ಕಾಂಗ್ರೆಸ್ ಪಕ್ಷವು ಚುನಾವಣೆ ಮುನ್ನ ಘೋಷಿಸಿದ್ದ ಪಂಚ ಖಾತ್ರಿ ಗ್ಯಾರಂಟಿ (Guarantee Scheme) ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruhalakshmi) ಮಹತ್ವವಾದದ್ದು. ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿ ಖಾತೆಗೂ ಕೂಡ ಪ್ರತಿ ತಿಂಗಳು 2000 ಸಹಾಯ ಧನವನ್ನು ನೀಡಿ ಮಹಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿ ಲಿಂಗ ಸಮಾನತೆಯನ್ನು ಬೆಂಬಲಿಸಬೇಕು ಎನ್ನುವುದು ಈ ಯೋಜನೆ ಉದ್ದೇಶ ಆಗಿತ್ತು.
ಯೋಜನೆಗೆ ಮಾರ್ಗಸೂಚಿಯನ್ನು ಹೊರಡಿಸಿದ ದಿನದಿಂದಲೂ ಸರ್ಕಾರ ಬಹಳ ಸ್ಪಷ್ಟವಾಗಿ ಈ ಯೋಜನೆಗೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯರು ಅರ್ಹರಾಗಿರುತ್ತಾರೆ. ಈ ಸಹಾಯಧನವು DBT ಮೂಲಕ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕಾರ್ಯಕ್ರಮ ಆರಂಭವಾಗಿದೆ.
ಜುಲೈ 19 ರಿಂದ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಹೋಗಿ ಸಲ್ಲಿಸಲು ಫಲಾನುಭವಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಜಾಪ್ರತಿನಿಧಿಗಳ ಮೂಲಕ ಮೊಬೈಲ್ ಆಪ್ ಅಲ್ಲಿಯೇ ಅರ್ಜಿ ಸಲ್ಲಿಸುವ ಅವಕಾಶವು ಕೂಡ ಸಿಗಲಿದೆ.
ಈ ಸುದ್ದಿ ನೋಡಿ:- ಪದವೀಧರರಿಗೆ ಸಿಹಿ ಸುದ್ದಿ, ಯುವನಿಧಿ ಯೋಜನೆ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸರ್ಕಾರ.!
ಅಂತಿಮವಾಗಿ ಆಗಸ್ಟ್ ತಿಂಗಳ 19ನೇ ತಾರೀಖಿನ ಒಳಗೆ ಫಲಾನುಭವಿಗಳ ಖಾತೆಗೆ ಮೊದಲನೇ ಕಂತಿನ ಹಣ ತಲುಪಿಸಬೇಕು ಎಂದು ಸರ್ಕಾರವು ಗುರಿಯನ್ನು ಹೊಂದಿದೆ. ಆದರೆ ಇನ್ನೂ ಅನೇಕರಿಗೆ ಈ ಯೋಜನೆ ಕುರಿತು ಸಾಕಷ್ಟು ಗೊಂದಲಗಳಿವೆ. ಅದೇನೆಂದರೆ, ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ವೇಳೆ ಬ್ಯಾಂಕ್ ವಿವರವನ್ನು ಕೇಳುತ್ತಿಲ್ಲ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆ ಪಡೆದು ಅರ್ಜಿ ಸಲ್ಲಿಸಲಾಗುತ್ತಿದೆ.
ಮತ್ತು ಅರ್ಜಿ ಸಲ್ಲಿಕೆ ಆದ ನಂತರ ನೀಡುವ ಮಂಜೂರಾತಿ ಪತ್ರದಲ್ಲೂ ಕೂಡ ಫಲಾನುಭವಿಯ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಬರೆದಿದೆ. ಹಾಗಾಗಿ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ಹಣ ಸಿಗುವುದಿಲ್ಲವೇ ಎನ್ನುವ ಗೊಂದಲ ಇದೆ. ಇದು ನಿಜ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಅಂತವರ ಖಾತೆಗೆ ಹಣ ವರ್ಗಾವಣೆ ಆಗದೆ ಹೋಗಬಹುದು ಹಾಗಾಗಿ ಶೀಘ್ರವೇ ಈ ಪ್ರಕ್ರಿಯೆ ಪೂರ್ತಿಗೊಳಿಸುವುದು ಒಳಿತು.
ತಮ್ಮ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಬಯೋಮೆಟ್ರಿಕ್ ಮಾಹಿತಿ ಕೊಟ್ಟು ಅರ್ಜಿ ಸಲ್ಲಿಸಿದರೆ ಎರಡು ಮೂರು ದಿನಗಳಲ್ಲಿ ನಿಮ್ಮ ಉಳಿತಾಯ ಖಾತೆ ಗೆ Aadhar seeding and NPCI Mapping ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ. ಇದರೊಂದಿಗೆ ಇನ್ನೂ ಒಂದು ಸಮಸ್ಯೆ ಬಹಳ ಜನರಿಗಿದೆ. ಅನೇಕ ಕುಟುಂಬಗಳಲ್ಲಿ ಯಜಮಾನಿ ಮಹಿಳೆ ಮೃ’ತರಾಗಿರುತ್ತಾರೆ. ಆಗ ಕುಟುಂಬದ ಮತ್ತೊಂದು ಮಹಿಳೆಗೆ ಅವರ ಬದಲಾಗಿ ಅರ್ಜಿ ಸಲ್ಲಿಸಲು ಅವಕಾಶ ಇದೆಯೇ ಎನ್ನುವ ಪ್ರಶ್ನೆ ಇದೆ.
ಈ ಸುದ್ದಿ ನೋಡಿ:- ಹೈನುಗಾರಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂಪಾಯಿ
ಇದಕ್ಕೂ ಕೂಡ ಸರ್ಕಾರ ಅವಕಾಶ ನೀಡಿದೆ. ಅರ್ಜಿ ಸಲ್ಲಿಸುವ ಮೊದಲು ರೇಷನ್ ಕಾರ್ಡಲ್ಲಿ ತಿದ್ದುಪಡಿ ಮಾಡಿಕೊಂಡು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಯಾವ ಮಹಿಳೆಯ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು ಅವರ ಹೆಸರನ್ನು ಬದಲಾವಣೆ ಕೊಂಡರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಕಡೆ ದಿನಾಂಕವನ್ನು ತಿಳಿಸದೆ ಇರುವುದರಿಂದ ಈ ಎಲ್ಲ ದಾಖಲೆಗಳನ್ನು ಸರಿಯಾಗಿ ತಿದ್ದುಪಡಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶವಿದೆ.