ಈ ವಿಲ್ ಎನ್ನುವ ಪದವನ್ನು ಎಲ್ಲರೂ ಕೂಡ ಕೇಳಿರುತ್ತೇವೆ. ಒಬ್ಬ ಆಸ್ತಿ ಮಾಲೀಕನು ತನ್ನ ಮ’ರ’ಣ’ದ ನಂತರ ತನ್ನ ಪಾಲಿನ ಆಸ್ತಿಯು ಯಾರಿಗೆ ಸೇರಬೇಕು ಎನ್ನುವುದನ್ನು ಪತ್ರದ ಮೂಲಕ ದಾಖಲೆ ಮಾಡಿ ಇಡುವುದಕ್ಕೆ ವಿಲ್ (will) ಎನ್ನುತ್ತಾರೆ. ಹಾಗಾಗಿ ಇದನ್ನು ಮ’ರ’ಣ ಶಾಸನ, ಮೃ’ತ್ಯು’ಪತ್ರ ಎಂದು ಕೂಡ ಕರೆಯುತ್ತಾರೆ.
ವಿಲ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಇನ್ನು ಬಹಳ ಅಂಶಗಳಿವೆ. ಅದೇನೆಂದರೆ, ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದಾಗ ಮಾತ್ರ ಆತನ ಪಾಲಿನ ಆಸ್ತಿ ಯಾರಿಗೆ ಸೇರಬೇಕು ಎಂದು ಆತ ವಿಲ್ ಬರೆಯಲು ಸಾಧ್ಯ, ಹಾಗೆಯೇ ಆ ವಿಲ್ ನಲ್ಲಿ ಯಾವ ಆಸ್ತಿಯನ್ನು ಯಾರಿಗೆ ಸೇರಬೇಕು ಎಂದು ಬರೆಯುತ್ತಿದ್ದಾರೆ ಎನ್ನುವುದರ ವಿವರ ಸರಿಯಾಗಿರಬೇಕು.
ಯಾವ ಆಸ್ತಿ ಮತ್ತು ಯಾರಿಗೆ ಎನ್ನುವುದರ ವಿವರದಲ್ಲಿ ಸರಿಯಾಗಿರಬೇಕು ಈ ವಿಷಯದಲ್ಲಿ ಗೊಂದಲ ಇರಬಾರದು ಹಾಕಿದ್ದಾಗ ಮಾತ್ರ ಅದು ಮಾನ್ಯವಾಗುತ್ತದೆ. ಇಬ್ಬರು ಸಾಕ್ಷಿಗಳು ಆ ವಿಲ್ ಪತ್ರಕ್ಕೆ ಸಹಿ ಹಾಕಿರಬೇಕು ಮತ್ತು ವಿಲ್ ಬರೆಸಿದ ದಿನಾಂಕವನ್ನು ತಪ್ಪದೆ ನಮೂದಿಸಬೇಕು. ಇಷ್ಟೆಲ್ಲಾ ಆದಮೇಲೆ ಅದನ್ನು ರಿಜಿಸ್ಟರ್ ಕೂಡ ಮಾಡಿಸಬೇಕು ಇಷ್ಟೆಲ್ಲಾ ಇದ್ದಾಗ ಮಾತ್ರ ಅದೊಂದು ವ್ಯಾಲಿಡ್ ವಿಲ್ ಡೀಡ್ ಆಗುತ್ತದೆ.
ರಿಜಿಸ್ಟರ್ ಮಾಡಿಸುವ ಸಮಯದಲ್ಲಿ ಯಾರ ಹೆಸರಿಗೆ ವಿಲ್ ಮಾಡಿದ್ದಾರೆ ಅವರು ಇರಬೇಕಾದ ಅವಶ್ಯಕತೆ ಇಲ್ಲ. ಇನ್ನು ಹೇಳಬೇಕು ಎಂದರೆ ಕಾನೂನಿನ ಪ್ರಕಾರ ಯಾರ ಹೆಸರಿಗೆ ವಿಲ್ ಬರೆಯುತ್ತಿದ್ದಾರೆ ಅವರಿಗೆ ವಿಷಯ ಗೊತ್ತಿರಲೇ ಬಾರದು ಎನ್ನುವ ನಿಯಮ ಕೂಡ ಇದೆ. ಯಾಕೆಂದರೆ ಒಬ್ಬ ವ್ಯಕ್ತಿಯ ಮರಣದ ನಂತರ ಆತನ ಆಸ್ತಿ ಸಿಗುತ್ತದೆ.
ಎಂದರೆ ಆ ವ್ಯಕ್ತಿಯು ಎಷ್ಟು ವರ್ಷ ಬದುಕಿರಲಿ ಎನ್ನುವ ಆಸೆಯು ಫಲಾನುಭವಿಗಳಿಗೆ ಇರುತ್ತದೆ ಅವರ ಮನಸ್ಸಿನಲ್ಲಿ ಏನೆಲ್ಲ ಆಲೋಚನೆ ಬರಬಹುದು ಎನ್ನುವ ಕಾರಣಕ್ಕಾಗಿ ಈ ವಿಷಯ ಗೌಪ್ಯವಾಗಿರಬೇಕು ಎಂದು ಹೇಳಲಾಗುತ್ತದೆ. ಆದರೂ ಕೆಲವೊಮ್ಮೆ ಸಾಕ್ಷಿಗಳ ಕಾರಣದಿಂದ ಅಥವಾ ವಿಲ್ ಮಾಡಿದವರೇ ಮಾಹಿತಿ ಹಂಚಿಕೊಳ್ಳುವದರಿಂದ ಫಲಾನುಭವಿಗಳಿಗೆ ವಿಲ್ ವಿಷಯ ತಲುಪಬಹುದು.
ಒಂದು ವೇಳೆ ಅದರ ಮಾಹಿತಿ ಗೊತ್ತಿದ್ದರೂ ಗೊತ್ತಿಲ್ಲದೆ ಆ ವಿಷಯ ಗೌಪ್ಯವಾಗಿದ್ದರು ವಿಲ್ ನಿಂದ ಅನೇಕ ಅಪಾಯಗಳಿವೆ. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಮುಖ್ಯವಾಗಿ ಏನೆಂದರೆ, ಈ ರೀತಿ ಒಬ್ಬ ವ್ಯಕ್ತಿಯು ತನ್ನ ಪಾಲಿನ ಆಸ್ತಿಯನ್ನು ಒಬ್ಬರಿಗೆ ವಿಲ್ ಮಾಡಿದ ಮೇಲೆ ಅದನ್ನು ಬದಲಾಯಿಸಬಾರದು ಎನ್ನುವ ನಿಯಮ ಇಲ್ಲ.
ಆ ವ್ಯಕ್ತಿಯು ಆತನ ಜೀವಿತಾವಧಿಯಲ್ಲಿ ಆತನ ಆಸ್ತಿಗೆ ಎಷ್ಟು ಬಾರಿ ಬೇಕಾದರೂ ವಿಲ್ ಮಾಡಿಸಬಹುದು ನಂತರ ಅದನ್ನು ರ’ದ್ದು ಮಾಡಿ ಬೇರೆ ವಿಲ್ ಕೂಡ ಮಾಡಿಸಬಹುದು. ವಿಲ್ ರಿಜಿಸ್ಟರ್ ಆದಮೇಲೆ ಹೆಚ್ಚಿನ ಸಮಯದಲ್ಲಿ ಅದು ಲಾಕರ್ ನಲ್ಲಿ ಇರುತ್ತದೆ ಅಥವಾ ಅಡ್ವೋಕೇಟ್ ಬಳಿ ಇರುತ್ತದೆ.
ಹಾಗಾಗಿ ಫಲಾನುಭವಿಗಳಿಗೆ ಇದರ ಮಾಹಿತಿ ಗೊತ್ತೇ ಆಗದೇ ಇರಬಹುದು ಅಂತಹ ಸಮಯದಲ್ಲಿ ಅವರಿಗೆ ಆಸ್ತಿ ದೊರಕುತ್ತದೆ ಎಂದು ನಿಖರವಾಗಿ ಹೇಳುವುದು ಕ’ಷ್ಟ. ಒಂದು ವೇಳೆ ಆ ವಿಲ್ ರಿಜಿಸ್ಟ್ರೇಷನ್ ನಂಬರ್ ಗೊತ್ತಿಲ್ಲ ಎಂದರೆ ಅದನ್ನು ಹುಡುಕುವುದು ಬಹಳ ಕ’ಷ್ಟ.
ಯಾಕೆಂದರೆ ರಿಜಿಸ್ಟರ್ ಆಗಿದ್ದರೂ ಆ ವಿಲ್ ಗಳ ರಿಜಿಸ್ಟ್ರೇಷನ್ ಮಾಹಿತಿ ಆನ್ಲೈನ್ ನಲ್ಲಿ ದೊರಕುವುದಿಲ್ಲ EC ನಲ್ಲೂ ಕೂಡ ಈ ಬಗ್ಗೆ ಮಾಹಿತಿ ರೆಫ್ಲೆಕ್ಟ್ ಆಗುವುದಿಲ್ಲ. ಹಾಗಾಗಿ ರಿಜಿಸ್ಟರ್ ಆಗಿದ್ದರೆ ವಿಲ್ ನೂರಕ್ಕೆ ನೂರರಷ್ಟು ಅದರಲ್ಲಿ ಬರೆದಿರುವ ಆಸ್ತಿ ಸಿಗುತ್ತದೆ ಎಂದು ಅಂದುಕೊಳ್ಳುವುದು ತಪ್ಪಾಗುತ್ತದೆ.