ಒಬ್ಬ ಉದ್ಯೋಗಿಯು ಕೊನೆವರೆಗೂ ಕೂಡ ತಿಂಗಳ ಸಂಬಳಕ್ಕಾಗಿ ದುಡಿಯುವ ವ್ಯಕ್ತಿಯಾಗಿ ಉಳಿಯುತ್ತಾನೆ. ಆದರೆ ಒಬ್ಬ ಉದ್ಯಮಿ ಅತಿ ಕಡಿಮೆ ಸಮಯದಲ್ಲಿ ಒಂದು ಒಳ್ಳೆ ಐಡಿಯಾದಿಂದ ಬಹಳ ಹಣ ಗಳಿಸಿ ತನ್ನ ಬದುಕನ್ನು ರಾಜನಂತೆ ಬದುಕುತ್ತಾನೆ ಹಾಗಾಗಿ ಈಗಿನ ಯುವ ಜನತೆ ಉದ್ಯೋಗ ಹಿಡಿಯುವ ಬದಲು ತಮ್ಮದೇ ಆದ ಸ್ವಂತ ದುಡಿಮೆ ಮಾಡಲು ಹಾತೊರೆಯುತ್ತಾರೆ.
ಅದಕ್ಕೆ ತಕ್ಕ ಹಾಗೆ ಈ ರೀತಿ ಟ್ಯಾಲೆಂಟ್ ಹೊಂದಿರುವ ಮತ್ತು ಐಡಿಯಾಗಳನ್ನು ಹೊಂದಿರುವವರಿಗೆ ಸರ್ಕಾರವು ಕೂಡ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ. ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು ಮತ್ತು ಇನ್ನಿತರ ಸವಲತ್ತುಗಳನ್ನು ಪಡೆದುಕೊಂಡು ಒಬ್ಬ ಯಶಸ್ವಿ ಉದ್ಯಮಿ ಆಗಿ ತಿಂಗಳಿಗೆ ಲಕ್ಷಾಂತರ ಹಣ ದುಡಿಯಬಹುದು.
ನಿಮಗೂ ಕೂಡ ಈ ರೀತಿ ತಿಂಗಳಿಗೆ ಲಕ್ಷ ಹಣ ದುಡಿಯಬೇಕು ಎನ್ನುವ ಇಚ್ಛೆ ಇದ್ದರೆ ಭಾರತದಲ್ಲಿ ಬಹಳ ಪಾಪುಲರ್ ಆಗಿರುವ ಈ ಬಿಸಿನೆಸ್ ಸ್ಟಾರ್ಟ್ ಮಾಡಿ ಬಹಳ ಚೆನ್ನಾಗಿ ವರ್ಕ್ ಔಟ್ ಆಗುವ ಒಂದು ಬಿಸಿನೆಸ್ ಎಂದರೆ ಅದು ನಾವು ತಿನ್ನುವ ಆಹಾರ ಎಂದು ಹೇಳಬಹುದು. ಯಾಕೆಂದರೆ ವ್ಯಕ್ತಿ ಯಾವುದನ್ನು ಬೇಕಾದರೂ ಬೇಡ ಎನ್ನಬಹುದು ಅಥವಾ ಇರುವುದನ್ನೇ ಮರಳಿ ಬಳಸಬಹುದು ಆದರೆ ಆಹಾರದ ವಿಚಾರದಲ್ಲಿ ಆ ರೀತಿ ಆಗುವುದಿಲ್ಲ.
ಎಷ್ಟು ಉತ್ಪಾದನೆ ಮಾಡಿದರು ಕೂಡ ಅದು ಖಾಲಿಯಾಗುತ್ತಿರುತ್ತದೆ, ಇದನ್ನೇ ಟ್ರಿಕ್ ಆಗಿ ಇಟ್ಟುಕೊಂಡು ಇದಕ್ಕೆ ಸಂಬಂಧಪಟ್ಟ ಉದ್ಯಮ ಮಾಡಬಹುದು. ಅದರಲ್ಲೂ ಸ್ನಾಕ್ಸ್ ಗೆ ಸಂಬಂಧಿಸಿದ ಯಾವುದಾದರೂ ಐಡಿಯಾ ಇದ್ದರೆ ಅದು ಇನ್ನೂ ಬೆಸ್ಟ್. ಯಾಕೆಂದರೆ ಹೀಗೆ ಕಾಲದಲ್ಲಿ ಜನರು ಸಂಜೆ ಸಮಯ ಕಾಫಿ ಜೊತೆ ಏನಾದರೂ ತಿನ್ನಲು ಬಯಸುತ್ತಾರೆ.
ಮನೆಯಲ್ಲಿ ವೃದ್ಧರಿಂದ ಹಿಡಿದು ಕೆಲಸ ಮಾಡಿ ಸುಸ್ತಾಗಿರುವ ಗೃಹಿಣಿ. ಶಾಲಾ ಕಾಲೇಜು ಮುಗಿಸಿ ಬರುವ ಮಕ್ಕಳು ಮತ್ತು ಕೆಲಸದಿಂದ ಸಾಕಾಗಿ ಬರುವವರು ಈ ರೀತಿ ಎಲ್ಲರಿಗೂ ಕೂಡ ಹೊಟ್ಟೆ ಹಸಿದಿರುವ ಸಮಯ ಹಾಗೂ ತಿನ್ನಲು ಏನನ್ನಾದರೂ ಕೇಳುವ ಸಮಯ ಆದರೆ ಊಟ ಕೊಟ್ಟರೆ ಮಾಡುವ ಹೊತ್ತಲ್ಲ.
ಹಾಗಾಗಿ ಆ ಸಮಯದಲ್ಲಿ ಬಾಯನ್ನು ರುಚಿ ಮಾಡುವ ಸ್ಯಾಕ್ಸ್ ಸಿಕ್ಕರೆ ಸಾಕು ಈ ರೀತಿ ಸ್ನಾಕ್ಸ್ ಗಳಲ್ಲಿ ಭಾರತದ ಪೂರ್ತಿ ಜನಪ್ರಿಯ ಆಗಿರುವುದು ಮಂಡಕ್ಕಿಗೆ ಸಂಬಂಧಪಟ್ಟ ಚಾಟ್ಸ್ ಗಳು. ಮಂಡಕ್ಕಿಯಿಂದ ಈ ರೀತಿ ಸಾಕಷ್ಟು ಸ್ನಾಕ್ಸ್ ಗಳನ್ನು ಮಾಡಬಹುದಾಗಿದ್ದು ಇದು ಅಂಗಡಿ ಮುಂಗಟುಗಳಲ್ಲೂ ಕೂಡ ಸಿಗುತ್ತದೆ ಮತ್ತು ಮನೆಯಲ್ಲೂ ಸುಲಭವಾಗಿ ಮಾಡಬಹುದಾದ ಸ್ನಾಕ್ಸ್ ಆಗಿದೆ.
ಹಾಗಾಗಿ ನೀವೇನಾದರೂ ಮಂಡಕ್ಕಿ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪಿಸಿದರೆ ಖಂಡಿತವಾಗಿಯೂ ಅದರಲ್ಲಿ ಯಶಸ್ವಿಯಾಗಿ ತಿಂಗಳಿಗೆ ಲಕ್ಷಗಟ್ಟಲೇ ಹಣ ಗಳಿಸುತ್ತೀರಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಗ್ರಾಮೋದ್ಯೋಗ್ ರೋಜ್ಗಾರ್ ಯೋಜನೆಗೆ ಸಂಬಂಧಿಸಿದ ಯೋಜನೆಯ ವಿವರದ ಪ್ರಕಾರ, ಮಂಡಕ್ಕಿ ಉತ್ಪಾದನಾ ಘಟಕದ ವೆಚ್ಚ ಹಾಗೂ ಲಾಭದ ವಿವರ ಹೀಗಿದೆ.
ಸ್ವಂತ ಜಾಗ ಇದ್ದರೆ ಕಟ್ಟಡದ ಶೆಡ್ ನಿರ್ಮಿಸಲು 1000 ಚದರ ಅಡಿ ಸ್ಪೇಸ್ ಬೇಕಾಗುತ್ತದೆ, ರೂ. 2 ಲಕ್ಷ ಸಲಕರಣೆ ವೆಚ್ಚವಾಗಿ, ರೂ. 1 ಲಕ್ಷ ಇನ್ನಿತರ ಖರ್ಚು ಹಾಗೂ ಹೆಚ್ಚುವರಿಯಾಗಿ ಲೆಕ್ಕ ಹಾಕಿದರೆ ಒಟ್ಟು ಬಂಡವಾಳ ವೆಚ್ಚ ರೂ. 3 ಬೇಕಾಗುತ್ತದೆ.
KVIC ಯೋಜನಾ ವರದಿಯ ಪ್ರಕಾರ ಇಷ್ಟು ಬಂಡವಾಳದಲ್ಲಿ ನೂರಕ್ಕೆ ನೂರರಷ್ಟು ಎಲ್ಲವನ್ನು ಬಳಸಿಕೊಂಡು ಮಂಡಕ್ಕಿ ಉತ್ಪಾದಿಸಿದರೆ, ವಾರ್ಷಿಕ 369 ಕ್ವಿಂಟಾಲ್ಗಳಷ್ಟು ಮಂಡಕ್ಕಿ ಉತ್ಪಾದನೆಯಾಗುತ್ತದೆ. ಕ್ವಿಂಟಲ್ ಗೆ 1,200 ದರದಲ್ಲಿ ಮಾರಾಟ ಮಾಡಿದರೂ ನೀವು ವರ್ಷಕ್ಕೆ 4,43,000 ರೂ ಗಳಿಸಬಹುದು.