ನಮ್ಮ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ನಾವು ಪ್ರತಿನಿತ್ಯದ ಆಹಾರದಲ್ಲಿ ಹೆಚ್ಚು ಅಕ್ಕಿಯನ್ನು ಬಳಕೆ ಮಾಡುತ್ತೇವೆ. ಬೆಳಗಿನ ಟಿಫಿನ್ ನಲ್ಲಿ ಕೂಡ ಹೆಚ್ಚು ಸಮಯ ಚಿತ್ರನ್ನ, ಪಲಾವ್ ಮುಂತಾದ ಪದಾರ್ಥಗಳಲ್ಲಿ ಅಕ್ಕಿಯೇ ಇರುತ್ತದೆ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಪ್ಪದೆ ಅನ್ನ ಸಾರು ಇರುತ್ತದೆ.
ಆದರೆ ಅನೇಕರು ಅಕ್ಕಿಯಿಂದ ಮಾಡಿದ ಪದಾರ್ಥ ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದರಲ್ಲಿ ಯಾವುದೇ ಪೋಷಕಾಂಶ ಇಲ್ಲ, ಇದು ಬರಿ ಕಾರ್ಬೋಹೈಡ್ರೇಟ್ಸ್ ಹೊಂದಿದೆ. ಹೀಗಾಗಿ ಅಕ್ಕಿ ತಿನ್ನುವುದಕ್ಕಿಂತ ಗೋಧಿ ತಿನ್ನುವುದು ಒಳ್ಳೆಯದು, ಶುಗರ್ ಇರುವವರು ಅಕ್ಕಿಯನ್ನು ತಿನ್ನಲೇಬಾರದು ಹೀಗೆ ಮಾತನಾಡುವುದನ್ನು ಕೇಳಿದ್ದೇವೆ. ಇದರಲ್ಲಿ ಸತ್ಯಾಂಶ ಎಷ್ಟಿದೆ ಗೊತ್ತಾ.
ಈಗಿನ ಕಾಲದಲ್ಲಿ ಜನ ಹೇಗಾಗಿದ್ದಾರೆ ಎಂದರೆ ಸತ್ಯವನ್ನು ನಂಬುವುದಕ್ಕಿಂತ ಜನ ಏನು ಹೇಳುತ್ತಾರೆ ಅದನ್ನೇ ನೋಡಿ ಮತ್ತಷ್ಟು ಜನ ನಂಬುತ್ತಾರೆ, ಹಾಗಾಗಿ ಇಂತಹ ಮಾತುಗಳು ಹೆಚ್ಚು ಹಬ್ಬುತ್ತವೆ. ಅಕ್ಕಿ ತಿನ್ನುವುದಕ್ಕಿಂತ ಗೋಧಿ ತಿನ್ನುವುದು ಒಳ್ಳೆಯದು ಅಕ್ಕಿಯಲ್ಲಿ ಯಾವುದೇ ಪೋಷಕಾಂಶ ಇಲ್ಲ ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹದ ತೂಕ ವಿಪರೀತವಾಗಿ ಹೆಚ್ಚಾಗಿ ಹೋಗುತ್ತದೆ ಎನ್ನುವುದೆಲ್ಲ ಒಪ್ಪುವ ಮಾತಲ್ಲ.
ಯಾಕೆಂದರೆ ಅಕ್ಕಿ ಹಾಗೂ ಗೋಧಿಗೆ ಕಂಪೇರ್ ಮಾಡಿ ನೋಡಿದರೆ ನ್ಯೂಟ್ರಿಷನ್ಗಳು ಹೇಳುವ ಪ್ರಕಾರ ಹೆಚ್ಚು ಕಮ್ಮಿ, ಅಕ್ಕಿಯೇ ಬೆಸ್ಟ್ ಅನಿಸುತ್ತದೆ. ಆದರೆ ಸ್ವತಂತ್ರ ಪೂರ್ವದಲ್ಲಿ ಭಾರತದ ಮೇಲೆ ವಿದೇಶಿಗರು ಹಿಡಿತ ಹೊಂದಿದ್ದ ಪ್ರಭಾವ ಅವರ ಆಹಾರವು ಇಲ್ಲಿಗೆ ಬಂದು, ಇಂದು ನಾವು ಪಾಶ್ಚ್ಯಾತ್ಯರು ಹೇಳಿದ್ದೆ ನಿಜ ಎನ್ನುವ ಮಟ್ಟಕ್ಕೆ ಬದಲಾಗಿ ಹೋಗಿದ್ದೇವೆ.
ಸ್ವತಂತ್ರ ಪೂರ್ವದಲ್ಲಿ ಅಮೆರಿಕ ಸೇರಿದಂತೆ ಇನ್ನಿತರ ಬಲಿಷ್ಠ ರಾಷ್ಟ್ರಗಳು, ಗೋಧಿಯನ್ನು ಯಥೇಚ್ಛವಾಗಿ ಉತ್ಪಾದನೆ ಮಾಡುತ್ತಿದ್ದವು. ಅದು ಕೂಡ ಅವೈಜ್ಞಾನಿಕ ವಿಧಾನದಿಂದ ಹೆಚ್ಚು ಫರ್ಟಿಲೈಸರ್ಗಳು ಹಾಗೂ ಪೆಸ್ಟಿಸೈಡ್ಸ್ ಬಳಸಿ ಉತ್ಪಾದನೆ ಹೆಚ್ಚಾಗುವಂತೆ ಮಾಡಿದ್ದವು.
ಜೆನೆಟಿಕಲಿ ಮಾಡಿಫೈಡ್ ಆಗಿದ್ದ ಈ ಗೋಧಿಯನ್ನು ಬಲವಂತವಾಗಿ ಇತರ ದೇಶಗಳಿಗೆ ನಿಮ್ಮ ದೇಶಗಳ ಆಹಾರಗಳು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಅದಕ್ಕಿಂತಲೂ ಗೋಧಿಯಲ್ಲಿ ಬಹಳ ಬೇಗ ಆಹಾರ ತಯಾರಾಗುತ್ತದೆ ಮತ್ತು ಬೇಗ ಕೆಡುವುದಿಲ್ಲ ಇತ್ಯಾದಿ ವಿಷಯಗಳನ್ನು ತುಂಬಿ ಎಲ್ಲಾ ದೇಶಗಳು ಕಳುಹಿಸಿಕೊಟ್ಟರು.
ಹೀಗೆ ಗೋಧಿ ಹಾಗೂ ಗೋಧಿಯಿಂದ ಮಾಡಿದ ಪದಾರ್ಥಗಳ ಪರಿಚಯ ಭಾರತಕ್ಕೂ ಆಯಿತು. ಅದೇ ಕ್ರಮೇಣ ಇದನ್ನು ಜನರು ಎಷ್ಟು ನಂಬಲು ಶುರು ಮಾಡಿದರೂ ಎಂದರೆ ಆಯಾ ಪ್ರಾಂತ್ಯದಲ್ಲಿ ಬಳೆಯುತ್ತಿದ್ದ ಧಾನ್ಯಗಳನ್ನು ಬೆಳೆಯುವುದನ್ನೇ ಬಿಟ್ಟು ಇತರ ದೇಶಗಳಿಂದ ಬರುತ್ತಿರುವ ಗೋಧಿಯನ್ನು ನಂಬುವಷ್ಟರ ಮಟ್ಟಿಗೆ ಜೊತೆಗೆ ಇಲ್ಲೂ ಕೂಡ ಗೋಧಿಯನ್ನು ಬೆಳೆಯುವುದು ಶುರು ಮಾಡಿದರು.
ಆದರೆ ಅಸಲಿ ಸತ್ಯ ಏನೆಂದರೆ ಅಕ್ಕಿಯಲ್ಲೂ ಕೂಡ ಆರೋಗ್ಯಕ್ಕೆ ಪೂರಕವಾದ ಅಮಿನೋ ಆಸಿಡ್ ಗಳು ಇವೆ. ಗೋಧಿಯಲ್ಲಿರುವ ಮೂರ್ನಾಲ್ಕು ಪೋಷಕಾಂಶಗಳು ಇಲ್ಲದೆ ಇದ್ದರೂ ಇನ್ನಿತರ ಪೋಷಕಾಂಶಗಳಲ್ಲಿ ಗೋಧಿಗಿಂತ ಅಕ್ಕಿ ಬೆಸ್ಟ್ ಆಗಿದೆ.
ಬಿಳಿ ಅಕ್ಕಿ ಆಗಿದ್ದರು ಪಾಲಿಶ್ ಮಾಡಿದ ಅಕ್ಕಿ ಆಗಿದ್ದರೂ ಕೂಡ ಅಕ್ಕಿಯನ್ನು ತಿನ್ನುವುದರಿಂದ ಯಾವುದೇ ಕಾರಣಕ್ಕೂ ದೇಹದ ತೂಕ ಹೆಚ್ಚಾಗುವುದಿಲ್ಲ. ಆದರೆ ಅನ್ನ ಸಾರು ಜೊತೆಯಲ್ಲಿ ಸ್ನಾಕ್ಸ್ ಆಗಿ ಹಪ್ಪಳ ಸೆಂಡಿಗೆ ಚಕ್ಕಲಿ ಈ ರೀತಿ ಕರಿದ ಆಹಾರ ಪದಾರ್ಥಗಳನ್ನು ಜೊತೆಗೆ ತಿನ್ನುವುದರ ಕಾರಣದಿಂದಾಗಿ ತೂಕ ಹೆಚ್ಚಾಗುತ್ತದೆ, ಅದನ್ನು ಅಕ್ಕಿಯ ಮೇಲೆ ಹೇಳಲಾಗುತ್ತಿದೆ.
ಒಬೆಸಿಟಿ ಈಗಾಗಲೇ ಹೊಂದಿರುವವರು ಕೆಂಪಕ್ಕಿ ತಿನ್ನಿ ಎಂದು ಹೇಳುತ್ತಾರೆ ಹೊರತು ಹುಟ್ಟಿದ ಮಗುವಿನಿಂದ ವೃದ್ಧರವರೆಗೆ ಎಲ್ಲರೂ ಬಿಳಿ ಅಕ್ಕಿ ತಿಂದರೆ ಏನು ಸಮಸ್ಯೆ ಇಲ್ಲ. ಆದರೆ ಅನ್ನದ ಜೊತೆಗೆ ತಿನ್ನುವ ಆಹಾರ ಪದಾರ್ಥಗಳು ಕೂಡ ಪೋಷಕಾಂಶದಿಂದ ಕೂಡಿರಬೇಕು ಯಾಕೆಂದರೆ 1 ಗ್ರಾಂ ಅಕ್ಕಿ, 4 ಗ್ರಾಂ ಕ್ಯಾಲರಿ ನೀಡಿದರೆ, 1 ಗ್ರಾಂ ಕೊಬ್ಬು 9 ಗ್ರಾಂ ಕ್ಯಾಲರಿ ಸೃಷ್ಟಿಸುತ್ತದೆ.