ರೇಷನ್ ಕಾರ್ಡ್ ಈಗ ಪ್ರತಿಯೊಂದು ಕೆಲಸಕ್ಕೂ ಕೂಡ ಅಗತ್ಯವಾಗಿ ಬೇಕಾಗಿರುವ ಒಂದು ದಾಖಲೆ. ಯಾಕೆಂದರೆ ಮಕ್ಕಳನ್ನು ಶಾಲೆಗೆ ಸೇರಿಸುವಾಗ ರೇಷನ್ ಕಾರ್ಡ್ ಬೇಕಾಗುತ್ತದೆ, ನಂತರ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಲು, ಹಾಗೆ ಸರ್ಕಾರವು ಪಡಿತರ ವ್ಯವಸ್ಥೆ ಮೂಲಕ ಕೊಡುವ ಉಚಿತ ಪಡಿತರವನ್ನು ಪಡೆಯಲು ಹೀಗೆ ನಾನಾ ಕಾರಣಕ್ಕಾಗಿ ಮಕ್ಕಳಿಗೂ ಸಹ ರೇಷನ್ ಕಾರ್ಡ್ ಬೇಕಾಗಿರುತ್ತದೆ.
ಆರು ವರ್ಷದಿಂದ ಒಳಗಿರುವ ಮಕ್ಕಳನ್ನು ರೇಷನ್ ಕಾರ್ಡ್ ಗೆ ಸೇರಿಸುವುದಕ್ಕೆ ಒಂದು ಪ್ರತ್ಯೇಕವಾದ ವ್ಯವಸ್ಥೆ ಇದೆ. ಯಾವ ರೀತಿ ನಮ್ಮ ರೇಷನ್ ಕಾರ್ಡ್ ಗೆ ನಮ್ಮ ಮಕ್ಕಳನ್ನು ಸೇರಿಸಬಹುದು ಅದಕ್ಕಾಗಿ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಈ ಎಲ್ಲ ವಿವರಗಳನ್ನು ಕೂಡ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಆರು ವರ್ಷದ ಒಳಗಿನ ಮಕ್ಕಳನ್ನು ರೇಷನ್ ಕಾರ್ಡ್ ಗೆ ಸೇರಿಸಲು ಬೇಕಾಗುವ ದಾಖಲೆಗಳು:-
● ಮಗುವಿನ ಆಧಾರ್ ಕಾರ್ಡ್ ಇರಬೇಕು
● ಆಧಾರ್ ಕಾರ್ಡಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಮಗುವಿನ ಹೆಸರು ಇರಬೇಕು.
● ಆಧಾರ್ ಕಾಡಿನಲ್ಲಿ ಮೊಬೈಲ್ ಸಂಖ್ಯೆ ನೋಂದಣಿ ಆಗಿರುವುದು ಕಡ್ಡಾಯ.
● ಮಗುವಿನ ಜನನ ಪ್ರಮಾಣ ಪತ್ರ ಕೂಡ ಕಡ್ಡಾಯ ದಾಖಲೆಯಾಗಿ ಬೇಕು.
ಮಗುವಿನ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸುವ ವಿಧಾನ:-
● ಹೊಸ ಪಡಿತರ ಚೇಟಿಗಾಗಿ ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿಗಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
● ಮೊದಲು ahara.kar.nic.in ವೆಬ್ ಸೈಟ್ ಗೆ ಭೇಟಿ ಕೊಡಿ
● ಬಲ ಭಾಗದಲ್ಲಿ ಇ-ಸೇವೆಗಳು ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ಪಡಿತರ ಸೇವೆಗಳ ಮೇಲೆ ಹೋಗಿ ತಿದ್ದುಪಡಿ ವಿನಂತಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಹೊಸ ಪೇಜ್ ಅಲ್ಲಿ ನೀವು ಯಾವ ಜಿಲ್ಲೆಗೆ ಸೇರಿದ್ದೀರಾ ಎಂದು ಕೇಳಲಾಗುತ್ತದೆ ಅದನ್ನು ಸೆಲೆಕ್ಟ್ ಮಾಡಿ ಮತ್ತು ನಿಮಗೆ ಯಾವ ಭಾಷೆ ಬೇಕು ಎಂದು ಕೇಳಲಾಗುತ್ತದೆ ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಆಪ್ಷನ್ ಇರುತ್ತದೆ ಕನ್ನಡ ಸೆಲೆಕ್ಟ್ ಮಾಡಿ.
● ಪಡಿತರ ಚೀಟಿ ಸಂಖ್ಯೆ ಕೇಳಲಾಗುತ್ತದೆ ನಿಮ್ಮ ಕುಟುಂಬಕ್ಕೆ ನೀಡಿರುವ ಅಲ್ಫಾ ನ್ಯೂಮರಿಕ್ ಸಂಖ್ಯೆಯ ಪಡಿತರ ಸಂಖ್ಯೆಯನ್ನು ಎಂಟ್ರಿ ಮಾಡಿ.
● ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ತೋರಿಸುತ್ತದೆ ಅದರಲ್ಲಿ ಒಬ್ಬ ಸದಸ್ಯರ ಹೆಸರನ್ನು ಸೆಲೆಕ್ಟ್ ಮಾಡಬೇಕು. ನಂತರ ಅವರ ಬಯೋಮೆಟ್ರಿಕ್ ಆದ ಥಂಬ್ ಇಂಪ್ರೆಶನ್ ಪಡೆದು ಅಪ್ಲೋಡ್ ಮಾಡಿ ನಂತರ ಅಲ್ಲಿ ತೊರಲಾಗುವ ಕ್ಯಾಪ್ಚಾ ಕೂಡ ಹಾಕಬೇಕು.
● ಇದು ಸಕ್ಸಸ್ ಆದ ಮೇಲೆ ಹೊಸದೊಂದು ಪೇಜ್ ಕಾಣುತ್ತದೆ ಅದರಲ್ಲಿ ನಾಲ್ಕು ಆಪ್ಷನ್ ಗಳು ಇರುತ್ತವೆ. ● ಮೊದಲನೇ ಆಪ್ಷನ್ ಅಲ್ಲಿಯೇ ಸದಸ್ಯರ ಹೆಸರನ್ನು ಸೇರಿಸುವುದು ಅಥವಾ ಎಡಿಟ್ ಮಾಡುವ ಆಯ್ಕೆ ಕೇಳಲಾಗಿರುತ್ತದೆ. ಅದನ್ನು ಸೆಲೆಕ್ಟ್ ಮಾಡಿ.
● ನೀವು ಸೆಲೆಕ್ಟ್ ಮಾಡಿದ ಮೇಲೆ ಅದಕ್ಕೆ ಸಂಬಂಧಪಟ್ಟ ನೆಕ್ಸ್ಟ್ ಪೇಜ್ ಗೆ ಹೋಗುತ್ತೀರಿ.
ಅಲ್ಲಿಯವರೆಗೂ ಕೂಡ ಎಲ್ಲ ಸದಸ್ಯರ ಹೆಸರನ ಸೇರ್ಪಡೆಗೂ ಇದೇ ಮಾದರಿಯಲ್ಲಿ ಅನುಸರಿಸಲಾಗುತ್ತದೆ. ಆದರೆ ಅಲ್ಲಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಪ್ರತ್ಯೇಕವಾದ ಒಂದು ಆಪ್ಷನ್ ಇರುತ್ತದೆ ಅದನ್ನು ಅಲ್ಲಿ ಮೆಂಷನ್ ಕೂಡ ಮಾಡಲಾಗಿರುತ್ತದೆ.
● 6 ವರ್ಷದಿಂದ ಒಳಗಿರುವ ಮಕ್ಕಳ ಸೇರ್ಪಡೆಗೆ ಎನ್ನುವ ಆಕ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದುವರಿಯಬೇಕು.
ಆ ಪ್ರಕ್ರಿಯ ಪೂರ್ತಿಗೊಂಡ ಮೇಲೆ ನಿಮ್ಮ ಮಕ್ಕಳ ಹೆಸರು ರೇಷನ್ ಕಾರ್ಡ್ ಗೆ ಸೇರ್ಪಡೆ ಆಗುತ್ತದೆ.