ಸರ್ಕಾರಿ ಹುದ್ದೆ ಮಾಡಬೇಕು ಎನ್ನುವುದು ಅನೇಕರ ಕನಸು. ಜವಾನ ಹುದ್ದೆ ಆದರೂ ಪರವಾಗಿಲ್ಲ ಸರ್ಕಾರಿ ಹುದ್ದೆ ಎಂದರೆ ಒಂದು ಗೌರವ ಹಾಗೂ ಒಂದು ಭದ್ರತೆ ಎನ್ನುವುದು ಇದಕ್ಕೆ ಕಾರಣ. ಇದರ ಸಲುವಾಗಿ ಹಗಲಿರುಳು ಎನ್ನದೆ ಸರ್ಕಾರಿ ಹುದ್ದೆ ಪಡೆಯುವುದಕ್ಕಾಗಿ ಶ್ರಮಪಟ್ಟು ಓದುವ ಅಪಾರ ಆಕಾಂಕ್ಷಿಗಳ ಸಂಖ್ಯೆ ಕರ್ನಾಟಕದಲ್ಲಿದೆ. ಸರ್ಕಾರಿ ಉದ್ಯೋಗ ಪಡೆಯಲು ಪದವಿ ಹಾಗೂ ಸ್ನಾತಕೋತರ ಪದವಿ ಪಡೆದವರು ಮಾತ್ರ ಅಲ್ಲದೆ SSLC ತನಕ ಓದಿದವರು ಸಹ ಕನಸು ಕಾಣುತ್ತಾರೆ. ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಹಾಗೂ ಭಾಗ್ಯ ಎಲ್ಲರಿಗೂ ಕೂಡ ಇದೆ ಈಗ ಅಂತಹದ್ದೇ ಒಂದು ಸದಾವಕಾಶ SSLC ಓದಿರುವ ಡ್ರೈವರ್ ಗಳ ಪಾಲಿಗೂ ಇದೆ. ಈಗ ಕರ್ನಾಟಕ ಹೈಕೋರ್ಟಲ್ಲಿ ಬರೋಬ್ಬರಿ 39 ಹುದ್ದೆಗಳಿಗಾಗಿ ಹತ್ತನೇ ತರಗತಿ ಓದಿದವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಚಾಲಕ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ಕರ್ನಾಟಕದಾದ್ಯಂತ ಇರುವ ಯಾವುದೇ ಭಾಗದ ಅಥವಾ ಯಾವುದೇ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 39 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 02 ಹುದ್ದೆಗಳು ಕಲ್ಯಾಣ ಕರ್ನಾಟಕ ಕೇಟರ್ ಗೆ ಸೇರಲಿದೆ. ಉಳಿದ 37 ಹುದ್ದೆಗಳಿಗೆ ಎಲ್ಲರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆಯ್ಕೆ ಆದರೆ ಅವರಿಗೆ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ಆಗಿ ಕರ್ನಾಟಕದ ಹೈಕೋರ್ಟ್ ಅಲ್ಲಿ ಕೆಲಸ ಮಾಡುವ ಅದೃಷ್ಟ ಪಡೆಯಲಿದ್ದಾರೆ. ಈ ಉದ್ಯೋಗ ಪಡೆಯಲು ಅಭ್ಯರ್ಥಿಗಳು ಕೆಲವು ಅರ್ಹತೆಗಳನ್ನು ಕೂಡ ಹೊಂದಬೇಕಾಗಿದೆ. ಅದರಲ್ಲಿ ಮುಖ್ಯವಾಗಿ ಅವರು ಕರ್ನಾಟಕದಿಂದ ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣವಾಗಿರುವ ಅಭ್ಯರ್ಥಿ ಆಗಿರಬೇಕು ಮತ್ತು ಅಭ್ಯರ್ಥಿಗಳೆಲ್ಲಾ ಕಡ್ಡಾಯವಾಗಿ ಡ್ರೈವಿಂಗ್ ಕಲಿತಿದ್ದು ಡ್ರೈವಿಂಗ್ ಲೈಸೆನ್ ಸಹ ಹೊಂದಿರಬೇಕಾಗಿದೆ.
ವಯೋಮಾನ ವಿಷಯದಲ್ಲಿ ವಯಸ್ಸು ಅರ್ಜಿ ಸಲ್ಲಿಸುವ ದಿನಾಂಕವಾದ 06.04.2023 ಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷಗಳನ್ನು ಮೀರಿರಬಾರದು. ಕೆಲ ಅಭ್ಯರ್ಥಿಗಳಿಗೆ ವಯೋಮಾನ ಸಡಿಲಿಕೆ ಇದ್ದು ಎಸ್ಸಿ ಎಸ್ಟಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ 2A, 2B,3A, 3B, ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ 03 ವರ್ಷದವರೆಗೆ ವಯೋಮಾನ ಸಡಿಲಿಕೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 25,500 ರಿಂದ 81,100 ವೇತನ ನಿಗದಿ ಆಗಿದೆ. ಈ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ 06.04.2023 ಕಡೆ ದಿನಾಂಕವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಚಾಲಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿ ಶುಲ್ಕ SC & ST ಮತ್ತು ಪ್ರವರ್ಗ 01 ಅಭ್ಯರ್ಥಿಗಳಿಗೆ 250 ರೂ ಮತ್ತು ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ ಇರುತ್ತದೆ. ಅರ್ಜಿ ಶುಲ್ಕವನ್ನು ಸಹ ಅರ್ಜಿಯ ಜೊತೆಗೆ ಆನ್ಲೈನ್ ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಿ ಜೊತೆಗೆ ಈ ಉಪಯುಕ್ತ ಮಾಹಿತಿಯನ್ನು ಇನ್ನು ಅನೇಕ ಉದ್ಯೋಗ ಆಕಾಂಕ್ಷಿಗಳಿಗೆ ತಲುಪುವಂತೆ ಶೇರ್ ಮಾಡಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತೆ ಮಾಡಿ.