ಹಣ ಸಂಪಾದನೆ ಮಾಡುವುದು, ಸಂಪಾದನೆ ಮಾಡಿದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡುವುದು, ಇದರಿಂದ ಹೆಚ್ಚು ಲಾಭ ಮಾಡುವುದು ಮತ್ತು ಲಾಭ ಗಳಿಸಿದ ಹಣವನ್ನು ಉಳಿಸಿಕೊಳ್ಳುವುದು ಇದು ಎಲ್ಲರ ಇಚ್ಛೆ. ಆದರೆ ಇದಕ್ಕಾಗಿ ನಾವು ಹುಡುಕಿಕೊಳ್ಳುವ ಮಾರ್ಗಗಳು ಸರಿ ಇದ್ದರೆ ಮಾತ್ರ ನಾವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ. ಇಲ್ಲವಾದಲ್ಲಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಜೀವನಪೂರ್ತಿ ಪಶ್ಚಾತ್ತಾಪ ಪಡುವಂತಹ ತೊಂದರೆಗಳಲ್ಲಿ ನಾವು ಸಿಕ್ಕಿಹಾಕಿಕೊಳ್ಳ ಬೇಕಾಗುತ್ತದೆ.
ಹಾಗಾಗಿ ಉಳಿತಾಯ ಮಾಡಲು ಅಥವಾ ಹೂಡಿಕೆ ಮಾಡುವಲು ಇಚ್ಚಿಸುವವರು ಸ್ಟಾಕ್ ಮಾರ್ಕೆಟ್ ಅಥವಾ ಶೇರ್ ಮಾರ್ಕೆಟ್ ಗಳನ್ನು ನಂಬಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ಇವುಗಳಲ್ಲಿ ಹೆಚ್ಚಾಗಿ ಲಾಸ್ ಆಗಿರುವುದು ಹಾಗೂ ಮೋಸ ಆಗಿರುವುದು ಇದಕ್ಕೆಲ್ಲ ಕಾರಣ. ಈ ರೀತಿ ಹಣಕ್ಕೆ ಭದ್ರತೆ ಜೊತೆಗೆ ಲಾಭ ಕೂಡ ಬೇಕು ಎಂದರೆ ಅಂಚೆ ಯೋಜನೆಗಳೇ ಬೆಸ್ಟ್.
ಅಂಚೆ ಕಛೇರಿಗಳಲ್ಲಿ ನಿಶ್ಚಿತ ಠೇವಣಿ ಅಂದರೆ FD ಇಡುವ ಮೂಲಕ ನೀವು ನಿಮ್ಮ ಹಣಕ್ಕೆ ಹೆಚ್ಚಿನ ಲಾಭ ಪಡೆಯಬಹುದು. ಆದರೆ ಹೆಚ್ಚಿನ ಜನರಿಗೆ ಅಂಚೆ ಕಚೇರಿಯಲ್ಲಿ ಈ ರೀತಿ ಹಣವನ್ನು ಹೂಡಿಕೆ ಮಾಡುವ ಮತ್ತು ಉಳಿತಾಯ ಮಾಡುವ ಯೋಜನೆಗಳು ಕೂಡ ಇವೆ ಎನ್ನುವ ಮಾಹಿತಿಯೇ ಗೊತ್ತಿಲ್ಲ. ಅದಕ್ಕಾಗಿ ಈ ಅಂಕಣದಲ್ಲಿ ಅಂಚೆ ಕಚೇರಿ ಕುರಿತ ಕೆಲ ಪ್ರಮುಖ ಮಾಹಿತಿ ಹಾಗೂ ಯಾವ ಯೋಜನೆಗಳಿಂದ ಎಷ್ಟು ಲಾಭ ಸಿಗುತ್ತದೆ ಎನ್ನುವುದನ್ನು ತಿಳಿಸಿ ಕೊಡುತ್ತಿದ್ದೇವೆ.
● ಅಂಚೆ ಕಚೇರಿಯ FD ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ನೂರಕ್ಕೆ ನೂರರಷ್ಟು ಸುರಕ್ಷತೆ ಇರುತ್ತದೆ. ಸರ್ಕಾರವೇ ನಿಮ್ಮ ಹಣಕ್ಕೆ ಗ್ಯಾರಂಟಿ ಇರುತ್ತದೆ.
● ಯಾವುದೇ ಏಜ್ ಲಿಮಿಟ್ ಇರುವುದಿಲ್ಲ, ಯಾವುದೇ ವಯಸ್ಸಿನವರು ಬೇಕಾದರೂ ಹಣ ಹೂಡಿಕೆ ಮಾಡಬಹುದು.
● ಕನಿಷ್ಠ200ರೂ ಅನ್ನು ಹೂಡಿಕೆ ಮಾಡುವ ಮೂಲಕ ಗರಿಷ್ಠ ಎಷ್ಟು ಹಣವನ್ನು ಬೇಕಾದರೂ ಹೂಡಿಕೆ ಮಾಡಬಹುದು, ಅದಕ್ಕೂ ಸಹ ಯಾವುದೇ ಮಿತಿ ಇಲ್ಲ.
● ನೀವು ಠೇವಣಿ ಇಡುವ ಹಣದ ಅವಧಿಯು ಒಂದು ವರ್ಷದಿಂದ ಐದು ವರ್ಷ ಆಧರಿಸಿರುತ್ತದೆ.
● ಈ ಅವಧಿಯಲ್ಲಿಯೇ ಯಾವುದಾದರೂ ಅವಶ್ಯಕತೆಗೆ ಹಣ ಹಿಂಪಡೆಯುವುದಾದರೆ ಕಡಿಮೆ ಶುಲ್ಕವನ್ನು ಪಾವತಿ ಮಾಡಿ ನಿಮ್ಮ ಹಣವನ್ನು ಹಿಂಪಡೆಯಬಹುದು.
● 1-3 ವರ್ಷದವರೆಗೆ ಹೂಡಿಕೆ ಮಾಡುವವರಿಗೆ ನಿಮ್ಮ ಹಣಕ್ಕೆ 7% ಬಡ್ಡಿದರ ಸಿಗುತ್ತದೆ. 5 ವರ್ಷ ಹೂಡಿಕೆ ಮಾಡುವುದಾದರೆ 7.8% ಬಡ್ಡಿದರ ಸಿಗುತ್ತದೆ.
ಉದಾಹರಣೆಯೊಂದಿಗೆ ಹೇಳುವುದಾದರೆ ನೀವು 1 ಲಕ್ಷ ಹಣವನ್ನು ಅಂಚೆ ಕಛೇರಿಯ ಈ FD ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ನೀವು ಒಂದು ವರ್ಷಕ್ಕೆ ಇದನ್ನು ಠೇವಣಿ ಮಾಡಿದರೆ 7% ಬಡ್ಡಿದರದ ಪ್ರಕಾರ 1,07186 ಹಣವನ್ನು ಪಡೆಯುತ್ತೀರಿ. ಎರಡು ವರ್ಷಗಳಿಗೆ ಠೇವಣಿ ಮಾಡುವುದಾದರೆ ಇದೇ ಬಡ್ಡಿದರದಲ್ಲಿ1,14,888 ಮತ್ತು 3 ವರ್ಷಗಳಿಗೆ ಠೇವಣಿ ಇಡುವುದಾದರೆ 1,23,144 4 ವರ್ಷಗಳಿಗೆ ಠೇವಣಿ ಇಡುವುದಾದರೆ 1,31,993 ಹಾಗೂ 5 ವರ್ಷಗಳಿಗೆ ಠೇವಣಿ ಇಡುವುದಾದರೆ 1,47,145 ಹಣವನ್ನು ಪಡೆಯಲಿದ್ದೀರಿ.
ಇದನ್ನು 10 ವರ್ಷಗಳಿಗೂ ಕೂಡ ವಿಸ್ತರಿಸಬಹುದು. ಒಂದು ವೇಳೆ ನೀವು ಒಂದು ಲಕ್ಷ ರೂಪಾಯಿಯನ್ನು 10 ವರ್ಷದವರೆಗೆ ಠೇವಣಿ ಇಡುವುದಾದರೆ ಹತ್ತು ವರ್ಷ ಆದ ಬಳಿಕ ನೀವು 2,16,516 ರೂಗಳನ್ನು ಪಡೆಯುತ್ತೀರಿ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಶಾಖೆಗೆ ಭೇಟಿ ಕೊಡಿ.