ಮಾಲೀಕರು ಮ.ರಣ ಹೊಂದಿದ್ದರೆ, ವಿದ್ಯುತ್ ಮೀಟರ್ ಬೇರೆಯವರ ಹೆಸರಿದ್ದರೆ ಈ ಕಾರಣಗಳಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಅಂದ್ರೆ ಅದಕ್ಕೆ ಪರಿಹಾರ ಇಲ್ಲಿದೆ ನೋಡಿ.!

 

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅನೇಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸುವ ಬಗ್ಗೆ ಅನೇಕರಿಗೆ ಗೊಂದಲ ಇದೆ. ಯಾಕೆಂದರೆ ಅವರ ವಿದ್ಯುತ್ ಬಿಲ್ ಮಾಲೀಕರು ಮ.ರಣ ಹೊಂದಿದ್ದರೆ ಈಗ ಅವರ ಹೆಸರನ್ನು ಅರ್ಜಿ ಫಾರ್ಮ್ ಅಲ್ಲಿ ತುಂಬಿಸಬಹುದೇ ಎಂದು ಇನ್ನೂ ಕೆಲವರು ವಿದ್ಯುತ್ ಮೀಟರ್ ಬೇರೆಯವರ ಹೆಸರಿನಲ್ಲಿ ಇದೆ ಬಾಡಿಗೆಗೆ ಇರುವುದರಿಂದ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಗೊಂದಲದಲ್ಲಿದ್ದಾರೆ.

ಮತ್ತು ಇದಕ್ಕೆ ಅರ್ಜಿ ಸಲ್ಲಿಸುವವರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನೀಡಬೇಕಾದ ಕಾರಣ ಆಧಾರ್ ನಲ್ಲಿರುವ ಇರುವ ಮೊಬೈಲ್ ನಂಬರ್ ಇಲ್ಲದಿದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲವೇ ಎನ್ನುವ ಗೊಂದಲದಲ್ಲಿದ್ದಾರೆ. ಇದಕ್ಕೆಲ್ಲ ಉತ್ತರವನ್ನು ಈ ಅಂಕಣದಲ್ಲಿ ನೀಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅನೇಕರು ಈಗ ವಿದ್ಯುತ್ ಬಿಲ್ ಅಲ್ಲಿ ಹೆಸರು ಬದಲಾಯಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ ಅವರು ಈಗ ಯಾವ ರೀತಿ ಹೆಸರು ಬದಲಾವಣೆ ಮಾಡಿಕೊಳ್ಳಬಹುದು ಎನ್ನುವುದನ್ನು ಸಹ ತಿಳಿಸುತ್ತಿದ್ದೇವೆ.

ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಿ ಗೃಹಜ್ಯೋತಿ ಯೋಜನೆ ಅರ್ಜಿ ಫಾರಂ ಓಪನ್ ಆದ ಮೇಲೆ ಮೊದಲಿಗೆ ಕೇಳುವುದು ಭಾಷೆಯ ಆಯ್ಕೆ. ಇದಾದ ಬಳಿಕ ವಿದ್ಯುತ್ ಬಿಲ್ ಅಲ್ಲಿರುವ ಕಸ್ಟಮರ್ ಐಡಿ ಅಥವಾ ಅಕೌಂಟ್ ಐಡಿಯನ್ನು ಕೇಳಲಾಗುತ್ತದೆ, ಇಲ್ಲಿ ಸಂಖ್ಯೆಗಳ ಜೊತೆಗೆ ಅಲ್ಫಬೆಟ್ ಕೂಡ ಇರುತ್ತದೆ ಇದನ್ನು ಪೂರ್ತಿಯಾಗಿ ಫಿಲ್ ಮಾಡಿದರೆ ಮಾತ್ರ ಮುಂದಿನ ಹಂತಕ್ಕೆ ಹೋಗುತ್ತದೆ. ನೀವು ಅಕೌಂಟ್ ಐಡಿ ಹಾಕಿದ ಮೇಲೆ ಆಟೋಮೆಟಿಕ್ ಆಗಿ ಮಾಲೀಕರ ಹೆಸರು ಬರುತ್ತದೆ.

ಬಳಿಕ ನಿಮ್ಮ ವಿವರವನ್ನು ತುಂಬುವಾಗ ನೀವು ಬಾಡಿಗೆದಾರರೇ ಅಥವಾ ಮಾಲೀಕರೇ ಎಂದು ಸರಿಯಾದ ಆಪ್ಷನ್ ಫಿಲ್ ಮಾಡಿ ಮತ್ತು ಸಂವಹನಕ್ಕಾಗಿ ಮೊಬೈಲ್ ಸಂಖ್ಯೆ ಕೇಳಲಾಗಿರುತ್ತದೆ ಅಲ್ಲಿ ಮೊಬೈಲ್ ಸಂಖ್ಯೆಯನ್ನು ಹಾಕಿ. ಇಲ್ಲಿ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ ಹಾಕಬೇಕು ಎನ್ನುವ ನಿಯಮ ಇಲ್ಲ ಒಂದು ವೇಳೆ ನಿಮ್ಮ ಆಧಾರ್ ಸಂಖ್ಯೆಯಲ್ಲಿ ಇರುವ ಮೊಬೈಲ್ ಸಂಖ್ಯೆ ಬದಲಾಗಿದ್ದರೆ ನಿಮ್ಮ ಯಾವುದಾದರೂ ಮತ್ತೊಂದು ಸಂಖ್ಯೆಯನ್ನು ಹಾಕಬಹುದು.

ಆದರೆ ಶೀಘ್ರವಾಗಿ ಅದನ್ನು ಆಧಾರ್ ಸಂಖ್ಯೆಯಲ್ಲಿ ಬದಲಾಯಿಸಿಕೊಳ್ಳುವ ಕೆಲಸ ಮಾಡಬೇಕು. ಒಂದು ವೇಳೆ ವಿದ್ಯುತ್ ಬಿಲ್ ನಿಮ್ಮ ಮನೆಯ ಹಿರಿಯರ ಹೆಸರಿನಲ್ಲಿದ್ದು ಅವರು ಮರಣ ಹೊಂದಿದ್ದರೆ ಮಾಲಿಕ ಎನ್ನುವ ಆಪ್ಷನ್ ಅನ್ನೇ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರನ್ನು ಫೀಡ್ ಮಾಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.

ಈಗ ವಿದ್ಯುತ್ ಬಿಲ್ ಅಲ್ಲಿ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದರೆ ನಿಮಗೆ ಹತ್ತಿರ ಇರುವ ವಿದ್ಯುತ್ ಕಛೇರಿಗೆ ಭೇಟಿ ಕೊಟ್ಟು ಪಂಚಾಯಿತಿಯಿಂದ ಪಡೆಯುವ ಕಂದಾಯ ಕಟ್ಟಿರುವ ರಶೀತಿ, ಬಾಂಡ್, ಈಗ ಯಾರ ಹೆಸರಿನಲ್ಲಿದೆ ಅವರು ಮರಣ ಹೊಂದಿದ್ದರೆ ಅವರ ಡೆತ್ ಸರ್ಟಿಫಿಕೇಟ್ ಇನ್ನು ಮುಂತಾದ ದಾಖಲೆಗಳನ್ನು ಕೊಟ್ಟು ಹೊಸದಾಗಿ ಡೆಪಾಸಿಟ್ ಕಟ್ಟಿ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಎಲ್ಲಾ ಸರಿ ಇದ್ದು ಅನುಮೋದನೆ ಆದರೆ 35 ರಿಂದ 40 ದಿನಗಳಾದ ಬಳಿಕ ನಿಮ್ಮ ಹೆಸರಿನಲ್ಲಿ ವಿದ್ಯುತ್ ಬಿಲ್ ಬರುತ್ತದೆ.

Leave a Comment

%d bloggers like this: