ಮನೆ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡ ಗೂಡಿನಲ್ಲಿ ಸಿಗುವ ಸುಖ ಸ್ವರ್ಗಕ್ಕೆ ಸಮಾನವಾಗಿರುತ್ತದೆ. ಸ್ವಂತ ಸೂರು ಎನ್ನುವುದು ಒಂದು ಭದ್ರತೆಯಾಗಿದೆ, ಅದೊಂದು ಬಂಡವಾಳವು ಹೌದು. ಆದರೆ ಎಲ್ಲರಿಗೂ ಸ್ವಂತ ಮನೆಯಲ್ಲಿ ಇರುವ ಅದೃಷ್ಟ ಇರುವುದಿಲ್ಲ. ಯಾಕೆಂದರೆ ಜೀವನೋಪಾಯಕ್ಕಾಗಿ ದೂರದ ನಗರ ಪ್ರದೇಶಗಳಲ್ಲಿ ಹೋಗುವ ಜನರು ಇರುವ ತನಕ ಬಾಡಿಗೆ ಮನೆಗೆ ಹಣ ಕಟ್ಟಿ, ಜೀವನ ಕಳೆದು ಬಿಡುತ್ತಾರೆ.
ನಗರ ಪ್ರದೇಶಗಳಲ್ಲಿ ಮನೆ ಖರೀದಿಸುವುದು ನಮ್ಮಿಂದ ಸಾಧ್ಯವಿಲ್ಲ ಎಂದುಕೊಂಡುಬಿಡುತ್ತಾರೆ. ಆದರೂ ಕೂಡ ಮನಸ್ಸಿನ ಮೂಲೆಯಲ್ಲಿ ಅವರಿಗೂ ಸ್ವಂತ ಮನೆ ಇದ್ದಿದ್ದರೆ ಎನ್ನುವ ಆಸೆ ಇರುತ್ತದೆ. ಆದರೆ ತಾವು ಬಾಡಿ ಕಟ್ಟುವ ಹಣದಲ್ಲಿ ಹೇಗೆ ಸ್ವಂತ ಮನೆ ಹೊಂದಬಹುದು ಎನ್ನುವ ಉಪಾಯ ಅವರಿಗೆ ತಿಳಿದಿರುವುದಿಲ್ಲ.
ಇದೇ ರೀತಿಯ ಕನಸು ಹಳ್ಳಿಗಾಡಿನವರಿಗೂ ಇರುತ್ತದೆ. ಹಳ್ಳಿಗಳಲ್ಲಿ ಇದ್ದುಕೊಂಡು ಕೂಲಿ ಕೆಲಸ ಮಾಡುವವರು ಸಹ ಸ್ವಂತ ಮನೆ ಇಲ್ಲದೆ ಇದ್ದರೆ ಬಾಡಿಗೆ ಮನೆಯಲ್ಲಿ ಆಶ್ರಯಿಸಬೇಕಾಗುತ್ತದೆ ಅವರು ಸಹ ಬಾಡಿಗೆ ಕಟ್ಟುತ್ತಿರುತ್ತಾರೆ ಆದರೆ ನಗರ ಪ್ರದೇಶಗಳಲ್ಲಿ ಮನೆ ಹೊಂದಿದರೆ ಹೆಚ್ಚು ಲಾಭ. ಯಾಕೆಂದರೆ ನಗರ ಪ್ರದೇಶದ ಮನೆ ಬಾಡಿಗೆ ಹೆಚ್ಚಿಗೆ ಇರುತ್ತದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ 1BHK ಮನೆ ರೆಂಟ್ ನಿಂದ 8,000 ದಿಂದ 10,000 ಇರುತ್ತದೆ.
ಪ್ರತಿಷ್ಠಿತ ಏರಿಯಾ ಗಳಲ್ಲಿ 2BHK ರೆಂಟ್ 15,000 ಕ್ಕಿಂತಲೂ ಹೆಚ್ಚಿಗೆ ಇರುತ್ತದೆ. ತಿಂಗಳಿಗೆ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಬಾಡಿಗೆಗೆ
ಕಟ್ಟಬೇಕಾದ ಪರಿಸ್ಥಿತಿಯಲ್ಲಿ ಅವರು ಇರುತ್ತಾರೆ. ಅದೇ ಹಣವನ್ನು ಸ್ವಲ್ಪ ಬುದ್ಧಿವಂತಿಕೆಯಿಂದ ಕೂಡಿಟ್ಟುಕೊಂಡರೆ ಸ್ವಂತ ಮನೆಯನ್ನೇ ಖರೀದಿಸಬಹುದು.
ಈ ಬಗ್ಗೆ ಆರ್ಥಿಕ ತಜ್ಞರು ಈ ರೀತಿ ಸಲಹೆಯನ್ನು ಕೊಡುತ್ತಾರೆ. ಅದೇನೆಂದರೆ ನೀವು ಬೆಂಗಳೂರಿನಲ್ಲಿ ಮನೆ ಖರೀದಿಸಬೇಕು ಎಂದರೆ ಭೂಮಿ ರೇಟ್ ಕೂಡ ಹೆಚ್ಚಿರುತ್ತದೆ. ಅದರ ಬದಲು ಅಪಾರ್ಟ್ಮೆಂಟ್ ಗಳನ್ನು ಖರೀದಿಸಿ ವಾಸಿಸುವುದು ಉತ್ತಮ. ಯಾಕೆಂದರೆ 30 ಲಕ್ಷಕ್ಕೆ ಬೆಂಗಳೂರಿನಲ್ಲಿ ಸುಸ್ಸಜ್ಜಿತವಾದ ವ್ಯವಸ್ಥೆ ಇರುವ ಅಪಾರ್ಟ್ಮೆಂಟ್ ಸಿಗುತ್ತದೆ.
ಇಲ್ಲಿ ಮಕ್ಕಳ ಆಟದ ಮೈದಾನದಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ಮತ್ತು ಒಳ್ಳೆ ಗಾಳಿ ಬೆಳಕು ವ್ಯವಸ್ಥೆ ಹೊಂದಿರುವ ನೀರಿನ ತೊಂದರೆ ಇರದೆ ಸೆಕ್ಯೂರಿಟಿ ಕೂಡ ಇರುವ ಒಳ್ಳೆಯ ಮನೆಗಳು ಸಿಗುತ್ತವೆ. ಅದರಲ್ಲೂ ನಗರದ ಹೊರ ಪ್ರದೇಶಗಳಲ್ಲಿ ಸಿಗುವ ಅಪಾರ್ಟ್ಮೆಂಟ್ ಗಳು ಇನ್ನು ಹೆಚ್ಚು ಅನುಕೂಲತೆಗಳ ಜೊತೆಗೆ ಕಡಿಮೆ ರೇಟ್ ಹೊಂದಿರುತ್ತದೆ. ಪ್ರತಿಷ್ಠಿತ ಕಂಪನಿಗಳು ನಿರ್ಮಿಸುವ ಅಪಾರ್ಟ್ಮೆಂಟ್ ಗಳಿಗಿಂತ ಲೋಕಲ್ ಬಿಲ್ಡರ್ ಗಳು ನಿರ್ಮಿಸಿರುವ ಮನೆ ಇನ್ನು ಕಡಿಮೆ ಬೆಲೆಗೆ ಸಿಗುತ್ತದೆ.
ಇದನ್ನು ಖರೀದಿಸಿ ಅಲ್ಲಿ ಬಿಡಾರ ಹೂಡುವ ಆಸೆ ಇದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಿಸಿಕೊಳ್ಳಿ. ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಹೋಂ ಲೋನ್ ಪಡೆಯಿರಿ. ಯಾಕೆಂದರೆ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಹೋಂ ಲೋನ್ ಬಡ್ಡಿದರ ಕಡಿಮೆ ಇರುತ್ತದೆ. EMI ಸೌಲಭ್ಯದಲ್ಲಿ ಸಾಲ ತೀರಿಸುವಂತೆ ಸಾಲ ಪಡೆಯಿರಿ. ಅದರ ಮೇಲೆ ಆರರಿಂದ ಏಳು ಲಕ್ಷ ಬಂಡವಾಳ ಹೂಡಿ ಫ್ಲಾಟ್ ಖರೀದಿಸಿದರೆ ನೀವು ಪ್ರತಿ ತಿಂಗಳು ಕಟ್ಟುತ್ತಿದ್ದ ಬಾಡಿಗೆ ಹಣವನ್ನೇ EMI ಆಗಿ ಕಟ್ಟಿಕೊಂಡು ಬಂದುಬಿಟ್ಟರೆ ಕೆಲವೇ ವರ್ಷಗಳಲ್ಲಿ ಸಾಲ ತೀರುತ್ತದ್ದೆ ಮತ್ತು ಕೊನೆಯವರೆಗೂ ನೀವು ಆ ಮನೆಯಲ್ಲಿ ನೆಮ್ಮದಿಯಿಂದ ಇರಬಹುದು.