ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಾ ಇರುವವರಿಗೆ ಸರ್ಕಾರದ ವತಿಯಿಂದಲೇ ಸಿಹಿ ಸುದ್ದಿ ಇದೆ. ನೀವು ಸರ್ಕಾರದ ಭಾಗವಾಗಿ ಉದ್ಯೋಗ ಮಾಡುವ ಅವಕಾಶ ನಿಮ್ಮನ್ನು ಹರಸಿ ಬರುತ್ತಿದೆ. ನೀವೇನಾದರೂ ಬೆಂಗಳೂರಿನಲ್ಲಿದ್ದರೆ ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದರೆ ತಪ್ಪದೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (BESCOM) ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯಕ್ಕೆ ಸೇರಿದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಕುರಿತಾದ ಪ್ರಕಟಣೆ ಹೊರ ಬಿದ್ದಿದ್ದು ಆಸಕ್ತರಿಗಾಗಿ ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳಾದ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಉದ್ಯೋಗ ಸಂಸ್ಥೆ:- ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM)
ಹುದ್ದೆಯ ವಿಧ:- ಅಪ್ರೆಂಟಿಸ್
ಒಟ್ಟು ಹುದ್ದೆಗಳ ಸಂಖ್ಯೆ:- 400 ಹುದ್ದೆಗಳು
ಹುದ್ದೆಗಳ ವಿವರ:-
* ಪದವೀಧರ ಅಪ್ರೆಂಟಿಸ್ – 325
* ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸ್ – 75
ವೇತನ ಶ್ರೇಣಿ:-
* ಪದವೀಧರ ಅಪ್ರೆಂಟಿಸ್ – 9,000
* ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸ್ – 8,000
ಶೈಕ್ಷಣಿಕ ವಿದ್ಯಾರ್ಹತೆ:-
* ಪದವೀಧರ ಅಪ್ರೆಂಟಿಸ್ ಹುದ್ದೆಗಳನ್ನು ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯಿಂದ BE / B.Tec ಪದವಿಯನ್ನು ಪಡೆದಿರಬೇಕು.
* ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸ್ ಹುದ್ದೆಗಳನ್ನು ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ 3 ವರ್ಷಗಳ ಡಿಪ್ಲೋಮೋ ಕೋರ್ಸ್ ಉತ್ತೀರ್ಣರಾಗಿರಬೇಕು.
* ಅಭ್ಯರ್ಥಿಯು ಕನಿಷ್ಠ ಉತ್ತೀರ್ಣ ಅಂಕಗಳನ್ನು ಗಳಿಸಿ ಪದವಿ/ ಡಿಪ್ಲೋಮಾವನ್ನು ಫೆಬ್ರವರಿ-2019 ಹಾಗೂ ಅದರ ನಂತರ 2020, 2021, 2022 ಮತ್ತು ಅಕ್ಟೋಬರ್ 2023ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು.
ತರಬೇತಿ ಅವಧಿ:- 1 ವರ್ಷ
ವಯೋಮಿತಿ:-
* ಆರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಮೆರಿಟ್ ಆಧಾರದ ಮೇಲೆ ಲಿಸ್ಟ್ ತಯಾರಿಸಲಾಗುತ್ತದೆ.
* ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಇರುತ್ತದೆ
* ಆನಂತರ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತ ಅರ್ಹ ಅಭ್ಯರ್ಥಿಗಳು ನೇರವಾಗಿ ಮೊದಲು nats.education.gov.in ಈ ವೆಬ್ ಸೈಟ್ ಗೆ ಭೇಟಿ ಕೊಡಬೇಕು
* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವೈಯಕ್ತಿಕ ವಿವರಗಳನ್ನು ತುಂಬಿಸಲು ಸೂಚಿಸಲಾಗಿರುತ್ತದೆ ಕೇಳಿರುವ ರೀತಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇನ್ನಿತರ ಪ್ರಮುಖ ಮಾಹಿತಿಯನ್ನು ತಪ್ಪಾಗದಂತೆ ಸರಿಯಾಗಿ ಭರ್ತಿ ಮಾಡಿ
* ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸಬೇಕಾದ ಅವಶ್ಯಕತೆ ಇಲ್ಲ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ, ಪಡೆದುಕೊಳ್ಳಿ ಮುಂದಿನ ಹಂತದಲ್ಲಿ ಇದು ನಿಮಗೆ ಅಗತ್ಯ ದಾಖಲೆಯಾಗಿರುತ್ತದೆ.
ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾದ ವಿಳಾಸ:-
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್, ಹೆಚ್.ಆರ್.ಡಿ. ಸೆಂಟರ್,
1ನೇ ಮಹಡಿ, ಕ್ರೆಸೆಂಟ್ ಟವರ್ಸ್,
ಕ್ರೆಸೆಂಟ್ ರಸ್ತೆ, ಮಲ್ಲಿಗೆ ನರ್ಸಿಂಗ್ ಹೋಮ್ ಹತ್ತಿರ,
ರೇಸ್ ಕೋರ್ಸ್,
ಬೆಂಗಳೂರು – 560001.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 11, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 31, 2023
* ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಲಿಸ್ಟ್ ಘೋಷಣೆ – ಜನವರಿ 08, 2024
* ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ – ಜನವರಿ 22, 2024 ರಿಂದ ಜನವರಿ 24, 2024.