ಈಗಿನ ಕಾಲದಲ್ಲಿ ದುಡಿಮೆ ಹೆಚ್ಚಿದ್ದರೂ ಹಣದ ಕೊರತೆ ಮಾತ್ರ ಕಡಿಮೆಯಾಗಿಲ್ಲ. ನಾನಾ ಕಾರಣಗಳಿಗಾಗಿ ನಾವು ಮತ್ತೊಬ್ಬರ ಬಳಿ ಸಾಲ(loan) ಮಾಡುವ ಪರಿಸ್ಥಿತಿ ಎದುರಾಗುತ್ತಲೇ ಇದೆ. ಹೆಚ್ಚಿನವರು ಸರ್ಕಾರಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಉದ್ದೇಶ ಬೇರೆ ಬೇರೆಯಾಗಿ ಇರುತ್ತದೆ.
ಕೆಲವರು ವೈಯಕ್ತಿಕ ಸಾಲವನ್ನು ತೆಗೆದುಕೊಂಡರೆ ಕೆಲವರದ್ದು ಕ್ರೆಡಿಟ್ ಕಾರ್ಡ್ ಸಾಲ, ಗೃಹ ಸಾಲ, ವಾಣಿಜ್ಯ ಸಾಲ, ವಾಹನ ಸಾಲ, ಕೃಷಿ ಸಾಲ ಇನ್ನಿತರ ಮಾದರಿಯ ಸಾಲಗಳು ಆಗಿರುತ್ತವೆ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬ್ಯಾಂಕ್ ಗಳೇ ವಿಶೇಷ ಯೋಜನೆಗಳಡಿ ಕೂಡ ಸಾಲಗಳನ್ನು ನೀಡುತ್ತವೆ. ಸಾಲ ನೀಡುವ ಸಮಯದಲ್ಲಿ ಸಾಲ ಪಡೆದುಕೊಳ್ಳುವವರಿಗೆ ಕೆಲವೊಂದು ಟೈರ್ಮ್ಸ್ ಹಾಗೂ ಕಂಡೀಶನ್ ಗಳನ್ನು (Terms and Conditions) ಹೇಳಿ ಸಹಿ ಕೂಡ ಪಡೆಯಲಾಗಿರುತ್ತದೆ.
ಸಾಲ ಪಡೆದುಕೊಳ್ಳುವಾಗ ಎದುರಾಗುವ ಮೊದಲನೇ ಪ್ರಶ್ನೆ ಏನೆಂದರೆ ಶ್ಯೂರಿಟಿ (Suirity) ಎನ್ನುವುದು ಕೆಲವೊಂದು ಸಾಲಗಳಿಗೆ ಶ್ಯೂರಿಟಿ ಕೊಡಲೇಬೇಕಾಗುತ್ತದೆ. ಉದಾಹರಣೆಗೆ ಕೃಷಿ ಸಾಲ, ಕೃಷಿ ಸಾಲಗಳಿಗೆ ರೈತ ಜಮೀನನ್ನು ಅಡ ಇಟ್ಟು ಸಾಲ ಪಡೆದಿರುತ್ತಾನೆ. ಈಗಿನ ಕಾಲದಲ್ಲಿ ಯಾವುದೇ ಶ್ಯೂರಿಟಿ ಇಲ್ಲದೆ ಕೂಡ ಬ್ಯಾಂಕ್ ಗಳು ಸಾಲ ಕೊಟ್ಟಿರುತ್ತವೆ.
ಒಂದು ವೇಳೆ ಸಾಲ ಪಡೆದುಕೊಂಡು ವ್ಯಕ್ತಿಯು ಆ ಸಾಲವನ್ನು ತೀರಿಸದೆ ಆ’ತ್ಮ’ಹ’ತ್ಯೆ ಮಾಡಿಕೊಂಡಿದ್ದಾಗ ಅಥವಾ ಸಾಲ ಪಡೆದುಕೊಂಡವ ಅನಾರೋಗ್ಯ ಅಥವಾ ಅ’ಪ’ಘಾ’ತಗಳ ಇನ್ನಿತರ ಕಾರಣಗಳಿಂದಾಗಿ ಅಕಾಲಿಕ ಮೃ’ತ್ಯುಗೆ ಒಳಗಾಗಿದ್ದಾಗ ಆ ವ್ಯಕ್ತಿಯ ಹೆಸರಿನಲ್ಲಿ ಇರುವ ಸಾಲವನ್ನು ತೀರಿಸುವ ಜವಾಬ್ದಾರಿ ಯಾರಿಗೆ ಬರುತ್ತದೆ ಎನ್ನುವುದರ ಬಗ್ಗೆ ಪ್ರತಿಯೊಬ್ಬರು ಕೂಡ ಸಾಲ ಮಾಡುವ ಮುನ್ನ ತಿಳಿದುಕೊಂಡಿರಲೇಬೇಕು.
ಕೆಲವೊಂದು ಸಂದರ್ಭದಲ್ಲಿ ವ್ಯಕ್ತಿ ಸಾಲ ಮಾಡಿದ್ದಾನೆ ಎನ್ನುವುದೇ ಕುಟುಂಬದವರಿಗೆ ಗೊತ್ತಿರುವುದಿಲ್ಲ ಆಗ ಅವರಿಗೂ ಸಹ ಕ’ಷ್ಟಗಳು ಎದುರಾಗುತ್ತವೆ. ಅದಕ್ಕಾಗಿ ಅನೇಕ ಬಾರಿ ಈ ಸಾಲದ ನಿಯಮಗಳನ್ನು ಮಾರ್ಪಾಡು ಮಾಡಲಾಗಿದೆ. ಈಗಿರುವ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿಯು ಸಾಲ ಪಡೆದು ತೀರಿಸದೆ ಇದ್ದಾಗ ಆತನಿಗೆ ಇರುವ ಸಮಯವಕಾಶ ಮುಗಿದ ಮೇಲೆ ಬ್ಯಾಂಕ್ ಗಳು ಅವನಿಗೆ ಹೆಚ್ಚಿನ ಬಡ್ಡಿ ದರ ಅಥವಾ ದಂಡ ವಿಧಿಸುತ್ತವೆ.
ಆಗಲು ಕೂಡ ವ್ಯಕ್ತಿ ಬಗ್ಗದೇ ಇದ್ದಾಗ ರಿಕವರಿ ಏಜೆಂಟ್ ಗಳ ಮೂಲಕ ಸಾಲ ವಸೂಲು ಮಾಡಲು ಮುಂದಾಗುತ್ತವೆ, ಕೊನೆಗೊಮ್ಮೆ ಆತ ಅಡವಿಟ್ಟಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇರುತ್ತವೆ. ಆದರೆ ಈ ಅಧಿಕಾರಿ ಎಲ್ಲ ರೀತಿಯ ಸಾಲಗಳಿಗೂ ಇರುವುದಿಲ್ಲ. ಗೃಹ ಸಾಲ, ವಾಣಿಜ್ಯ ಸಾಲ, ವಾಹನ ಸಾಲ ಮುಂತಾದ ಸೆಕ್ಯೂರ್ ಸಾಲಗಳಿಗೆ (Secured loa) ಮಾತ್ರ ಸಾಲ ತೀರಿಸದೆ ಇದ್ದಾಗ ಮನೆಯನ್ನು ಮುಟ್ಟುಗೋಲು ಹಾಕುವ ಅಥವಾ ವಾಹನವನ್ನು ವಶಕ್ಕೆ ಪಡೆಯುವ ಅಧಿಕಾರ ಇರುತ್ತದೆ.
ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಂತಹ ಸಾಲ ಹೊಂದಿರುವ ವ್ಯಕ್ತಿಯೇನಾದರೂ ಮೃ’ತಪಟ್ಟರೆ ಅದು ಆತನ ವೈಯಕ್ತಿಕ ಸಾಲ ಆಗಿರುವುದರಿಂದ ಈ ಸಾಲ ತೀರಿಸುವಂತೆ ಬ್ಯಾಂಕುಗಳು ಅವರ ಕುಟುಂಬದವರನ್ನು ಕೇಳುವಂತಿಲ್ಲ. ಇದು ಅಸುರಕ್ಷಿತ ಸಾಲ (Non Secured loan) ಆಗಿರುವುದರಿಂದ ಆ ಸಾಲವನ್ನು NPA ಗೆ ಸೇರಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಈ ಮಾಹಿತಿಯನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.