ಮಹಿಳೆಯರಿಗೆ ಗುಡ್ ನ್ಯೂಸ್, ವರ್ಷಕ್ಕೆ 6 LPG ಸಿಲಿಂಡರ್ ಉಚಿತ, ಜೂನ್ 1 ರಿಂದ ಅನ್ವಯ ಕೂಡಲೇ ಅರ್ಜಿ ಸಲ್ಲಿಸಿ.‌!

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದ ಕರ್ನಾಟಕದ ಜನತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಈಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಮತ್ತೆ ಅಧಿಕಾರಕ್ಕೆ ಏರಿದ್ದು ಚುನಾವಣೆ ಪ್ರಚಾರದ ವೇಳೆ ಹೇಳಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ನೆರವಾಗಲು ನಿರ್ಧರಿಸಿದೆ.

ಮೊದಲ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ತಾತ್ವಿಕ ಒಪ್ಪಿಗೆಯನ್ನು ಕೂಡ ನೀಡಿರುವ ಮಾನ್ಯ ಮುಖ್ಯಮಂತ್ರಿಗಳು ಸರ್ಕಾರವು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇದರ ಕುರಿತು ಕ್ಯಾಬಿನೆಟ್ ಮೀಟಿಂಗ್ ನಡೆಸಿ ಅಧಿಕೃತ ಆದೇಶ ಹೊರಡಿಸಿ ಶೀಘ್ರವೇ ಎಲ್ಲ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುತ್ತೇವೆ ಎನ್ನುವ ಭರವಸೆಯ ನುಡಿಗಳನ್ನು ಆಡಿ ನುಡಿದಂತೆ ನಡೆಯುವ ಸರ್ಕಾರ ಎನ್ನುವ ಮಾತನ್ನು ಉಳಿಸಿಕೊಂಡಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಅಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000ರೂ. ಜೊತೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಹಾಗೂ ನಿರುದ್ಯೋಗಿ ಭತ್ಯೆ ಯೋಜನೆಗಳು ಕರ್ನಾಟಕದ ಜನತೆಯ ಮನಗೆದ್ದಿವೆ. ಇದರ ಜೊತೆಗೆ ಅಡುಗೆ ಅನಿಲದ ಬಗ್ಗೆ ಕೂಡ ಸರ್ಕಾರ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ.

ಈಗ ದೇಶದ ಎಲ್ಲ ಮಹಿಳೆಯರು ಕೂಡ ಅಡುಗೆ ಮಾಡಲು LPG ಸಿಲಿಂಡರ್ ಗಳನ್ನು ಬಳಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜಾರಿಗೆ ತಂದಂತಹ PM ಉಜ್ವಲ್ ಯೋಜನೆಯ ಈ ರೀತಿ ಮಹಿಳೆಯರು ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದೆ.

ಈ ಯೋಜನೆ ದೇಶದಲ್ಲಿ ಜಾರಿಗೆ ಬರುವ ಮೊದಲಿನಿಂದಲೂ ಕೂಡ ಕೇಂದ್ರ ಸರ್ಕಾರವು LPG ಅನಿಲ ದರವನ್ನು ತನ್ನಿಂದ ಆದಷ್ಟು ನಿಯಂತ್ರಣದಲ್ಲಿಡುವ ಪ್ರಯತ್ನ ಮಾಡಿದೆ. ಇದಕ್ಕಾಗಿ LPG ಅನಿಲ ಖರೀದಿಸುವವರ ಖಾತೆಗೆ ಸಬ್ಜೆಡಿ ಹಣವನ್ನು ಕೂಡ ಜಮೆ ಮಾಡುತ್ತಿತ್ತು, ಆದರೆ ಇದ್ದಕ್ಕಿದ್ದ ಹಾಗೆ ಆ ಯೋಜನೆ ನಿಂತು ಹೋಗಿತ್ತು. ಈಗ ಇದೆಲ್ಲದರ ಕುರಿತು ಜನಸಾಮಾನ್ಯರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ.

ರಾಜ್ಯದಲ್ಲೂ ಸಹ ಪದೇಪದೇ LPG ದರ ಇಳಿಕೆ ಮಾಡುವ ಕುರಿತು ಜನಸಾಮಾನ್ಯರಿಂದ ಸರ್ಕಾರಗಳಿಗೆ ಅಹವಾಲು ಹೋಗುತ್ತದೆ ಇದೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡಿರುವ ಸರ್ಕಾರಗಳು ಜಂಟಿಯಾಗಿ ಇದರ ಬಗ್ಗೆ ನಿಯಂತ್ರಣ ತರುವ ನಿರ್ಧಾರಕ್ಕೆ ಬಂದು ದೇಶದ ಎಲ್ಲಾ ಮಹಿಳೆಯರಿಗೂ ಈ ಬಗ್ಗೆ ಸಿಹಿ ಸುದ್ದಿ ನೀಡಿವೆ. ಈವರೆಗೆ ಉಜ್ವಲ್ ಯೋಜನೆ ಮೂಲಕ ಸಿಲಿಂಡರ್ ಖರೀದಿಸಿರದಂತಹ ಕುಟುಂಬದ ಮಹಿಳೆಯರು ಈಗ ಉಜ್ವಲ್ ಯೋಜನೆ 2.0 ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ಈ ಉಚಿತ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.

ಅನಿಲ ದರ ಹೆಚ್ಚಾಯಿತು ಎಂದು ತಲೆ ಬಿಸಿ ಮಾಡಿಕೊಂಡಿರುವವರಿಗೂ ಸರ್ಕಾರವು ಸಹಾಯಧನ ನೀಡಲು ನಿರ್ಧರಿಸಿ ಈ ಹಿಂದೆ ಜಾರಿಯಾಗುತ್ತಿದ್ದ ಮಾದರಿಯಲ್ಲಿ ಸಬ್ಸಿಡಿ ಹಣವನ್ನು ಜಮೆ ಮಾಡಲು ಮುಂದಾಗಿದೆ. ಶೀಘ್ರದಲ್ಲೇ ಹಿಂದಿನಂತೆ LPG ಗ್ರಾಹಕರ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ವರ್ಗಾವಣೆ ಆಗಲಿದೆ. ಈ ರೀತಿ ಪ್ರಯೋಜನಗಳನ್ನು ಪಡೆಯಲು ಜನಸಾಮಾನ್ಯರು ಆನಕ ಮೂಲಕ ಅರ್ಜಿ ಹಾಕಿ ಮನವಿ ಸಲ್ಲಿಸಬೇಕು. ಸರ್ಕಾರವು ಫಲಾನುಭವಿಗಳನ್ನು ಗುರುತಿಸಿ, ಈ ಪ್ರಯೋಜನ ತಲುಪಿಸಲಿದೆ. ಈ ನಿರ್ಧಾರದಿಂದ ಮಹಿಳೆಯರಿಗೆ ಬಹಳ ಅನುಕೂಲತೆ ಆಗುತ್ತಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment

%d bloggers like this: