ರೈತರು (Farers) ಕೃಷಿ ಚಟುವಟಿಕೆ ಮಾಡಲು ಕೃಷಿ ಭೂಮಿಗೆ (agriculture land) ನೀರಿನ ಸಂಪರ್ಕ ಮಾತ್ರವಲ್ಲದೇ ಅದರ ಜೊತೆಗೆ ವಿದ್ಯುತ್ ಸೌಲಭ್ಯ (Current supply) ಕೂಡ ಬೇಕಾಗಿರುತ್ತದೆ. ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸರ್ಕಾರವು (government) ಕೃಷಿ ಭೂಮಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಕೆಲವು ವಿಶೇಷ ಯೋಜನೆಗಳಲ್ಲಿ ರೈತರಿಗೆ ಈ ವಿದ್ಯುತ್ ಸಂಪರ್ಕ ಪಡೆಯಲು ರಿಯಾಯಿತಿ ಕೂಡ ಸಿಗುತ್ತದೆ. ಈ ಅನುಕೂಲತೆಯನ್ನು ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ನೋಂದಣಿಯಾಗ ಬೇಕಾಗುತ್ತದೆ. ಗೃಹ ಬಳಕೆಗೆ, ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಕೊಡುವ ರೀತಿಯೇ ಕೃಷಿ ಭೂಮಿಗೂ ಕೂಡ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.
ಇದರಲ್ಲಿ ಕೃಷಿ ಚಟುವಟಿಕೆಗಾಗಿ ಬಳಸುವ ವಿದ್ಯುತ್ ಸಂಪೂರ್ಣ ಉಚಿತವಾಗಿರುತ್ತದೆ ಎನ್ನುವುದು ವಿಶೇಷ ನೀವೇನಾದರೂ ಇನ್ನು ನಿಮ್ಮ ಕೃಷಿ ಭೂಮಿಗೆ ಸಂಪರ್ಕ ಪಡೆದಿಲ್ಲ ಎಂದರೆ ಈ ಅಂಕಣವನ್ನು ಪೂರ್ತಿಯಾಗಿ ನೋಡಿ. ಎಲ್ಲಿ, ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಎನ್ನುವ ಪ್ರಮುಖ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ.
ಅರ್ಹತೆಗಳು:-
● ಕರ್ನಾಟಕ ರಾಜ್ಯದ ರೈತನಾಗಿರಬೇಕು
● ಕೃಷಿ ಮಾಡುತ್ತಿರಬೇಕು
● ಆರ್ಥಿಕವಾಗಿ ಹಿಂದುಳಿದಿರುವ ರೈತರಿಗೆ ಮೊದಲ ಆದ್ಯತೆ
● ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ದಾಖಲೆಗಳು:-
● ಭರ್ತಿ ಮಾಡಿದ ಅರ್ಜಿ ಫಾರಂ
● ಕೃಷಿ ಭೂಮಿಯನ್ನು ಬಾಡಿಗೆಗೆ ಪಡೆದಿದ್ದರೆ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದದ ಪತ್ರ
● ಓನರ್ ಇಂದ NOC
● ಬುಡಕಟ್ಟು ವರ್ಗದವರಿಗೆ ಅವರ ಕೌನ್ಸಿಲ್ ಇಂದ ಪಡೆದ ಪ್ರಮಾಣ ಪತ್ರ
● ಮೂರು ತಿಂಗಳ ಹಂಚಿಕೆ ಆದೇಶ
● ಆಧಾರ್ ಕಾರ್ಡ್
● ರೇಷನ್ ಕಾರ್ಡ್
● ಪ್ಯಾನ್ ಕಾರ್ಡ್
● ಜಮೀನಿನ ವಿವರಗಳು
● ಗ್ರಾಮದ ಅಧಿಕಾರಿಗಳು ನೀಡಿರುವ ಮಾಲೀಕತ್ವ ಪ್ರಮಾಣ ಪತ್ರ
● ಕೃಷಿ ಜಾಗ ತೋರಿಸುವ ರೇಖಾಚಿತ್ರ.
● ಭಾವಚಿತ್ರ
● ಮೊಬೈಲ್ ಸಂಖ್ಯೆ.
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ನಿಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುವ ವಿದ್ಯುತ್ ಕಛೇರಿಗೆ ಭೇಟಿ ಕೊಡಿ.
● ಸರ್ಕಾರದ ಈ ಉಚಿತ ವಿದ್ಯುತ್ ಸಂಪರ್ಕ ಯೋಜನೆಗೆ ಇರುವ ಅರ್ಜಿ ಫಾರಂ ಅನ್ನು ಕೇಳಿ ಪಡೆಯಿರಿ.
● ಅದರಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನಿಮ್ಮ ಭಾವಚಿತ್ರದ ಅವಶ್ಯಕತೆ ಇದ್ದರೆ ಅಂಟಿಸಿ ಮತ್ತು ಕೊನೆಯಲ್ಲಿ ನಿಮ್ಮ ಸಹಿ ಕೂಡ ಮಾಡಿ.
● ಈ ಮೇಲೆ ತಿಳಿಸದ ಎಲ್ಲಾ ದಾಖಲೆ ಪತ್ರಗಳ ಜೆರಾಕ್ಸ್ ಕಾಪಿಯನ್ನು ಕೂಡ ಅರ್ಜಿ ಫಾರಂ ಜೊತೆ ಲಗತ್ತಿಸಿ.
● ನಂತರ ವಿದ್ಯುತ್ ಕಛೇರಿ ಅಧಿಕಾರಿಗಳು ನಿಮಗೆ ಯಾವ ಕಚೇರಿಯನ್ನು ಸೂಚಿಸುತ್ತಾರೋ ಅಲ್ಲಿ ಹೋಗಿ ಈ ಯೋಜನೆ ಅನೂಕೂಲತೆ ಪಡೆಯಲು ಸರ್ಕಾರ ಸೂಚಿಸಿರುವ ಶುಲ್ಕವನ್ನು ಪಾವತಿ ಮಾಡಿ.
● ಅಧಿಕಾರಿಗಳು ನಿಮ್ಮ ಅರ್ಜಿಯ ಪರಿಶೀಲನೆ ನಡೆಸುತ್ತಾರೆ.
SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
● ನಿಮ್ಮ ಅರ್ಜಿ ಮಾಹಿತಿ ಹಾಗೂ ಸಲ್ಲಿಸಿರುವ ಪೂರಕ ದಾಖಲೆಗಳ ಎಲ್ಲಾ ಮಾಹಿತಿ ಹೊಂದಾಣಿಕೆ ಆಗಿ ನೀವು ಈ ಯೋಜನೆಗೆ ಅರ್ಹರಾಗಿದ್ದರೆ ನಿಮ್ಮ ಕೃಷಿ ಭೂಮಿಗೆ ಬಂದು ಒಮ್ಮೆ ಪರಿಶೀಲನೆ ನಡೆಸುತ್ತಾರೆ ಬಳಿಕ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಅನುಮೋದಿಸುತ್ತಾರೆ.
● ನಿಮಗೆ ಒಂದು ರಿಜಿಸ್ಟ್ರೇಷನ್ ನಂಬರ್ ಕೊಡುತ್ತಾರೆ ಹಾಗೂ ರಿಜಿಸ್ಟ್ರೇಷನ್ ಡೇಟ್ ಕೂಡ ನೀಡಲಾಗುತ್ತದೆ.
● ಅಧಿಕಾರಿಗಳಿಗೆ ಸರ್ಕಾರದಿಂದ ಆದೇಶ ಬಂದ ಬಳಿಕ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಸಿಗುತ್ತದೆ.