ನಿಮ್ಮ ಬಳಿ ವೋಟರ್ ಐಡಿ ಇಲ್ವಾ.? ಚಿಂತಿಸ್ಬೇಡಿ ನೀವೂ ಕೂಡ ಮತ ಚಲಾಯಿಸ್ಬೋದು.! ಹೇಗೆ ಗೊತ್ತಾ.?

 

WhatsApp Group Join Now
Telegram Group Join Now

ಇನ್ನೇನು ಕರ್ನಾಟಕ ವಿಧಾನಸಭಾ ಎಲೆಕ್ಷನ್ ಹತ್ತಿರ ಬರುತ್ತಿದೆ. ಚುನಾವಣೆ ವೇಳೆ ಮತದಾನ ಮಾಡೋದು ನಮ್ಮ ಹಕ್ಕು ಮಾತ್ರ ಅಲ್ಲ, ಕರ್ತವ್ಯ ಕೂಡಾ ಹೌದು. ಮತ ಹಾಕಬೇಕು ಅಂದ್ರೆ ವೋಟರ್ ಐಡಿ ಕಾರ್ಡ್ ಅಂದ್ರೆ, ಮತದಾನ ಚೀಟಿ ನಿಮ್ಮ ಬಳಿ ಇರಬೇಕು. ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇರಬೇಕು. ಒಂದು ವೇಳೆ ವೋಟರ್ ಐಡಿ ಕಾರ್ಡ್‌ ನಿಮ್ಮ ಬಳಿ ಇಲ್ಲ ಅಂದ್ರೆ ಏನು ಮಾಡಬೇಕು? ವೋಟರ್ ಐಡಿ ಕಾರ್ಡ್ ಕಳೆದು ಹೋಗಿದ್ರೆ ಮತ ಹಾಕೋದು ಹೇಗೆ? ಮತದಾರರ ಗುರುತಿನ ಚೀಟಿ ಇಲ್ಲದೆಯೂ ವೋಟ್ ಹಾಕಬಹುದಾ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವೋಟರ್ ಐಡಿ ಕಾರ್ಡ್ ಇಲ್ಲದೆ ಮತ ಚಲಾಯಿಸೋದು ಹೇಗೆ?
ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇಲ್ಲ ಅಂತಾದರೆ, ನೀವು ಇನ್ನಿತರೆ 11 ದಾಖಲಾತಿಗಳನ್ನು ಬಳಸಿಕೊಂಡು ಮತದಾನ ಮಾಡಬಹುದು. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ತೋರಿಸಿ ವೋಟ್ ಹಾಕಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ತಮ್ಮ ಐಡಿ ಕಾರ್ಡ್ ತೋರಿಸಿ ಮತ ಹಾಕಬಹುದು. ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್‌ಗಳಲ್ಲಿ ಕೊಡುವ ಫೋಟೋ ಸಹಿತ ಪಾಸ್‌ ಬುಕ್ ಕೂಡಾ ಮತ ಹಾಕಲು ಬಳಸಬಹುದು. ಪಾನ್ ಕಾರ್ಡ್‌ ತೋರಿಸಿ ವೋಟ್ ಹಾಕಬಹುದು. ಎನ್‌ಪಿಆರ್ ಅಡಿ ವಿತರಣೆ ಮಾಡಲಾಗುವ ಸ್ಮಾರ್ಟ್‌ ಕಾರ್ಡ್ ಹಾಗೂ ನರೇಗಾ ಜಾಬ್ ಕಾರ್ಡ್‌ ಮೂಲಕವೂ ಮತ ಹಾಕಬಹುದು. ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಮೂಲಕವೂ ಮತ ಹಾಕಬಹುದು. ಫೋಟೋ ಸಹಿತ ಪಿಂಚಣಿ ದಾಖಲಾತಿಯನ್ನೂ ಮತದಾನಕ್ಕೆ ಬಳಸಬಹುದು. ಶಾಸಕರು ಹಾಗೂ ಸಂಸದರು ತಮಗೆ ನೀಡಲಾಗುವ ಅಧಿಕೃತ ಐಡಿ ಕಾರ್ಡ್ ಬಳಸಿ ಮತ ಹಾಕಬಹುದು. ಆಧಾರ್ ಕಾರ್ಡ್‌ ಕೂಡಾ ಮತದಾನಕ್ಕೆ ಬಳಕೆ ಮಾಡಿಕೊಳ್ಳಬಹುದು.

ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇರಲೇ ಬೇಕು
ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇಲ್ಲ ಅಂದ್ರೂ ಪರವಾಗಿಲ್ಲ, ಆದ್ರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲೇ ಬೇಕು. ಎಲೆಕ್ಷನ್ ಬೂತ್‌ನಲ್ಲಿ ಮತದಾರರ ಪಟ್ಟಿ ಇರುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಮತ ಹಾಕಲು ಬಿಡುತ್ತಾರೆ. ಮತದಾರರ ಪಟ್ಟಿಯಲ್ಲಿ ಇರುವ ನಿಮ್ಮ ಹೆಸರು ಹಾಗೂ ನಿಮ್ಮ ಫೋಟೋಗಳು ವೋಟರ್ ಐಡಿ ಕಾರ್ಡ್‌ನಲ್ಲಿ ಇರೋ ದಾಖಲೆಗಳಿಗೆ ಹೋಲಿಕೆ ಆಗಬೇಕು. ಒಂದು ವೇಳೆ ವೋಟರ್ ಐಡಿ ಕಾರ್ಡ್ ಇಲ್ಲವಾದ್ರೆ, ನಿಮ್ಮ ಬಳಿ ಇರುವ ಬೇರೆ ಫೋಟೋ ಸಹಿತ ದಾಖಲಾತಿ ಜೊತೆಗೆ ವೋಟರ್ ಲಿಸ್ಟ್‌ನ ಮಾಹಿತಿ ಹೋಲಿಕೆ ಆಗಬೇಕು. ಇಲ್ಲವಾದ್ರೆ ನಿಮಗೆ ಮತದಾನಕ್ಕೆ ಅವಕಾಶ ಸಿಗೋದಿಲ್ಲ. ಚುನಾವಣೆ ವೇಳೆ ನೀವು ಮತ ಹಾಕೋಕೆ ಮುನ್ನ ನಿಮ್ಮ ದಾಖಲಾತಿಗಳನ್ನು ಚುನಾವಣಾ ಅಧಿಕಾರಿಗಳಿಗೆ ಕಡ್ಡಾಯವಾಗಿ ತೋರಿಸಬೇಕು. ಇಲ್ಲವಾದ್ರೆ ಮತ ಹಾಕೋದಕ್ಕೆ ಬಿಡೋದಿಲ್ಲ. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೂ ಕೂಡಾ ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇಲ್ಲವಾದ್ರೆ ಮತದಾನ ಮಾಡೋಕೆ ಅವಕಾಶ ಸಿಗೋದಿಲ್ಲ.

ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಸೇರಿಸೋದು ಹೇಗೆ?
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸೋದು ತುಂಬಾ ಸುಲಭ. ನೀವು ಆನ್‌ಲೈನ್ ಮೂಲಕ ನಿಮ್ಮ ಹೆಸರು ಸೇರಿಸಬಹುದು ಅಥವಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಹೋಗಿ ಕೂಡಾ ನಿಮ್ಮ ಹೆಸರು ಸೇರ್ಪಡೆ ಮಾಡಬಹುದು. 18 ವರ್ಷ ತುಂಬಿದ ಎಲ್ಲಾ ಭಾರತೀಯ ನಿವಾಸಿಗಳೂ ವೋಟರ್ ಐಡಿ ಕಾರ್ಡ್ ಮಾಡಿಸಬಹುದು. ತಮ್ಮ ವಯಸ್ಸು ಹಾಗೂ ವಿಳಾಸದ ದಾಖಲೆ ಕೊಡಬೇಕು ಅಷ್ಟೇ.. ನಿಮ್ಮ ವಯಸ್ಸು 18 ವರ್ಷ ತುಂಬಿದೆ ಅನ್ನೋದಕ್ಕೆ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್, ಡಿಎಲ್, ಪಾಸ್‌ಪೋರ್ಟ್‌ ಯಾವುದನ್ನಾದ್ರೂ ಕೊಡಬಹುದು. ಜೊತೆಗೆ ನಿಮ್ಮ ಅಡ್ರೆಸ್ ಪ್ರೂಫ್ ಕೂಡಾ ಕೊಡಬೇಕು. ಕರೆಂಟ್ ಬಿಲ್, ಟೆಲಿಫೋನ್ ಬಿಲ್ ಕೂಡಾ ಅಡ್ರೆಸ್ ಪ್ರೂಫ್ ರೀತಿ ಬಳಕೆ ಮಾಡಿಕೊಳ್ಳಬಹುದು.

ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ
ವೋಟರ್ ಲಿಸ್ಟ್‌ಗೆ ನಿಮ್ಮ ಹೆಸರನ್ನು ಸೇರಿಸೋದಕ್ಕೆ ನಿವು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. WWW.NVSP.IN ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಷನ್ ಆಫ್ ನ್ಯೂ ವೋಟರ್ ವಿಭಾಗಕ್ಕೆ ಹೋಗಿ, ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಮೇಲ್ ಐಡಿ ನಮೂದಿಸಬೇಕು. ಈ ವೇಳೆ ಒಟಿಪಿ ಸ್ವೀಕರಿಸಿ ನಿಮ್ಮ ಯೂಸರ್ ಐಡಿ ಹಾಗೂ ಪಾಸ್‌ ವರ್ಡ್‌ ಪಡೆಯಬೇಕು.

ವೆಬ್‌ಸೈಟ್‌ನಲ್ಲಿ ನಿಮಗೆ ಫಾರಂ 6 ಸಿಗುತ್ತೆ. ಇದನ್ನ ಡೌನ್ ಲೋಡ್ ಮಾಡಿ ನಿಮ್ಮ ಎಲ್ಲಾ ವಿವರಗಳನ್ನ ಭರ್ತಿ ಮಾಡಬೇಕು. ಜೊತೆಗೆ ಅಡ್ರೆಸ್ ಪ್ರೂಫ್, ಏಜ್‌ ಪ್ರೂಫ್ ಹಾಗೂ ಫೋಟೋ ಹಾಕಿ ಅಪ್‌ಲೋಡ್ ಮಾಡಿದರೆ ಕೆಲಸ ಮುಗೀತು. ಕೆಲವೇ ದಿನಕ್ಕೆ ನಿಮ್ಮ ದಾಖಲೆಗಳನ್ನ ಪರಿಶೀಲನೆ ಮಾಡ್ತಾರೆ. ನಿಮ್ಮ ಹೆಸರು ನಿಮ್ಮ ಏರಿಯಾದ ವೋಟರ್ ಲಿಸ್ಟ್‌ನಲ್ಲಿ ಸೇರ್ಪಡೆ ಆಗುತ್ತೆ, ಜೊತೆಗೆ ನಿಮಗೆ ವೋಟರ್ ಐಡಿ ಕಾರ್ಡ್ ಕೂಡಾ ಸಿಗುತ್ತೆ.. ನೀವು ಆಫ್‌ಲೈನ್‌ನಲ್ಲೂ ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು, ಮೊಬೈಲ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು. ನಿಮಗೆ ಅನುಕೂಲ ಎನಿಸಿದ ರೀತಿ ನೀವು ಅರ್ಜಿ ಹಾಕೋಕೆ ಅವಕಾಶ ಇದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now