ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ.! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ತಿಳಿಯಲು ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!

ಕೇಂದ್ರ ಸರ್ಕಾರ (Government) ಕೊನೆಗೂ ರಾಜ್ಯ ಸರ್ಕಾರದ ಒತ್ತಾಯಕ್ಕೆ ಮಣಿದು ರಾಜ್ಯದ ರೈತರ (farmers) ಪಾಲಿನ ಬರ ಪರಿಹಾರದ (drought releaf fund) ಹಣ ಬಿಡುಗಡೆ ಮಾಡಿದೆ. ಬಹಳ ತಡವಾದರೂ ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ ರೂ.3,454 ಕೋಟಿ ಬರ ಪರಿಹಾರದ ಹಣ ಮಂಜೂರಾಗಿದೆ ಎನ್ನುವುದೇ ಸಮಾಧಾನ.

WhatsApp Group Join Now
Telegram Group Join Now

2023-24ನೇ ಸಾಲಿನಲ್ಲಿ ರಾಜ್ಯದ ಉಂಟಾಗಿದ್ದ ಭೀಕರ ಬರಗಾಲದ ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ ಇದು ಎಲ್ಲಾ ವರ್ಗದ ಜನರ ಜನಜೀವನದ ಮೇಲೆ ಪರಿಣಾಮ ಬೀರಿದ್ದರು ಮಳೆಯನ್ನೇ ಆಶ್ರಯಿಸಿ ಜೀವನ ನಡೆಸುತ್ತ ರೈತರ ಪಾಲಿಗೆ ದೊಡ್ಡ ಬರೆ ಎಳೆದಂತಾಗಿತ್ತು. ಮುಂಗಾರು ಮಳೆ ವೈಫಲ್ಯ ರಾಜ್ಯದ ಕೋಟ್ಯಾಂತರ ರೈತರ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿತ್ತು.

ಈ ಸುದ್ದಿ ಓದಿ:-ಮೇ 1 ರಿಂದ 4 ಹೊಸ ರೂಲ್ಸ್ ಜಾರಿ.! ಗ್ಯಾಸ್, ಬ್ಯಾಂಕ್ ಅಕೌಂಟ್, ವಾಹನ ಇರುವವರು ತಪ್ಪದೆ ತಿಳಿದುಕೊಳ್ಳಿ.!

ರಾಜ್ಯದಲ್ಲಿ ಆಡಳಿತದಲ್ಲಿದ್ದ ಸರ್ಕಾರವು ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತು ರೈತರ ಕುಟುಂಬಕ್ಕೆ ನೆರವಾಗುವಂತಹ ಹಲವು ಕ್ರಮಗಳನ್ನು ಕೈಕೊಂಡು ರಾಜ್ಯದ ಕಡೆಯಿಂದಲೂ ಮೊದಲ ಹಂತದ ಬೆಳೆ ಪರಿಹಾರದ ಹಣವಾಗಿ ರೂ.2000 ಬಿಡುಗಡೆ ಮಾಡಿದೆ ಮತ್ತು ಕೇಂದ್ರ ಸರ್ಕಾರದಿಂದ NDRF ಕೈಪಿಡಿ ಅನ್ವಯ ಪರಿಶೀಲನೆ ನಡೆದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 200 ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆಯಾಗಿದೆ.

2023-24ನೇ ಸಾಲಿನಲ್ಲಿ ಮಳೆ ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತನ ಪಾಲಿಗೆ ಈ ಪರಿಹಾರದ ಹಣವೇ ಕುಟುಂಬ ನಿರ್ವಹಣೆಗೆ ಆಸರೆ. ಹೀಗಾಗಿ ಎಲ್ಲ ರೈತರು ಇಂತಹದೊಂದು ಸುದ್ದಿಗಾಗಿ ಎದುರು ನೋಡುತ್ತಿದ್ದರು.

ಅಂತಿಮವಾಗಿ ಬರ ಪರಿಹಾರದ ಹಣ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹಂತ ಹಂತವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ನೀವು ರೈತರಾಗಿದ್ದು ನಿಮ್ಮ ಖಾತೆಗೆ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಿ.

ಈ ಸುದ್ದಿ ಓದಿ:-LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು

* ಮೊದಲಿಗೆ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಪರಿಹಾರ ಭೂಮಿ ಆನ್ಲೈನ್ (parihara Bhoomi online) ವೆಬ್ಸೈಟ್ ಗೆ ಭೇಟಿ ಕೊಡಿ
https://parihara.karnataka.gov.in
* ಈಗ ನೀವು ಭೂಮಿ ಆನ್ಲೈನ್ (Bhoomi online) ಅಧಿಕೃತ ವೆಬ್ಸೈಟ್ ಗೆ ಹೋಗುತ್ತೀರಿ.
* ಸ್ಕ್ರೀನ್ ನ ಎಡಭಾಗದಲ್ಲಿ ಪರಿಹಾರ ಪೇಮೆಂಟ್ ರಿಪೋರ್ಟ್ (parihara payment reports) ಎನ್ನುವ ವಿಭಾಗ ಕಾಣುತ್ತದೆ. ಅದರಲ್ಲಿ ಹಲವಾರು ಆಪ್ಷನ್ ಗಳು ಇರುತ್ತವೆ, ನೀವು ಈ ಲಿಸ್ಟ್ ನಲ್ಲಿ ನ್ಯೂ ರಿಪೋರ್ಟ್ (New report) ಎನ್ನುವುದರ ಮೇಲೆ ಕ್ಲಿಕ್ ಮಾಡಿ

* ಈಗ ಸ್ಕ್ರೀನ್ ಮೇಲೆ ಹೊಸ ಇಂಟರ್ಫೇಸ್ ಓಪನ್ ಆಗುತ್ತದೆ. ಭೂಮಿ ಆನ್ಲೈನ್ – ಪರಿಹಾರ (ಇನ್ ಪುಟ್ ಸಬ್ಸಿಡಿ) ಪೇಮೆಂಟ್ ಡೀಟೇಲ್ಸ್ Bhoomi online – parihara (input subsidy) payment details ಎಂದು ಕಾಣುತ್ತದೆ
* ಇದರಲ್ಲಿ ವರ್ಷ(Year), ಋತು (Season), ವಿಪತ್ತಿನ ವಿಧ (Calamity type) ಎನ್ನುವ ಆಕ್ಷನ್ ಕಾಣುತ್ತಿದೆ ಇದರಲ್ಲಿ ವರ್ಷ – 2022-24, ಋತು – ಮುಂಗಾರು (Kharif), ವಿಪತ್ತಿನ ವಿಧ – ಬರ (Drought) ಎಂದು ಸೆಲೆಕ್ಟ್ get data ಕ್ಲಿಕ್ ಮಾಡಿ.

ಈ ಸುದ್ದಿ ಓದಿ:-ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!

* ಈಗ ನೀವು ನಾಲ್ಕು ವಿಧಾನದ ಮೂಲಕ ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿದುಕೊಳ್ಳಬಹುದು.
1. ಆಧಾರ್ ಮೂಲಕ
2. ಮೊಬೈಲ್ ನಂಬರ್ ಮೂಲಕ
3. ರೈತನ ಐಡಿ
4. ಸರ್ವೆ ನಂಬರ್

* ಈ ಮೇಲೆ ತಿಳಿಸಿದ ನಾಲ್ಕು ವಿಧಾನಗಳಲ್ಲಿ ನಿಮಗೆ ಯಾವುದು ಅನುಕೂಲ ಅದನ್ನು ಕ್ಲಿಕ್ ಮಾಡಿ ಉದಾಹರಣೆಗೆ ಆಧಾರ್ ಸಂಖ್ಯೆ ಕ್ಲಿಕ್ ಮಾಡಿದರೆ ಮುಂದಿನ ಹಂತದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಆ ರೈತನ ಯಾವ ಬ್ಯಾಂಕ್ ಖಾತೆಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆ ಆಗಿದೆ ಮತ್ತು ಆ ರೈತನ ಭೂಮಿ ಸರ್ವೇ ನಂಬರ್, ಗ್ರಾಮ, ತಾಲೂಕು. ಜಿಲ್ಲೆ ಇತ್ಯಾದಿ ಸಂಪೂರ್ಣ ಮಾಹಿತಿ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now