ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್, ಇಂದಿನಿಂದಲೇ ರಾಜ್ಯಾದ್ಯಂತ ಅನ್ವಯ.!

 

ಸದ್ಯಕ್ಕೆ ಕರ್ನಾಟಕದಾದ್ಯಂತ ಚರ್ಚೆ ಆಗುತ್ತಿರುವ ಒಂದೇ ವಿಷಯ ಏನೆಂದರೆ ಕಾಂಗ್ರೆಸ್ ಸರ್ಕಾರವು ಈ ಬಾರಿಯ ವಿಧಾನಸಭಾ ಎಲೆಕ್ಷನ್ ಪ್ರಚಾರದ ವೇಳೆ ತಮ್ಮ ಪಕ್ಷ ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದ ವಿಷಯ. ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಸಹಿ ಮಾಡಿ ಗ್ಯಾರಂಟಿ ಕಾರ್ಡ್ ಗಳನ್ನು ಕೂಡ ವಿತರಣೆ ಮಾಡಿದ್ದರು.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ವಾರದ ಒಳಗಡೆ ಕ್ಯಾಬಿನೆಟ್ ಜೊತೆ ಎಲ್ಲ ಯೋಜನೆಗಳನ್ನು ಒಂದು ವಾರದ ಒಳಗೆ ಜಾರಿಗೆ ತರುತ್ತೇವೆ ಎನ್ನುವ ಆಶ್ವಾಸನೆಯನ್ನು ಕೂಡ ನೀಡಿ ಕರ್ನಾಟಕದ ಜನತೆಯ ಮನೆಗೆದ್ದು ಈಗ ಕರ್ನಾಟಕ ನಾಗರೀಕರ ಅನುಮತಿಯೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ ಐದು ವರ್ಷಗಳ ಕಾಲ ಕರ್ನಾಟಕದಲ್ಲಿ ಆಡಳಿತ ನಡೆಸಲಿದ್ದಾರೆ.

ಹಾಗಾಗಿ ಎಲ್ಲೆಡೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡುಗಳ ಯೋಜನೆ ಜಾರಿ ಬಗ್ಗೆಯೇ ಚರ್ಚೆ ಜೋರಾಗಿದೆ. ಅಂತಿಮವಾಗಿ ಮೇ 20ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿ ಅಂದೆ ಜನಸಾಮಾನ್ಯರಿಗೆ ಐದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಖಂಡಿತವಾಗಿ ಜಾರಿಗೆ ತರುತ್ತೇವೆ ಎನ್ನುವ ಭರವಸೆಯನ್ನು ನೀಡಿ ಮತ್ತೊಮ್ಮೆ ತಾವು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿ ಸಚಿವರನ್ನು ಕೂಡ ಆರಿಸಿದ ಮುಖ್ಯಮಂತ್ರಿಗಳು ಅಂದೆ ಕ್ಯಾಬಿನೆಟ್ ಚರ್ಚೆ ಕೂಡ ನಡೆಸಿ ಐದು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪ್ರಮುಖವಾದ ವಿಷಯಗಳನ್ನು ಚರ್ಚಿಸಿ ಅದಕ್ಕೆ ತಾತ್ವಿಕ ಒಪ್ಪಿಗೆಯನ್ನು ಕೂಡ ಕೊಟ್ಟು ಆದೇಶ ಪ್ರತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಯೋಜನೆಗಳಾಗಿದ್ದು ಮೇ 20ರಂದು ಹೊರಡಿಸಿದ ಆದೇಶ ಪ್ರತಿಗಳಲ್ಲಿ ಶೀಘ್ರದಲ್ಲೇ ಇವು ಜಾರಿಗೆ ಸ್ಪಷ್ಟ ಎನ್ನುವ ಭರವಸೆ ಸಿಕ್ಕಿದೆ. ಆದರೆ ಇವುಗಳ ಜಾರಿಗೆ ಇರುವ ಮಾರ್ಗಸೂಚಿ, ಮಾನದಂಡ ಮತ್ತು ರೂಪುರೇಷೆಗಳ ಬಗ್ಗೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ನಡೆಸಿ.

ಇವುಗಳ ಬಗ್ಗೆ ಚರ್ಚಿಸಿ ಸ್ಪಷ್ಟತೆಯ ಜೊತೆಗೆ ಮತ್ತೊಂದು ಆದೇಶ ಪ್ರತಿಯನ್ನು ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರಲ್ಲಿ ಉಲ್ಲೇಖಿಸಿದ್ದಾರೆ. ಈ ಯೋಜನೆಗಳು ಜಾರಿಗೆ ಬಂದರೆ ಕರ್ನಾಟಕದ ಜನತೆಗೆ ಬಹಳ ಅನುಕೂಲತೆ ಆಗಲಿದೆ ಅದರಲ್ಲೂ ಕೂಡ ಶಕ್ತಿ ಯೋಜನೆ, ಮಹಿಳೆಯರ ಪಾಲಿಗೆ ವರದಾನವಾಗಿಲಿದೆ.

ಶಕ್ತಿ ಯೋಜನೆ ಜಾರಿಗೆ ಬಂದರೆ ಕರ್ನಾಟಕದಾದ್ಯಂತ ಎಲ್ಲಾ ಮಹಿಳೆಯರು ಕೂಡ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗಳಾದ KSRTC, BMTC, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಯೋಜನೆಗಳ ಬಗ್ಗೆ ಕರ್ನಾಟಕದ ಮಹಿಳೆಯರು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದಕ್ಕಾಗಿ ಅರ್ಜಿ ಆಹ್ವಾನ ಯಾವಾಗಲಿಂದ ಆರಂಭವಾಗಲಿದೆ ಎನ್ನುವುದಕ್ಕೆ ಕಾದು ಕುಳಿತಿದ್ದಾರೆ. ಮುಂದಿನ ಕ್ಯಾಬಿನೆಟ್ ಸಭೆ ಈ ವಾರದಲ್ಲಿ ನಡೆಯುವುದರಿಂದ ಇನ್ನು ಕೆಲವೇ ದಿನಗಳಲ್ಲಿ ಇದರ ಸ್ಪಷ್ಟ ಚಿತ್ರಣ ಜನರಿಗೆ ಸಿಗಲಿದೆ.  ಇದಕ್ಕಾಗಿ ಸರ್ಕಾರ ಏನೆಲ್ಲಾ ದಾಖಲೆಗಳನ್ನು ಕೇಳಬಹುದು ಅಥವಾ ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ ಏನು ಎನ್ನುವುದರ ಬಗ್ಗೆ ಗೊಂದಲ ಕೂಡ ಸೃಷ್ಟಿಯಾಗಿದೆ.

ಬಲವಾದ ಮೂಲಗಳ ಪ್ರಕಾರ ಉಚಿತ ಬಸ್ ಪಾಸ್ ಸಿಗಲು ಮಹಿಳೆಯರಿಗಿರುವ ಕಂಡಿಷನ್ ಗಳು ಈ ರೀತಿ ಇರಲಿದೆ.

● ಮಹಿಳೆಯು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು
● ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು
● ಪ್ಯಾನ್ ಕಾರ್ಡ್ ಕೂಡ ಹೊಂದಿರಬೇಕು
● ಕರ್ನಾಟಕದ ಮಹಿಳೆಯರಿಗಷ್ಟೇ ಈ ಯೋಜನೆಯ ಫಲಾನುಭವಿಗಳಾಗಲು ಅವಕಾಶ.
● ಯಾವ ಜಾಗದ ಹೆಸರನ್ನು ಹೇಳಿ ರಿಜಿಸ್ಟರ್ ಮಾಡಿಕೊಂಡು ಪಾಸ್ ಪಡೆಯುತ್ತಾರೋ ಆ ಜಾಗದಿಂದ 60 ಕಿಲೋ ಮೀಟರ್ ವರೆಗೆ ಮಾತ್ರ ಉಚಿತ ಪ್ರಯಾಣ ನೀಡುವ ಸಾಧ್ಯತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Leave a Comment

%d bloggers like this: