಗಳನ್ನು ಕೂಡ ಪಡೆಯಬಹುದಾಗಿದೆ.
ಗ್ಯಾಸ್ ಸಿಲೆಂಡರ್ ಬುಕ್ (Gas Cylinder Booking) ಮಾಡುವುದಕ್ಕಾಗಿ ಕೂಡ ನೀವು ಇನ್ನು ಮುಂದೆ ವಾಟ್ಸಾಪ್ ಬಳಕೆ ಮಾಡಬಹುದು. ಈ ಹಿಂದೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು ಎಂದರೆ ಏಜೆನ್ಸಿ ನಂಬರ್ಗೆ ಕರೆ ಮಾಡಿ ಅವರು ಹೇಳುವ ನಿಯಮಗಳನ್ನು ಪಾಲಿಸಿ ನಿಮ್ಮ ಕಸ್ಟಮರ್ ಐಡಿ ಸಂಖ್ಯೆಗಳನ್ನು ಪರೀಕ್ಷಿಸಿ.
ಕೊನೆಗೆ ಬುಕ್ಕಿಂಗ್ ಆಪ್ಷನ್ ಗೆ ಹೇಳಿದ ಸಂಖ್ಯೆ ಒತ್ತಬೇಕಿತ್ತು. ಇದಕ್ಕೆ ಸಾಕಷ್ಟು ಸಮಯ ಕೂಡ ಹಿಡಿಯುತ್ತಿತ್ತು ಆದರೆ ಇನ್ನು ಮುಂದೆ ಸುಲಭವಾಗಿ ನಿಮಿಷಗಳಲ್ಲಿ ವಾಟ್ಸಪ್ ಮೂಲಕ ಗ್ಯಾಸ್ ಬುಕಿಂಗ್ ಮಾಡಿಕೊಳ್ಳಬಹುದು ಇದಕ್ಕೆ ತಕ್ಕ ಹಾಗೆ ಟೆಕ್ನಾಲಜಿ ಕೂಡ ಡೆವಲಪ್ ಮಾಡಲಾಗಿದೆ ಅನೇಕರು ಈಗಾಗಲೇ ಇದನ್ನು ಬಳಸುತ್ತಿದ್ದಾರೆ.
ನಿಮಗೆ ಇನ್ನೂ ಸಹ ವಾಟ್ಸಪ್ ಮೂಲಕ ಗ್ಯಾಸ್ ಬುಕಿಂಗ್ ಮಾಡುವುದು ಹೇಗೆ ಎನ್ನುವ ವಿಧಾನ ತಿಳಿಯದಿದ್ದರೆ ಈಗ ನಾವು ಹೇಳುವ ಈ ವಿಧಾನಗಳನ್ನು ಪಾಲಿಸಿ ವಾಟ್ಸಾಪ್ ಮೆಸೇಜ್ ಮೂಲಕ ನಿಮ್ಮ ಮನೆಯ ಗ್ಯಾಸ್ ಬುಕಿಂಗ್ ಮಾಡಿ .
1. INDIAN Gas ಗ್ರಾಹಕರು:-
* ಇಂಡೆನ್ ಗ್ಯಾಸ್ (indane Gas) ನ್ನು ವಾಟ್ಸಪ್ ಮೂಲಕ ಬುಕ್ ಮಾಡಿಕೊಳ್ಳಲು, 7588888824 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ ಅಥವಾ ವಾಟ್ಸಪ್ ನಲ್ಲಿ ಈ ಸಂಖ್ಯೆಯನ್ನು ಟೈಪ್ ಮಾಡಿ ಅದಕ್ಕೆ BOOK ಅಥವಾ REFILL ಎಂದು ಟೈಪ್ ಮಾಡಿ ಸಂದೇಶ ಕಳುಹಿಸಿ.
*ನೀವು ಸಂದೇಶ ಕಳುಹಿಸುತ್ತಿದ್ದಂತೆ ನಿಮಗೆ ಗ್ಯಾಸ್ ಯಾವಾಗ ಮನೆ ಬಾಗಿಲಿಗೆ ಬರುತ್ತದೆ ಎನ್ನುವ ದಿನಾಂಕದ ಜೊತೆಗೆ ಬುಕಿಂಗ್ ವಿವರ ಸಮೇತ ರಿಪ್ಲೈ ಕೂಡ ಬರುತ್ತದೆ
* ನೀವು ನಿಮ್ಮ ಗ್ಯಾಸ್ ಬುಕಿಂಗ್ ಸ್ಟೇಟಸ್ ತಿಳಿದುಕೊಳ್ಳಲು ಈ ಮೇಲೆ ತಿಳಿಸಿದ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಆರ್ಡರ್ ಸಂಖ್ಯೆಯನ್ನು ಮತ್ತೊಮ್ಮೆ ಮೆಸೇಜ್ ಮಾಡಿದರೆ, ಸ್ಟೇಟಸ್ ಏನಾಗಿದೆ ಎನ್ನುವುದರ ರಿಪ್ಲೈ ಮೆಸೇಜ್ ನ್ನು ಪಡೆಯುತ್ತೀರಿ.
2. HP ಗ್ರಾಹಕರಿಗಾಗಿ:-
* HP ಗ್ಯಾಸ್ ಬುಕಿಂಗ್ ಮಾಡಲು ನೀವು ನಿಮ್ಮ ವಾಟ್ಸಪ್ ನಲ್ಲಿ 9222201122 ಈ ಸಂಖ್ಯೆಗೆ ಸಂದೇಶ ಕಳುಹಿಸಬೇಕು.
* ನೀವು ಸಂದೇಶ ಕಳುಹಿಸಿದ ಕೆಲವೇ ಸೆಕೆಂಡ್ ಗಳಲ್ಲಿ ನಿಮಗೆ ಬುಕಿಂಗ್ ದಿನಾಂಕದ ಜೊತೆಗೆ ನೀವು ಬುಕಿಂಗ್ ಮಾಡಿರುವುದರ ವಿವರ ಸಮೇತ ರಿಪ್ಲೈ ಬರುತ್ತದೆ. ನಿಮ್ಮ ಬುಕಿಂಗ್ ಆರ್ಡರ್ ನಂಬರ್ ನ್ನು ಮತ್ತೊಮ್ಮೆ ಇದೇ ಸಹಾಯವಾಣಿ ಸಂಖ್ಯೆಗೆ ಮೆಸೇಜ್ ಮಾಡಿದರೆ ಅದರ ಸ್ಟೇಟಸ್ ಏನಾಗಿದೆ ಎಂದು ರಿಪ್ಲೈ ಬರುತ್ತದೆ
3. BHARATH GAS ಗ್ರಾಹಕರಿಗಾಗಿ:-
* ನೀವು ಭಾರತ್ ಗ್ಯಾಸ್ ಗ್ರಾಹಕರಾಗಿದ್ದರೆ ಗ್ಯಾಸ್ ಖಾಲಿಯಾದ ತಕ್ಷಣ ಬುಕಿಂಗ್ ಮಾಡಿಕೊಳ್ಳಲು 7718955555 ಈ ನಂಬರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ತಕ್ಷಣ ನಿಮಗೆ ಗ್ಯಾಸ್ ಸಿಲೆಂಡರ್ ಡೆಲಿವರಿ ಯಾವಾಗ ಎನ್ನುವ ವಿವರ ದಿನಾಂಕ ಹಾಗೂ ಆರ್ಡರ್ ಸಂಖ್ಯೆ ಸಮೇತ ರಿಪ್ಲೈ ಬರುತ್ತದೆ.
* ಆರ್ಡರ್ ಸಂಖ್ಯೆಯನ್ನು ಇದೇ ಸಹಾಯವಾಣಿ ಸಂಖ್ಯೆಗೆ ಕಳುಹಿಸಿದರೆ ಸ್ಟೇಟಸ್ ವಿವರ ಕೂಡ ರಿಪ್ಲೈ ಬರುತ್ತದೆ.