ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರಿಗಾಗಿ ಜಾರಿಗೆ ತಂದ ಅನೇಕ ಯೋಜನೆಗಳ ಪೈಕಿ PM ಕಿಸಾನ್ ಸಮ್ಮಾನ್ ಯೋಜನೆಯು ಕೂಡ ಒಂದು. ಹಿಂದೆಂದೂ ಕಾಣದ ಹೊಸ ರೀತಿಯಲ್ಲಿ ಈ ಯೋಜನೆನಿಂದ ರೈತರು ಉಪಯೋಗ ಕಂಡಿದ್ದಾರೆ. ಯಾಕೆಂದರೆ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ರೈತರ ಖಾತೆಗಳಿಗೆ ಸಹಾಯಧನ ಯಾವ ಮಧ್ಯವರ್ತಿಗಳ ಹಾವಳಿಯೂ ಇಲ್ಲದೆ ನೇರವಾಗಿ ವರ್ಗಾವಣೆ ಆಗುತ್ತಿದೆ.
ದೇಶದ 14 ಕೋಟಿ ರೈತರಿಗೆ DBT ಮೂಲಕ ಪ್ರತಿ ಆರ್ಥಿಕ ವರ್ಷದಲ್ಲಿ, ನಾಲ್ಕು ತಿಂಗಳ ಅಂತರಕೊಮ್ಮೆ ತಲಾ 2000ರೂ. ಬಿಡುಗಡೆ ಆಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಈ ಯೋಜನೆಗೆ ನೋಂದಯಿತರಾಗಿರುವ ಪ್ರತಿ ರೈತನು ವರ್ಷಕ್ಕೆ ಕೇಂದ್ರ ಸರ್ಕಾರದಿಂದ 6000 ರೂಗಳನ್ನು ಸಹಾಯಧನವಾಗಿ ಪಡೆಯುತ್ತಿದ್ದಾರೆ. ಇದುವರೆಗೂ ಯಶಸ್ವಿಯಾಗಿ 13 ಕಂತುಗಳ ಹಣವು ರೈತರ ಖಾತೆಗೆ ಸೇರಿದೆ.
ಫೆಬ್ರವರಿ 1, 2019 ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಈ ಯೋಜನೆ ಬಗ್ಗೆ ಘೋಷಣೆ ಮಾಡಿ ಮೊದಲ ಕಂತಿನ ಹಣ ಬಿಡುಗಡೆ ಮಾಡಿದ್ದರು. ಅಂದಿನಿಂದ ತಪ್ಪದೇ ಪ್ರತಿ ವರ್ಷವೂ ಕೂಡ ಈ ಯೋಜನೆ ಹಣ ರೈತರ ಖಾತೆಗೆ ಸೇರುತ್ತಿದೆ. ಆದರೆ ಕಳೆದ ಬಾರಿ 13ನೇ ಕಂತಿನ ಹಣ ಅನೇಕರ ಕಾತೆ ಸೇರಿಲ್ಲ. ಅವರು ಕೊಟ್ಟ ಮಾಹಿತಿಗಳಲ್ಲಿ ಹೊಂದಾಣಿಕೆ ಆಗದೇ ಇರುವುದು ನಖಲಿ ಫಲಾನುಭವಿಗಳು ಸೇರ್ಪಡೆ ಆಗಿರುವುದು ಬೆಳಕಿಗೆ ಬಂದಿರುವುದು.
ಈ ಎಲ್ಲಾ ಕಾರಣದಿಂದಾಗಿ ಇಂತಹ ರೈತರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಒಂದು ವೇಳೆ ನೀವು ಕಳೆದ ಬಾರಿ ಬಿಡುಗಡೆ ಆದ ಕಂತಿನ ಹಣದಿಂದ ವಂಚಿತರಾಗಿದ್ದರೆ, ನೀವು ಕೊಟ್ಟ ದಾಖಲೆಗಳಲ್ಲಿ ಹೊಂದಾಣಿಕೆ ಆಗದೆ ಇರುವುದು ಮುಖ್ಯ ಕಾರಣವಾಗಿರುತ್ತದೆ. ತಕ್ಷಣವೇ ಇ- ಕೆವೈಸಿ ಮಾಡುವುದು ಹಾಗೂ ನಿಮ್ಮ ದಾಖಲೆಗಳಲ್ಲಿರುವ ಲೋಪವನ್ನು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿದ್ದರೆ ಹಾಗೂ ಎಂದಿನಂತೆ ನೀವು 14ನೇ ಕಂತಿನ ಹಣವನ್ನು ಪಡೆಯಬಹುದು.
ಶೀಘ್ರದಲ್ಲೇ 14ನೇ ಕಂತಿನ ಹಣ ಬಿಡುಗಡೆ ಆಗುವ ಬಗ್ಗೆ ಶುಭ ಸುದ್ದಿ ಇದೆ. ಯಾಕೆಂದರೆ, ಫೆಬ್ರವರಿ ತಿಂಗಳಿನಲ್ಲಿ 13ನೇ ಕಂತಿನ ಹಣ ಬಿಡುಗಡೆ ಆಗಿರುವುದರಿಂದ ಅದು ಬಿಡುಗಡೆ ಆಗಿಯೇ ನಾಲ್ಕು ತಿಂಗಳಾಗುತ್ತಿದೆ. ಹಾಗಾಗಿ ಮೇ ಅಥವಾ ಜೂನ್ ತಿಂಗಳಿನಲ್ಲಿ ಅರ್ಹ ರೈತರ ಖಾತೆಗೆ 14ನೇ ಕಂತಿನ ಜಮೆ ಆಗಲಿದೆ ಎನ್ನುವ ಮಾಹಿತಿ ಬಲವಾಗಿದೆ.
ನೀವು ಕೂಡ PM ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದರೆ, 14ನೇ ಕಂತಿನ ಹಣಕ್ಕೆ ಸಂಬಂಧಪಟ್ಟ ಅಪ್ಡೇಟ್ ತಿಳಿದುಕೊಳ್ಳಲು ಈ ಕ್ರಮ ಪಾಲಿಸಿ:-
● ಮೊದಲಿಗೆ PM ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.
● ಫಲಾನುಭವಿಗಳ ಲಿಸ್ಟ್ ಇರುವ ಲಿಂಕ್ ಕ್ಲಿಕ್ ಮಾಡಿ, ಆ ಪುಟದಲ್ಲಿರುವ ಸರ್ಚ್ ಬಾರ್ ಅಲ್ಲಿ ನೀವು ನೀಡಿರುವ ಮೊಬೈಲ್ ಸಂಖ್ಯೆ ಮೂಲಕ ಅಥವಾ ಯೋಜನೆಗೆ ದಾಖಲಾತಿಯಾಗಿ ನೀಡಿದ್ದ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ.
● ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ನಂತರ 14ನೇ ಕಂತಿನ ಹಣದ ಬಿಡುಗಡೆ ಬಗ್ಗೆ ಸ್ಥಿತಿಯು ನಿಮಗೆ ತಿಳಿಯುತ್ತದೆ.
● ಈ ರೀತಿ ನೀವು ಮೊಬೈಲ್ ಮೂಲಕವೇ ನೀವು PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣದ ಬಗ್ಗೆ ಸ್ಟೇಟಸ್ ಚೆಕ್ ಮಾಡಬಹುದು.