ಪೋಸ್ಟ್ ಆಫೀಸ್ (Post office) ಈಗ ಬರೀ ಅಂಚೆ ವ್ಯವಹಾರಕ್ಕೆ ಮಾತ್ರವಲ್ಲದೆ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ನಾಗರಿಕರಿಗೆ ಆಯಾ ಗ್ರಾಮದಲ್ಲಿಯೇ ಅಂಚೆ ಸೌಲಭ್ಯ ಸಿಗುವುದರಿಂದ ಬ್ಯಾಂಕ್ ಗಳಷ್ಟೇ ಪೋಸ್ಟ್ ಆಫೀಸ್ ಗಳು ಕೂಡ ಜನಸಾಮಾನ್ಯರಿಗೆ ಹತ್ತಿರವಾಗಿದೆ.
ಜೊತೆಗೆ ಕೇಂದ್ರ ಸರ್ಕಾರವು ಘೋಷಿಸುವ ಉಳಿತಾಯ ಯೋಜನೆಗಳಿಗೆ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವ ತಮ್ಮ ಹಣಕ್ಕೆ ಖಚಿತ ಭದ್ರತೆ ಜೊತೆಗೆ ನಿಶ್ಚಿತ ಲಾಭವನ್ನು ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರಿಗಾಗಿ ಕೂಡ ಯೋಜನೆಗಳನ್ನು ರೂಪಿಸಲಾಗಿದೆ.
ಹೆಣ್ಣು ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಮಾಸಿಕ ಆದಾಯ ಬಳಸುವವರು ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ವಿಧದಾದ ಹೂಡಿಕೆ ಯೋಜನೆಗಳು ಪ್ರಸ್ತುತವಾಗಿ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ. ಇದರಲ್ಲಿ ಒಂದು ವಿಚಾರವಾಗಿ ಈಗ ಸರ್ಕಾರವು ಸಿಹಿ ಸುದ್ದಿ ಕೊಟ್ಟಿದೆ. ಅದೇನೆಂದರೆ, 2023ರ ಕೇಂದ್ರ ಬಜೆಟ್ (Central government budjet 2023) ಘೋಷಣೆಯಾದ ಸಂದರ್ಭದಲ್ಲಿ
ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಗೆ (Post Office Monthly Income Scheme) ಇದ್ದ ಮಿತಿಯನ್ನು ಹೆಚ್ಚಿಸಿ ಅನುಕೂಲ ಮಾಡಿಕೊಟ್ಟಿದೆ. ಒಂದೇ ಬಾರಿಗೆ ಇದರ ಗರಿಷ್ಠ ಮಿತಿಯನ್ನು ದುಪ್ಪಟ್ಟು ಮಾಡುವ ಮೂಲಕ ಜನಸಾಮಾನ್ಯರಿಗೆ ನೇರವಾಗಿ ಲಾಭವನ್ನು ಹೆಚ್ಚಳ ಮಾಡಿದೆ. ಇದುವರೆಗೂ ಕೂಡ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರು ಗರಿಷ್ಠ 4.5ಲಕ್ಷದವರೆಗೆ ಹೂಡಿಕೆ ಮಾಡಬಹುದಿತ್ತು ಆದರೆ ಈಗ ಈ ಮಿತಿ 9 ಲಕ್ಷದವರೆಗೆ ಇದೆ.
ಜಂಟಿಯಾಗಿ ಈ ಯೋಜನೆ ಖರೀದಿಸಲು ಬಯಸಿದರೆ 15 ಲಕ್ಷ ಗರಿಷ್ಠ ಮಿತಿವರೆಗೆ ಹೂಡಿಕೆ ಮಾಡಬಹುದು. 10 ವರ್ಷ ಮೇಲ್ಪಟ್ಟ ವಯಸ್ಸಿನ ಭಾರತೀಯ ನಾಗರಿಕರಾದ ಯಾರು ಬೇಕಾದರೂ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಡಿ ಹೂಡಿಕೆ ಮಾಡಬಹುದು.
ಈ ಯೋಜನೆಗೆ 7.1% ಬಡ್ಡಿದರ ಅನ್ವಯವಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿದರವು ಪರಿಷ್ಕೃತಗೊಳ್ಳುತ್ತಿರುತ್ತದೆ. ಇದು 5 ವರ್ಷಗಳ ಯೋಜನೆಯಾಗಿದ್ದು, ಈ ಯೋಜನೆಗೆ ಬರುವ ಬಡ್ಡಿ ರೂಪದ ಲಾಭವನ್ನು ಪ್ರತಿ ತಿಂಗಳು ಅಥವಾ ಮೂರು ತಿಂಗಳು ಅಥವಾ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಹಿಂಪಡೆಯಬಹುದು.
ಒಂದು ವೇಳೆ ನೀವು ವರ್ಷಗಳವರೆಗೆ ಈ ಹಣವನ್ನು ಹಿಂಪಡೆಯದಿದ್ದರೆ ಆ ಬಡ್ಡಿರೂಪದ ಆಧಾರದ ಮೇಲೆ ಹೆಚ್ಚಿನ ಲಾಭಗಳು ಉಂಟಾಗುವುದಿಲ್ಲ ಹಾಗಾಗಿ ಪ್ರತಿ ತಿಂಗಳು ಇದನ್ನು ಪಡೆದು ಮತ್ತೊಂದು ಯೋಜನೆಯಲ್ಲಿ ಹೂಡಿಕೆ ಮಾಡುವುದು ಅಥವಾ ದೈನಂದಿಕ ಖರ್ಚು ವೆಚ್ಚಗಳಿಗೆ ಬಳಸುವುದೇ ಉತ್ತಮ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.
5 ವರ್ಷಗಳ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಹೂಡಿಕೆ ಹಣವನ್ನು ಹಿಂಪಡೆಯಬಹುದು ಮತ್ತು ನಾಮಿನಿ ಫೆಸಿಲಿಟಿ ಕೂಡ ಲಭ್ಯವಿರುತ್ತದೆ. ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಹಿರಿಯ ನಾಗರಿಕರಿಗೆ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು ಹಣ ಪಡೆಯಲು ಬೆಸ್ಟ್ ಯೋಜನೆಯಾಗಿದೆ ಮತ್ತು ದೂರದ ಊರುಗಳಿಗೆ ಹೋಗಿ ಓದುವ ವಿದ್ಯಾರ್ಥಿಗಳಿಗೂ ಕೂಡ ಪ್ರತಿ ತಿಂಗಳ ಖರ್ಚು ವೆಚ್ಚಕ್ಕೆ ಪೋಷಕರು ಹಣ ಕೊಡಲು ಆಗದಿದ್ದಾಗ.
ಅವರ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದರೆ ನೇರವಾಗಿ ಅವರ ಖಾತೆಗಳಿಗೆ ಪ್ರತಿ ತಿಂಗಳು ಹಣ ಜಮೆ ಆಗುತ್ತದೆ. 5 ವರ್ಷಗಳು ಆದಮೇಲೆ ಅಸಲು ವಾಪಸ್ ಸಿಗುವುದರಿಂದ ಈ ರೀತಿಯ ಪ್ಲಾನಿಂಗ್ ಗಳು ಇರುವವರು ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆಯನ್ನು ಆರಿಸಿಕೊಳ್ಳಬಹುದು. ಯೋಜನೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಅಂಚೆ ಕಚೇರಿಯನ್ನು ಸಂಪರ್ಕಿಸಿ.