ಕರ್ನಾಟಕದ ಜನರಿಗೆ ಬಿಗ್ ಶಾ-ಕ್ ಕರೆಂಟ್ ಬಿಲ್ ಕಟ್ಟಲೇ ಬೇಕು, ಮನ್ನ ಮಾಡುವ ಪ್ರಶ್ನೆಯೇ ಇಲ್ಲ.! ಉಲ್ಟಾ ಹೊಡೆದ ಅಧಿಕಾರಿಗಳು.!

 

ಜನ ಈಗ ಹಿಂದಿನಂತಿಲ್ಲ ರಾಜಕಾರಣಿಗಳು ಪ್ರಚಾರದ ವೇಳೆ ಹೇಳುತ್ತಾರೆ, ನಂತರ ಆ ಪ್ರಕಾರ ನಡೆದುಕೊಳ್ಳುವುದಿಲ್ಲ ಇದಿಷ್ಟೇ ಇವರ ಹಣೆಬರಹ ಎಂದು ಕೈಕಟ್ಟಿ ಕೂರುವುದಿಲ್ಲ. ಈಗ ನಾಗರಿಕರು ಪ್ರಜ್ಞಾವಂತರಾಗಿ ನಾಯಕರುಗಳು ಕೊಟ್ಟಿದ್ದ ಮಾತಿನ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಈ ವರ್ಷ ನಡೆದ ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023

ಯಾಕೆಂದರೆ ಈ ಬಾರಿ ಪೈಪೋಟಿಗೆ ಬಿದ್ದಿದ್ದ ರಾಜಕೀಯ ಪಕ್ಷಗಳು ಗೆಲ್ಲುವ ಹಂಬಲದಿಂದ ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗಾಗಿ ಏನೆಲ್ಲ ಮಾಡುತ್ತೇವೆ ಎನ್ನುವುದನ್ನು ಚುನಾವಣೆಯ ಪ್ರಣಾಳಿಕೆ ಅಸ್ತ್ರವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಿದ್ದವು. ಅದರಲ್ಲೂ ಸಹ ಕರ್ನಾಟಕ ಜನಮನ ಗೆದ್ದಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚ ಖಾತ್ರಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ಕೊಟ್ಟಿದ್ದು.

ಇದನ್ನು ಬರೀ ಆಶ್ವಾಸನೆಗೆ ಕೊಡದೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಕಡಾ ಖಂಡಿತವಾಗಿ ಇವುಗಳನ್ನು ಮೊದಲ ಕ್ಯಾಬಿನೆಟ್ ಅಲ್ಲಿಯೇ ಚರ್ಚಿಸಿ ಅನುಮೋದನೆ ನೀಡಿ ಜನತೆಗೆ ತಲುಪಿಸುತ್ತೇವೆ ಎನ್ನುವುದನ್ನು ಹೇಳಿದ್ದರು. ಈಗ ಕಾಂಗ್ರೆಸ್ ಸರ್ಕಾರವು ಸ್ಪಷ್ಟ ಬಹುಮತದಿಂದ ಗೆಲ್ಲುತ್ತಿದ್ದಂತೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಜನರು ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆ ಪ್ರಶ್ನೆ ಮಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ.

ಅದರಲ್ಲಿ ಮೊದಲನೇ ಗ್ಯಾರಂಟಿಯಾಗಿ ಅನೌನ್ಸ್ ಆಗಿದ್ದ ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ತನ್ನು ಕೊಟ್ಟು ಕರ್ನಾಟಕವನ್ನು ಬೆಳಕಿನಿಂದ ಬೆಳಗುವ ಬಗ್ಗೆ ಒಪ್ಪಿಕೊಂಡದ್ದರ ಕುರಿತು ಜನರು ರೊಚ್ಚಿಗೆದ್ದಿದ್ದಾರೆ. ಮೇ ತಿಂಗಳಿನ ಎಲೆಕ್ಷನಲ್ಲಿ ಪಕ್ಷ ಗೆದ್ದಿದ್ದು ಸಾಬೀತಾಗಿತ್ತುದಂತೆ ಏಪ್ರಿಲ್ ತಿಂಗಳಿನ ಕರೆಂಟ್ ಬಿಲ್ ಕೊಡಲು ಹೋದ ವಿದ್ಯುತ್ ಇಲಾಖೆ ಪ್ರತಿನಿಧಿಗಳನ್ನು ಜನಸಾಮಾನ್ಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಒಂದೊದು ಕಡೆ ಒಂದೊಂದು ರೀತಿಯಲ್ಲಿ ಕರೆಂಟ್ ಬಿಲ್ ಸಂಗ್ರಹಿಸುವವರ ಜೊತೆ ಜನರು ವರ್ತಿಸುತ್ತಿದ್ದಾರೆ. ಹಾಗೂ ಇವುಗಳ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೇ ರೀತಿ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮಕ್ಕೆ ಸಿದ್ದಾಪುರ ಗ್ರಾಮ ಪಂಚಾಯಿತಿಯ ವತಿಯಿಂದ ಗೋಪಿ ಎನ್ನುವ ವಿದ್ಯುತ್ ಬಿಲ್ ಸಂಗ್ರಹ ಪ್ರತಿನಿಧಿ ಮನೆಮನೆಗೂ ಹೋಗಿ ಕರೆಂಟ್ ಬಿಲ್ಕೊಟ್ಟು ವಿದ್ಯುತ್ ಬಿಲ್ ಕಟ್ಟುವುದಾಗಿ ಕೇಳಿಕೊಂಡಿರುವುದಕ್ಕೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಅವರಿಗೆ ಜವಾಬ್ ಕೊಟ್ಟು ಕಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಪ್ರತಿನಿಧಿ ಗೋಪಿ ಅವರ ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷ ಗೆದ್ದಿದ್ದೆ ಇನ್ನು ಸರ್ಕಾರ ರಚನೆ ಆಗಿ ಇದರ ಬಗ್ಗೆ ಅನುಮೋದನೆ ನೀಡಿ ನಮ್ಮ ಇಲಾಖೆಗೆ ಈ ಬಗ್ಗೆ ಮಾಹಿತಿ ಬರುವವರೆಗೂ ಕೂಡ ನಾವು ನಮ್ಮ ಕೆಲಸವನ್ನು ಮಾಡಬೇಕು, ಹಾಗೆ ಕಾಂಗ್ರೆಸ್ ಸರ್ಕಾರ ಜೂನ್ ತಿಂಗಳ ನಂತರದ ಕರೆಂಟ್ ಅನ್ನು ಫ್ರೀ ಆಗಿ ಕೊಡಬಹುದು, ಅದಕ್ಕೂ ಇನ್ನು ಯಾವ ಮಾನದಂಡಗಳಿವೆ ಎನ್ನುವುದು ಸ್ಪಷ್ಟವಾಗಿಲ್ಲ.

ಆದ್ದರಿಂದ ನೀವು ಬಳಕೆ ಮಾಡಿರುವ ಏಪ್ರಿಲ್ ತಿಂಗಳಿನ ಕರೆಂಟ್ ಬಿಲ್ ಕೊಡಲೇಬೇಕು ಎನ್ನುವುದನ್ನು ಹೇಳಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರು ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಾವು ಕರೆಂಟ್ ಬಿಲ್ ಕಟ್ಟುವುದೇ ಇಲ್ಲ. ಕಾಂಗ್ರೆಸ್ ಸರ್ಕಾರ ಗೆದ್ದರೆ ಮನ್ನಾ ಮಾಡುವುದಾಗಿ ಹೇಳಿತ್ತು, ಈಗ ನೀವು ಕಾಂಗ್ರೆಸ್ ನಾಯಕರನ್ನೇ ಹೋಗಿ ಕೇಳಿ ಬೇಕಾದ್ರೆ ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ನಾವು ಮಾತ್ರ ಹಣ ಕೊಡುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಬಹುತೇಕ ಕಡೆ ಇದೇ ರೀತಿ ಅನುಭವವನ್ನು ವಿದ್ಯುತ್ ಬಿಲ್ ಸಂಗ್ರಹಕಾರರು ಎದುರಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment

%d bloggers like this: